ಕಲ್ಮಡ್ಕ ಕೇಸಲ್ಲಿ ಭಟ್ರ ಬಂಧನ ಏಕಿಲ್ಲ? ದಕ್ಷಿಣಾಯಣಕ್ಕೆ ಕಾಯುತ್ತಿದ್ದಾರಾ?

Pattler News

Bureau Report

ಅಕ್ಟೋಬರ್ ಹನ್ನೆರಡರಂದು ಕಲ್ಮಡ್ಕ ಹೊಳೆ ಕೆರೆ ಮಧುಸೂದನ ಭಟ್ರ ತೋಟದ ತೋಡಿನಲ್ಲಿ ಮೀನು ಕಡಿಯಲು ಹೋಗಿ ಕರೆಂಟ್ ಶಾಕ್ ಹೊಡೆದು ಇಬ್ಬರು ಅಸುನೀಗಿದ ಘಟನೆ ನಡೆದಿತ್ತು. ಈ ಬಾಬ್ತು ಈಗಾಗಲೇ ಒಬ್ಬ ಬೇಟೆಗಾರನ ಅರೆಸ್ಟ್ ಆಗಿದ್ದು ಹಂದಿ ಬೇಟೆಗೆ ಸುಪಾರಿ ಮತ್ತು ಕರೆಂಟ್ ಕೊಟ್ಟಿದ್ದ ಜಾಗದ ಓನರ್ ಮಧುಸೂದನ ಭಟ್ರ ಬಂಧನ ಯಾಕೆ ಆಗಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಹೊಗೆಯಾಡುತ್ತಿದೆ. ಭಟ್ರು ಬೇಟೆಗಾರ ರಮೇಶನಿಗೆ ಹೇಳಿ ತೋಟಕ್ಕೆ ಬಂದು ದಡಬಡ ದಡಬಡ ಮಾಡುತ್ತಿದ್ದ ಹಂದಿಗೆ ಒಂದು ವ್ಯವಸ್ಥೆ ಮಾಡಿದ್ದರು. ಆದರೆ ಹಂದಿಯನ್ನು ಚುಂಯ್ಕ ಮಾಡಲು ಬಿಟ್ಟಿದ್ದ ಕರೆಂಟ್ ಇಬ್ಬರು ಅಮಾಯಕರ ಸಾವಿಗೆ ಕಾರಣವಾಗಿತ್ತು.

ಹಾಗೆ ಅಕ್ಟೋಬರ್ ಹನ್ನೆರಡರಂದು ಈ ಘಟನೆ ನಡೆದಿದ್ದು ಭಟ್ರು ಇಬ್ಬರನ್ನೂ ಆಸ್ಪತ್ರೆಗೆ ಹಾಕಿ ಸ್ವಿಚ್ಡ್ ಆಫ್ ಆದವರು ಇಂದಿನವರೆಗೂ ಪತ್ತೆ ಇಲ್ಲ. ಎಲ್ಲಿ ಅಟ್ಟದಲ್ಲಿ ಅಡಗಿದ್ದಾರೆ, ಎಲ್ಲಿ ಕಲ್ಮಡ್ಕದ ಕಾಡುಗಳಲ್ಲಿ ಅವಿತಿದ್ದಾರೆ, ಎಲ್ಲಿ ಬಂಟ ಮಲೆಯ ತಪ್ಪಲಿನ ಮನೆಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎಂದು ಇಲ್ಲಿ ತನಕ ಟ್ರೇಸ್ ಮಾಡಲು ಪೋಲಿಸರಿಗೆ ಆಗಿಲ್ಲ. ಬೆಳ್ಳಾರೆ ಪೋಲಿಸರು ಈ ಬಗ್ಗೆ ಕಣ್ಣಿಗೆ ಎಣ್ಣೆ ಹಚ್ಕೊಂಡು ಹುಡುಕಿದರೂ ಭಟ್ರ ಬಾಡಿ ಸಿಗುತ್ತಿಲ್ಲ. ಮೂಲಗಳ ಪ್ರಕಾರ ಭಟ್ರು ಅಟ್ಟದಿಂದಲೇ ನಿರೀಕ್ಷಣಾ ಜಾಮೀನಿಗೆ ಟ್ರೈ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಭಟ್ರ ಕೇಸಲ್ಲಿ ಲೋಕಲ್ ಕಾಂಗ್ರೆಸ್ ನೇತಾಗಳು ನೇತಾಡುತ್ತಿದ್ದು ಭಟ್ರನ್ನು ಅರೆಸ್ಟ್ ಮಾಡದಂತೆ ಪೋಲಿಸರ ಮೇಲೆ ಮೇಲಿಂದ ಮೇಲೆ ಪ್ರೆಷರ್ ಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆ. ಇನ್ನೊಂದು ಪುಡೆಯಿಂದ ದೇಶಭಕ್ತರೂ ಭಟ್ರನ್ನು ರಕ್ಷಿಸಲು ಒಂಟಿ ಕಾಲಲ್ಲಿ ನಿಂತಿದ್ದಾರೆ. ಹಾಗೆ ಎರಡೂ ಪಕ್ಷಗಳ ಲೋಕಲ್ ಲೀಡರ್ಸ್ ಕಾಲಿಗೆ ಮತ್ತು ಕಾರಿಗೆ MRF ಚಕ್ರ ಸಿಕ್ಕಿಸಿಕೊಂಡು ಭಟ್ರನ್ನು ಬಚಾವ್ ಮಾಡಲು ಓಡಾಡುತ್ತಿದ್ದಾರೆ. ಪ್ಲಾನ್ ಪ್ರಕಾರ ಸದ್ಯಕ್ಕೆ ಭಟ್ರನ್ನು ಮಾಯಕ ಮಾಡಿ ಕೇಸ್ ಸ್ವಲ್ಪ ಚಪ್ಪೆ ಆಗುವ ತನಕ ಕಾದು ನಂತರ ಕುಂತು ಮಾತಾಡಲು ಉದ್ದೇಶಿಸಲಾಗಿದೆ. ಕುಂತು ಮಾತಾಡುವಾಗ ಏನೆಲ್ಲ ವ್ಯವಸ್ಥೆ ಅಂದರೆ ಸಾವಿಗೀಡಾದ ಇಬ್ಬರ ಕುಟುಂಬಕ್ಕೂ ತಲಾ ಹತ್ತು ಲಕ್ಷದಂತೆ ಕೊಟ್ಟು ರಾಜೀ ಸಂಧಾನ ಮಾಡಿಕೊಳ್ಳುವ ಬಗ್ಗೆಯೂ ಮಾತುಕತೆಗಳಾಗಿವೆ.

ಹಾಗಾದರೆ ಇಬ್ಬರು ಅಮಾಯಕರ ಬಲಿಗೆ ಕಾರಣಕರ್ತರಾದ ಮಧುಸೂದನ ಭಟ್ರ ಅರೆಸ್ಟ್ ಆಗಲ್ವಾ? ಸತ್ತವರ ಕುಟುಂಬಕ್ಕೆ ದುಡ್ಡು ಕೊಟ್ಟು ಸರಿ ಮಾಡುವ ಅಂದಾಜಾ? ದುಡ್ಡು ಕೊಡುವುದಿದ್ದರೆ ಕೊಡ್ಸಿ ಮಾರಾಯ್ರೆ, ಸುಮ್ಮನೆ ಇವತ್ತು, ನಾಳೆ, ನಾಡಿದ್ದು ಅಂತ ದಿನ ದೂಡೋದು ಯಾಕೆ? ಕೇಸ್ ಚಪ್ಪೆ ಆಗಲು ಕಾಯುವುದಾ? ಭಟ್ರು ಕೊಡುವ ಹತ್ತು ಲಕ್ಷ ಒಂದು ಕುಟುಂಬಕ್ಕೆ ಆಧಾರ ಆಗುವುದಿದ್ದರೆ, ಭಟ್ರ ಪ್ರಕಾರ ಒಂದು ಜೀವದ ಬೆಲೆ ಹತ್ತು ಲಕ್ಷ ಎಂದಾದರೆ ಅದನ್ನು ಮೊದಲು ಕೊಡ್ಸಿ ಬಿಡುವುದು ಬಿಟ್ಟು ನನಗೆಷ್ಟು, ನಿನಗೆಷ್ಟು, ಭೂತಕ್ಕೆಷ್ಟು, ಕುಲೆಗಳಿಗೆಷ್ಟು ಎಂದು ಲೆಕ್ಕಾಚಾರ ಯಾಕೆ? ಈಗಾಗಲೇ ಭಟ್ರ ಕಾರಣಕ್ಕೆ ಎರಡು ಬಲಿ ಪಡೆಯಲಾಗಿದೆ. ಯಾವುದೇ ಕಡೆ ಕೊಡಿ ಆಗಿಲ್ಲ. ಅದರ ನಡುವೆಯೇ ಭಟ್ಟರಿಗೆ ಹಂದಿ ಹಿಡಿಯಲು ಸಹಾಯ ಮಾಡಿದ್ದ ರಮೇಶನನ್ನು ಅರೆಸ್ಟ್ ಮಾಡಲಾಗಿದೆ. ಇದು ಯಾವ ನ್ಯಾಯ? ಭಟ್ರಿಗೆ ಅಡಗಲು ಅಟ್ಟ ಸಿಗುತ್ತದೆ ಎಂದಾದರೆ ರಮೇಶನ ಮನೆಯಲ್ಲಿ ಅಟ್ಟ ಇಲ್ವಾ? ರಮೇಶನ ಪರವಾಗಿ ಯಾಕೆ ಕಾಂಗ್ರೆಸ್ ಮತ್ತು ದೇಶ ಭಕ್ತರ MRF ತಿರುಗಲ್ಲ? ಇದು ಕೂಡ ಕಾಂಗ್ರೆಸ್ ನೇತಾಗಳ ಹುನ್ನಾರ. ಎರಡು ಬಲಿ ಪಡೆದ ಭಟ್ರನ್ನು ರಕ್ಷಿಸಲು ಇದು ಮೂರನೇ ಬಲಿ. ಭಟ್ರ ತೋಟದಲ್ಲಿ ನಡೆದ ಅಷ್ಟೂ ಅವಾಂತರಗಳನ್ನು ರಮೇಶನ ತಲೆಗೆ ಕಟ್ಟಿ ಭಟ್ರನ್ನು ಸೇಫಾಗಿ ಲ್ಯಾಂಡಿಂಗ್ ಮಾಡುವ ಹುನ್ನಾರ. ಕೋರ್ಟ್ ಕಚೇರಿಗಳಲ್ಲಿ ನನಗೆ ಏನೂ ಗೊತ್ತಿಲ್ಲ, ಗಾಢ ನಿದ್ರೆಯಲ್ಲಿದ್ದೆ ಎಂದು ಭಟ್ರು ಹೇಳಿದರೆ ಮುಗೀತು, ಕೇಸ್ ಓ.ಕೆ ಆದರೆ ರಮೇಶ ಪರ್ಮನೆಂಟ್ ಬಂದೀಖಾನೆಯಲ್ಲೇ. ಇನ್ನು ರಮೇಶನಿಗೆ “ನಾನೇ ಮಾಡಿದ್ದು”ಎಂದು ಹೇಳಲು ಭಟ್ರು ಎಷ್ಟು ಕೊಯ್ಲಿನ ಅಡಿಕೆ ತೆಗೆದಿಡುತ್ತಾರೆ ಎಂಬ ಮಾಹಿತಿ ಬಂದಿಲ್ಲ. ಟೋಟಾಲಾಗಿ ಹೇಳುವುದಾದರೆ ಮಧುಸೂದನ ಭಟ್ರು ಈ ಕೇಸಿಂದ ಹೊರ ಬರಲು ಅಂದಾಜು ಐವತ್ತು ಬಜೆಟ್ ನಲ್ಲಿ ಇಡಲೇ ಬೇಕಾಗಿದೆ ಮತ್ತು ಅನುದಾನ ಒದಗಿಸಲೇ ಬೇಕಾಗಿದೆ. ಯಾಕೆಂದರೆ ಭಟ್ರನ್ನು ರಕ್ಷಿಸಲು ಅವರ ಸುತ್ತ ಜಮಾವಣೆ ಆಗಿರುವ ಜನರನ್ನು ನೋಡಿದರೆ ಭಟ್ರಿಗೆ ಐವತ್ತು ಬೇಕೇ ಬೇಕು. ಕರೆಂಟ್ ಬಿಟ್ಠಿದ್ದು ಭಟ್ರು ಆಗಿದ್ದಕ್ಕೆ ಬಚಾವ್, ಸಾಮಾನ್ಯರಾಗಿರುತ್ತಿದ್ದರೆ ಮತ್ತೊಮ್ಮೆ ಸ್ವಿಚ್ ಆನ್ ಮಾಡಿ ಹಂದಿಗೆ ಬಿಟ್ಟಿದ್ದ ತಂತಿ ಮುಟ್ಟಬೇಕಾಗಿ ಬರುತ್ತಿತ್ತು.

ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಅಣ್ಣೇರ್ ಗಳ ಕಾರುಬಾರು ಮತ್ತು ಹುನ್ನಾರ. ಬಡಬಗ್ಗರನ್ನು ಹೇಗೆ ಲಗಾಡಿ ತೆಗೆದು ಬಚಾವ್ ಆಗುತ್ತಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಈ ಕೇಸ್. ಮೊದಲು ಕಾನೂನು ಬಾಹಿರವಾಗಿ ಹಂದಿಗೆ ಕರೆಂಟ್ ಬಿಟ್ಟು ಎರಡು ಅಮಾಯಕರನ್ನು ಬಲಿ ಪಡೆದರು. ಬಲಿಯಾದವರ ಅದೇ ಜಾಗದಲ್ಲಿ ಯಾರಾದರೂ ಅಣ್ಣೇರು ಇದ್ದಿದ್ದರೆ ಇವತ್ತು ಏನಾಗುತ್ತಿತ್ತು? ಒಂದು ಜೀವಕ್ಕೆ ಹತ್ತು ಲಕ್ಷ ರೇಟ್ ಫಿಕ್ಸ್ ಮಾಡುತ್ತಿದ್ದರಾ? ಆಯ್ತು ಆಮೇಲೆ ನಡೆದ ಘಟನೆಗಳು. ನಟ್ಟ ನಡು ಹಗಲಿನಲ್ಲಿ ಮರ್ಡರ್ ಮಾಡಿ ಪಾತಾಳದಲ್ಲಿ ಹೋಗಿ ಅಡಗಿದವರನ್ನೇ ಪೋಲಿಸರು ಇಪ್ಪತ್ನಾಲ್ಕು ಗಂಟೆ, ನಲವತ್ತೆಂಟು ಗಂಟೆಗಳಲ್ಲಿ ಹೇಳಿ ಹೋಗಿ ಅರೆಸ್ಟ್ ಮಾಡಿ ಹೊತ್ಕೊಂಡು ಬರುತ್ತಾರೆ. ಆದ್ರೆ ಈ ಕೇಸ್ ಫೈಲಿನಲ್ಲಿ ಎರಡು ಬಲಿಗಳಿದ್ದರೂ ಪೋಲಿಸರು ಕೆಲಸ ಮಾಡದಂತೆ ತಡೆಹಿಡಿಯಲಾಗುತ್ತಿದೆ. ಹಾಗೆಂದು ಮೊನ್ನೆ ತೀರಿಕೊಂಡವರು ಎಲ್ಲಿಯಾದರೂ ಕರೆಂಟ್ ಬಿಟ್ಟು ಅವರು ಬಿಟ್ಟ ಕರೆಂಟಿಗೆ ಯಾವುದಾದರೂ ಎರಡು ಅಣ್ಣೇರ್ ಗಳು ಸಿಕ್ಕಿ ಟಿಕೆಟ್ ತೆಗೆದಿದ್ದರೆ ಈಗ ಪರಿಸ್ಥಿತಿ ಏನಾಗುತ್ತಿತ್ತು? ಕಲ್ಮಡ್ಕ ಹೊತ್ತಿ ಉರಿಯುತ್ತಿತ್ತು. ಆಯ್ತು ಆಮೇಲೆ? ಸತ್ತವರು ಸತ್ತು ವಾರ ಕಳೆಯಿತು, ಬೊಜ್ಜಕ್ಕೆ ದಿನ ಬಂತು. ಆದರೂ ಆರೋಪಿ ಸೇಫ್. ಇದೀಗ ಇದೇ ಅಣ್ಣೇರ್ ಗಳು ಇನ್ನೊಂದು ಬಲಿಯನ್ನು ಮಾಲೆ ಹಾಕಿ,ಕುಂಕುಮ ಹಚ್ಚಿ ಬಲಿ ಪೀಠಕ್ಕೆ ತಂದು ನಿಲ್ಲಿಸಿದ್ದಾರೆ. ಅದು ಬೇಟೆಗಾರ ರಮೇಶ್. ರಮೇಶ್ ಎಲ್ಲವನ್ನೂ ನಾನೇ ಮಾಡಿದ್ದು ಎಂದು ಒಪ್ಪಿಕೊಂಡರೆ ಮುಗೀತು. ಅಣ್ಣೇರ್ ಸೇಫ್. ಯಾಕೆ ಬಲಿ ಪೀಠಕ್ಕೆ ರಮೇಶನನ್ನೇ ತಂದು ನಿಲ್ಲಿಸಲಾಯ್ತು? ಯಾವುದಾದರೂ ಬೇರೆ ಅಣ್ಣೇರನ್ನೇ ತಂದು ನಿಲ್ಲಿಸ ಬಹುದಿತ್ತಲ್ವಾ? ರಮೇಶನಿಗೆ ತಪ್ಪು ಒಪ್ಪಿಕೊಳ್ಳಲು ಭಟ್ರ ಬಜೆಟಿನಲ್ಲಿ ಎಷ್ಟು ಅನುದಾನ ಒದಗಿಸಲಾಗಿದೆ? ಇಲ್ಲಿ ವ್ಯವಸ್ಥೆ ಯಾಕೆ ಸೈಲೆಂಟಾಗಿ ಸೈಡಿಗೆ ‌ಹೋಗಿ ಬಿಡುತ್ತದೆ ಎಂದೇ ಅರ್ಥ ಆಗುತ್ತಿಲ್ಲ. ಪೋಲಿಸ್ ಇಲಾಖೆ, ಇಂಧನ ಇಲಾಖೆ, ಅರಣ್ಯ ಇಲಾಖೆಗಳಿಗೆ ಸಂಬಂಧಿಸಿದ ಕೇಸ್ ಇದು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top