ಪರಣೆ ಆತ್ಮಹತ್ಯೆ ಕೇಸ್! ಬಜಾಜ್ ಫೈನಾನ್ಸ್ ಕಿರುಕುಳ ಕಾರಣ?

Pattler News

Bureau Report

ಮೊನ್ನೆ ಕಡಬ ತಾಲೂಕು ಸವಣೂರು ಸಮೀಪದ ಪರಣೆ ಎಂಬಲ್ಲಿ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೋಲಿಸ್ ಫೈಲುಗಳು ಆತ್ಮಹತ್ಯೆ ಕೇಸ್ ಎಂದು ದಾಖಲಿಸಿಕೊಂಡಿದ್ದವು. ಆದರೆ ಇದೀಗ ಈ ಆತ್ಮಹತ್ಯೆ ಹತ್ಯೆ ಹಿಂದೆ ನಿರಂತರ ಕಿರುಕುಳದ ಬಗ್ಗೆ ಮಾಹಿತಿ ಬಂದಿದೆ. ಫೈನಾನ್ಸ್ ಕಿರುಕುಳ ಆತ್ಮಹತ್ಯೆಗೆ ಕಾರಣವಾಯಿತಾ?

ಸವಣೂರು ಸಮೀಪದ ಪರಣೆ ನಿವಾಸಿ ಸುರೇಶ್ ಪೂಜಾರಿ ಎಂಬವರು ಮನೆಯಲ್ಲಿ ಹೇಳದೆ ಕೇಳದೆ ಕಾಣೆಯಾಗಿದ್ದರು. ಈ ಬಗ್ಗೆ ಮನೆಯವರು ಬೆಳ್ಳಾರೆ ಪೋಲಿಸರಿಗೆ ಕಂಪ್ಲೈಂಟ್ ಕೂಡ ಕೊಟ್ಟಿದ್ದರು. ಎರಡು ದಿನಗಳ ಬಳಿಕ ಸುರೇಶ್ ಪೂಜಾರಿ ಬಾಡಿ ಅಲ್ಲೇ ಪರಣೆ ಸಮೀಪದ ಗುಡ್ಡವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಆತ್ಮಹತ್ಯೆ ಯಾಕೆ ಎಂದು ವಿಚಾರಿಸಲಾಗಿ ಬಜಾಜ್ ಫೈನಾನ್ಸ್ ನವರ ವಿಪರೀತ ಕಿರುಕುಳ ಕಾರಣ ಎಂದು ತಿಳಿದುಬಂದಿದೆ. ಸುರೇಶ್ ಪೂಜಾರಿ ಬಜಾಜ್ ಫೈನಾನ್ಸ್ ಕಡೆಯಿಂದ ಒಂದು ಲಕ್ಷ ಸಾಲ ಮಾಡಿದ್ದು ಅದರ ಕಂತು ಸರಿಯಾಗಿ ಕಟ್ಟಲಾಗದೆ ಒದ್ದಾಡುತ್ತಿದ್ದರು. ಇನಿ ಕೊರ್ಪೆ, ಎಲ್ಲೆ ಕಟ್ಯೆ ಎಂದು ಹೇಳಿ ಹೇಳಿ ಶಾರದಾ ಕ್ಯಾಲೆಂಡರಿನ ಡೇಟ್ಸ್ ಎಲ್ಲಾ ಮುಗಿದಿತ್ತು. ಫೋನ್ ತೆಗೆಯದೆ, ನಾಟ್ ರೀಚೆಬಲ್ ಮಾಡಿ, ಸ್ವಿಚ್ ಆಫ್ ಮಾಡಿಯೂ ಆಯ್ತು. ಮೊನ್ನೆ ಬಜಾಜ್ ಫೈನಾನ್ಸ್ ನವರು ಮನೆಗೆ ಬಂದಿದ್ದರು. ಇದ್ದ ಮಾನ ಮರ್ಯಾದೆ ಎಲ್ಲಾ ಹೋಯ್ತು. ಇದರಿಂದ ತುಂಬಾ ನೊಂದು ಕೊಂಡು ಸುರೇಶ್ ಕಾಣೆಯಾಗಿ ಬಿಟ್ಟರು. ನಂತರ ಸಿಕ್ಕಿದ್ದು ಹೆಣವಾಗಿಯೇ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top