ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಒಳ್ಳೇ ಹೆಸರಿದೆ. ಅದರಲ್ಲೂ ಹೆರಿಗೆ ಡಾಕ್ಟರ್ ಒಳ್ಳೇ ಹೆಸರು ಮಾಡಿದ್ದಾರೆ. ಹತ್ತೂರಿಂದ ಜನ ಡಾಕ್ಟರ್ ಬೆಸ್ಟ್ ಅಂತ ಸುಳ್ಯಕ್ಕೆ ಬರುತ್ತಿದ್ದಾರೆ. ಆದರೆ ಇದೀಗ ಡಾಕ್ಟ್ರು ಹದಿನೈದು ದಿನಗಳ ರಜೆ ಮೇಲೆ ಹೋಗಿದ್ದಾರೆ. ಬದಲೀ ವ್ಯವಸ್ಥೆ ಇಲ್ಲ. ಬಡಬಗ್ಗರು ಎಲ್ಲಿಗೆ ಹೋಗಬೇಕು?
ಇವತ್ತು ಗೂನಡ್ಕದ ಒಂದು ಪಾರ್ಟಿ ಗರ್ಭಿಣಿಗೆ ತುಂಬಾ ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದಿದೆ. ಈ ಗರ್ಭಿಣಿಯ ಚೆಕಪ್ ಅದು ಇದು ಎಲ್ಲಾ ಈ ಆಸ್ಪತ್ರೆಯಲ್ಲಿಯೇ ನಡೆದದ್ದು. ಇದೀಗ ಗರ್ಭಿಣಿ ಹೆರಿಗೆಗೆ ಎಂದು ಆಸ್ಪತ್ರೆಗೆ ಬಂದರೆ ಡಾಕ್ಟರ್ ಇಲ್ಲ ಎಂಬ ಉತ್ತರ. ಡಾಕ್ಟರ್ ಹದಿನೈದು ದಿನಗಳ ಕಾಲ ರಜೆ ಮೇಲೆ ಹೋಗಿರುವುದರಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಲ್ಲ. ಏನು ಮಾಡಬೇಕು ಎಂದು ಕೇಳಿದರೆ ಕೆ.ವಿ.ಜಿ ಹೋಗಿ ಎಂಬ ಸಲಹೆ ಸರ್ಕಾರಿ ಆಸ್ಪತ್ರೆಯಲ್ಲಿ ಕೌಂಟರಿನಲ್ಲಿ ಕುಂತವರಿಂದ. ಆದರೆ ಕೆ.ವಿ.ಜಿಯಲ್ಲಿ ಡೆಲಿವರಿ ಚಾರ್ಜ್ ಹದಿನೈದು ಕಳೆಯುತ್ತೆ ಮಾರಾಯ್ರೆ. ಪಾಪ ಕೂಲಿ ಕೆಲಸ ಮಾಡುವವನು, ಬಡವ, ನತದೃಷ್ಟ ಎಲ್ಲಿಂದ ಹದಿನೈದು ತರಲಿ? ಒಂದು ತಾಲೂಕು ಆಸ್ಪತ್ರೆಯಲ್ಲಿಯೇ ಡಾಕ್ಟರ್ ಇಲ್ಲ ಅಂದರೆ ಪರಿಸ್ಥಿತಿ ಐಸಿಯೂನಲ್ಲಿ ಇದೆ ಎಂದೇ ಅರ್ಥ. ಹಾಗಾದರೆ ಒಂದು ತಾಲೂಕಿಗೆ ಒಬ್ಬನೇ ಹೆರಿಗೆ ಡಾಕ್ಟ್ರಾ? ಬೇರೆ ಗತಿ ಇಲ್ವಾ?

