ಸುಬ್ರಹ್ಮಣ್ಯದಲ್ಲಿ ಹಾವೇರಿ ದರ್ಬಾರ್

Pattler News

Bureau Report

ಇತ್ತಿಚಿನ ದಿನಗಳಲ್ಲಿ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಾವೇರಿ ಮೂಲದವರ ದರ್ಬಾರ್ ಅತಿಯಾಗುತ್ತಿದೆ.
ಕಳೆದ ವಾರ ಯಾತ್ರಾರ್ಥಿಯೊಬ್ಬ ವಸತಿಗೃಹ ದ ಹುಡುಕಾಟದಲ್ಲಿ ಇರುವಾಗ ಅಲ್ಲಿಗೆ ಬಂದ ಹಾವೇರಿ ಮೂಲದವ. ರೂಂ ಬೇಕಾ ನಮ್ಮಲ್ಲಿ ರೂಂ ಸಿಗುತ್ತದೆ. ರೂಂ ನಿಂದ ದೇವಳಕ್ಕೆ ಕೇವಲ 50 ಮೀಟರ್ ದೂರ. ಎಂದು ಪುಸಲಾಯಿಸಿ ಖಾಸಗಿ ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದಾನೆ. ವಸತಿಗೃಹಕ್ಕೂ ದೇವಳಕ್ಕೂ ತುಂಬಾ ದೂರ ಹಾಗು ಐಶಾರಾಮಿ ಸ್ಟಾರ್ ಹೋಟೆಲ್ ನ ಬೆಲೆ ರೂಂ ಗೆ ಹೇಳಿದ್ದರಿಂದ. ಯಾತ್ರಾರ್ಥಿ ರೂಂ ಬೇಡ ಎಂದು ಹೇಳಿದ್ದಾನೆ. ಅಷ್ಟಕ್ಕೇ ಪಿತ್ತ ನೆತ್ತಿಗೇರಿಸಿಕೊಂಡ ಹಾವೇರಿ ಮೂಲದವ ತನ್ನಿಬ್ಬರು ಗೆಳೆಯರೊಂದಿಗೆ ಸೇರಿಕೊಂಡು ಯಾತ್ರಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಅಲ್ಲ ಮಾರ್ರೆ ಸುಬ್ರಹ್ಮಣ್ಯದಲ್ಲಿ ಈ ಘಟ್ಟದವರನ್ನು ಕೇಳುವವರು ಯಾರೂ ಇಲ್ವ..!? ಅವರು ಆಡಿದ್ದೇ ಆಟವ.!?
ದಿನದ 24 ಗಂಟೆ ಬ್ಯೂಸಿ ಶೆಡ್ಯೂಲ್ ನಲ್ಲಿ ಇರುವ ಊರಿನವರು ಇನ್ನಾದ್ರು ಒಟ್ಟಾಗಿ ಘಟ್ಟದವರನ್ನು ಕಂಟ್ರೋಲ್ ಮಾಡದಿದ್ದರೆ. ಕೆಲವೇ ದಿನಗಳಲ್ಲಿ ನಿಮಗೂ ಅವರ ಜೋಳದ ರೊಟ್ಟಿ ಶೇಂಗಾ ಚಟ್ನಿ ತಿನ್ನುವ ಪರಿಸ್ಥಿತಿ ಬರಬಹುದು.
ಸುಬ್ರಹ್ಮಣ್ಯದ ಯಾವುದೇ ಹೋಟೆಲ್., ಲಾಡ್ಜ್ ಸೂಪರ್ ಮಾರ್ಕೆಟ್ ಎಲ್ಲಿ ನೋಡಿದ್ರೂ ಕೆಲಸಕ್ಕೆ ಇರುವುದು ಇದೇ ಹಾವೇರಿ ಮೂಲದವರು. ಹಾಗಂತ ಅವರು ಅವರಷ್ಟಕ್ಕೆ ದುಡಿಯುತ್ತಾ ಇದ್ರೆ ಇಂದು ಅವರ ಬಗ್ಗೆ ನಮ್ಮ ಪತ್ರಿಕೆಯಲ್ಲಿ ಬರೆಯುವ ಪ್ರಮೇಯ ಬರುತ್ತಿರಲಿಲ್ಲ. ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಆ ಊರಿನಿಂದ ಈ ಊರಿಗೆ ಬಂದವರು ಇಂದು ಕೂಡ ನಿಯತ್ತಾಗಿಯೇ ದುಡಿಯುತ್ತಿದ್ದಾರೆ. ಅವರ ಬಗ್ಗೆ ಯಾವುದೇ ತಕರಾರಿಲ್ಲ. ಇತ್ತಿಚೆಗೆ ಸುಬ್ರಹ್ಮಣ್ಯ ಸೇರಿಕೊಂಡ ಹಾವೇರಿ ಮೂಲದ ಯುವಕರ ತಂಡವೇ ಇಲ್ಲಿ ಊರಿಗೆ ಮಾರಿ ಆಗಿರುವುದು.
ಆದಿ ಸುಬ್ರಹ್ಮಣ್ಯದ ಪಕ್ಕದಲ್ಲಿರುವ ಹೆಚ್ಚಿನ ಎಲ್ಲಾ ಅಂಗಡಿಯಲ್ಲಿ ಇರುವುದು ಈ ಹಾವೇರಿಯ ಅಂಡೆಪಿರ್ಕಿ ಹುಡುಗರು. ಮೊದಲು ಕೆಲಸಕ್ಕೆ ಸೇರಿ ತದನಂತರ ಆ ಅಂಗಡಿಯನ್ನೆ ತನ್ನ ಸ್ವಂತ ಮಾಡಿಕೊಂಡು ಓನರ್ ಆಗಿ ಮೆರೆಯುತ್ತಿರುವವರನ್ನು ನೀವು ಆದಿಯಲ್ಲಿ ನೋಡಬಹುದು. ದೇವಳದ ವತಿಯಿಂದ ಸುಮಾರು 15 ಕೊಠಡಿಗಳ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಅದನ್ನು ಏಲಂ ಮಾಡಿದರು. ಅದರಲ್ಲಿ ಹೆಚ್ಚಿನದ್ದನ್ನು ಸುಮಾರು 10 ರಿಂದ 12 ಕೊಠಡಿಗಳನ್ನು ಇದೇ ಹಾವೇರಿ ಮೂಲದವರು ಪಡೆದುಕೊಂಡಿದ್ದಾರೆ ಎಂದಾದರೆ ಅವರ ಆರ್ಥಿಕ ಶಕ್ತಿಯನ್ನು ಊಹಿಸಿ. ತಾನು ಕೂಲಿಗೆ ಬಂದು ಎದುರು ಅಂಗಡಿಯಲ್ಲಿ ಕೆಲಸಕ್ಕೆ ಇರುವ ನಮ್ಮ ಊರಿನ ಹುಡುಗಿಯರನ್ನು ರಾತ್ರಿ ರಾಘವೇಂದ್ರ ಬೇಕರಿಗೆ ಕರೆದುಕೊಂಡು ಹೋಗಿ ಎದುರೆದುರು ನಿಂತು ಐಸ್ ಕ್ರೀಂ ಕೇಕ್ ತಿನ್ನುವಷ್ಟರ ಮಟ್ಟಿಗೆ ಹಾವೇರಿ ಮೂಲದವರು ಬೆಳೆದಿದ್ದಾರೆ ಎಂದರೆ ಅವರಿಗೆ ಸುಬ್ರಹ್ಮಣ್ಯದಲ್ಲಿ ಎಷ್ಟು ಫ್ರೀಡಂ ಇರಬಹುದು ನೀವೇ ಯೋಚಿಸಿ. ಬೇಕರಿಯ ಅಕ್ಕ-ಪಕ್ಕ ಲಾಡ್ಜ್ ಇದೆ ಅಲ್ಲಿಗೆ ಕರೆದುಕೊಂಡು ಹೋಗುವ ಮೊದಲು ಈ ಊರಿನ ಹೆಣ್ಣು ಮಕ್ಕಳು ಎಚ್ಚೆತ್ತುಕೊಂಡರೆ ನಿಮಗೆ ಕ್ಷೇಮ. ಇಲ್ಲವಾದರೆ ಮತ್ತೊಮ್ಮೆ ನಿಮ್ಮದೇ ಪುಲ್ ಎಪಿಸೋಡ್ ವಿತ್ ಪೋಟೋ ನಮ್ಮದೇ ಪತ್ರಿಕೆಯಲ್ಲಿ ಬರಬಹುದು.

ಗ್ರಾಂ ಪಂಚಾಯತ್ ಕಸ ಸಂಗ್ರಹಣಾ ವಾಹನ ಮೈಕ್ ಕಟ್ಟಿಕೊಂಡು ದೊಡ್ಡದಾಗಿ ಕೂಗುತ್ತಾ ಬರುತ್ತದೆ..,”ಸುಬ್ರಹ್ಮಣ್ಯ ಸ್ವಚ್ಛ ಪರಿಸರ ಇಲ್ಲಿ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.” ಅಂತ ಆ ಕಸದ ಗಾಡಿಯಲ್ಲಿ ಒಮ್ಮೆ ಇಣುಕಿ ನೋಡಿದರೆ ನಿಮಗೆ ಗೊತ್ತಾಗುತ್ತದೆ ಗಾಡಿ ತುಂಬ ಪ್ಲಾಸ್ಟಿಕ್ ಇರುವುದು ಇದೇ ತಂಬಾಕು ಉತ್ಪನ್ನಗಳದ್ದು ಅಂತ. ಹಾಗಾದರೆ ಅದು ಎಲ್ಲಿಂದ ಬಂತು…!? ರಥಬೀದಿಯಲ್ಲಿ ದೇವಳದ ಅಧೀನದಲ್ಲಿ ಇರುವ ಬಿಲ್ಡಿಂಗ್ ಒಂದರಲ್ಲಿ ಪೇಪರ್ ಅಂಗಡಿ ಇದೆ. ಆ ಅಂಗಡಿ ಕೂಡ ಇದೇ ಹಾವೇರಿ ಮೂಲದವರದ್ದು. ಅಲ್ಲಿ ಬೆಳಿಗ್ಗೆ 3-00 ರಿಂದ ಆರಂಭವಾಗಿ ರಾತ್ರಿ 11-00ರ ವರೆಗೆ ಮಾರಾಟವಾಗುವ ಗುಟ್ಕಾ ಸಿಗರೇಟು ಇಡೀ ಜಿಲ್ಲೆಯಲ್ಲಿ ಬೇರೆ ಎಲ್ಲಿಯೂ ಮಾರಟ ಆಗಿರಲಿಕ್ಕಿಲ್ಲ. ಊರಿನವರು ಪಾರ್ಕಿಂಗ್ ಜಾಗದಲ್ಲಿ ತಳ್ಳುವ ಗಾಡಿಯಲ್ಲಿ ಎರಡು ಕಟ್ಟು ಬೀಡಿ ಒಂದು ಪ್ಯಾಕ್ ಸಿಗರೇಟು ನಾಲ್ಕು ಮಾರುತಿ ಮಾರಿದ ಕೂಡಲೇ ಓಡೋಡಿ ಬರುವ ಪಂಚಾಯತ್., ಆರೋಗ್ಯ ಇಲಾಖೆಯವರಿಗೆ ಇದು ಕಾಣಿಸುವುದಿಲ್ಲವೇ..!? ನೀವು ನಿಮ್ಮ ಕಛೇರಿಗಳಿಗೆ ಪೇಪರ್ ಕೊಂಡು ಹೋಗುವುದು ಇದೇ ಅಂಗಡಿಯಿಂದ ಅಲ್ಲವೇ ಆದರೂ ನಿಮಗೆ ಅದರ ವಾಸನೆ ಬರಲಿಲ್ಲ ಎಂದಾದರೆ ಒಮ್ಮೆ ನಿಮ್ಮ ಮೂಗನ್ನು ಟೆಸ್ಟ್ ಮಾಡಿಸುವುದು ಒಳ್ಳೆಯದು.
ಶ್ರೀ ದೇವಳದಲ್ಲಿ ಒಂದು ಉದ್ಯೋಗ ಸಿಗಬೇಕು ಎಂದು ಹಗಲು ರಾತ್ರಿ ಇದ್ದ ದೈವ-ದೇವರುಗಳಿಗೆಲ್ಲ ಕೈ ಮುಗಿದು ಹರಕೆ ಕಟ್ಟಿಕೊಂಡರು ಊರಿನವರಿಗೆ ಒಂದು ಸಣ್ಣ ಕೆಲಸವೂ ಸಿಗುವುದಿಲ್ಲ. ಕಾರಣ “ನಿಯಮಾನುಸಾರ” ನಾವು ನೇರವಾಗಿ ಕೆಲಸಕ್ಕೆ ತೆಗೆದುಕೊಳ್ಳುವ ನಿಯಮ ಇಲ್ಲ ಎಂದು ನಾವು ಕೊಟ್ಟ ಅರ್ಜಿಯನ್ನು ಅಧಿಕಾರಿಗಳು ಮತ್ತೆ ನಮ್ಮ ಕೈಗೆ ನೀಡುತ್ತಾರೆ. ಆದರೆ ಹಾವೇರಿ ಮೂಲದವರು ಬಂದು ಎರಡು ದಿನ ಮಾಯ್ಪು ಹಿಡಿದು ಬೀದಿಯಲ್ಲಿ ನಿಂತು (ಗುಡಿಸಲು ಬೇರೆ ಸಿಬ್ಬಂದಿ ಇದ್ದಾರೆ.) ಮೂರನೇ ದಿನ ದೇವಳದ ಐಡಿ ಕಾರ್ಡ್ ಹಾಕಿಕೊಂಡು ದೇವಳದ ಕ್ಯಾಂಟರ್., ಟ್ರಾಕ್ಟರ್ ಅಥವಾ ಟಿಪ್ಪರ್ ನಲ್ಲಿ ಕೆಲಸಕ್ಕಾಗಿ ಅಳೆದಾಡಿದ್ದ ಊರಿನವನಿಗೆ ಟಾಟ ಮಾಡಿಕೊಂಡು ಹೋಗುತ್ತಾರೆ ಎಂದಾದರೆ ಅವರ ಪ್ರಭಾವ ಎಷ್ಟಿರಬಹುದು..!? ಕೂಲಿ ಕೆಲಸಕ್ಕೆ ಬಂದವರು ಇಲ್ಲಿ ಬಂದು ಜೆ.ಸಿ.ಬಿ., ಟಿಪ್ಪರ್, ಟ್ರಾಕ್ಟರ್ ಗಳ ಮಾಲಿಕರಾಗುತ್ತಾರೆ ಎಂದಾದರೆ ಅವರ ಆರ್ಥಿಕ ಮೂಲದ ಬಗ್ಗೆಯೂ ಕೆದಕಬೇಕಾಗುತ್ತದೆ. ಅನೈತಿಕ ವಾಸನೆ ಬಂದರೂ ಬರಬಹುದು.
ಮೊನ್ನೆ ಐಪಿಎಲ್ ನಲ್ಲಿ ಆರ್ಸಿಬಿ ತಂಡ ಗೆದ್ದಾಗ ನಡುರಾತ್ರಿ ಇದೇ ಹಾವೇರಿ ಮೂಲದ ಯುವಕರ ಗ್ಯಾಂಗ್ ಸ್ಪೋಟಕ ನಿಷೇಧಿತ ಪ್ರದೇಶವಾದ ರಥ ಬೀದಿಯಲ್ಲಿ ಅದೂ ಗೋಪುರದ ಮುಂಭಾಗದಲ್ಲಿ ಕರ್ಣ ಕಠೋರ ಸಿಡಿಮದ್ದು ಪ್ರದರ್ಶನ ಮಾಡಿ ಸಂಭ್ರಮಾಚರಣೆ ನಡೆಸಿದ್ದಾರೆ. ಇದರಿಂದ ಶ್ರೀ ದೇವಳಕ್ಕೆ ಏನಾದ್ರೂ ತೊಂದರೆ ಆಗಿದ್ದರೆ ಅದಕ್ಕೆ ಯಾರು ಹೊಣೆ..!? ಅವರಿಗೆ ಕುಡಿದು ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸಿ ರಥಬೀದಿಯಲ್ಲಿ ಸಂಭ್ರಮಾಚರಣೆ ಮಾಡಲು ಅವಕಾಶ ಕೊಟ್ಟವರು ಯಾರು..!? ಇದು ಶ್ರೀ ದೇವಳದ ಭದ್ರತೆಗೆ ಧಕ್ಕೆಯಲ್ಲವೇ..!?
ಈ ಎಲ್ಲಾ ಪೀಠಿಕೆ ನೀಡಿಲು ಪ್ರಮುಖ ಕಾರಣ ಕಳೆದ ವಾರ ನಡೆದ ಘಟನೆ. ಹಾವೇರಿ ಮೂಲದವರ ದರ್ಬಾರ್ ಸುಬ್ರಹ್ಮಣ್ಯದಲ್ಲಿ ಎಷ್ಟು ಇದೆ ಎಂದು ತಿಳಿಸಲು ಈ ಎಲ್ಲಾ ಅಂಶಗಳನ್ನು ಹೇಳಬೇಕಾಯಿತು. ಅವನ ಒಬ್ಬನ ವಿಷಯದಲ್ಲಿ ಇವರನ್ನೆಲ್ಲ ಯಾಕೆ ಎಳೆದು ತಂದಿರಿ..?? ಎಂದು ಕೆಲವೊಂದು ಬುದ್ಧಿ ಜೀವಿಗಳು ಕೇಳಬಹುದು. ಯಾಕೆಂದರೆ ಇಂತಹ ಅವಿವೇಕಿಗಳು ಸುಬ್ರಹ್ಮಣ್ಯಕ್ಕೆ ಬರಲು ಮೂಲ ಕಾರಣ ಇಲ್ಲಿ ಇರುವ ಹಾವೇರಿ ಮೂಲದವರೇ ಅಲ್ಲವೇ.? ಅವರಿಗೆಲ್ಲ ಗಾಡ್ ಫಾದರ್ ಈ ಹಿಂದೆ ಇಲ್ಲಿಗೆ ಬಂದವರೇ ಅಲ್ಲವೇ.!? ಅವರೆಲ್ಲರೂ ಒಂದೇ ಊರಿನವರು ಸಂಬಂಧಿಕರು ನೆಂಟರು ಇಷ್ಟರು ಅಲ್ಲವೇ.. ಅವರನ್ನು ಇಲ್ಲಿಗೆ ಕರೆತರುವಾಗ ಇಲ್ಲಿ ಯಾವ ರೀತಿ ಇರಬೇಕು ಎಂದು ಇವರು ಅವರಿಗೆ ಎಚ್ಚರಿಕೆಯ ಪಾಠ ಮಾಡಿದ್ದರೆ ಇಂದು ಅವರ ಬಗ್ಗೆ ಬರೆಯುವ ಪ್ರಸಂಗ ನಮಗೂ ಬರುತ್ತಿರಲಿಲ್ಲ ಅಲ್ಲವೇ.. ಇನ್ನಾದರೂ ಊರವರೊಂದಿಗೆ ಯಾವ ರೀತಿ ವರ್ತಿಸಬೇಕು ಎಂಬುದನ್ನು ಅವರಿಗೆ ಬುದ್ಧಿ ಹೇಳಿ. ಅವರನ್ನು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಬದುಕಲು ಕಳಿಸಿಕೊಡಲಿ. ಎಂಬ ಸದುದ್ದೇಶದಿಂದ ಹಾಗು ಇನ್ನು ಮುಂದೆ ಕ್ಷೇತ್ರದಲ್ಲಿ ಇಂತಹ ಅಹಿತಕರ ಘಟನೆ ನಡೆಯದಿರಲಿ ಎಂದು ಪ್ರಸ್ಥಾವಿಸಿದ್ದೇನೆ.
ಹಾವೇರಿ ಮೂಲದವರು ಸುಬ್ರಹ್ಮಣ್ಯದಲ್ಲಿ ಕಾಲಿಡದ ಏಕೈಕ ಜಾಗ ಎಂದರೆ ಅದು ಗ್ರಾಂ.ಪಂಚಾಯತ್ ಮಾತ್ರ. ಹಾಗಂತ ರಾಜಕೀಯ ವ್ಯಕ್ತಿಗಳು ಹೆಚ್ಚು ಖುಷಿಪಡಬೇಡಿ. ಮುಂದಿನ ಗ್ರಾ.ಪಂ. ಚುನಾವಣೆಯಲ್ಲಿ ಅಲ್ಲೂ ಸ್ಪರ್ಧೆ ಮಾಡಲು ತೆರೆ ಮರೆಯ ಪ್ರಯತ್ನ ನಡೆಯುತ್ತಿದೆಯಂತೆ. ಯಾಕೆಂದ್ರೆ ಈಗ ಸುಬ್ರಹ್ಮಣ್ಯದಲ್ಲಿ 30% ಜನ ಇರುವುದು ಹಾವೇರಿ ಮೂಲದವರೇ.
ಹಾಗಂತ ಹಾವೇರಿ ಮೂಲದವರು ಮಾತ್ರ ತಪ್ಪು ಮಾಡುವುದು. ಊರಿನವರು ಸರಿ ಎಂದು ನಾನು ಹೇಳುತ್ತಿಲ್ಲ. ವಾರದ ಮಧ್ಯದಲ್ಲಿ 200,300 ರೂ ಗೆ ನೀಡುವ ರೂಂ ಅನ್ನು. ವಾರಾಂತ್ಯದ 2 ರಿಂದ 3 ಸಾವಿರಕ್ಕೆ ನೀಡುವುದು ಕೂಡ ಬಂದ ಭಕ್ತಾದಿಗಳಿಗೆ ಮಾಡುವ ಮೋಸವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಂತಹಾ ಲಾಡ್ಜ್ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಡ ಈಗಾಗಲೇ ಜೋರಾಗಿದೆ.
ಖಡಕ್ ಠಾಣಾಧಿಕಾರಿ ಕಾರ್ತಿಕ್ ಸಾರ್. ಈ ಕೃತ್ಯ ನಡೆಸಿದ ಅಪರಾಧಿ ಪಲಾಯನ ಮಾಡಿದರೂ ಊರವರ ಮೌಖಿಕ ದೂರನ್ನೇ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೃತ್ಯಕ್ಕೆ ಸಂಭಂದಿಸಿದವನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದೀರಿ. ಈ ನಿಮ್ಮ ಸೇವಾ ಕ್ಷಮತೆಯನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ಇದರಿಂದ ಇನ್ನು ಮುಂದೆ ಇಂತಹ ತಪ್ಪು ಮಾಡುವವರಿಗೆ ಎಚ್ಚರಿಕೆಯನ್ನು ನೀಡಿದಂತಾಗಿದೆ.ಹ್ಯಾಟ್ಸಾಫ್ ಯು ಸಾರ್. ಅದೇ ರೀತಿ ಪ್ರಸ್ತುತ ಈಗಲೂ ರೂಂ ಮಾಡುವ ಹುಡುಗರು ವಿತ್ ಔಟ್ ಹೆಲ್ಮೆಟ್. ತ್ರಿಬಲ್ ರೈಡ್. ಹೋಗುವುದು ಸರ್ವೇ ಸಾಮಾನ್ಯ ಆಗಿದೆ. ರಥಬೀದಿಯಲ್ಲಿ ಇರುವ ಸಿ.ಸಿ. ಕ್ಯಾಮರಾ ಆಧರಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ.

ಲಾಸ್ಟ್ ಬಾಲ್
ವಸತಿಗೃಹದ ಮಾಲಕರು ಹಾಗು ಲಾಡ್ಜ್ ಲೀಸ್ ಗೆ ಪಡೆದವರು ಸೇರಿಕೊಂಡು ರೂಂ ಕರೆಯುವ ಹುಡುಗರ ಬಗ್ಗೆ ನಿಗಾ ವಹಿಸಲು. ಹಾಗು ಅವರಿಗೆ ಐಡಿ ಕಾರ್ಡ್ ಯೂನಿಫಾರ್ಮ್ ನೀಡಲು ಯಾವುದೋ ಒಂದು ಸಂಘ ಮಾಡಿದ್ರಲ್ವ…!? ಅದು ಏನಾಯ್ತು ಮಾರ್ರೆ. ಅದು ಹಾವೇರಿಗೆ ಹೋಯ್ತಾ ಹೇಗೆ.!!!?

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

1 thought on “ಸುಬ್ರಹ್ಮಣ್ಯದಲ್ಲಿ ಹಾವೇರಿ ದರ್ಬಾರ್”

  1. ಪ್ರಶಾಂತ

    Super news, ಯಾವುದೇ ಭಯಾಸ್ ಇಲ್ಲದೇ ಬರೆದಿದ್ದೀರಿ. ಅದು ಪವಿತ್ರ ಕ್ಷೇತ್ರ ಅಲ್ಲಿ ಎಲ್ಲವೂ ಪವಿತ್ರವಾಗಿಯೇ ನಡೆಯಬೇಕು. ಜಾಗಕ್ಕೆ ತಕ್ಕಂತೆ ನಮ್ಮ ನಡತೆ ಇರಬೇಕು. ಇದೆಲ್ಲ ಲಂಚ ಕೊಟ್ಟು ನೌಕರಿಹಿಡಿದವರು ತಮ್ಮ ಊರವರಿಗೆ ಮಾಡಿದ ಉಪಕಾರವಾಗಿರಬಹುದು.
    ಅದು ಏನೇ ಇರಲಿ ಕರಾವಳಿ ಜಿಲ್ಲಿಗರು ಸರಕಾರಿ ನೌಕರಿ ಹಿಡಿಯುವ ಕಡೆ ತಲೆ ಹಾಕಬೇಕು. ಬರೀ ಇಂಜಿನೀಯರ್ ಮಾಡ್ಕೊಂಡು ದೂರ ಹೋಗೋದು. ಬೇರೆ ಊರಿನವರು ನಮ್ಮೂರುಗಳಿಗೆ ಬಂದು ಆಡಳಿತ ನಡೆಸೋದು. ನಮ್ಮವರು ಯಾವಾಗ ಬುದ್ದಿ ಕಲಿತಾರೋ….

Leave a Comment

Your email address will not be published. Required fields are marked *

Scroll to Top