ಕಾವು ಪವಿತ್ರ ಪ್ರಾಣಿ ಮೇಲೆ ಕಂಪ್ಲೈಂಟ್!

Pattler News

Bureau Report

ಪುತ್ತೂರು ತಾಲೂಕಿನ ಕಾವು ಬಳಿಯ ಸೊಸೈಟಿ ಒಂದರ ಸಿಬ್ಬಂದಿಯೊಬ್ಬರಿಗೆ ಕಿರುಕುಳ ಆರೋಪದಡಿ ಕಾವಿನ ಫೇಮಸ್ ಪವಿತ್ರ ಪಾಣಿ ಒಬ್ಬರನ್ನು ಪೋಲಿಸರು ಠಾಣೆಗೆ ಕರೆದು ಮಂಗಳಾರತಿ ಮಾಡಿದ ಘಟನೆ ನಡೆದಿದೆ. ಪವಿತ್ರ ಪಾಣಿಯ ಪುಣ್ಯಕ್ಕೆ ಪೋಲಿಸರು ಪ್ರಸಾದ ವಿತರಣೆ ಮಾಡಿಲ್ಲ.

ಅಲ್ಲಿ ಪುತ್ತೂರು ತಾಲೂಕಿನ ಕಾವು ಬಳಿಯ ಸೊಸೈಟಿ ಒಂದರ ಅಜೀವ ಅಧ್ಯಕ್ಷರೂ, ಹಾಲಿನ ಸೊಸೈಟಿಯ ಕಿಂಗ್ ಮೇಕರೂ, ದೇವಸ್ಥಾನ ಒಂದರ ಪವಿತ್ರ ಪಾಣಿಗಳೂ ಆದಂತಹ ಮಹಾನ್ ದೇಶಭಕ್ತರೊಬ್ಬರನ್ನು ಇತ್ತೀಚೆಗೆ ಪೋಲಿಸರು ಠಾಣೆಗೆ ಕರೆಸಿ “ಏನು ನಿಮ್ಮದು? ಬಂದೀಖಾನೆ ಬಗ್ಗೆ ಗೊತ್ತುಂಟಲ್ಲ” ಎಂದು ಗದರಿಸಿದ್ದರು. ಕಾರಣ ತನ್ನದೇ ಸೊಸೈಟಿಯ ಸಿಬ್ಬಂದಿ ಒಬ್ಬನಿಗೆ ನಿರಂತರ ಕಿರುಕುಳ ನೀಡಿದ ಬಾಬ್ತು. ಅಲ್ಲಿ ಸೊಸೈಟಿಯಲ್ಲಿ ಈ ಹಿಂದೆ ಸೆಕ್ರೆಟ್ರಿ ಆಗಿದ್ದ ಒಬ್ಬ ನಾನ್ ಕರಫ್ಟ್ ಅಧಿಕಾರಿಯೊಬ್ಬರ ಮಗ ಅದೇ ಸೊಸೈಟಿಯಲ್ಲಿ ಪ್ರಸಕ್ತ ಉದ್ಯೋಗಿಯಾಗಿದ್ದಾನೆ. ಆದರೆ ಅವನನ್ನು ಕಂಡರೇ ಅಜೀವ ಅಧ್ಯಕ್ಷ ಪವಿತ್ರ ಪಾಣಿಗೆ ಆಗದು. ಅದಕ್ಕೆ ದಿನೋಲ ಏನಾದರೊಂದು ಕಾರಣ ಹಿಡಕ್ಕೊಂಡು ಆ ಸಿಬ್ಬಂದಿ ಮೇಲೆ ಪವಿತ್ರ ಪಾಣಿ ಮಾನಸಿಕ ಹಿಂಸೆ ನಡೆಸುತ್ತಿದ್ದ. ಪವಿತ್ರ ಪಾಣಿಯ ಈ ಹಿಂಸೆಗೆ ಅದೇ ಸೊಸೈಟಿಯ ಒಬ್ಬ ಅಧಿಕಪ್ರಸಂಗಿ ಡೈರೆಕ್ಟರ್ ಮತ್ತು ಇನ್ನೊಬ್ಬ ಸ್ಟಾಫ್ ಕೂಡ ಕೈಜೋಡಿಸಿದ್ದು ಮೂವರೂ ಸೇರಿ ಸಾಮೂಹಿಕ ಕಿರುಕುಳ,ಮಾನಸಿಕ ಹಿಂಸೆ ನೀಡುತ್ತಿದ್ದರು. ಇದರಿಂದ ರೋಸಿ ಹೋದ ಆ ಸ್ಟಾಫ್ ಓ ಮೊನ್ನೆ ಕಾಕಜಿಯಲ್ಲಿ ಅದೇನೋ ಮರಣ ಪತ್ರ ಗೀಚಿ ನಾಪತ್ತೆಯಾಗಿದ್ದ. ಎಲ್ಲಿ ಹೋದ, ಎಲ್ಲಿ ಹೋದ ಎಂದು ಮನೆಮಂದಿ ದಿಗಿಲು ಬಿದ್ದು ಹುಡುಕಾಟ ನಡೆಸಿ ಪೋಲಿಸ್ ಕಂಪ್ಲೈಂಟ್ ಕೂಡ ಕೊಟ್ಟಿದ್ದರು. ನಂತರ ಎಲ್ಲೋ ದೂರದ ಗೋಕರ್ಣದಿಂದ ಹೋಗಿ ಆ ಸಿಬ್ಬಂದಿಯನ್ನು ಮನವೊಲಿಸಿ ಕರೆತರಲಾಗಿತ್ತು.

ಇಷ್ಟಕ್ಕೂ ಆ ಸಿಬ್ಬಂದಿ ಮೇಲೆ ಯಾಕೆ ಪವಿತ್ರ ಪಾಣಿಗೆ ಅಷ್ಟೊಂದು ಪಿಸ್ರ್ ಎಂದು ವಿಚಾರಿಸಿದರೆ ಈ ಹಿಂದೆ ಈ ಸಿಬ್ಬಂದಿಯ ಡ್ಯಾಡಿ ಸೆಕ್ರೆಟ್ರಿ ಆಗಿದಷ್ಟೂ ಸಮಯ ಪವಿತ್ರ ಪಾಣಿಯ ಯಾವುದೇ ಆಟಗಳಿಗೆ ಸೊಪ್ಪು ಹಾಕದ ಕಾರಣ ಆ ಸೆಕ್ರೆಟ್ರಿ ಮೇಲೆ ಪವಿತ್ರ ಪ್ರಾಣಿಗೆ ಕೆಂಡದಂತಹ ಕೋಪ ಇತ್ತು. ಆ ಕೋಪವನ್ನು ಈಗ ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ಸಮೇತ ಮಗನ ಮೇಲೆ ತೀರಿಸಿಕೊಳ್ಳಲಾಗುತ್ತಿತ್ತು. ಇದಕ್ಕೆ ಒಬ್ಬ ಚಾಡಿ ಡೈರೆಕ್ಟರ್ ಕೂಡ ಸಾಥ್ ನೀಡುತ್ತಿದ್ದು ಈತ ಕೂಡ ಸೊಸೈಟಿಯ ಒಬ್ಬ ಅಜೀವ ಆತ್ಮ. ಈತ ಈ ಹಿಂದೆ ಇಲ್ಲಿ ಸ್ಟಾಪ್ ಆಗಿದ್ದು ಅದರಲ್ಲೇ ಚಿಲ್ಲರೆ ಪಸೆ ಮಾಡಿಕೊಂಡಿದ್ದು ನಿವೃತ್ತಿ ನಂತರ ಇದೀಗ ಪವಿತ್ರ ಪಾಣಿ ಕೃಪಾಕಟಾಕ್ಷದಿಂದ ಡೈರೆಕ್ಟರೂ ಆಗಿದ್ದಾನೆ. ಮೊನ್ನೆ ಸಿಬ್ಬಂದಿಯ ಮರಣ ಪತ್ರದಲ್ಲಿ ಇವನ ಹೆಸರೂ ಬರೆದಿದ್ದು ಪೋಲಿಸರು ಇವನನ್ನೂ ಪವಿತ್ರ ಪಾಣಿ ಜೊತೆ ಠಾಣೆಗೆ ಕರೆಸಿ “ದಾನೆಂಬೆ”ಎಂದು ವಿಚಾರಿಸಿದ್ದಾರೆ.

ಹಾಗೆಂದು ಈ ಪವಿತ್ರ ಪಾಣಿ ಕಳೆದ ಹಲವು ದಶಕಗಳಿಂದ ಸದ್ರಿ ಸೊಸೈಟಿಯ ಅಜೀವ ಅಧ್ಯಕ್ಷ. ಬೇರೆ ಯಾರನ್ನೂ ಅಧ್ಯಕ್ಷ ಕುರ್ಚಿಯ ಹತ್ತಿರವೂ ಬರಲು ಬಿಡದೆ ಕುರ್ಚಿ ಮೈನ್ ಟೇನ್ ಮಾಡಿದ ಮಹಾನ್ ದೇಶಭಕ್ತ. ಸೊಸೈಟಿಯಲ್ಲಿ ಈ ಪವಿತ್ರ ಪಾಣಿ ಮಾಡಿದ ಅಭಿವೃದ್ಧಿ ಬಗ್ಗೆ ಬರೆಯಲು ಕುಂತರೆ ಅದರಲ್ಲೇ ಒಂದು ಕಾಮಿಡಿ ಕಿಲಾಡಿಗಳು ಮಾಡಬಹುದು. ಯಾಕೆಂದರೆ ಇಷ್ಟು ದೊಡ್ಡ ಸೊಸೈಟಿಯ ಗೋಡೌನ್ ತನಕ ಲೋಡ್ ಗಾಡಿ ಹೋಗಲ್ಲ. ಲೋಡ್ ಅರ್ಧಕ್ಕೇ ಇಳಿಸಿ ಅಲ್ಲಿಂದ ಪುಣ ತುಂಬೊಡು. ಇನ್ನು ಕಾವು ಬಳಿ ಇನ್ನೊಂದು ಪೇರ್ದ ಸೊಸೈಟಿ ಇದೆ. ಎರಡರಲ್ಲೂ ಅಜೀವ ಅಧ್ಯಕ್ಷ ಆಗಲು ಸಾಧ್ಯವಿಲ್ಲ ಎಂದು ಈ ಪೇರ್ದ ಸೊಸೈಟಿಯಲ್ಲಿ ಪವಿತ್ರ ಪಾಣಿ ತನ್ನ ಚೇಲಾನೊಬ್ಬನನ್ನು ಅಧ್ಯಕ್ಷ ಮಾಡಿದ್ದಾನೆ. ವಿಷಯ ಅದಲ್ಲ, ವಿಷಯ ಏನೆಂದರೆ ಪೇರ್ದ ಸೊಸೈಟಿಯ ಎಲ್ಲಾ ಪೇಮೆಂಟ್ ಸದ್ರಿ ಅಧ್ಯಕ್ಷನ ಪರ್ಸನಲ್ ಸ್ಕ್ಯಾನರ್ ಮೂಲಕ ನಡೆಯುತ್ತದೆ ಎಂದು ಸುದ್ದಿ. ಬಾಕಿ ಏನೇ ಇರಲಿ, ಆದರೆ ತನ್ನದೇ ಸ್ಟಾಫ್ ಸೂಸೈಡ್ ಮಾಡಿಕೊಳ್ಳುವ ಪ್ರಯತ್ನದ ತನಕ ಮಾನಸಿಕ ಕಿರುಕುಳ ಕೊಟ್ಟಿದ್ದು ತಪ್ಪು. ಸಹಕಾರ ಸಂಘಗಳು ಯಾರದ್ದೇ ಡ್ಯಾಡಿ ಪ್ರಾಪರ್ಟಿ ಅಲ್ಲ ಮತ್ತು ಸಹಕಾರ ಸಂಘಗಳಿಂದ ಸಾಲ ಕೊಡೋದು, ಸಂಬಳ ಕೊಡೋದು ಅಧ್ಯಕ್ಷನ ಮನೆಯ ಅಡಿಕೆ ಮಾರಿ ಅಲ್ಲ ಎಂಬುದನ್ನು ಎಲ್ಲಾ ಸಹಕಾರ ಸಂಘಗಳ ಆಡಳಿತ ಮಂಡಳಿ ಗಮನದಲ್ಲಿಟ್ಟು ಕೊಳ್ಳಬೇಕು. ಸದ್ರಿ ಪವಿತ್ರ ಪ್ರಾಣಿಗೆ ಓಬಿರಾಯನ ಕಾಲದಲ್ಲಿ ಒಳ್ಳೇ ಹೆಸರಿದ್ದರೂ ಬರಬರುತ್ತಾ ಪವಿತ್ರ ಪಾಣಿ ಎಲ್ಲಾ ವಿಭಾಗಗಳಲ್ಲೂ ಪವಿತ್ರ ಪ್ರಾಣಿಯಾದದ್ದು ವಿಪರ್ಯಾಸವೇ ಸರಿ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top