ಕಲ್ಮಡ್ಕದಲ್ಲಿ ಎರಡು ಸಾವಿನ ಪ್ರಕರಣ! ಭಟ್ರು ಸರೆಂಡರ್?

Pattler News

Bureau Report

ಕಲ್ಮಡ್ಕದಲ್ಲಿ ಹಂದಿಗೆ ಕರೆಂಟ್ ಬಿಟ್ಟು ಅದರಿಂದ ಎರಡು ಅಮಾಯಕರ ಸಾವಿಗೆ ಕಾರಣವಾದ ಕಲ್ಮಡ್ಕದ ಭಟ್ರು ಪೋಲಿಸರ ಮುಂದೆ ಬಂದು ಸರೆಂಡರ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಓ ಮೊನ್ನೆ ಅಕ್ಟೋಬರ್ ಹನ್ನೆರಡರಂದು ಕಲ್ಮಡ್ಕ ಗ್ರಾಮದ ಹೊಳೆ ಕೆರೆ ತೋಟದ ಬಳಿ ಸ್ಥಳೀಯ ನಿವಾಸಿ ಮಧುಸೂದನ ಭಟ್ರು ಎಂಬವರು ಕಾಡುಹಂದಿ ಹೊಡೆಯಲು ತಂತಿಗೆ ಕರೆಂಟ್ ಬಿಟ್ಟು ಕಾಡುಹಂದಿ ಬರುವ ತೋಡಿನ ದಾರಿಯಲ್ಲಿ ಅಡ್ಡಲಾಗಿ ಕಟ್ಟಿದ್ದರು. ಈ ವಿಷಯ ತಿಳಿಯದೆ ಸ್ಥಳೀಯ ನಿವಾಸಿಗಳಿಬ್ಬರು ನೈಟ್ ತೋಡಿನಲ್ಲಿ ಮೀನು ಕಡಿಯಲು ಹೋಗಿ ಶಾಕ್ ಹೊಡೆದು ಸಾವನ್ನಪ್ಪಿದ್ದರು. ನಂತರ ಎಸ್ಕೇಪ್ ಆಗಿದ್ದ ಭಟ್ರು ಊರು ಬಿಟ್ಟಿದ್ದರು ಎಂದು ಸುದ್ದಿ. ಈ ಬಗ್ಗೆ ಪೋಲಿಸರು ಇಡೀ ಮೂರು ಲೋಕ ಹುಡುಕಾಡಿದರೂ ಭಟ್ರು ಸಿಕ್ಕಿರಲಿಲ್ಲ. ನಂತರ ಭಟ್ರಿಗೆ ತಂತಿ ಕಟ್ಟಿ ಕರೆಂಟ್ ಬಿಡಲು ಸಹಾಯಕನಾಗಿದ್ದ ಕಲ್ಮಡ್ಕದ ಸ್ಥಳೀಯ ಬೇಟೆಗಾರನೊಬ್ಬನನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ ಭಟ್ರ ಪತ್ತೆ ಇಲ್ಲದ ಕಾರಣ ಭಟ್ರ ಬಂಧನಕ್ಕೆ ವ್ಯಾಪಕ ಒತ್ತಡ ಜಾಸ್ತಿಯಾಗುತ್ತಿತ್ತು. ಈ ಬಗ್ಗೆ ನಾಳೆ ದಲಿತ ಸಂಘಟನೆಗಳು ಠಾಣೆ ಮುಂದೆ ಪ್ರತಿಭಟನೆ ಅಂತ ಕೂಡ ಎಚ್ಚರಿಕೆ ಕೊಟ್ಟಿದ್ದವು. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣ್ ಕೂಡ ಗುರ್ರ್ ಅಂದ ಕಾರಣ ಇದೀಗ ಭಟ್ರು ಬಂದು ಬೆಳ್ಳಾರೆ ಪೋಲಿಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top