ಹಾಗೆಂದು ಶೈಲೂ ಸುಳ್ಯ ದೇಶಭಕ್ತರ ಟೀಮಿನ ಆಲ್ ರೌಂಡರ್. ಗೌಡ್ರುಗಳ ಪ್ರಬಲ ಸಮುದಾಯದಿಂದ ಬಂದಿರುವ ಶೈಲೂಗೆ ದೊಡ್ಡ ನಾಯಕನಾಗಿ ಬೆಳೆಯಬಹುದಿತ್ತು. ಪುತ್ತೂರು ಎಂಎಲ್ಎ ಸೀಟಿಗೆ ದೇಶಭಕ್ತರು ಸುಳ್ಯದಲ್ಲಿ ಬಂದು ಭೂತಗನ್ನಡಿ ಹಿಡಿದು ಹುಡುಕುವಾಗ ಶೈಲೂಗೆ ಕೂಡ ಭೂತಗನ್ನಡಿ ಫ್ರೇಂನ ಒಳಗೆ ಬರಬಹುದಿತ್ತು. ಆದರೆ ಶೈಲೂ ಮಾಡಿದ್ದೇನು? ಬೇಕು ಬೇಕಂತಲೇ ರನೌಟ್ ಆಗೋದು ಮಾರಾಯ್ರೆ. ತನ್ನ ರಾಜಕೀಯ ಜೀವನವನ್ನು ತನ್ನ ಕೈಯಿಂದಲೇ ಮುಗಿಸಿ ಕೊಂಡರೆ ಅದಕ್ಕೆ ಯಾರೂ ಏನೂ ಮಾಡಕ್ಕಾಗಲ್ಲ. ಇದೀಗ ಶೈಲೂ ಮೇಲೆ ಚೂಡಿ ಕೇಸೊಂದರಲ್ಲಿ FIR ಆಗಿದೆ. ಬ್ಯಾಡ್ ಬಾಲಿಗೆ ಹೊಡೆಯಲು ಹೋಗಿ ಟಾಪ್ ಎಡ್ಜ್ ಆಗಿ ಕ್ಯಾಚ್ ಆಗಿದೆ ಶೈಲೂ. ಶೈಲೂ ಏನು ನಿನ್ನ ಸ್ಟೈಲು?
ಈ ಶೈಲೂ ಸದ್ಯಕ್ಕೆ ಸುಳ್ಯ ತಾಲೂಕು ದೇವಚಲ್ಲ ಗ್ರಾಂ ಪಂಚಾಯ್ತಿ ಅಧ್ಯಕ್ಷ. ಅದೊಂದು ಚೂಡಿ ಕೇಸ್. ಒಬ್ಬಳು ಸ್ವಸಹಾಯ ಸಂಘದ ಸದಸ್ಯೆಯ ಫ್ಯಾಮಿಲಿ ಮ್ಯಾಟರು. ಈ ಸದಸ್ಯೆ ಅದ್ಯಾವುದೋ ಬ್ಯಾಡ್ ಬಾಯ್ ಒಬ್ಬನೊಂದಿಗೆ “ಮಿಸ್ಸ್ ಕಾಲ್ ಸಂಬಂಧ” ಇಟ್ಟುಕ್ಕೊಂಡಿದ್ದಾಳೆ ಎಂಬುದು ಗಂಡನ ಸೈಡಿನ ದೂರು. ಇದು ಈಕೆಗೆ ತುಂಬಾ ಕಿರಿಕಿರಿಕಿರಿ ಆದ ಕಾರಣ ಆಕೆ ಈ ವಿಷಯವನ್ನು ಮುಗಿಸಿ ಕೊಡುವಂತೆ ಪಂಚಾಯ್ತಿ ಅಧ್ಯಕ್ಷ ಶೈಲೂಗೆ ಹೇಳಿದ್ದಾಳೆ. ಇಂಥ ಕೇಸ್ ಗಳಿಗೆಲ್ಲ ಶೈಲೂ ಬಕಪಕ್ಕಿಯಂತೆ ಕಾದು ಕುಳಿತಿರುತ್ತಿತ್ತು. ಲಡ್ಡು ಬಂದು ತಟ್ಟೆಗೆ ಬಿತ್ತು ಗಡ ಎಂದು ಮನೆಯಲ್ಲಿ ಯಾರೂ ಇಲ್ಲದ ದಿನ “ನೀ ನಾಳೆ ಮನೆ ಕಡೆ ಬಾಯ, ಮುಗ್ಸಿ ಬುಡಮ” ಎಂದು ಚೂಡಿಗೆ ಹೇಳಿದೆ.

ಅದರಂತೆ ಮರುದಿನ ಶುಚಿರ್ಭೂತನಾಗಿ, ಸುಗಂಧ ದ್ರವ್ಯಗಳನ್ನು ಬಾಡಿಗೆ ಲೇಪಿಸಿ ಪಂಚಾಯ್ತಿಗೆ ಬಂದ ಶೈಲೂ ಅಲ್ಲಿಗೆ ಬಂದಿದ್ದ ಚೂಡಿಯನ್ನು ಹಿಡ್ಕೊಂಡು ಮಂಡಿಗೆ ತಿನ್ನುತ್ತಾ ಮನೆ ಕಡೆ ಹೊರಟಿದೆ. ಮನೆಗೆ ಬಂದ ಶೈಲೂ ಚೂಡಿ ಜೊತೆ ವಿಷಯ ಎಲ್ಲ ಕೇಳುತ್ತಾ, ಕೇಳುತ್ತಾ, ತಾನೂ ಮಾತಾಡುತ್ತಾ, ಚೂಡಿ ಕೈತಲ್ ಕೈತಲ್ ಬಂದು ಒಮ್ಮೆಲೇ ಕರಡಿ ಹಿಡಿತದಲ್ಲಿ ಚೂಡಿಯನ್ನು ಲಾಕ್ ಮಾಡಿದೆ. ಒಮ್ಮೆಗೇ ನಡೆದ ಧಾಳಿಯಿಂದ ಚೂಡಿ ಬೆಚ್ಚಿ ಬಿದ್ದಿದೆ, ಕೊಸರಾಡಿದೆ, ಎಳೆದಾಡಿ, ಹೊರಳಾಡಿ, ಬಡಿದಾಡಿ,ಎಗರಾಡಿ ಶೈಲೂ ಕೈಯಿಂದ ತಪ್ಪಿಸಿಕೊಂಡಿದೆ. ಇಷ್ಟೆಲ್ಲಾ ನಡೆದರೂ ಚೂಡಿ ಸೀದಾ ಅಲ್ಲಿಂದ ಬಂತಾ? ಇಲ್ಲ. ಮನೆಯಿಂದ ಹೊರಗೆ ಬಂದು ಗಂಡನಿಗೆ ಮತ್ತು ತನ್ನ ಗಂಟನಿಗೆ ಫೋನ್ ಮಾಡಿದೆ. ಗಂಡ ನೂರರಲ್ಲಿ ಬಂದು ಗಲಾಟೆ ಮಾಡಿದ್ದಾನೆ ಮತ್ತು ಬರುವ ಮೊದಲೇ ತನ್ನ ಮೊಬೈಲಿನ ರೆಕಾರ್ಡರನ್ನು ಆನ್ ಮಾಡಿಯೇ ಬಂದಿದ್ದಾನೆ. ಆ ಸ್ಪಾಟಲ್ಲಿ ನಡೆದ ಎಲ್ಲಾ ಡೈಲಾಗ್ ಗಳೂ ಈಗ ರೆಕಾರ್ಡ್ ಆಗಿ ಗಂಡನ ಮೊಬೈಲ್ ನಲ್ಲಿ ಸೇವ್ ಆಗಿದೆ.
” ನಾ ಎಂತ ಮಾಡ್ತಿಲೆ, ಬರೀ ಕೆನ್ನೆ ಮಾತ್ರ ಹಿಡಿದದ್ದ್, ಇವಳ ವಿಷಯದಲ್ಲಿ ಪಟ್ಲೆರ್ ನ್ಯೂಸ್ ನವ ಫೋನ್ ಮಾಡಿತ್ತ್”ಎಂದು ನೂರರಲ್ಲಿ ಬಂದಿದ್ದ ಚೂಡಿ ಗಂಡನ ಜೊತೆಗೆ ಶೈಲೂ ರೈಲು ಬಿಟ್ಟಿದೆ, ಪತ್ರಿಕೆ ಹೆಸರು ಹೇಳಿ ಹೆದರಿಸಲು ನೋಡಿದೆ, ಧಮ್ಮಯ್ಯ ದಕ್ಕಯ್ಯ ಹಾಕಿದೆ, ಸಾಷ್ಟಾಂಗ ಮಾಡಿದೆ. ಆದರೆ ಗಂಡ ಕೇಳಲಿಲ್ಲ. ಅಲ್ಲಿ ಶೈಲೂಗೆ ತಾರಮಾರ ಬೈದು ಹೆಂಡ್ತಿ ಕರಕ್ಕೊಂಡು ಸೀದಾ ಹೋಗಿ ಸುಬ್ರಹ್ಮಣ್ಯ ಪೋಲಿಸರಿಗೆ ನಮಸ್ಕಾರ ಸರ್ ಮಾಡಿದ್ದಾನೆ. ಈಗ ಕಾಂಗ್ರೆಸ್ ಸರ್ಕಾರ, ಶೈಲೂ ಬಿಜೆಪಿ. ಪೋಲಿಸರು ಯಾರ ಫೋನೂ ತೆಗೆಯದೆ FIR ಮಾಡಿದ್ದಾರೆ. ಅಲ್ಲಿಗೆ ಶೈಲೂ ಬೆಟ್ರಿ ಬರ್ನ್. ಅಲ್ಲ ಮಾರಾಯ್ರೆ ಈ ಶೈಲೂ ತಾನು ಸಿಕ್ಕಿ ಬೀಳುವಾಗ ಜೊತೆಗೆ ಗಂಡ ಹೆಂಡತಿಯನ್ನು ಹೆದರಿಸಲು ಪಟ್ಲೆರ್ ನ್ಯೂಸ್ ಹೆಸರು ಹೇಳಿದ್ದು ನಮಗೆ ಗುಸ್ಸಾ ತಂದಿದೆ. ಯಾರದೋ ಹೆಂಡ್ತಿ, ಯಾರದೋ ಜೊತೆ ಬಲ್ಲೆ ಗಿಲ್ಲೆ ವಗೈರೆ ಹೋದರೆ ನಾವು ಶೈಲೂಗೆ ಯಾಕೆ ಕಾಲ್ ಮಾಡ ಬೇಕು ಎಂಬುದು ಡಾಲರ್ ಮಿಲಿಯನ್ ಪ್ರಶ್ನೆ. ಅದೂ ಅಲ್ಲದೆ ಯಾರದೋ ಹೆಂಡ್ತಿಯ ಕೆನ್ನೆ ಮುಟ್ಟಲು ಹೋಗಿ ಸಿಕ್ಕಿ ಬಿದ್ದು ಇದೀಗ ಅಟ್ಟದಲ್ಲಿ ಅಡಗಿರುವ ಶೈಲೂಗೆ ಕೆನ್ನೆ ಮುಟ್ಟಿದರೂ ಬೆಟ್ರಿ ಚಾರ್ಜ್ ಆಗುತ್ತೆ ಎಂಬ ಕನಿಷ್ಠ ಜ್ಞಾನವೂ ಇಲ್ವಾ? ಇಲ್ಲಿ ಇನ್ನೊಂದು ವಿಷಯವೇನೆಂದರೆ ಶೈಲೂವನ್ನು ರಾಜಕೀಯವಾಗಿ ಮುಗಿಸಲು ಖುದ್ದು ದೇಶಭಕ್ತರೇ ಕತ್ತಿ ಗಿತ್ತಿ, ಚಾಕುಚೂರಿ ರೆಡಿ ಮಾಡಿಕೊಂಡಿದ್ದು ಅವರೇ ದೊಡ್ಡ ಗುಂಡಿ ತೆಗೆದು ಗುಂಡಿಗೆ ಈಂದಿನ ಗೆಲ್ಲು ಹಾಸಿ ಶೈಲೂವನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ ಎಂದೂ ದಂತಕತೆಗಳು ಹೇಳಿಕೊಂಡಿವೆ. ಯಾಕೆಂದರೆ ಶೈಲೂ ದೇಶಭಕ್ತರ ಒಳಗೆ ಸ್ವಾಭಿಮಾನಿ ಬಣದಲ್ಲಿ ಬಾಯಿ ಬಾಯಿ ಆಗಿದ್ದು ಇದು ದೇಶಭಕ್ತರಿಗೆ ನುಂಗಲಾಗದ ತುತ್ತು ಆಗಿತ್ತು ಎಂದು ತಿಳಿದುಬಂದಿದೆ. ಇನ್ನು ಕಾಂಗ್ರೆಸಿಗರು ಪಾ….ಪ. ಅವರಿಗೆ ಶೈಲೂ ರೆಬೆಲ್ ಆದಷ್ಟು ರೊಟ್ಟಿ ಜಾರಿ ತುಪ್ಪಕ್ಕೆ ಬೀಳುತ್ತಾ ಇರುತ್ತದೆ.





