
ಅಲ್ಲಿ ಸುಬ್ರಹ್ಮಣ್ಯ ಸಮೀಪದ ಏನೆಕಲ್ ಬಳಿ ಸೊಪ್ಪು ಡಾಕ್ಟರ್ ಒಬ್ಬ ಮೊನ್ನೆ ಆಯುಧ ಪೂಜೆಯ ದಿನದಂದು ತಲ್ವಾರ್ ಇಟ್ಟು ಆಯುಧ ಪೂಜೆ ನಡೆಸಿದ ಬಗ್ಗೆ ಮಾಹಿತಿ ಬಂದಿದೆ. ಆಯುಧ ಪೂಜೆಯಲ್ಲಿ ಮಂಗ ಓಡಿಸುವ ತೋಟೆ ಬೆಡಿ ಓಕೆ, ಬೆಂಡೆ ಕಾಯಿ ಮೂರುವ ಚಾಕು ಚೂರಿ ಓಕೆ. ಆದರೆ ತಲ್ವಾರ್ ಯಾಕೆ ಮಾರಾಯ್ರೆ ಎಂಬ ಪ್ರಶ್ನೆ ಎದ್ದಿದೆ.
ಗನ್ ಇಟ್ಟು ತಿರುಗಾಟ
ಹಾಗೆಂದು ಸುಬ್ರಹ್ಮಣ್ಯ ಸಮೀಪದ ಏನೆಕಲ್ ಬುದ್ಧಿಜೀವಿಗಳ ಊರು. ಆದರೆ ಇಲ್ಲೊಬ್ಬ ಮದ್ದಿನ ಪಂಡಿತನಿದ್ದಾನೆ. ಹೆಸರು ನಾಗ ಯಾನೆ ತಲ್ವಾರ್ ನಾಗ ಯಾನೆ ತೋಟೆ ನಾಗ. ಅಂಡಿಗುಂಡಿ ಬೇರು ಮತ್ತು ಗುರುತು ಪರಿಚಯ ಇಲ್ಲದ ಸೊಪ್ಪಿನ ಕಷಾಯದ ಡಾಕ್ಟರ್ ಇವನು. ಅದು ತಲೆ ತಲಾಂತರದಿಂದ ಬಂದ ವಿದ್ಯೆ ಅವನಿಗೆ. ಆ ವಿಭಾಗದಲ್ಲಿ ನಾಗನ ಮದ್ದು ಬೆಸ್ಟೇ ಇದೆ. ಇಲ್ಲಿ ತನಕ ಇವನ ಕಷಾಯ ಕುಡಿದು ಯಾರ ಕಿಡ್ನಿಯೂ ಫೇಲಾದ ಉದಾಹರಣೆ, ಲಿವರ್ ಒಟ್ಟೆ ಅದ ಕತೆ, ದೊಡ್ಡ ಕರುಳು ಮತ್ತು ಚಿಕ್ಕ ಕರುಳು ಅರ್ಕಟ್ ಬಿದ್ದ ಕೇಸೂ ಇಲ್ಲ. ಆದರೆ ಈ ಪಂಡಿತನ ಕತೆ ಬೇರೆಯೇ ಇದೆ. ಪಂಡಿತ ಸ್ವಲ್ಪ ಪೆಟ್ಟಿಸ್ಟ್. ಕಿಸೆಯಲ್ಲಿ ಚಾಕು ಚೂರಿ, ಹೆಗಲಲ್ಲಿ ತೋಟೆ ಬೆಡಿ, ಕೈಯಲ್ಲಿ ತಲ್ವಾರ್ ಹಿಡಿದು ಪಂಡಿತನ ಗುಳಿಗ್ಗ ಆರ್ಭಟ ಏನೆಕಲ್ ಸರಹದ್ದಿನಲ್ಲಿ ಸ್ವಲ್ಪ ಜಾಸ್ತಿ ಇದೆ. ಸಂಕ್ರಾಂತಿ ಟೈಮಲ್ಲಿ, ಅಮಾವಾಸ್ಯೆ ದಿನ, ತಿಂಗೊಳ್ದೊದ್ಯ ದಿನ, ಹುಣ್ಣಿಮೆ ದಿನ ಮತ್ತು ತೆಂಗಿನ ಕಾಯಿ ಭ್ರಷ್ಟ ಆದಾಗಲೆಲ್ಲ ಪಂಡಿತನಿಗೆ ಗುಳಿಗ್ಗನ ಮೇಲೆ ರಾವು ಹಿಡಿಯುತ್ತದೆ. ಆಗ ಹೆಗಲಲ್ಲಿ ಗನ್ನು, ಕೈಯಲ್ಲಿ ತಲ್ವಾರ್, ಕಿಸೆಯಲ್ಲಿ ಚಾಕು ಚೂರಿ.

ತಲವಾರ್ ಪೂಜೆ
ಹಾಗೆಂದು ಸದ್ರಿ ತಲ್ವಾರ್ ನಾಗ ತನ್ನ ಅಣ್ಣಂದಿರ ಜಾಗವನ್ನೇ ನಕಲಿ ದಾಖಲೆ ಸೃಷ್ಟಿಸಿ ಗುಳುಂ ಮಾಡಿದವನು. ಪಾಲು ಪಟ್ಟಿಯಾಗಿದ್ದ ಅಣ್ಣಂದಿರ ವರ್ಗ ಜಾಗದ ಕುಮ್ಕಿಯನ್ನು ಅಕ್ರಮ ಸಕ್ರಮದ ಮುಖಾಂತರ ನಕಲಿ ದಾಖಲೆ ಸೃಷ್ಟಿಸಿ ಸಾಗುವಳಿ ಚೀಟಿ ಮಾಡಿಸಿಕೊಂಡು, ನಂತರ ಒಂದು ಪೋರ್ಜರಿ ವೀಲುನಾಮೆ ಬರೆಸಿ ಅದಕ್ಕೆ ಕಾಗೆ ಕಾಲಿನಲ್ಲಿ ಒಂದು ಅಂಡಿಗುಂಡಿ ಸೈನ್ ಹಾಕಿ ತನ್ನ ಹೆಸರಿಗೆ ಮಾಡಿಸಿಕೊಂಡ ಆಧುನಿಕ ಕೌರವ ಇವನು. ಇದೀಗ ಸದ್ರಿ ಜಾಗವನ್ನು ಬಿಟ್ಟು ಕೊಡುವಂತೆ ಪಂಚಾಯ್ತಿ ನಡೆದರೂ, ಪ್ಲಾಟಿಂಗ್ ಮೂಲಕ ಆ ಜಾಗವನ್ನು ಪರ್ಮನೆಂಟ್ ಮತ್ತೇ ತನ್ನದೇ ಹೆಸರಿನಲ್ಲಿ ಉಳಿಸಿಕೊಳ್ಳಲು ಇಲ್ಲದ ಪ್ರಯತ್ನ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಸದ್ರಿ ಪ್ಲಾಟಿಂಗ್ ಕೆಲಸಗಳಿಗೆ ಅಣ್ಣನ ಕಡೆಯಿಂದ ಸ್ಟೇ ತಂದಿದ್ದು ಯಾವುದೇ ಕಾರಣಕ್ಕೂ ಜಾಗ ಬಿಟ್ಟುಕೊಡುವುದಿಲ್ಲ ಎಂದು ನಾಗ ತಲ್ವಾರ್ ಮೇಲೆ ತಲೆ ಇಟ್ಟು ಪ್ರಮಾಣ ಮಾಡಿದ್ದಾನಂತೆ. ಸದ್ರಿ ಜಾಗಕ್ಕೆ ಎಂಟು ಲಕ್ಷದ ತನಕ ಸಾಲ ಕೂಡ ಮಾಡಿದ್ದು ಜಾಗದ ಪೊಸಿಷನ್ ಅಣ್ಣಂದಿರ ಬಳಿ ಇದ್ದರೂ ಬ್ಯಾಂಕಿನವರನ್ನು ಮಂಗ ಮಾಡಿ ಈ ಸಾಲ ಮಾಡಿದ್ದಾನೆ. ಮೊನ್ನೆ ಪ್ಲಾಟಿಂಗ್ ಕೆಲಸಗಳಿಗೆ ಸ್ಟೇ ತಂದವರಿಗೆ ಸದ್ರಿ ನಾಗ ಫೋನ್ ಮಾಡಿ “ನನ್ನತ್ರ ತುಂಬಾ ತೋಟೆಗಳಿವೆ, ಒಬ್ಬೊಬ್ಬರಿಗೆ ಒಂದೊಂದು ತೋಟೆ ಸಾಕು” ಎಂದು ತೋಟೆ ಬೆದರಿಕೆ ಹಾಕಿದ್ದ. ಈ ಬಗ್ಗೆ ಸುಬ್ರಹ್ಮಣ್ಯ ಪೋಲಿಸರಿಗೆ ಕಂಪ್ಲೈಂಟ್ ಆಗಿದ್ದು ಪೋಲಿಸರು ನಾಗನನ್ನು ಠಾಣೆಗೆ ಕರೆಸಿ “ದಾನೆಗೆ”ಎಂದು ವಿಚಾರಿಸಿದ್ದರು. ಆವತ್ತು ನಾಗನೊಂದಿಗೆ ಸಿದ್ದ ಎಂಬ ಕೋಳಿ ಕಟ್ಟ ಸ್ಪೆಷಲಿಸ್ಟ್ ಕೂಡ ಠಾಣೆಗೆ ಬಂದಿತ್ತು. ರೇಷನ್ ಕಾರ್ಡ್ ಕೂಡ ಸರಿಕಟ್ ಇಲ್ಲದ ಸಿದ್ದ ಠಾಣೆಯಲ್ಲಿ ನಾಗನ ಪರ ಭಾರೀ ಮಾತಾಡಿತ್ತಂತೆ ಗಡ.

ಹಾಗೆ ತೋಟೆ ಬೆದರಿಕೆ ಹಾಕಿದ್ದ ನಾಗನನ್ನು ಕರೆಸಿ ಸುಬ್ರಹ್ಮಣ್ಯ ಪೋಲಿಸರು ರಡ್ಡ್ ಪರೆಂಚಿ ಬಿಟ್ಟಿದ್ದರು. ಅದೊಂದು ಸಿವಿಲ್ ಮ್ಯಾಟರು, ಅಸಂಜ್ಞೆಯ ಪ್ರಕರಣ, ಕೋರ್ಟಿಗೆ ಹೋಗಿ ಪರ್ಮಿಷನ್ ತಗೊಂಡು ಬಂದರೆ ನಾಗನನ್ನು ಬಂದೀಖಾನೆ ಸೆಂಡ್ ಮಾಡುವ ಪ್ರಕ್ರಿಯೆ ಮಾಡಬಹುದು ಎಂದು ಪೋಲಿಸರು ಹಿಂಬರಹ ಕೊಟ್ಟು ಮುಗಿಸಿದ್ದರು. ನಂತರ ಕೂಡ ಬುದ್ಧಿ ಬಾರದ ನಾಗ ವಿವಾದಿತ ಜಾಗದಲ್ಲಿ ಅದೇ ಪೊಟ್ಟು ಬೆಡಿ ಹೆಗಲಲ್ಲಿ, ಕೈಯಲ್ಲಿ ತಲ್ವಾರ್, ಕಿಸಿಯೊಳಗೆ ಚಾಕು ಚೂರಿ ಹಿಟ್ಕೊಂಡು ಹೆದರಿಕೆಯ ವಾತಾವರಣ ಸೃಷ್ಟಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಅಷ್ಟು ಮಾತ್ರವಲ್ಲದೆ ಮೊನ್ನೆ ಆಯುಧ ಪೂಜೆ ದಿನದಂದು ತಲ್ವಾರ್ ಪೂಜೆ ನಡೆಸಿ ತನ್ನ ಪ್ರತಿವಾದಿಗಳಿಗೆ ಗರ್ಭದಲ್ಲಿ ಚಳಿ ಕೂರಿಸಿದ್ದಾನೆ. ಯಾರಾದೋ ವರ್ಗ ಜಾಗದ ಕುಮ್ಕಿಯನ್ನು ನಕಲಿ ದಾಖಲೆ ಸೃಷ್ಟಿಸಿ ಗುಳುಂ ಮಾಡೋದು, ಜಾಗದ ಪೊಸಿಷನ್ ಇದ್ದವರ ಜೊತೆ ನಕಲಿ ದಾಖಲೆ ತೋರಿಸಿ ಅಕ್ರಮ ಪ್ರವೇಶ ಮಾಡೋದು, ಗನ್ನು ತೋರಿಸುವುದು, ಬೆದರಿಕೆ ಕರೆ ಮಾಡೋದು, ತಲ್ವಾರ್ ಪ್ರದರ್ಶನ, ಚಾಕು ಚೂರಿ ಸಂಸ್ಕೃತಿ, ಅಬ್ಬರಿಸಿ ಬೊಬ್ಬಿರಿಯೋದು, ಅನಾಗರೀಕ ವರ್ತನೆ ಮುಂತಾದ ಪುಣ್ಯ ಕಾರ್ಯಗಳನ್ನು ಮಾಡುತ್ತಿರುವ ಪಂಡಿತನನ್ನು ಪೋಲಿಸರು ಮತ್ತೊಮ್ಮೆ ಕರೆದು ಅರೆದು ಕಷಾಯ ಕೊಡಬೇಕಾಗಿದೆ. ಉರ್ಕು ಮೈಲೆ ಆಗಿ ಅಬ್ಬರಿಸುತ್ತಿರುವ ಗುಳಿಗ್ಗನಿಗೆ ಪೋಲಿಸರು ಮಂತ್ರಿಸಿ ಒಂದು ಉರ್ಕು ಕಟ್ಟಲೇ ಬೇಕಾಗಿದೆ. ತಲ್ವಾರ್ ನಾಗನ ಬಾಧೆಗಳಿಗೆ ಒಂದು ತಡೆ ಬೇಕಾಗಿದೆ. ಇಲ್ಲದಿದ್ದರೆ ನಾಗ ಏನಾದರೊಂದು ಎಡವಟ್ಟು ಮಾಡುವುದರಲ್ಲಿ ಸಂಶಯವೇ ಇಲ್ಲ.
