ಪಂಜ ದೇವಸ್ಥಾನದ ಬಗ್ಗೆ ಒಂದಿಷ್ಟು!

Pattler News

Bureau Report

ಮೊದಲಿಗೆ ಪಂಜದ ಪ್ರಜ್ಞಾವಂತ ಜನರಿಗೆ ನಮಸ್ಕಾರ. ನಿನ್ನೆ ನಾನು ಹಾಕಿದ ರುದ್ರಾಭಿಷೇಕದ ನ್ಯೂಸ್ ಮತ್ತು ಅದಕ್ಕೆ ಮೊದಲು ಹಾಕಿದ್ದ ನ್ಯೂಸ್ ಬಗ್ಗೆ ಒಂದಿಷ್ಟು ಪಂಜದ ಜನತೆಗೆ ಹೇಳಬೇಕಾಗಿದೆ. ಮೊದಲನೆಯದಾಗಿ ನನ್ನ ಪತ್ರಿಕೆ ಸುಮಾರು 2002 ಇಸವಿಯಿಂದಲೇ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಆಯ್ದ ಭಾಗಗಳಲ್ಲಿ ಪ್ರಸಾರದಲ್ಲಿತ್ತು. ಹಾಗೆಂದು ಪಂಜಕ್ಕೆ ನಾನು ಮತ್ತು ನನ್ನ ಪತ್ರಿಕೆ ಹೊಸದೇನಲ್ಲ. ಪಂಜದ ಬಗ್ಗೆ ಅನೇಕ ನ್ಯೂಸ್ ಗಳನ್ನ ಮಾಡಿದ್ದೇನೆ ಮತ್ತು ಸಂತ್ರಸ್ತರು ನನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ, ಕೊಲ್ಲುತ್ತೇನೆ, ಕಡಿಯುತ್ತೇನೆ, ಹೆಂಡ್ತಿಯನ್ನು ರೇಪ್ ಮಾಡುತ್ತೇನೆ, ಮಕ್ಕಳನ್ನು ಕಿಡ್ನಾಪ್ ಮಾಡುತ್ತೇನೆ ಇತ್ಯಾದಿ ಬಯ್ದು ಬಯ್ದು ನನಗೆ ಮನರಂಜನೆ ಕೊಟ್ಟಿದ್ದಾರೆ. ನನ್ನ ಪತ್ರಿಕೆ ರಿಜಿಸ್ಟ್ರೇಷನ್ ಆಗಿರುವ ಪತ್ರಿಕೆ ಆಗಿದೆ. ಇದೀಗ ಪತ್ರಿಕೆಯ ವೆಬ್ ಸೈಟ್ ‌ಕೂಡ ಶುರು ಮಾಡಿದ್ದೇನೆ ಮತ್ತು ಅದೇ ಮಂಗಳಾರತಿ ದಿನಾ ಆಗುತ್ತಲೇ ಇರುತ್ತದೆ. ಪತ್ರಿಕೆ ಅಂದ ಮೇಲೆ ಅದೆಲ್ಲ ಇದ್ದದ್ದೇ. ಬೆದರಿಕೆ, ಕೇಸುಗಳು, ಪೋಲಿಸರು ಇತ್ಯಾದಿ ಈಗ ನನ್ನ ದೈನಂದಿನ ಭಾಗಗಳೇ ಆಗಿ ಹೋಗಿದೆ. ಈಗ ವಿಷಯಕ್ಕೆ ಬರೋಣ.

ಒಂದು ಪತ್ರಿಕೆಯ ಸಂಪಾದಕನಾಗಿ ಒಂದು ಊರಿಂದ ಬರುವ ಮಾಹಿತಿಗಳನ್ನು ಆಧರಿಸಿ ನ್ಯೂಸ್ ಮಾಡುವುದು ಪತ್ರಿಕಾ ಧರ್ಮ. ಸುಮ್ಮ ಸುಮ್ಮನೆ ನ್ಯೂಸ್ ಮಾಡಕ್ಕಾಗಲ್ಲ. ಹಾಗೆ ಪಂಜದಿಂದಲೂ ದೇವಸ್ಥಾನದ ಬಗ್ಗೆ ಮಾಹಿತಿ ಬಂದಿತ್ತು, ಹಾಕಿದ್ದೇನೆ. ಅಷ್ಟೇ. ನನಗೆ ಪಂಜದಲ್ಲಿ ಯಾರ ಮೇಲೂ ಪೂರ್ವ ದ್ವೇಷ ಇಲ್ಲ. ದೇವಸ್ಥಾನದ ಹೆಸರನ್ನು ಹಾಳು ಮಾಡಬೇಕೆಂಬ ಇರಾದೆಯೂ ಇಲ್ಲ. ಆದರೆ ಕರೆಕ್ಟ್ ಮಾಹಿತಿ ಬಂದರೆ ಅದನ್ನು ಹಾಕದಿರಲು ಮಾತ್ರ ಸಾಧ್ಯವೇ ಇಲ್ಲ. ಇನ್ನು ನಿನ್ನೆಯ ನನ್ನ ನ್ಯೂಸ್ ವೈರಲ್ ಆದ ನಂತರ ಜಾಲತಾಣಗಳಲ್ಲಿ ನನ್ನ ಬಗ್ಗೆ ರೊಚ್ಚಿಗೆದ್ದ ಭಕ್ತರು ಏನೇನೋ ಬರೆದು ಹಾಕುತ್ತಿದ್ದಾರೆ. ನ್ಯೂಸ್ ಹಾಕಿದ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಇವನಿಗ್ಯಾಕೆ ಲೆಕ್ಕ? ಇವ ಲೆಕ್ಕ ಕೇಳಲು ಯಾರು? ಕೊಳಕು ಮನಸ್ಸಿನವನು, ಪೀತ ಪತ್ರಿಕೆಯವನು, ಜುಜುಬಿ ಪತ್ರಿಕೆ, ಎಂಜಲು ಕಾಸು ತಿನ್ನುವವನು, ಕೀಳು ಮಟ್ಟದ ಪೇಪರ್, ಫ್ರೀಡಂ ಆಫ್ ಪ್ರೆಸ್ ದುರುಪಯೋಗ ಅಂತೆಲ್ಲ ಬಯ್ಗಳು. ನಂಗೆ ಯಾಕೆ ಬಯ್ತಾರೆ ಅಂತಲೇ ಗೊತ್ತಾಗುತ್ತಿಲ್ಲ. ನಾನು ಪತ್ರಿಕೆ ನಡೆಸುವವನು, ಬಂದ ಮಾಹಿತಿ ಹಾಕೋದು ನನ್ನ ಧರ್ಮ ಅಂತ ನಿನ್ನೆ ಬಯ್ದವರಿಗೆ ಒಂಚೂರು ಸಾಮಾನ್ಯ ಕನಿಷ್ಠ ಜ್ಞಾನವೂ ಇಲ್ವಾ? ದೇವಸ್ಥಾನದ ಲೆಕ್ಕ ನನಗೆ ಬೇಡ, ಅದನ್ನು ನಾನು ಕೇಳುವುದೂ ಇಲ್ಲ, ನನಗೆ ಲೆಕ್ಕದ ಅಗತ್ಯವೂ ಇಲ್ಲ. ಆದರೆ ಬಂದ ಮಾಹಿತಿ ಏನೆಂದರೆ ರುದ್ರಾಭಿಷೇಕದ ಲೆಕ್ಕ ಆಗಿಲ್ಲ ಎಂದಿತ್ತು. ಅದನ್ನು ಪ್ರಕಟಿಸಿದ್ದೇನೆ ಅಷ್ಟೇ. ಪ್ರಕಟಿಸ ಬಾರದಾ?

ಹಾಗೆಂದು ನಾನು ಕೊಳಕು ಮನಸ್ಸಿನವನು, ಪೀತ ಪತ್ರಿಕೆಯವನು, ಎಂಜಲು ಕಾಸು ತಿನ್ನುವವನು, ಥರ್ಡ್ ಕ್ಲಾಸ್ ಪೇಪರ್ ಎಲ್ಲಾ ಓಕೆ. ಆದರೆ ನೀವು? ನೀವು ನಾರ್ಮಲ್ ಆಗಿ ಇದ್ದೀರಾ? ವ್ಯವಸ್ಥೆ ಕೆಟ್ಟು ಹೋಗಿದ್ದರೆ ತಾನೇ ಪೀತ ಪತ್ರಿಕೆಯವನು ಬರೆಯೋದು? ಸುಮ್ಮನೆ ಬರೆಯಲು ಹುಚ್ಚರು ಯಾರಾದರೂ ಪತ್ರಿಕೆ ಮಾಡಲ್ಲ. ಪಂಜ ದೇವಸ್ಥಾನದಲ್ಲಿ ವಿವಾದ ಇದ್ದ ಕಾರಣ ತಾನೇ ಬರೆದದ್ದು. ಏನಿಲ್ಲ ಅಂದರೆ ನಾನು ಸುಮ್ಮನೆ ಬರೆಯಕ್ಕಾಗಲ್ಲ. ಅದ್ಯಾರೋ ಹಿರಿಯ ರಾಜಕಾರಣಿ ಒಬ್ಬಳು “ಪಟ್ಲೆರ್ ನ್ಯೂಸ್ ನವನು ಎದುರು ಬಂದು ಮಾತಾಡಲಿ” ಎಂದು ಆವಾಜ್ ಹಾಕಿದ್ದಾರಂತೆ. ಇಷ್ಟಕ್ಕೂ ನಾನ್ಯಾಕೆ ಎದುರು ಬಂದು, ಹಿಂದೆ ನಿಂತು ಮಾತಾಡಲಿ? ನನಗೂ ಆ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ, ನಾನು ಆ ಊರಿನವನೂ ಅಲ್ಲ. ನನ್ನನ್ಯಾಕೆ ದೇವಸ್ಥಾನದ ಜೊತೆ, ಊರಿನ ಜೊತೆ ಲಿಂಕ್ ಮಾಡುತ್ತೀರಿ? ಕೆಟ್ಟು ಹೋಗಿರುವ ವ್ಯವಸ್ಥೆಯನ್ನು ಸರಿ ಮಾಡಬೇಕಾಗಿರುವುದು, ಸರಿ ಆಗಬೇಕಾಗಿರುವುದು ನೀವು. ನಾನಲ್ಲ. ಇನ್ನು ಮ್ಯಾಡಂ ಹೇಳಿದ ಹಾಗೆ ನಾನು ಎದುರು ಬಂದು ಮಾತಾಡಲ್ಲ. ಯಾಕೆಂದರೆ ನನಗೆ ಮಾತಾನಾಡಲು ಆಗಲ್ಲ. ಸ್ವಲ್ಪ ಬುರು ಬುರು, ಏರ್ ತಗೋಳ್ತದೆ. ನನಗೆ ಬರೆಯಲು ಮಾತ್ರ ಗೊತ್ತು. ಅಕ್ಷರಗಳ ಅಡುಗೆ ಚೆನ್ನಾಗಿ ಮಾಡುತ್ತೇನೆ ಎಂದು ಜನ ತುಂಬಾ ವರ್ಷಗಳ ಹಿಂದೆಯೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ಇನ್ನು ಪಂಜದಲ್ಲಿ ಅವನೊಬ್ಬ ಪೂಕಿರಣ್ ಎಂಬವನು ನನ್ನನ್ನು ಪೇಮೆಂಟ್ ಗಿರಾಕಿ ಎಂದು ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಈ ಪೂಕಿರಣ್ ಸರ್ ಬಗ್ಗೆ ನನಗೆ ಅಯ್ಯೋ ಪಾಪ ಅನ್ನಿಸುತ್ತಿದೆ. ಒಂದೊಳ್ಳೆ ಮರ್ಡರ್ ಫ್ಯಾಮಿಲಿಯಿಂದ ಬಂದಿರುವ ಇದೇ ಪೂಕಿರಣ್ ಸರ್ ನ ಖಾಸಾ ಅಣ್ಣ ಕೆಲವು ವರ್ಷಗಳ ಹಿಂದೆ ಒಬ್ಬಳು ವಿವಾಹಿತೆ ಜೊತೆ ಅಕ್ರಮ ಸಂಬಂಧ ಹೊಂದಿ, ಅವರಿಬ್ಬರೂ ಸೇರಿ ಅವಳ ಅಮಾಯಕ ಗಂಡನನ್ನು ಕೊಂದು ಅವನ ಶವವನ್ನು ಕಾಣಿಯೂರು ಸಮೀಪದ ಕಲ್ಪಡದ ಕಾಡಿನಲ್ಲಿ ಕೊಳೆಯಲು ಹಾಕಿದ್ದು, ಅನಂತರ ಪೂಕಿರಣನ ಅಣ್ಣ ಅವನ ಸೈಕಲ್ ಸಮೇತ ಬಂದೀಖಾನೆ ಪಾಲಾದದ್ದು ಪೋಲಿಸ್ ಫೈಲುಗಳಲ್ಲಿ ಇವತ್ತಿಗೂ ಇದೆ. ಆಗೀನ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ನನ್ನ ಒಳ್ಳೇ ಫ್ರೆಂಡ್ ಆಗಿದ್ದು ಈಗ ಪೂಕಿರಣನ ಅಣ್ಣನ ಜಾತಕ ಕೇಳಿದರೂ ಎಳೆ ಎಳೆಯಾಗಿ ಬಿಡಿಸಿ ಇಡಬಹುದು. ಆದ್ರೆ ಈಗ ಅವರು ಸೂಡಾನ್ ದೇಶದಲ್ಲಿದ್ದಾರೆ. ಅದೇ ಮರ್ಡರ್ ಮ್ಯಾನ್ ಖಾಸಾ ತಮ್ಮ ಈ ಪೂಕಿರಣ ಅಂತ ಪಂಜದಿಂದ ಮಾಹಿತಿ ಬಂದಿದೆ. ಇವನು ನನ್ನನ್ನು ಪೇಮೆಂಟ್ ಗಿರಾಕಿ ಅಂದಿದ್ದು. ಬಹುಶಃ ಈತ ಅಣ್ಣನ ಸೈಕಲ್ ಕೇಸಲ್ಲಿ, ಮರ್ಡರ್ ಕೇಸಲ್ಲಿ ಯಾರಿಗಾದರೂ ಪೇಮೆಂಟ್ ಮಾಡಿರಬಹುದು. ಇದೀಗ ಇದೇ ಮರ್ಡರ್ ಮ್ಯಾನ್ ನ ತಮ್ಮ ಪೂಕಿರಣ ಇನ್ನು ಏನಾದರೂ ನಾನು ಪಂಜದ ನ್ಯೂಸ್ ಬರೆದರೆ ಯುವಕರ ಪಡೆಯೊಂದಿಗೆ ಪುತ್ತೂರಿನ ನನ್ನ ಕಚೇರಿಗೆ ನುಗ್ಗುವುದಂತೆ ಅದಕ್ಕೆ ಯುವಕರನ್ನು ಸೆಟ್ ಮಾಡಿ ಇಟ್ಟಿದ್ದಾನಂತೆ. ಯುವಕರು ರೆಡಿ ವನ್ ಟೂ ತ್ರೀಯಲ್ಲಿ ನಿಂತಿದ್ದಾರಂತೆ. ನಿಜವಾಗಿಯೂ ನನಗೆ ಹೆದರಿಕೆ ಆಗುತ್ತಿದೆ ಮಾರಾಯ್ರೆ. ಆದರೆ ಪೂಕಿರಣನಲ್ಲಿ ನನ್ನದ್ದೊಂದು ಒಂದೇ ರಿಕ್ವೆಸ್ಟ್. ಪಂಜದಿಂದ ಯುವಕರ ಪಡೆಯೊಂದಿಗೆ ನನ್ನ ಆಫೀಸಿಗೆ ನುಗ್ಗಲು ಯಾವಾಗ ಬರುತ್ತೀರಿ, ಆ ಡೇಟ್, ಮಂತ್ ಮತ್ತು ಎಷ್ಟು ಗಂಟೆಗೆ ಬರುತ್ತೀರಿ ಎಂದು ಮೊದಲೇ ತಿಳಿಸಿ ಬಿಡಬೇಕು. ಯಾಕೆಂದರೆ ನಾನು ಎಲ್ಲಿಯಾದರೂ ಆಚೀಚೆ ಹೋಗಿದ್ದರೆ, ನೀವು ಬಂದಿದ್ದು ವೇಸ್ಟ್ ಆಗಬಾರದಲ್ವಾ? ಖರ್ಚಿಗೆ ನಾನೇ ಕೊಡುತ್ತೇನೆ. ನಿಮ್ಗೆ ಹಬ್ಬ ಮಾಡಲಾಗುವುದು.ಯಾವುದಕ್ಕೂ ನಮ್ಮೊಳಗೆ ಪೆಟ್ಟು ಮಾಡಿಕೊಳ್ಳಲು ಕೋರ್ಟ್ ಮೈದಾನ ಬುಕ್ ಮಾಡ ಬೇಕು, ಅದು ಸಿಗದಿದ್ದರೆ ಕಂಬಳ ಗದ್ದೆಯಾದರೂ ಕೇಳ ಬೇಕಷ್ಟೇ. ಯಾವುದಕ್ಕೂ ಬನ್ನಿ, ಹೇಳಿ ಬನ್ನಿ. ಖರ್ಚು ವೆಚ್ಚ ನಂದು.

ನಿನ್ನೆ ಪಂಜದ ನ್ಯೂಸ್ ಹಾಕಿದ ನಂತರ ವಿವಿಧ ಗ್ರೂಪ್ ಗಳಲ್ಲಿ ಏನೆಲ್ಲಾ ಆಗಿದೆ ಎಂಬ ಎಲ್ಲಾ ಮಾಹಿತಿ ವಿದ್ ಸ್ಕ್ರೀನ್ ಶಾಟ್ ನನಗೆ ಬಂದಿದೆ. ನೀವು ಏನು ಮಾತಾಡಿದರೂ ಅದು ನನಗೆ ಬರುತ್ತದೆ. ಮುಂದೆ ಏನು ಮಾಡಲಿದ್ದೀರಿ ಎಂಬುದೂ ಬರುತ್ತದೆ. ನಮ್ಮ ನೆಟ್ ವರ್ಕ್ ಸದಾ ನಿಮ್ಮೊಂದಿಗೆನೇ ಇದೆ. ಆದರೆ ಯಾವುದನ್ನೂ ನಾನು ಮಿಸ್ ಯೂಸ್ ಮಾಡಿಕೊಂಡಿಲ್ಲ. ನಿಮ್ಮ ದೃಷ್ಟಿಯಲ್ಲಿ ನಾನು ಸಮಾಜ ಕಂಟಕ, ಪೇಮೆಂಟ್ ಗಿರಾಕಿ, ಕ್ಷುದ್ರ ಶಕ್ತಿ, ವಂಚಕ, ಕೊಳಕು ಮನಸ್ಸಿನವನು, ಪೀತ ಪತ್ರಿಕೆಯವನು ಎಂದೆಲ್ಲ ಇದ್ದರೆ ಆ ಮನಸ್ಥಿತಿ ನಿಮ್ಮಲ್ಲಿ ಹಾಗೆ ಇರಲಿ. ದೇವತೆಗಳೊಂದಿಗೆ ನನ್ನದ್ದೊಂದು ರಕ್ಕಸ ವೇಷವೂ ಇರಲಿ. ಯಾಕೆಂದರೆ ರಕ್ಕಸ ಇಲ್ಲದೆ ದೇವತೆಗಳ ಕತೆಗೆ ಟೇಸ್ಟ್ ಬರಲ್ಲ.

ಪೂಕಿರಣನ ಅಣ್ಣನ ಫೋಟೋ ಇದರಲ್ಲಿ ಇದೆಯಾ ನೋಡಿ.

ಈಗ ನಿನ್ನೆ ಸುಳ್ಯದಲ್ಲಿ ದೇವಸ್ಥಾನದ ವಿಷಯದಲ್ಲಿ ಪತ್ರಿಕಾ ಗೋಷ್ಠಿ ನಡೆದಿದೆ. ಗೋಷ್ಠಿಯಲ್ಲಿ ಈಗಿನ ಆಡಳಿತ ಮಂಡಳಿ ಬಗ್ಗೆ ಹೇಳಲಾಗಿದೆ. ಈಗ ಆ ಗೋಷ್ಠಿ ವಿಷಯ ಎಲ್ಲಾ ಪತ್ರಿಕೆಗಳಲ್ಲೂ, ಚಾನೆಲ್ ಗಳಲ್ಲೂ ಬಂದೇ ಬರುತ್ತದೆ. ಈಗಿನ ಆಡಳಿತ ಮಂಡಳಿ ಈ ಬಗ್ಗೆ ಜಾಲತಾಣಗಳಲ್ಲಿ ಪತ್ರಿಕೆಗಳಿಗೆ, ಚಾನೆಲ್ ಗಳಿಗೆ ಬಯ್ದರೆ ಆಗುತ್ತಾ. ಪತ್ರಿಕಾ ಸಂಪಾದಕರುಗಳನ್ನು ಟಾರ್ಗೆಟ್ ಮಾಡೋದು, ಆಫೀಸಿಗೆ ನುಗ್ಗಿ ಹೊಡಿತೇವೆ ಅನ್ನೋದು ಎಲ್ಲಾ ಯಾವ ಪೋಪಿಕಾಲದ ಮೆಂಟಾಲಿಟಿ ಎಂದೇ ಅರ್ಥ ಆಗುತ್ತಿಲ್ಲ. ಒಬ್ಬ ಸಂಪಾದಕನಿಗೆ ಹೊಡೆದ್ರೆ ಕತೆ ಅಲ್ಲಿಗೆ ಮುಗಿಯುತ್ತಾ? ವಿವಾದಗಳಿಗೆ ಕಾರಣ ಆಗೋದೂ ನೀವೇ, ಪತ್ರಿಕೆಗಳಿಗೆ ಮಾಹಿತಿ ಕೊಡೋದೂ ನೀವೇ, ಆಮೇಲೆ ಪತ್ರಿಕೆಗಳ ವಿರುದ್ಧ ಯುದ್ದಕ್ಕೆ ಬರೋದೂ ನೀವೇ. ಈಗ ಏನ್ಮಾಡೋಣ ನಾವು?

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top