ಗುಂಡ್ಯದಲ್ಲಿ ತೊಡೆ ಪ್ರಕರಣ ವೈರಲ್

Pattler News

Bureau Report

ಗಡಿ ನಾಡು ಗುಂಡ್ಯದಲ್ಲಿ ತೊಡೆ ಪ್ರಕರಣ ಒಂದು ವೈರಲ್ ಆಗಿದ್ದು ಕಾಂತಾರ, su ಫ್ರಂ ಸೋ, ಪ್ರೇಮದ ಊರಲ್ಲಿ ಮುಂತಾದ ಢಾಂ ಢೀಂ ಗಳನ್ನ ಓವರ್ ಟೇಕ್ ಮಾಡಿದೆ. ಸದ್ಯ ತೊಡೆ ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲು ಕೂಡ ಹತ್ತಿದ್ದು ಪೋಲಿಸರು “ನಮ್ಮ ವ್ಯಾಪ್ತಿಗೆ ಬರಲ್ಲ” ಎಂದು ಕೈಚೆಲ್ಲಿದ್ದಾರೆ.

ಹಾಗೆಂದು ಗುಂಡ್ಯ ತುಂಬಾ ದಿನಗಳಿಂದ ಅಕ್ರಮ ಅಂಗಡಿಗಳ ಬಗ್ಗೆ ವೈರಲ್ ಆಗಿತ್ತು. ಪೋಲಿಸರು ಈ ಎಲ್ಲಾ ಅಕ್ರಮ ಅಂಗಡಿಗಳಿಗೆ ಕೆಂಪು ನೋಟಿಸ್ ಕೊಟ್ಟು ಎಲ್ಲಾ ಅಕ್ರಮಿಗಳನ್ನು ಠಾಣೆಗೆ ಕರೆಸಿಕೊಂಡು “ಕುಂತು” ಮಾತಾಡಿದ್ದರು. ಹಾಗೆ ಪೋಲಿಸರ ಜೊತೆ ಮಾತಾಡಿ ಅಮ್ಮಬ್ಬಾ ಎಂದು ಗುಂಡ್ಯದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಗುಂಡ್ಯ ಮತ್ತೊಮ್ಮೆ ವೈರಲ್ ಆಗಿದೆ. ಅಲ್ಲಿ ಗುಂಡ್ಯದಲ್ಲಿ ಇರುವ ಅಕ್ರಮ ಅಂಗಡಿಗಳಲ್ಲಿ ಒಂದು ಟೀ ಅಂಗಡಿ ಸಹ ಇದೆ. ಒಳ್ಳೇ ಟೀ ಮಾರಾಯ್ರೆ. ಸದ್ರಿ ಟೀ ಅಂಗಡಿ ಒಬ್ಬ ಮಹಿಳೆಗೆ ಸೇರಿದ್ದು ಜನ ಬಂದು ಹೋಗಿ, ಬಂದು ಹೋಗಿ ಟೀ ಕುಡಿಯುತ್ತಿದ್ದರು. ಓ ಮೊನ್ನೆ ಏನಾಯ್ತೆಂದರೆ ಟೀ ಅಂಗ್ಡಿ ಮಹಿಳೆ ಕಾಲು ಜಾರಿ ಅಂಗ್ಡಿ ಒಳಗೆ ಬಿದ್ದಿದೆ. ಬಿದ್ದ ಪೆಟ್ಟಿಗೆ ಮಹಿಳೆಯ ಕಾಲು ಅದೆಲ್ಲೋ ಉಳುಕಿದೆ. ವಿಪರೀತ ನೋವು, ಪುಳೆವು. ತಡೆದು ಕೊಳ್ಳಲೇ ಆಗಲಿಲ್ಲ. ಕಡೆಗೆ ಬೇರೆ ಉಪಾಯ ಕಾಣದೆ ಆಪೆದ ಅಂಗಡಿಯ ಮೂವತ್ತೈದರ ಅವಿವಾಹಿತ ಹುಡುಗನ ಕರೆಸಿ ಆಂಟಿ ಕೈಬೇವಿನ ಎಣ್ಣೆ, ಬಾಲಕಿಷ್ಣ ತೈಲ, ಟೈಗರ್ ಬಂಬು ಹಾಕಿಸಿ ಕಾಲಿಗೆ ಮಸಾಜ್ ಮಾಡಿಸಲು ಶುರು ಮಾಡಿದ್ದಾಳೆ. ಅಷ್ಟೇ.

ಹಾಗೆ ತನ್ನ ಹತ್ತಿರದ ಟೀ ಅಂಗಡಿಯ ವಿವಾಹಿತೆ ಮಹಿಳೆ ಬಿದ್ದು ಕಾಲು ಉಳುಕಿದ ಪರಿಣಾಮವಾಗಿ ಟೈಗರ್ ಬಂಬು ಪೂಜಲು ಬಂದ ಪರೋಪಕಾರಿ ಅವಿವಾಹಿತ ಹುಡುಗ ಎಣ್ಣೆ ಪೂಜುತ್ತಿದ್ದಂತೆ ಇನ್ನೊಂದು ಅಂಗಡಿಯ ಮತ್ತೊಬ್ಬರು ಟೀ ಅಂಗಡಿ ಎದುರಿನಿಂದ ಸುಯ್ಕೆಂದು ಪಾಸಾಗಿದ್ದಾನೆ. ಹಾಗೆ ಪಾಸಾಗುವಾಗ ಒಂದು ಸೆಕೆಂಡ್ ಅಂಗಡಿ ಒಳಗೆ ಕಣ್ಣು ಬಿಟ್ಟಿದ್ದಾರೆ ಅಷ್ಟೇ. “ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ…ನೋಡ್ಬಾರದ್ದನ್ನು ನೋಡ್ದೆ” ಎಂದು ಶುರುವಾಗಿದೆ. ಎಂಚಿನಗೆ… ಎಂಚಿನಗೆ ಎಂದು ಗುಸುಗುಸು ಶುರುವಾಯಿತು.ಕಡೆಗೆ ಮಸಾಜ್ ವಿಷಯ ಮೆಸೇಜ್ ಆಗಿ ಇಡೀ ಗುಂಡ್ಯ ವೈರಲ್ ಆಗಿತ್ತು. ಈ ಬಗ್ಗೆ ತೀವ್ರ ಮುಜುಗರಕ್ಕೆ ಒಳಗಾದ ಟೀ ಆಂಟಿ ಘಟನೆ ಬಗ್ಗೆ ಸ್ಪಷ್ಟನೆ ಕೊಡುತ್ತಾ “ಕಾಲು ಜಾರಿ ಬಿದ್ದಿದ್ದು, ನೋವಾಗುತ್ತಿತ್ತು, ಹಾಗಾಗಿ ಎಣ್ಣೆ ತಿಕ್ಕಿಸಿದ್ದು ಮಾತ್ರ. ಇಲ್ಲಿ ಮೊರಂಪಿಗೆ ನೋವಾಗಿದೆ. ಬೇರೆ ಎಲ್ಲಿಗೂ ಅಲ್ಲ” ಎಂದು ಟೀ ಕುಡಿಯಲು ಬಂದವರಿಗೆಲ್ಲ ನೋವಾದ ಮೊರಂಪಿನ ಭಾಗವನ್ನು ತೋರಿಸುತ್ತಿದ್ದರೆ ಜನ ಪುಕ್ಕಟೆ ಪ್ರೀಶೋ ನೋಡುತ್ತಿದ್ದರು. ಹಾಗೆ ಟೀ ಆಂಟಿ ಮೊರಂಪು ತೋರಿಸಿ ಸ್ಪಷ್ಟೀಕರಣ ಕೊಡುತ್ತಿದ್ದಾಳೆ ಎಂದು ಗೊತ್ತಾಗುತ್ತಿದ್ದಂತೆ ಆವತ್ತು ಟೀ ಕೂಡ ಹತ್ತು ಗ್ಲಾಸ್ ಜಾಸ್ತಿ ಹೋಗಿದೆ ಎಂದು ಸುದ್ದಿ.

ಹಾಗೆಂದು ಸದ್ರಿ ಟೀ ಆಂಟಿ ಮೊರಂಪಿನ ಆಸುಪಾಸಿನಲ್ಲಿ ಎಷ್ಟೇ ತೋರಿಸಿ ತೋರಿಸಿ ಸ್ಪಷ್ಟೀಕರಣ ಕೊಟ್ಟರೂ ಜನ ನಂಬಬೇಕಲ್ಲ. ಅವಿವಾಹಿತ ಹುಡುಗ ಮಸಾಜ್ ಮಾಡುತ್ತಾ ಮಾಡುತ್ತಾ ಸಮುದ್ರ ಮಟ್ಟದಿಂದ ತುಂಬಾ ಮೇಲೆ ಬಂದು ಆಮ್ಲಜನಕ ಸಿಗದ ಕಡೆಯಲ್ಲೆಲ್ಲ ಮಸಾಜ್ ಮಾಡಿದ್ದ ಎಂದು ಗುಂಡ್ಯ ತುಂಬಾ ಸುದ್ದಿಯಾಗಿತ್ತು. ಈ ಬಗ್ಗೆ ಟೀ ಆಂಟಿ ಪೋಲಿಸ್ ಠಾಣೆ ಮೆಟ್ಟಿಲು ಹತ್ತಿದ್ದು ಮಸಾಜ್ ಪ್ರೋಗ್ರಾಂ ನೋಡಿದವರ ವಿರುದ್ಧ ಕಂಪ್ಲೈಂಟ್ ಕೊಟ್ಟಿದ್ದಳು. ಆದರೆ ಟೀ ಆಂಟಿ ಮಸಾಜ್ ಪ್ರೋಗ್ರಾಂ ನೋಡಿದವರ ಅಂಗಡಿ ಮುಂದೆ ಹೋಗಿ ಸೀರೆ ಎತ್ತಿ ಎತ್ತಿ ಮೊರಂಪು ತೋರಿಸಿ ಗಲಾಟೆ ಮಾಡಿದ ಸಿಸಿ ಫೂಟೇಜ್ ಕೂಡ ಇದ್ದ ಕಾರಣ ರಾಜಿಯಲ್ಲಿ ತೆಗೆಯಲು ಪೋಲಿಸರು ಹೇಳಿದ್ದರು. ಅಂತೂ ಇಂತೂ ಇದೀಗ ಪ್ರಕರಣ ಚಪ್ಪೆ ಚೌಲಿಯಾಗಿದ್ದು ಇವಳ ತೊಡೆಗೆ ಬಿದ್ದು ಬಾಪು ಬಂದಿದ್ದರೆ ಗಂಡ ಹೇಗೂ ಇದ್ದಾನಲ್ಲ ಅವನ ಕೈಯಲ್ಲಿ ಟೈಗರ್ ಬಾಂಬು ಪೂಜಿಸುವುದು ಬಿಟ್ಟು ಯಾವಾನೋ ಅವಿವಾಹಿತ ಹುಡುಗನನ್ನು ಕರೆದು, ರಜತ ಪರದೆ ಎತ್ತಿ, ಆಮ್ಲಜನಕ ಸಿಗದ ಕಡೆ ಮಸಾಜ್ ಮಾಡಿಸಿದ್ದು ತಪ್ಪು ಎಂಬುದು ಗುಂಡ್ಯ ಜನರ ಹೇಳಿಕೆ. ಸದ್ರಿ ಆಂಟಿ ಘಟ್ಟದ ಮೇಲಿಂದ ಬಂದಿದ್ದು ಇಲ್ಲಿ ಅಕ್ರಮ ಅಂಗಡಿಗಳ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದಾರಂತೆ. ಆಂಟೀ ಟೀ ಅಂಗಡಿಗೆ ಒಳ್ಳೇ ಬಿಸಿನೆಸ್ ಇದ್ದು ಪಲಾವ್ ಸೂಪರ್ ಅಂತೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top