ಪಂಜ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಶತ ರುದ್ರಾಭೀಷೇಕದ ಲೆಕ್ಕ ಇನ್ನೂ ಸಾರ್ವಜನಿಕವಾಗಿ ಪ್ರಕಟಗೊಳ್ಳದಿರುವುದಕ್ಕೆ ಸಾರ್ವಜನಿಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ದೇವರಿಗೆ ಐದು ಸಾವ್ರ ಸೀಯಾಳಾಭೀಷೇಕ, ಐವತ್ತು ಭಟ್ರುಗಳಿಂದ ರುದ್ರ ಮಂತ್ರ ಪಾರಾಯಣ, ಊಟ ಗೀಟ ಇತ್ಯಾದಿ. ದೇವಸ್ಥಾನದ ಆಡಳಿತ ಮಂಡಳಿಗೆ ವಿಷಯವೇ ಗೊತ್ತಿಲ್ಲ ಗಡ. ದೇವಸ್ಥಾನ ಎಂತ ಡ್ಯಾಡಿ ಪ್ರಾಪರ್ಟಿಯಾ ಹಾಗೆಲ್ಲ ಕಂಡ ಕಂಡವರು ಯಾಗ ಮಾಡ್ಲಿಕ್ಕೆ? ಗವರ್ನಮೆಂಟ್ ಟೆಂಪಲ್ ಅದು.
ಹಾಗೆಂದು ಪಂಜ ದೇವಸ್ಥಾನದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ದೇಶಭಕ್ತರು ಒಂದು ಕನಸು ಕಂಡಿದ್ದರು. ದೇವರಿಗೆ ಒಂದು ರುದ್ರ ಯಾಗ ಮಾಡಿ ದೇವರನ್ನು ಪ್ರಸನ್ನಗೊಳಿಸ ಬೇಕೆಂದು. ಈ ಬಗ್ಗೆ ಮೀಟಿಂಗ್ ನಲ್ಲಿ ನಿರ್ಣಯ ಕೂಡ ಕೈಗೊಳ್ಳಲಾಗಿತ್ತು. ಆದರೆ ರುದ್ರ ಯಾಗಕ್ಕೆ ಅಶ್ವಮೇಧದ ಖರ್ಚು ತಗಲುತ್ತದೆ ಎಂದೂ,ಅಷ್ಟೆಲ್ಲ ಖರ್ಚು ಮಾಡಲು ಪಂಜದಲ್ಲಿ ಸಾಧ್ಯವಿಲ್ಲ ಎಂದು ಆಮೇಲೆ ಯಾಗದ ಕನಸು ನೆನೆಗುದಿಗೆ ಬಿದ್ದಿತ್ತು. ಆಮೇಲೆ ದೇಶಭಕ್ತರು ಮನೆಗೆ ಹೋಗಿ ಕಾಂಗ್ರೆಸಿಗರು ಅಧಿಕಾರಕ್ಕೆ ಬಂದು ಪ್ರಶ್ನೆ ಚಿಂತನೆ ನಡೆಸಿದಾಗ ದೇಶಭಕ್ತರ ರುದ್ರಯಾಗದ ವಿಷಯ ಬಂದಿದೆ. ಸಂಕಲ್ಪ ಮಾಡಿದ್ದ ಹರಿಕೆ ತೀರಿಸದ ಬಗ್ಗೆ ದೇವರಿಗೆ ಅಸಮಾಧಾನ ಇದೆ ಎಂದು ಪ್ರಶ್ನೆಯವರು ಕವಡೆ ಮೂವ್ ಮಾಡಿದ್ದರು. ಇದರಿಂದ ಪುಕು ಪುಕು ಶುರುವಾದ ದೇಶಭಕ್ತರು ಓ ಮೊನ್ನೆ ರುದ್ರ ಯಾಗದ ಬದಲಾಗಿ ಕಡಿಮೆ ಖರ್ಚಿನಲ್ಲಿ ದೇವರಿಗೆ ಶತರುದ್ರಾಭೀಷೇಕ ಮಾಡಿಸಿ ಕೈಕಾಲು ತೊಳೆದು ಕೊಂಡಿದ್ದಾರೆ.
ಹಾಗೆ ಮೊನ್ನೆ ದೇವರಿಗೆ ಶತರುದ್ರಾಭೀಷೇಕ. ಐದು ಸಾವಿರಕ್ಕಿಂತಲೂ ಹೆಚ್ಚು ಸೀಯಾಳದಿಂದ ದೇವರಿಗೆ ಅಭಿಷೇಕ ನಡೆಸಿ, ಐವತ್ತಕ್ಕೂ ಹೆಚ್ಚು ಭಟ್ರುಗಳಿಂದ ರುದ್ರ ಮಂತ್ರ ಪಾರಾಯಣ ಮಾಡಿಸಲಾಯಿತು. ಊಟಗೀಟ ಎಲ್ಲಾ ಗಡದ್ದಾಗಿತ್ತು. ಬಂಜಿ ಫುಲ್. ಆದರೆ ಈಗ ವಿವಾದ ಎದ್ದಿರುವುದು ರುದ್ರಾಭಿಷೇಕದ ಲೆಕ್ಕದ ಬಗ್ಗೆ. ದೇಶಭಕ್ತರು ಅಭಿಷೇಕದ ಲೆಕ್ಕ ಕೊಟ್ಟಿಲ್ಲ. ಕಲೆಕ್ಷನ್ ಮಾಡಿದ್ದಾರಂತೆ. ಖರ್ಚು ಎಷ್ಟು? ಉಳಿಕೆ ಎಷ್ಟು? ಗಳಿಕೆ ಎಷ್ಟು? ಎಂದೆಲ್ಲ ಲೆಕ್ಕಾಚಾರ ಬೇಕಲ್ಲ. ಕಾಂಗ್ರೆಸ್ ಆಡಳಿತ ಮಂಡಳಿ ದುಡ್ಡು ತಿಂದಿತು, ಲೆಕ್ಕಾಚಾರ ಕೊಟ್ಟಿಲ್ಲ ಎಂದು ಇಡೀ ಊರಿಗೆ ಡಂಗುರ ಸಾರಿ, ದಂಗೆ ಎಬ್ಬಿಸಿ, ನೂರಾರು ಜನರೊಂದಿಗೆ ದೇವಸ್ಥಾನದಲ್ಲಿ ಬಂದು ಈಗ ಲೆಕ್ಕ ಇಡಿ ಎಂದು ಬೆದರಿಕೆ ಹಾಕಿದ್ದ ಇದೇ ಜನ ಈಗ ಶತರುದ್ರಾಭೀಷೇಕದ ಲೆಕ್ಕ ಯಾಕೆ ಕೇಳುತ್ತಿಲ್ಲ, ಲೆಕ್ಕ ಯಾಕೆ ಇಟ್ಟಿಲ್ಲ ಎಂಬ ಪ್ರಶ್ನೆ ಎದ್ದಿದೆ. ಅಭಿಷೇಕದ ಬಾಬ್ತು ಒಂದು ತುಂಡು ರಶೀದಿ ಇಲ್ಲ, ದೇವಸ್ಥಾನದ ಹಾಲ್ ಬಾಡಿಗೆ ಕಟ್ಟಿಲ್ಲ, ಕರೆಂಟ್ ಬಿಲ್ ಕೊಟ್ಟಿಲ್ಲ, ಆಡಳಿತ ಮಂಡಳಿಯ ಪರ್ಮಿಷನ್ ಇಲ್ಲದೆ ಸೀದಾ ಬಂದು ರಾಜಾರೋಷವಾಗಿ ಕಾರ್ಯಕ್ರಮ ನಡೆಸಲು ಅದು ದೇಶಭಕ್ತರ ಪ್ರೈವೇಟ್ ದೇವಸ್ಥಾನವಾ ಎಂದು ಕೇಳುವವರು ಕೇಳಿಯೇ ಕೇಳುತ್ತಾರೆ.
ಹಾಗೆಂದು ಶತರುದ್ರಾಭೀಷೇಕದ ಬಗ್ಗೆ ಯಾರದ್ದೂ ತಕರಾರಿಲ್ಲ. ಅಭಿಷೇಕಕ್ಕೆ ಕಲೆಕ್ಷನ್ ಸಾರ್ವಜನಿಕರಿಂದ ಮಾಡಿದ್ದರೂ ಅದ್ಯಾರೋ ಪೊಕ್ಕಡೆ ವಕೀಲರೊಬ್ಬರ ಹೆಸರಿನಲ್ಲಿ ಅಭಿಷೇಕ ನಡೆಸಲಾಯಿತು. ಅದೂ ತೊಂದರೆ ಇಲ್ಲ. ಆದರೆ ಲೆಕ್ಕಾಚಾರ ಮುಖ್ಯ. ಕಾಂಗ್ರೆಸ್ ಆಡಳಿತ ಮಂಡಳಿಯ ಲೆಕ್ಕಾಚಾರ ಕೇಳುವಾಗ ಅದೇನು ಒಗ್ಗಟ್ಟು, ಝೆನ್ ಜಿ ಗೆಟಪ್ಪು, ಆಡಿಟರ್ ಮರ್ಜಿ, ಚಾರ್ಟರ್ಡ್ ಅಕೌಂಟೆಂಟ್ ಸ್ಟೈಲು, ಜಾಲತಾಣಗಳಲ್ಲಿ ಅದೇನು ಗಾಂಧೀಗಿರಿ, ಸತ್ಯಹರಿಶ್ಚಂದ್ರ, ಶ್ರೀರಾಮ. ಈಗ ರುದ್ರಾಭಿಷೇಕದ ಲೆಕ್ಕ ಬರ್ಲಿ ಫಸ್ಟು ಎಂದು ಸಾರ್ವಜನಿಕರು ಲೆಕ್ಕ ಕೇಳುವುದರಲ್ಲಿ ತಪ್ಪೇನಿದೆ? ಲೆಕ್ಕ ಬಿಡಿ, ಕಡೇಪಕ್ಷ ಆ ದೇವಸ್ಥಾನದ ಹಾಲ್ ಬಾಡಿಗೆ ಆದರೂ ಕೊಡಿ ಮಾರಾಯ್ರೆ. ಎರಡು ದಿನಗಳ ಕರೆಂಟ್ ಬಿಲ್ ಸಹ. ಆಡಳಿತ ಮಂಡಳಿ ಸರ್ಕಾರಕ್ಕೆ ಮತ್ತು ನಿಮಗೆ ಲೆಕ್ಕ ಕೊಡಬೇಕಲ್ಲ. ಲೆಕ್ಕ ಕೊಡದಿದ್ದರೆ ನಾಳೆ ಬಂದು ಗಲಾಟೆ ಮಾಡೋದೂ ಕೂಡ ಇದೇ ಜನಗಳು. ದೇವ್ರೇ ಅವ್ರಿಗೆ ಸ್ವಲ್ಪ ಒಳ್ಳೆ ವಿದ್ಯೆ ಬುದ್ಧಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಪ್ಪಾ.