ಪೆರ್ಲಂಪಾಡಿಯಲ್ಲಿ ಒಬ್ಬ ಪೊಕ್ಕಡೆ ಕೌ ಡಾಕ್ಟರ್ !

Pattler News

Bureau Report

ಅಲ್ಲಿ ಪೆರ್ಲಂಪಾಡಿ, ಅಮ್ಚಿನಡ್ಕ, ಕಾವು, ಮಾಡಾವು ವ್ಯಾಪ್ತಿಯಲ್ಲಿ ಒಬ್ಬ ಪೊಕ್ಕಡೆ ಕೌ ಡಾಕ್ಟರ್ ಕಾರ್ಯಾಚರಿಸುತ್ತಿದ್ದು ಇವನದ್ದು ಒಂದು ಬೇರೆಯೇ ಕೇಸು. ಶೀಘ್ರದಲ್ಲೇ ಡಾಕ್ಟ್ರಿಗೆ ಊರಿನವರೇ ಪುಚ್ಚೆದ ಇಂಜೆಕ್ಷನ್ ಕುತ್ತಲು ರೆಡಿಯಾಗಿದ್ದಾರೆ.

ಹಾಗೆಂದು ಪೆರ್ಲಂಪಾಡಿಯಲ್ಲಿ ಸರ್ಕಾರಿ ಕೌ ಆಸ್ಪತ್ರೆ ಇದೆ. ಅದಕ್ಕೆ ಬೇರೆಯೇ ಕೌ ಡಾಕ್ಟರ್ ಇದ್ದಾರೆ. ಆದರೆ ಅದೇ ಊರಿನಲ್ಲಿ ಇನ್ನೊಬ್ಬ ಸ್ಪೆಷಲ್ ಕೌ ಡಾಕ್ಟರ್ ಇದ್ದಾನೆ. ತನ್ನ ತಂದೆಯ ಜೊತೆ ಇಂಜೆಕ್ಷನ್ ಡಬ್ಬ ಹೊತ್ತು, ಹೊತ್ತು ಅವರ ನಂತರ ಫುಲ್ ಟೈಂ ಡಾಕ್ಟರ್ ಆದವನು. ಆದರೆ ಈ ಡಾಕ್ಟರನ ಸ್ಪೆಷಲ್ ಕತೆ ಏನು ಅಂದ್ರೆ ಸನ್ಮಾನ್ಯರಿಗೆ ಸ್ವಂತ ರಿಸರ್ವ್ ಬ್ಯಾಂಕ್ ಇದ್ದರೂ ಸಾಕಾಗಲ್ಲ. ಅಂದರೆ ಇವರದ್ದು ದುಡ್ಡಿನ ಕತೆ. ಇವರಿಗೆ ಎಷ್ಟು ದುಡ್ಡಿದ್ದರೂ ಸಾಕಾಗಲ್ಲ. ಹಾಗೆಂದು ಹೋದ ಕಡೆಯೆಲ್ಲಾ, ಇವರು ಇಂಜೆಕ್ಷನ್ ಕುತ್ತಿದ ಕಡೆಯೆಲ್ಲಾ ಇವರಿಗೆ ಫೀಸು ಕೊಡಲಾಗುತ್ತದೆ. ಆದರೆ ಫೀಸು ತಗೊಂಡ ನಂತರ ಡಾಕ್ಟ್ರು ಕನೆಕ್ಷನ್ ಕಟ್ ಮಾಡಲ್ಲ. ಡಾಕ್ಟ್ರು ಮತ್ತೇ ಕಾಲ್ ಮಾಡಿ “ಒಂಜಿ ರಡ್ಡ್ ಸಾವಿರ ಬೋಡಿತ್ತ್ಂಡ್” ಎಂದು ಅಕೌಂಟ್ ಓಪನ್ ಮಾಡುತ್ತಾರೆ. ಕೊಟ್ರೆ ಕೋಡಂಗಿ, ಡಾಕ್ಟ್ರು ಈರಭದ್ರ.

ಹಾಗೆಂದು ಈ ಡಾಕ್ಟ್ರಿಗೆ ಯಾವಾಗ ನೋಡಿದರೂ ಏಕಾದಶಿ. ಎಲ್ಲೋ ಹೊರಗಡೆ ಬಾಕಿ ಆಗಿದ್ದೇನೆ, ಬೈಕ್ ಕೈಕೊಟ್ಟಿದೆ, ಪರ್ಸ್ ಕಳೆದು ಹೋಗಿದೆ, ಹುಷಾರಿಲ್ಲ ಅಂತೆಲ್ಲ ಸಾವಿರ ಕತೆ ಹೇಳಿ ಯಾರಿಗಾದರೂ ಪೆತ್ತ ಕಂಜಿ ಇದ್ದವರಿಗೆ ಪೋನ್ ಮಾಡಿ ನಾಳೆ ಕೊಡುತ್ತೇನೆ,ಎರಡು ಸಾವಿರ ಗೂಗಲ್ ಪ್ಲೀಸ್ ಅಂತಾನೆ. ಜನ ಪಾಪ ಇರ್ಲಿ, ಮುಂದಕ್ಕೆ ಬೇಕಾಗುತ್ತದೆ ಎಂದು ಹೇಳಿದ ದುಡ್ಡು ಪೋನು, ಗೂಗಲ್ ಮಾಡಿ ಬಿಡುತ್ತಾರೆ. ಆಮೇಲೆ ಸುದ್ದಿ ಇಲ್ಲ. ಪೋನ್ ತೆಗೆಯಲ್ಲ, ಕಣ್ಣಿಗೆ ಕಾಣಿಸಲ್ಲ, ಕಿವಿಗೆ ಕೇಳಿಸಲ್ಲ. ಹೀಗೆ ಮಾಡಿ, ಮಾಡಿ ಇದೀಗ ಕಾವು,ಮಾಡಾವು, ಕರ್ನೂರು, ಸುಳ್ಯ ಪದವು, ಪೆರ್ಲಂಪಾಡಿ, ಕೆಯ್ಯೂರು, ಕೊಳ್ತಿಗೆ ಕಡೆಯೆಲ್ಲ ಇವನು ನಾಟ್ ರೀಚೆಬಲ್ ಆಗಿದ್ದಾನೆ. ಇದು ಹೇಗೆ ಅಂದರೆ ಈಗ ಒಂದು ಪೆತ್ತಕ್ಕೆ ಅಥವಾ ಒಂದು ನಾಯ್ದ ಮಗನಿಗೆ ಇಂಜೆಕ್ಷನ್ ಕೊಟ್ಟರೆ ಪಾರ್ಟಿ ಡಾಕ್ಟ್ರಿಗೆ ಮಾಮೂಲು ಫೀಸು ಕೊಡುತ್ತಾರೆ. ಆದರೆ ಇದು ಡಾಕ್ಟ್ರಿಗೆ ಸಾಕಾಗಲ್ಲ. ಅದಕ್ಕೆ ಮತ್ತೇ ಫೋನ್ ಮಾಡಿ “ಎಲ್ಲೆ ಕೊರ್ಪೆ” ಅಂತ ಎರಡು ಸಾವ್ರ ಗೂಗಲ್ ಮಾಡಿಸಿಕೊಳ್ಳುತ್ತಾರೆ. ಎಲ್ಲೆ ಕೊಡ್ಲಿಕ್ಕೆ ಇಲ್ಲ. ಆದರೆ ಲೆಕ್ಕಾಚಾರ ಪ್ರಕಾರ ಡಾಕ್ಟರ್ ಫೀಸು ಮತ್ತು ಗೂಗಲ್ ಗೆ ಹಾಕಿಸಿಕೊಂಡದ್ದು ಲೆಕ್ಕ ಹಾಕಿದರೆ ಬಂಗಾರದ ಇಂಜೆಕ್ಷನ್ ಕೊಟ್ಟ ಹಾಗೆ ಆಗುತ್ತದೆ. ಹೊಸ ಪೆತ್ತವೇ ತಗೊಳ್ಳಬಹುದು ಮಾರಾಯ್ರೆ. ಇದೀಗ ಡಾಕ್ಟ್ರ ಗೂಗಲ್ ಪ್ಲೇ ಬಗ್ಗೆ ಊರಿಡೀ ಗೊತ್ತಾಗಿದ್ದು ಜನ ಎರಡು ಸಾವಿರದ ಟೋಪಿ ಇಟ್ಟುಕ್ಕೊಂಡು ಪಾಲೆದ ಕಷಾಯ ಕುಡಿದವರಂತಾಗಿದ್ದಾರೆ. ಇಷ್ಟಕ್ಕೂ ಡಾಕ್ಟ್ರು ದುಡ್ಡನ್ನು ಎಂಥ ಮಾಡುತ್ತಾರೆ ಎಂದು ಕೂಡ ಜನ ಪತ್ತೆ ಹಚ್ಚಿದ್ದು ಡಾಕ್ಟ್ರ ಆರೋಗ್ಯ ದೃಷ್ಟಿಯಿಂದ ಅದನ್ನು ಯಾರೂ ಯಾರಲ್ಲೂ ಯಾವುದೇ ಕಾರಣಕ್ಕೂ ಹೇಳಿಲ್ಲ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top