
ಕಡಬ ತಾಲೂಕು ಕುದ್ಮಾರು ಗ್ರಾಮದ ಟಾಪ್ ದೇವರ ಗುಡ್ಡೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಬೆಳ್ಳಾರೆ ಪೋಲಿಸರು ಧಾಳಿ ನಡೆಸಿದ ಬಗ್ಗೆ ಮಾಹಿತಿ ಬಂದಿದೆ. ನಾಲ್ವರ್ ದೆವ್ವಗಳು ಅರೆಸ್ಟ್.
ಅಲ್ಲಿ ಕುದ್ಮಾರು ಗ್ರಾಮದ ಟಾಪ್ ಟಾಪೆಂಡ್ ಟಾಪ್ ದೇವರ ಗುಡ್ಡೆಯಲ್ಲಿ ಜುಗಾರಿ ಅಡ್ಡೆ ಇತ್ತೀಚೆಗೆ ರೀಸೆಂಟ್ ಆಗಿ ಓಪನ್ ಆಗಿದ್ದು ಜುಗಾರಿಕೋರರ ಮೆರವಣಿಗೆ ಶುರುವಾಗಿತ್ತು. ಈ ಬಗ್ಗೆ ಯಾರೋ ಪುಣ್ಯಾತ್ಮರು ಬೆಳ್ಳಾರೆ ಪೋಲಿಸರಿಗೆ ಲೊಕೇಷನ್ ಕಳಿಸಿದ್ದರು. ಇವತ್ತು ಮಧ್ಯಾಹ್ನ ಜುಗಾರಿ ಸ್ಟಾರ್ಟ್ ಆಗಿದೆ ಎಂದೂ ಮೆಸೇಜ್ ಇತ್ತು. ಕೂಡಲೇ ಸ್ಟೇಷನ್ ಬಿಟ್ಟ ಎಸ್ಸೈ ಈರಯ್ಯ ಗ್ಯಾಂಗ್ ಪ್ರೈವೇಟ್ ಗಾಡಿಗಳಲ್ಲಿ ಬಂದು ದೇವರಗುಡ್ಡೆಯ ತಪ್ಪಲಿನಲ್ಲಿ ಲ್ಯಾಂಡ್ ಆಗಿದ್ದಾರೆ. ಅಲ್ಲಿಂದ ಮೆಲ್ಲನೆ ಗುಡ್ಡೆ ಹತ್ತಿದ ಈರಯ್ಯ ಟೀಂ ಒಮ್ಮೆಲೇ ಧಾಳಿ ನಡೆಸಿ ನಾಲ್ವರನ್ನು ಹಿಡಕೊಂಡಿದೆ. ಗುರುವೆ, ಕುಸಲೆ, ಇಸುಬಿಚ್ಚ ಮತ್ತು ಇನ್ನಿಬ್ಬರನ್ನು ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಧಾಳಿಯಲ್ಲಿ ಎಸ್ಸೈ ಈರಯ್ಯ ಮಾತ್ರವಲ್ಲದೆ ಎಎಸ್ಸೈ ಕುಂಞಣ್ಣೆರ್, ಸತೀಶೆರ್ ,ಅಶೋಕೆರ್ ಮತ್ತು ಗುರುತು ಪರಿಚಯ ಇಲ್ಲದ ಎಡ್ಡೆ ಜವನೆ ಪೋಲಿಸರು ಇದ್ದರೆಂದು ಲೋಕಲ್ಸ್ ಮಾಹಿತಿ ಕೊಟ್ಟಿದ್ದಾರೆ.
ಹಾಗೆಂದು ದೇವರಗುಡ್ಡೆಯ ಈ ಜುಗಾರಿ ಅಡ್ಡೆ ಪ್ರಕೃತಿ ರಮಣೀಯವಾಗಿದ್ದು ನಾಲಕ್ಕು ದಿಕ್ಕಿನಿಂದಲೂ ಪೋಲಿಸರು ಬಂದರೆ ಎದ್ದು ಓಡುವಂತಹ ವ್ಯವಸ್ಥೆ ಇತ್ತು. ಅಡ್ಡೆ ಹತ್ತಿರವೇ ಶಿರಾಡಿ ಭೂತದ ಸ್ಥಾನ, ಅದೆಷ್ಟೋ ಕಟ್ಟೆಗಳಿತ್ತು. ಆದರೂ ಈರಯ್ಯ ಟೀಂ ಮಾಡಿದ ಆಪರೇಷನ್ ಬಗ್ಗೆ ಖುದ್ದು ಜುಗಾರಿಕೋರರೇ ಅಲ್ಕಿ ಬಿದ್ದಿದ್ದಾರೆ. ಶಿರಾಡಿ ಭೂತದ ಸ್ಥಾನದ ಹತ್ತಿರ ಸಮಾಜ ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದ ಕಾರಣ ಶಿರಾಡಿ ಭೂತವೇ ಈರಯ್ಯ ಟೀಮನ್ನು ಯಾರದೋ ಮುಖಾಂತರ ಕರೆಸಿಕೊಂಡಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.
