
ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ಒಂದು ಪಿಂಡದಂಗಡಿ ಓಪನ್ ಆಗಿದ್ದು ಸತ್ತವರ ಆತ್ಮಕ್ಕೆ ಪರಲೋಕದಲ್ಲಿ ಶಾಂತಿ ನೆಮ್ಮದಿ ಸಿಗಲಿ ಎಂದು ಪಿಂಡ ಪ್ರದಾನ ಮಾಡುವ ಒಂದು “ಮಾಡರ್ನ್ ಸಾವು” ಇಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಸತ್ತವರು ಇದರ ಸದುಪಯೋಗ ಪಡೆದುಕೊಳ್ಳ ಬಹುದು ಎಂಬ ಮಾಹಿತಿ ಬಂದಿದೆ.

ಅಲ್ಲಿ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯ ಉಪದ್ರಾಯರ ಮನೆ ಗಿಜಿಗುಡಲು ಶುರುವಾಗಿದೆ. ಕಾರಣ “ಸಾವು”. ದೇವಸ್ಥಾನಗಳಲ್ಲಿ, ಸಂಗಮ ಕ್ಷೇತ್ರಗಳಲ್ಲಿ ನಡೆಯಬೇಕಾಗಿರುವ ಸತ್ತವರ ಸಾವನ್ನು ಈಗ ನೆಕ್ಕಿಲಾಡಿಯಲ್ಲಿ ಉಪದ್ರಾಯರು ತನ್ನ ಮನೆಯಲ್ಲೇ ಮುಗಿಸಿ ಬಿಡುವ ಮಾಡರ್ನ್ ಸಾವು ಸಮಾರಂಭವನ್ನು ಶುರು ಮಾಡಿದ್ದಾರೆ. ಯಾರಾದರೂ ತೀರಿಕೊಂಡರೆ ಅವರ ಕಾರ್ಯಗಳನ್ನು ದೇವಸ್ಥಾನಗಳಲ್ಲಿ ಅಥವಾ ಸತ್ತವರ ಮನೆಗಳಲ್ಲೇ ನಡೆಸಿ, ಪಿಂಡ ಪ್ರದಾನವನ್ನು ಯಾವುದಾದರೂ ಸಂಗಮ ಕ್ಷೇತ್ರಗಳಲ್ಲಿ ನಡೆಸುವುದು ರೂಢಿ, ಸಂಪ್ರದಾಯ. ಅದರಂತೆ ದಕ್ಷಿಣ ಕನ್ನಡದ ಅತೀ ಹೆಚ್ಚು ಪಿಂಡ ಪ್ರದಾನ ಕಾರ್ಯಕ್ರಮಗಳು ನಡೆಯುವುದು ಸಂಗಮ ಕ್ಷೇತ್ರಗಳಲ್ಲಿ. ಆದರೆ ಇದೀಗ ಉಪ್ಪಿನಂಗಡಿಯ ಸಮೀಪದ ನೆಕ್ಕಿಲಾಡಿಯ ಖಾಸಗೀ ಮನೆಯೊಂದರಲ್ಲಿ ಪಿಂಡ ಪ್ರದಾನ ಕಾರ್ಯಕ್ರಮಗಳು ನಡೆಯುತ್ತಿದ್ದು ಇದೊಂದು ಧರ್ಮ ವಿರೋಧಿ ಚಟುವಟಿಕೆಯಾಗಿದೆ.
ಹಾಗೆಂದು ಪಿಂಡ ಪ್ರದಾನಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಒಬ್ಬ ವ್ಯಕ್ತಿಯ ಮರಣಾನಂತರದ 10, 11, 12, 13ನೇ ದಿನಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಆ ದಿನ ಸತ್ತವರ ಮನೆಯವರು ಶುಚಿರ್ಭೂತರಾಗಿ ಕುಳಿತು, ಮಂತ್ರಗಳೊಂದಿಗೆ ತೀರಿಕೊಂಡವರನ್ನು ಆವಾಹನೆ ಮಾಡಿ ಅವರಿಗೆ ಬೇಯಿಸಿದ ಅನ್ನದ ಕಪ್ಪು ಎಳ್ಳು, ಬಾರ್ಲಿ, ತುಪ್ಪ, ಜೇನ್ತುಪ್ಪ ಮಿಶ್ರಿತ ಅನ್ನದ ಪಿಂಡಗಳನ್ನು ಇಡಲಾಗುತ್ತದೆ. ಪೂಜೆಯ ನಂತರ ಈ ಪಿಂಡಗಳನ್ನು ಪವಿತ್ರ ನದಿಯಲ್ಲಿ ವಿಸರ್ಜನೆ ಮಾಡುವುದು ಸಂಪ್ರದಾಯ. ಈ ಕಾರ್ಯಕ್ರಮಗಳು ದೇವಸ್ಥಾನಗಳಲ್ಲೇ ನಡೆಯುವುದು ಪೂರ್ವ ಕಟ್ ಸಂಪ್ರದಾಯ. ಆದರೆ ಇದೀಗ ಯಾರಾದೋ ಮನೆಯಲ್ಲಿ ಯಾರಾದೋ ಪಿಂಡಪ್ರದಾನ ಶುರುವಾಗಿದೆ. ಸಂಬಂಧಗಳೇ ಇಲ್ಲ. ದುಡ್ಡಿನ ಸಂಬಂಧ ಮಾತ್ರ. ಇದೊಂದು “ಮಾಡರ್ನ್ ಸಾವು”.

“ಅಲ್ಲಿ ದೇವಸ್ಥಾನದಲ್ಲಿ ಆ ಡೇಟಿಗೆ ಫುಲ್ ಬುಕ್ಕಾಗಿದೆ, ಇನ್ನು ಒಂದು ವಾರ ಸಾಧ್ಯವಿಲ್ಲ, ದೇವಸ್ಥಾನದಲ್ಲಿ ವಿಪರೀತ ರಶ್, ಕಾರ್ಯಕ್ರಮ ಸರಿ ಆಗಲ್ಲ, ತುಂಬಾ ಪಿಂಡ ಇರುವ ಕಾರಣ ಅರ್ಜೆಂಟ್ ಅರ್ಜೆಂಟ್ ಮಾಡಬೇಕಾಗುತ್ತದೆ, ಇದರಿಂದ ಸತ್ತವರ ಆತ್ಮಕ್ಕೆ ಪರಲೋಕದಲ್ಲಿ ಸರಿಯಾದ ಜಾಬ್ ಸಿಗಲ್ಲ, ದೇವಸ್ಥಾನದಲ್ಲಿ ಜನ ಜಂಗುಳಿ ಇರುವ ಕಾರಣ ಅನ್ನ ತಿನ್ನಲು ಕಕ್ಕೆ ಬರಲ್ಲ, ಕಕ್ಕೆ ಲೇಟ್, ಕಕ್ಕೆ ಕಾದರೆ ಊಟ ಸಿಗಲ್ಲ ಹೀಗೆ ತರಾವಳಿಯಲ್ಲಿ ಅಮಾಯಕ ಭಕ್ತರನ್ನು ಮಂಗ ಮಾಡಿ, ಅವರ ತಲೆ ತಿಂದು, ದೇವಸ್ಥಾನದಲ್ಲಿ ನಡೆಯಬೇಕಾಗಿರುವ ಪಿಂಡ ಪ್ರದಾನ ಕಾರ್ಯಕ್ರಮವನ್ನು ನೆಕ್ಕಿಲಾಡಿ ಮನೆಗೆ ಎಳೆದು ತಂದು ಅಲ್ಲಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಉಪದ್ರಾಯ ಎಂಬ “ಮಾಡರ್ನ್ ಸಾವು ಸ್ಪೆಷಲಿಸ್ಟ್ ” ಮನೆಯಲ್ಲಿ ಇಂಥ ಕಾರ್ಯಗಳು ನಡೆಯುತ್ತಿದ್ದು ದೇವಸ್ಥಾನದ ಆದಾಯಕ್ಕೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಕೊಡಲಿಯೇಟು ನೀಡಲಾಗುತ್ತಿದೆ. ಇದೊಂದು ಅಮಾಯಕ ಭಕ್ತರನ್ನು ಬೋಳಿಸುವ, ದೋಚುವ,ಸುಲಿಯುವ ಹೊಸ ಸ್ಕೀಂ ಆಗಿದ್ದು ಜನ ಜಾಸ್ತಿ ಜಾಸ್ತಿ ಟಿಕೆಟ್ ತೆಗೆದಷ್ಟು ಉಪದ್ರಾಯನ ಖಜಾನೆ ತುಂಬುತ್ತಾ ಹೋಗುತ್ತದೆ. ಅನಧಿಕೃತ, ಧರ್ಮ ವಿರೋಧಿ ಪಿಂಡ ಪ್ರದಾನ ಕಾರ್ಯಕ್ರಮ ನಡೆದ ಬಳಿಕ ಹೇಗೂ ನೇತ್ರಾವತಿ ನದಿ ಅಲ್ಲೇ ನೆರೆಕರೆಯಲ್ಲೇ ಇರುವ ಕಾರಣ ವಿಸರ್ಜನೆ ಕೂಡ ಅಲ್ಲೇ ನಡೆಯುತ್ತಿದೆ. ದುಡ್ಡು ಮಾಡುವ ಈ ಧರ್ಮ ವಿರೋಧಿ ಕಾರ್ಯಕ್ರಮ ಸಮೂಹ ಸನ್ನಿ ಆಗುವ ಮೊದಲು ದೇವಸ್ಥಾನದ ಆಡಳಿತ ಮಂಡಳಿಗಳು ಮತ್ತು ಉಪ್ಪಿನಂಗಡಿ ಪೋಲಿಸರು ಕಠಿಣ ಕ್ರಮ ಕೈಗೊಳ್ಳಲೇ ಬೇಕು. ಯಾಕೆಂದರೆ ಇವತ್ತು ಉಪದ್ರಾಯ ಪಿಂಡ ಬಿಟ್ಟ, ನಾಳೆ ಇನ್ನೊಬ್ಬ ಸಂಕದ ಮಂಡೆಯಲ್ಲಿ ವಿಸರ್ಜನೆ ಮಾಡುತ್ತಾನೆ, ಮತ್ತೊಬ್ಬ ಕುಮಾರಧಾರನ ತಟದಲ್ಲಿ, ಉಪ್ಪಿನಂಗಡಿ ಬಸ್ ನಿಲ್ದಾಣ ಪಕ್ಕ ಹೀಗೆ ಎಲ್ಲರೂ ಶುರು ಹಚ್ಚಿಕೊಂಡರೆ ಧಾರ್ಮಿಕ ನಂಬಿಕೆಗಳಿಗೆ ಅಪಚಾರ ಮಾಡಿದಂತಾಗುವುದಿಲ್ಲವೆ? ನಮ್ಮ ಸಂಪ್ರದಾಯಗಳನ್ನು ನಾವೇ ಮುರಿದಂತಾಗುವುದಿಲ್ಲವೇ? ಉಪ್ಪಿನಂಗಡಿ ಎಂಬ ಸಂಗಮ ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಪಿಂಡ ಪ್ರದಾನ ಮಾಡಬಹುದು ಎಂಬ ತಪ್ಪು ತಿಳುವಳಿಕೆಯಿಂದ ನಾವು ಹೊರಗೆ ಬರಬೇಕು. ಸುಬ್ರಹ್ಮಣ್ಯದಲ್ಲಿ ಕೂಡ ಇದೇ ತಪ್ಪು ತಿಳುವಳಿಕೆ ಸಮೂಹ ಸನ್ನಿಯಾಗಿದೆ. ಸುಬ್ರಹ್ಮಣ್ಯ ಎಂಬ ಊರಿನಲ್ಲಿ ಎಲ್ಲಿ ಬೇಕಾದರೂ ಸರ್ಪ ಸಂಸ್ಕಾರ ಮಾಡಿಸಬಹುದು ಎಂಬ ತಪ್ಪು ತಿಳುವಳಿಕೆಯನ್ನು ಬಿತ್ತಿದ್ದ ಕಾರಣದಿಂದಲೇ ಇವತ್ತು ಲಾಡ್ಜ್ ಗಳಲ್ಲಿ, ಗ್ಯಾರೇಜ್ ಗಳಲ್ಲಿ, ಮನೆಗಳಲ್ಲಿ ಸರ್ಪ ಸಂಸ್ಕಾರಗಳು ನಡೆಯುತ್ತಿದೆ. ಮಣ ಮಣ ಮಂತ್ರ ಗೊತ್ತಿದ್ದ ಯಾವನೇ, ಎಲ್ಲಿ ಬೇಕಾದರೂ ಪೂಜೆ ಮಾಡ ಬಹುದಾದರೆ ದೇವಸ್ಥಾನಗಳ ಅಸ್ಥಿತ್ವವನ್ನೇ ಪ್ರಶ್ನೆ ಮಾಡಿದಂತಾಗುತ್ತದೆ ಅಲ್ಲವೇ? ಎಲ್ಲವನ್ನೂ ಉಪದ್ರಾಯನಂತರವರ ಮನೆಯಲ್ಲೇ ಮುಗಿಸುವುದಾದರೆ ಫಲಾಫಲದ ರಿಸಲ್ಟ್ ಏನೆಂದೇ ಅರ್ಥವಾಗುತ್ತಿಲ್ಲ.