ಕಲ್ಲಡ್ಕದಲ್ಲಿ ಮೀನು ಹಿಡಿಯಲು ಹೋಗಿ ಕರೆಂಟ್ ಶಾಕ್ ಆಗಿ ಸಾವನ್ನಪ್ಪಿದ ಬಾವಂದಿರಿಬ್ಬರ ಸಾವಿಗೆ ಕಾರಣೀಕರ್ತರಾದ ತೋಟದ ಮಾಲೀಕರು ಇನ್ನೂ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಭಟ್ರು ಅಟ್ಟದಲ್ಲಿ ಕುಂತು ಆ ಬೇಲು, ಈ ಬೇಲು ಎಂದು ಪುಡೆರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಓ ಮೊನ್ನೆ ಅಕ್ಟೋಬರ್ ಹನ್ನೆರಡರಂದು ಕಲ್ಮಡ್ಕ ಗ್ರಾಮದ ಭರತ್ ಮನೆಗೆ ಗುರುವಾಯನಕೆರೆಯ ಬಾವ ಗಣೇಶ್ ಬಂದಿದ್ದಾರೆ. ಇಬ್ಬರೂ ಬಾವ ಬಾವ ಆಗಿದ್ದು ನೈಟ್ ಇಬ್ಬರೂ ಕುಶಾಲಿಗೆ ಲೋಕಲ್ ತೋಡಿನಲ್ಲಿ ಉಬಾರ್ ಮೀನು ಮೇಲೆ ಬರುತ್ತದೆ ಎಂದು ಮೀನಿಗೆ ಬಿಸಾತ್ತಿ ಹಾಕಲು ಹೋಗಿದ್ದಾರೆ. ಹಾಗೆ ತೋಡಿನಲ್ಲಿ ಮೀನು ಹುಡುಕುತ್ತಾ ಹುಡುಕುತ್ತಾ ತೋಡಿನಲ್ಲೇ ಹೊಳೆಕೆರೆ ಭಟ್ರ ತೋಟದ ಬಳಿ ಬಂದಾಗ ತೋಡಿಗೆ ಅಡ್ಡವಾಗಿ ಏನೋ ಸರಿಗೆ ಟೈಪಿನ ವಸ್ತು ಸಿಕ್ಕಿದಾಗ ಅದನ್ನು ಸರಿಸಲು ಒಬ್ಬರು ಆ ಸರಿಗೆಯನ್ನು ಮುಟ್ಟಿದ್ದಾರೆ ಅಷ್ಟೇ. ಮುಟ್ಟಿದವರಿಗೆ ಶಾಕ್ ಹೊಡೆದಿದೆ ಮತ್ತು ಹಿಂದೆ ಇದ್ದವರು ಏನುಂತ ಮುಂದೆ ಇದ್ದವರನ್ನು ಹಿಡಿದಾಗ ಅವರಿಗೂ ಭಯಂಕರ ಶಾಕ್ ಹೊಡೆದಿದೆ. ಶಾಕ್ ಹೊಡೆದ ಇಬ್ಬರೂ ತೋಡಿನಲ್ಲೇ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಇವರಿಬ್ಬರ ಹಿಂದೆ ಮೀನು ಹಿಡಿದುಕೊಳ್ಳಲು ಬಂದಿದ್ದ ಒಬ್ಬ ಅಪ್ರಾಪ್ತ ಹುಡುಗನಿಗೂ ಲೈಟ್ ಶಾಕ್ ಹೊಡೆದಿದ್ದು ಅವನು ಇದೀಗ ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ. ಆದರೆ ಅಮಾಯಕ ಬಾವಂದಿರಿಬ್ಬರ ಮರಣಕ್ಕೆ ಇಡೀ ಜಿಲ್ಲೆಯೇ ಕಂಬನಿ ಮಿಡಿದಿತ್ತು.
ಹಾಗೆಂದು ಹೊಳೆ ಕೆರೆ ಮಧುಸೂದನ ಭಟ್ರ ತೋಟಕ್ಕೆ ಕಂಡಾಪಟ್ಟೆ ಹಂದಿ ಕಾಟ ಇತ್ತು. ರಾತ್ರಿ ಏಳು ಗಂಟೆಯಿಂದ ಶುರುವಾಗುವ ಪಂಜಿ ಕಸರತ್ತು ಬೆಳಿಗ್ಗೆ ಹಕ್ಕಿ ಕೂಗುವ ತನಕವೂ ದಡಬಡ ದಡಬಡ ಇರುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಭಟ್ರು ಸ್ಥಳೀಯ ಬೇಟೆಗಾರನೊಬ್ಬನನ್ನು ಕರೆದು ಪಂಜಿಗೆ ಮದ್ದು ಮಾಡಿದ್ದರು. ಪಂಜಿ ಬರುವ ಎನ್ನೆಚ್ಚ್ ಗೆ ಅಡ್ಡ ಸರಿಗೆ ಕಟ್ಟಿ ಅದಕ್ಕೆ ಕರೆಂಟ್ ಬಿಟ್ಟಿದ್ದರು. ಇವರ ಕರೆಂಟ್ ಸರಿಗೆಗೆ ಎಷ್ಟು ಪಂಜಿ ಬಿತ್ತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಆದರೆ ಬಿದ್ದಿದ್ದು ಮಾತ್ರ ಇಬ್ಬರು ಅಮಾಯಕರು. ಇದೀಗ ಭಟ್ರು ಅಟ್ಟ ಹತ್ತಿದ್ದು ಪೋಲಿಸರು ಹುಡುಕುತ್ತಿದ್ದಾರೆ. ಇದೀಗ ಬಂದ ಮಾಹಿತಿಯಂತೆ ಪೋಲಿಸರು ಕರೆಂಟ್ ಬಿಟ್ಟ ಕಲ್ಮಡ್ಕದ ರಣ ಬೇಟೆಗಾರನೊಬ್ಬನನ್ನು ಅರೆಸ್ಟ್ ಮಾಡಿ ಒಳಗೆ ಕೂರಿಸಿದ್ದಾರೆ ಎಂದು ತಿಳಿದುಬಂದಿದೆ.