ಪುತ್ತೂರಿನಲ್ಲಿ ಕೇರಳ ರಾಜ್ಯದ ಲಾಟರಿ ಮಾರಾಟ!

Pattler News

Bureau Report

ಕರ್ನಾಟಕದಲ್ಲಿ ಲಾಟರಿ ಮಾರಾಟಕ್ಕೆ ನಿರ್ಬಂಧಗಳಿದ್ದರೂ ದಕ್ಷಿಣ ಕನ್ನಡದ ಎರಡನೇ ಅತೀ ದೊಡ್ಡ ಪುತ್ತೂರಿನಲ್ಲಿ ಕೇರಳ ರಾಜ್ಯದ ಲಾಟರಿಗಳನ್ನು ಒಳಗಿಟ್ಟು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪುತ್ತೂರು ಪೋಲಿಸರು ಒಂದ್ರೌಂಡು ರೈಡು ಬೀಳೋದು ಒಳ್ಳೇದು.

ಹಾಗೆಂದು ಕರ್ನಾಟಕದಲ್ಲಿ ಲಾಟರಿ ಮಾರಾಟಕ್ಕೆ ನಿರ್ಬಂಧಗಳಿವೆ. ಇಲ್ಲಿ ಯಾವುದೇ ಜಾತಿಯ, ಧರ್ಮದ, ಕಲರ್, ಕ್ರೀಡ್ ನ ಲಾಟರಿ ಮಾರುವಂತಿಲ್ಲ. ಸಿಂಗಲ್ ನಂಬ್ರ, ಡಬ್ಬಲ್ ನಂಬ್ರ, ತ್ರಿಬ್ಬಲ್ , ಲಾಸ್ಟ್ ಮೂರು ಅಂತೆಲ್ಲ ಇಲ್ಲಿ ಕಾನೂನು ಮೀರಿ ಮಾರಿದರೆ, ಸಿಕ್ಕಿ ಬಿದ್ದರೆ ಪೋಲಿಸರು ಬಂಧೀಖಾನೆಗೆ ಕಳಿಸಿ ಬಿಡುತ್ತಾರೆ ಅಷ್ಟೇಯಾ. ಆಚೆ ಸುಳ್ಯ ಕಡೆ ಈಗ ಲಾಟ್ರಿ ಮಾಮೂಲಾಗಿದ್ದು ಒಳಗೂ ಇಟ್ಟು ಮಾರುತ್ತಾರೆ, ಹೊರಗೂ ಇಟ್ಟು ಮಾರುತ್ತಾರೆ. ಇದೀಗ ಪುತ್ತೂರು ಪೇಟೆ ಮತ್ತು ಪೇಟೆ ಬದಿಯ ಚಿಕ್ಕ ಚಿಕ್ಕ ಪೇಟೆಗಳಲ್ಲಿ ಕೇರಳ ರಾಜ್ಯದ ಲಾಟ್ರಿ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಸದ್ಯಕ್ಕೆ ಚಿಕ್ಕ ಚಿಕ್ಕ ಸ್ಟಾಲ್ ಗಳು, ಬೀಡಾ ಬೀಡಿ ಅಂಗಡಿಗಳು, ಗೂಡಂಗಡಿಗಳು, ಲಿಂಗಪ್ಪಣ್ಣನ ಅಂಗಡಿಗಳು, ಕೆಲವು ಫ್ರುಟ್ ಸ್ಟಾಲ್ ಗಳು ಲಾಟ್ರಿ ಮಾರಾಟದ ಕೇಂದ್ರಗಳಾಗಿವೆ. ‌ಸದ್ಯಕ್ಕೆ ಲಾಟ್ರಿಗಳನ್ನು ಒಳಗಿಟ್ಟು ಮಾರಾಟ ಮಾಡಲಾಗುತ್ತಿದ್ದು ಕೇಳಿ ಬರುವ ಭಕ್ತಾದಿಗಳಿಗೆ ಮಾತ್ರ ಕೊಡಲಾಗುತ್ತಿದೆ. ಕೇರಳ ರಾಜ್ಯದ ತರಾವಳಿ ಲಾಟ್ರಿಗಳು ಪುತ್ತೂರಿನಲ್ಲಿ ಲಭ್ಯವಿದ್ದು ಲಾಟ್ರಿ ಮರ್ಲರು ಇದರ ಸದುಪಯೋಗ ಪಡೆದುಕೊಳ್ಳ ಬಹುದಾಗಿದೆ. ಇಲ್ಲಿನ ಲಾಟ್ರಿ ಸ್ಟಾಲುಗಳು ಸದ್ಯಕ್ಕೆ ಬೇಕೂಂತ ಬಂದವರಿಗೆ ಮಾತ್ರ ಲಾಟ್ರಿ ಉಂಡು ಅಂತ ಹೇಳುತ್ತಿದ್ದು ದಾರಿ ತಪ್ಪಿ ಬಂದವರಿಗೆ “ಇಜ್ಜಿ” ಅಂತ ಹೇಳುತ್ತಿದ್ದಾರೆ ಎಂದು ಸುದ್ದಿ ಇದೆ. ಹಾಗಾಗಿ ಪೂತ್ತೂರು ಟೌನ್ ಪೋಲಿಸರು ಸಹ ಬೇಕೂಂತ ಇಂಥ ಅಂಗಡಿಗಳಿಗೆ ಹೋಗಬೇಕಿಲ್ಲ ರೌಂಡ್ಸಿಗೆ ಹೋಗುವಾಗ ಒಂದು ರೌಂಡು ಹೋಗಿ ಉಂಡಾ ಅಂತ ವಿಚಾರಿಸಿದರೂ ಸಾಕು ಲಿಂಗಪ್ಪಣ್ಣ ಗೂಡು ಬಿಟ್ಟು ಓಡುವ ಅಪಾಯಗಳಿವೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top