ಸುಬ್ರಹ್ಮಣ್ಯ ಪೊಯ್ಯೆ ಅಡ್ಡೆಗೆ ಲೈಸೆನ್ಸ್ ಇದೆ!

Pattler News

Bureau Report

ಅಲ್ಲಿ ಸುಬ್ರಹ್ಮಣ್ಯ ಸೈಡಿನ ಐನೆಕಿದು ಗ್ರಾಮದ ಕುಜುಂಬಾರು ಎಂಬಲ್ಲಿ ಕಲ್ಲಾಜೆ ಹೊಳೆಯಿಂದ ಅಕ್ರಮವಾಗಿ ಪೊಯ್ಯೆ ತೆಗೆಯುವ ಸ್ಕೆಚ್ ರೆಡಿಯಾಗಿದೆ ಎಂದು ನಿನ್ನೆ ವೈರಲ್ ಮಾಡಿದ್ದೆವು. ಸ್ಥಳೀಯ ಗ್ರಾಮಸ್ಥರೊಬ್ಬರ ಕುಮ್ಕಿ ಜಾಗದಲ್ಲಿ ರೋಡ್ ಮಾಡಿ ಹೊಳೆಗೆ ಇಳಿದು ಪೊಯ್ಯೆ ತೆಗೆಯುವ ಮಾಸ್ಟರ್ ಪ್ಲಾನ್ ರೆಡಿಯಾಗಿ ನಿಂತಿದೆ ಎಂದು ಕೂಡ ಬರೆದಿದ್ದೆವು. ಆದರೆ ಸದ್ರಿ ಮರಳು ಅಡ್ಡೆಗೆ ಗಣಿ ಇಲಾಖೆ ಲೈಸೆನ್ಸ್ ಇದ್ದು, ಪುತ್ತೂರು ಅಸಿಸ್ಟೆಂಟ್ ಕಮಿಷನರ್ ಸ್ಟೆಲ್ಲಾ ಮ್ಯಾಡಿ ಪರ್ಮಿಷನ್ ಕೂಡ ಇದೆ ಎಂದು ಪೊಯ್ಯೆ ವ್ಯಾಪಾರಿಗಳು ನಮಗೆ ಲೈಸೆನ್ಸ್ ಕಾಪಿ ಕಳಿಸಿ ಮಂಗಳಾರತಿ ಮಾಡಿದ್ದರು. ಮಂಗಳಾರತಿ ಆದ ಕೂಡಲೇ ನ್ಯೂಸ್ ತೆಗೆದಿದ್ದು ಬೆಳಿಗ್ಗೆ ಹಕ್ಕಿ ಕೂಗುವ ಮೊದಲೇ ಸ್ಪಷ್ಟೀಕರಣ ಹಾಕುತ್ತೇನೆ ಎಂದು ಪೊಯ್ಯೆ ವ್ಯಾಪಾರಿಗಳಿಗೆ ತಿಳಿಸಲಾಗಿತ್ತು. ನಿಜವಾಗಿಯೂ ಅಲ್ಲಿ ಸಮಸ್ಯೆ ಇರೋದು ಸುಬ್ರಹ್ಮಣ್ಯ ಪಂಚಾಯ್ತಿ ಆ ಗ್ರಾಮಸ್ಥರಿಗೆ ಮಾಡಿಕೊಟ್ಟಿರುವ ಚಿನ್ನದಂತ ಕಾಂಕ್ರೀಟ್ ರಸ್ತೆ ಪೊಯ್ಯೆ ಲೋಡಿನ ಟಿಪ್ಪರ್ ರಕ್ಕಸರ ಹಾಗೆ ಹೋದರೆ ಹಾಳಾಗುತ್ತದೆ ಎಂಬ ಗ್ರಾಮಸ್ಥರ ಅಳಲು ಬಿಟ್ಟರೆ ಬೇರೆನೂ ಇಲ್ಲ. ನಮ್ಮ ರಸ್ತೆ ಹಾಳಾಗುತ್ತದೆ, ಒಮ್ಮೆ ರಸ್ತೆ ಹಾಳಾದರೆ ಮತ್ತೆ ನೂರು ವರ್ಷ ಮತ್ತೇ ರಿಪೇರಿ ಆಗಲ್ಲ ಎಂಬುದು ಗ್ರಾಮಸ್ಥರ ಕೂಗು. ರಸ್ತೆ ಕಾಂಕ್ರೀಟೀಕರಣ ಆಗಿದ್ದು ಕಲ್ಲಾಜೆ ಹೊಳೆಯ ಚಿಲ್ಲರೆ ಪೊಯ್ಯೆ ಹೋದರೆ ಏನೂ ಆಗದು. ಹಾಗೆಂದು ಅದೇನು ಪಾಣೇರ್ ನೇತ್ರಾವತಿ ಪೊಯ್ಯೆ ಅಲ್ಲ ಅಲ್ವಾ ಎಂಬುದು ಬಲ್ಲಿದರ ಮಾತು. ಇನ್ನು ಕಲ್ಲಾಜೆ ಹೊಳೆಯಿಂದ ಅಕ್ರಮವಾಗಿ ಪೊಯ್ಯೆ ತೆಗೆದು ಟಿಪ್ಪರ್ ಟ್ರಿಪ್ ಹೊಡೆಯುವವರ ಪರ್ಸಿನಲ್ಲಿ ಸ್ವಲ್ಪ ದುಡ್ಡಿನ ಒರತ್ತೆ ಆಜುವ ಲಕ್ಷಣಗಳು ಕಾಣಿಸುತ್ತಿದೆ.

ಹಾಗೆಂದು ನಿನ್ನೆ ಬಂದ ಮಾಹಿತಿ ವೈರಲ್ ಮಾಡಲು ನಾವು ಸ್ವಲ್ಪ ಅರ್ಜೆಂಟ್ ಅರ್ಜೆಂಟ್ ಮಾಡಿದ್ದ ಕಾರಣ ನಮಗೆ ಮಂಗಳಾರತಿ ಆಗಿದೆ. ಗ್ರಾಮಸ್ಥರು ರಸ್ತೆ ಹಾಳಾಗುತ್ತದೆ ಎಂದು ಕೊಟ್ಟ ದೂರನ್ನು ನಾವು ಅಪಾರ್ಥ ಮಾಡಿಕೊಂಡು ಅನಧಿಕೃತ ಪೊಯ್ಯೆ ಅಡ್ಡೆ ಎಂದು ಬರೆದು ವೈರಲ್ ಮಾಡಿದ್ದೆವು. ಇದಕ್ಕಾಗಿ ವಿಷಾದಿಸುತ್ತೇನೆ. ಇನ್ನು ನ್ಯೂಸ್ ತೆಗೆದ ಕೂಡಲೇ ಪಟೇಲನಿಗೆ ಐವತ್ತರ ಕಟ್ಟು ಬಂತು, ಎಪ್ಪತ್ತೈದರ ಗಂಟು ಬಂತು ಎಂದು ಯಾರೂ ಮಾತಾಡಿಕೊಳ್ಳಬೇಕಾಗಿಲ್ಲ, ನನಗೆ ಬಯ್ಯ ಬೇಕಿಲ್ಲ. ಐನೂರು ರೂಪಾಯಿ ನೋಟು ನೋಡದೆಯೇ ಎರಡು ತಿಂಗಳಾಯ್ತು. ನಮ್ಮ ತಪ್ಪಿಗೆ ನಮ್ಮನ್ನು ಯಾರೂ ನೇಣಿಗೆ ಹಾಕಬೇಕಿಲ್ಲ ನಾವೇ ಹೋಗಿ ಬೀಜದ ಮರದಲ್ಲಿ ನೇತಾಡಿ ಬಿಡುತ್ತೇವೆ. ಅಷ್ಟೇ!

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top