ಹಾಗೆಂದು ಸುಳ್ಯ ಅಮರ ಸುಳ್ಯ ಕ್ರಾಂತಿಯ ಮಣ್ಣು. ಈ ಮಣ್ಣಿಗೆ ಕ್ರಾಂತಿಯ, ವೀರತ್ವದ, ಶೂರತ್ವರ ಗುಣವಿದೆ. ಸುಳ್ಯದ ವೀರರ ಕತೆಗಳಿವೆ,ದಂತಕತೆಗಳಿವೆ. ಸುಳ್ಯ ಅವಿಭಜಿತ ದಕ್ಷಿಣ ಕನ್ನಡದ ಗೌಡ್ರುಗಳ ತವರು ಮತ್ತು ರಾಜಧಾನಿ ಸಹ. ಇಂಥ ಹಿನ್ನೆಲೆಯ ಸುಳ್ಯದಲ್ಲಿ ಈ ಆಧುನಿಕ ಯುಗದಲ್ಲಿ ಕುರುಂಜಿಯ ದೊಡ್ಡ ಗೌಡರು ಇಷ್ಟೊಂದು ದೊಡ್ಡ ವಿದ್ಯಾ ಸಾಮ್ರಾಜ್ಯ ಕಟ್ಟದೆ ಇರುತ್ತಿದ್ದರೆ ಸುಳ್ಯದ ಗೌಡ್ರುಗಳು ದಕ್ಷಿಣ ಕನ್ನಡದಲ್ಲಿ ಹತ್ತರೊಟ್ಟಿಗೆ ಹನ್ನೊಂದು ಆಗುತ್ತಿದ್ದರು ಅಷ್ಟೇ. ಆಧುನಿಕ ಯುಗದಲ್ಲಿ ಈ ಒಂದು ಕುರುಂಜಿ ಸಾಮ್ರಾಜ್ಯ ಇರುವುದು ಸ್ವತಃ ಗೌಡ್ರುಗಳಿಗೆ ಮತ್ತು ದಕ್ಷಿಣ ಕನ್ನಡದ ಗ್ರಾಮಾಂತರ ಜನರಿಗೆ ಹೆಮ್ಮೆಯ ವಿಷಯವಾಗಿದೆ.
ಹಾಗೆಂದು ಕುರುಂಜಿಯ ದೊಡ್ಡ ಗೌಡರಂತಹ ವಿದ್ಯಾ ಶಿಲ್ಪಿ ಕೆವಿಜಿ ಎಂಬ ವಿದ್ಯಾ ಸಾಮ್ರಾಜ್ಯವನ್ನು ಕಟ್ಟಿ ತನ್ನ ನಂತರ ಯಾವಾಗ ತನ್ನ ಇಬ್ಬರು ಗಂಡು ಮಕ್ಕಳಿಗೆ ಜವಾಬ್ದಾರಿ ವಹಿಸಿ ಕೊಟ್ಟರೋ ಆವತ್ತಿನಿಂದ ಕುರುಂಜಿ ಸಾಮ್ರಾಜ್ಯದಲ್ಲಿ ಶಕುನಿಗಳ ಎಂಟ್ರಿ ಆಯ್ತು. ನಂತರ ಶಕುನಿಗಳು ಕುರುಂಜಿ ಸಾಮ್ರಾಜ್ಯಕ್ಕೆ ಯಾವ ರೀತಿ ಮಸಿ ಬಳಿದರು ಎಂಬುದು ಇಡೀ ಊರಿಗೇ ಗೊತ್ತಿದೆ. ದೊಡ್ಡ ಗೌಡರ ನಂತರ ಕುರುಂಜಿ ಬ್ರದರ್ಸ್ ಗಳನ್ನು ಹಾವು ಮುಂಗುಸಿ ಮಾಡಲಾಯಿತು. ಇಬ್ಬರ ನಡುವೆ ಇಡೀ ಜನ್ಮಕ್ಕಾಗುವಷ್ಟು ದ್ವೇಷ ಬಿತ್ತಲಾಯಿತು. ಕಿನ್ನಿ ಗೌಡರ ಮೇಲೆ ಮರ್ಡರ್ ಕೇಸಾಯಿತು. ಹಕ್ಕಿಗಾಗಿ, ಯಜಮಾನಿಕೆಗಾಗಿ ದೊಡ್ಡ ದೊಡ್ಡ ಜಗಳಗಳಾಯಿತು.ಕೊರ್ಟು, ಕಚೇರಿಗಳಿಗೆ ಅಲೆದಾಟ ಆಯಿತು. ಸಣ್ಣ ಗೌಡ್ರನ್ನು ಲಗಾಡಿ ತೆಗೆಯಲು ಕಿನ್ನಿ ಗೌಡ್ರು, ಕಿನ್ನಿ ಗೌಡ್ರನ್ನು ಮುಗಿಸಲು ಸಣ್ಣ ಗೌಡ್ರು ಸಾಗರೋಪಾದಿಯಲ್ಲಿ ದುಡ್ಡು ಖರ್ಚು ಮಾಡಿದರು.ಈಗ ಇಬ್ಬರೂ ಈ ಜರ್ನಿಯಲ್ಲಿ ಸರಿಯೇ ಆಗದಷ್ಟು ವಿರೋಧಿಗಳಾಗಿ ಹೋಗಿದ್ದಾರೆ. ಕುರುಂಜಿ ಸಾಮ್ರಾಜ್ಯದ ಈ ಎಲ್ಲ ಬೀಳುಗಳಲ್ಲಿ ಕುರುಂಜಿ ಸಾಮ್ರಾಜ್ಯದಲ್ಲಿಯೇ ಕೆಲವು ಶಕುನಿ ಗಳು ಶತಾಯಗತಾಯ ಕೆಲಸ ಮಾಡುತ್ತಿದ್ದು ಕುರುಂಜಿ ಸಾಮ್ರಾಜ್ಯದ ಪಿತ್ತಳೆ ಕಿವಿಗಳನ್ನು ಈ ಶಕುನಿಗಳು ಚೆನ್ನಾಗಿಯೇ ಉಪಯೋಗಿಸುತ್ತಿದ್ದಾರೆ.
ಹಾಗೆಂದು ಕುರುಂಜಿ ಸಾಮ್ರಾಜ್ಯದ ಸಣ್ಣ ಗೌಡ್ರು ಸಾತ್ವಿಕ ಒಳ್ಳೇ ಮನುಷ್ಯ. ಆದರೆ ಶಕುನಿಗಳು ಇವರ ಕಿವಿ ತಿಂದು ಕಿನ್ನಿ ಗೌಡರ ಮೇಲೆ ಮಾರಣ ಪಗೆ ಉಂಟಾಗುವ ಹಾಗೆ ನೋಡಿಕೊಂಡರು. ಇನ್ನು ಕಿನ್ನಿ ಗೌಡ್ರು ಕುರುಂಜಿ ಸಾಮ್ರಾಜ್ಯದ ಅರ್ಜುನ ಇದ್ದ ಹಾಗೆ ಮತ್ತು ಇಂಡಿಯನ್ ಟೀಮಿನ ಕೊಹ್ಲಿ ಇದ್ದ ಹಾಗೆ. ಕಿನ್ನಿ ಗೌಡ್ರು ಬೆಂಕಿ ಬಿರುಗಾಳಿ ಆದರೆ ಸಣ್ಣ ಗೌಡ್ರು ಶಾಂತ ಸಮುದ್ರ. ಸುಳ್ಯಕ್ಕೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ತರುವಲ್ಲಿ ಕಿನ್ನಿ ಗೌಡರ ಪಾತ್ರ ಹಿರಿದು. ಸಣ್ಣ ಗೌಡರಿಗೆ ಕಿನ್ನಿ ಗೌಡರ ಬಗ್ಗೆ ಹೃದಯದಲ್ಲಿ “ಒಬ್ಬನೇ ತಮ್ಮ ಪಾಪ” ಎಂಬ ಭಾವನೆ ಇದ್ದರೂ, ರಕ್ತ ಸಂಬಂಧ ಚುಚ್ಚುತ್ತಿದ್ದರೂ ಸಣ್ಣ ಗೌಡ್ರ ಆಸ್ಥಾನದಲ್ಲಿ ಶಕುನಿಗಳಾಗಿರುವ ಜಗ್ಗ, ಬೋರ್ಮಂಡೆ ಮತ್ತು ರಮ್ಮುಕಿಷ್ಣ ಸಣ್ಣ ಗೌಡರ ಭಾವನೆಗಳನ್ನು ಡೈವರ್ಟ್ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲಿಯಾದರೂ ಕುರುಂಜಿ ಸಾಮ್ರಾಜ್ಯದಲ್ಲಿ ಅಣ್ತಮ್ಮ ಒಂದಾದರೆ ಆರ್.ಪಿ ಮುಂದೆ ತಮ್ಮ ಟಿಆರ್ಪಿ ಏರಲ್ಲ ಎಂಬುದು ಶಕುನಿಗಳಿಗೆ ಗ್ಯಾರಂಟಿ ಇದೆ. ಹಾಗಾಗಿ ಅಣ್ತಮ್ಮ ಇಬ್ಬರಿಗೂ ಸ್ಲೋ ಪಾಯಿಸನ್ ಕೊಡುತ್ತಾ ಇದ್ದಾರೆ.
ಇನ್ನು ಕಿನ್ನಿ ಗೌಡರ ಟೀಮಿನಲ್ಲಿ ಉಜಾಲ ಹುಡುಗನ ಬೇರು ಆಳಕ್ಕೆ ಇಳಿದಾಗಿದೆ. ಕಿನ್ನಿ ಗೌಡರ ರೈಟ್ ಹ್ಯಾಂಡಾಗಿರುವ ಈ ಉಜಾಲನನ್ನು ನುಂಗಲೂ ಆಗದ, ಉಗುಳಲೂ ಆಗದ ಪರಿಸ್ಥಿತಿ ಕಿನ್ನಿ ಗೌಡರಲ್ಲಿದೆ.ಒಂದು ವೇಳೆ ಕಿನ್ನಿ ಗೌಡ್ರು ಅಣ್ಣನೊಂದಿಗೆ ರಾಜಿಯಾದರೆ ನಂತರದ ಟೀಮಲ್ಲಿ ತನಗೆ ಚಾನ್ಸ್ ಸಿಗದು ಎಂಬುದು ಉಜಾಲನ ಆಲೋಚನೆ. ಅದಕ್ಕೆ ಕಿನ್ನಿ ಗೌಡರ ತಲೆ ತಿಂದು, ಕಿವಿ ತಿಂದು ಸಣ್ಣ ಗೌಡ್ರ ಕಡೆ ಅಗ್ನಿ, ಬ್ರಹ್ಮೋಸ್ ಹಾರಿಸುವಲ್ಲಿ ಇಲ್ಲಿತನಕ ಸಫಲನಾಗಿದ್ದಾನೆ.
ಇನ್ನು ಸಣ್ಣ ಗೌಡ್ರ ಆಸ್ಥಾನದಲ್ಲಿ ಇರುವ ದೊಡ್ಡ ಶಕುನಿ ಅಂದರೆ ಅದು ಒಬ್ಬ ಆಂಧ್ರಗಾರು. ಇವನಿಗೆ ಇಡೀ ಕುರುಂಜಿ ಸಾಮ್ರಾಜ್ಯದಲ್ಲಿ ಹೆದರಿಕೆ ಅಂತ ಇದ್ದರೆ ಅದು ಕಿನ್ನಿ ಗೌಡರದ್ದು ಮಾತ್ರ. ಅವರು ಬಂದರೆ ಇವನಿಗೆ ಡೈಪರ್ ಹಾಕುವಷ್ಟು ಹೆದರಿಕೆ. ಅದಕ್ಕೆ ಅಣ್ತಮ್ಮ ಸರಿ ಆಗದಿರಲು ಇವನೂ ತನ್ನ ಅಳಿಲ ಸೇವೆ ಮಾಡುತ್ತಾ ಇದ್ದಾನೆ. ಈತ ಮೆಡಿಕಲ್ ಕಾಲೇಜನ್ನು ಒಂದು ಸೈಡಿಂದ ಸೈಲೆಂಟಾಗಿ ಕರಡಿ ಸ್ಟೈಲಲ್ಲಿ ನೆಕ್ಕುತ್ತಾ ನೆಕ್ಕುತ್ತಾ ಬರುತ್ತಿದ್ದು ಸಣ್ಣ ಗೌಡ್ರ ಟೀಮಿನ ಕೆಲವು ವೀಕ್ ವೀಕ್ನೆಸ್ ಗಳನ್ನು ಹಿಡ್ಕೊಂಡು ಆಂಧ್ರಾ ಶೈಲಿಯಲ್ಲಿ ಕೆಲವೊಂದು ಸೀಕ್ರೆಟ್ ಆಟಗಳನ್ನೂ ಆಡುತ್ತಿರುವ ಮಾಹಿತಿ ಇದೆ. ಈ ಆಂಧ್ರಗಾರು ಹೀಗೆ ಬೆಳೆದರೆ ಸುಳ್ಯಕ್ಕೆ ರಾಯಲ ಸೀಮೆಯನ್ನು ತರುವಲ್ಲಿ ಸಂಶಯವೇ ಇಲ್ಲ. ಇನ್ನು ಆ ರಮ್ಯಕೃಷ್ಣ ಒಬ್ಬ ಸಾಮಾನ್ಯ ಗುಮಾಸ್ತ ಆದರೂ ಕೋಟಿ ಕೋಟಿ ಬೇಕು ತಕ್ಕಡಿಯಲ್ಲಿ ಹಾಕಲು. ಇವರೆಲ್ಲ ಸೇರಿಕ್ಕೊಂಡು ಇಡೀ ಕುರುಂಜಿ ಸಾಮ್ರಾಜ್ಯಕ್ಕೆ ಕನ್ನ ಹಾಕುತ್ತಿದ್ದಾರೆ. ತಮ್ಮ ಸುತ್ತಾ ಮೀರ್ ಸಾದಿಕ್, ಮೀರ್ ಜಾಫರ್ ಗಳೂ ಇದ್ದರೂ ಇದೆಲ್ಲ ಅಣ್ತಮ್ಮರಿಗೆ ಗೊತ್ತೇ ಆಗಲ್ಲ. ಇಂತವರ ಕ್ರಿಮಿನಲ್ ಸಲಹೆ ಸೂಚನೆಗಳಿಂದಾಗಿಯೇ ಕುರುಂಜಿ ಸಾಮ್ರಾಜ್ಯಕ್ಕೆ ಮರ್ಡರ್ ಕೇಸಿನ ಅಪವಾದವೂ ಅಂಟಿಕೊಂಡಿತು.
ಹಾಗೆಂದು ಅಣ್ತಮ್ಮರಿಗೆ ವಯಸ್ಸಾಗಿ ವಾಪಾಸ್ ತಿರುಗುವ ಸಮಯವೂ ಆಗಿದೆ. ಪಪ್ಪ ಕಟ್ಟಿದ ಸಾಮ್ರಾಜ್ಯವನ್ನು ಉಳಿಸಿದ್ದಾರೆ, ಆದರೆ ಬೆಳೆಸಲಾಗಲಿಲ್ಲ.ಸಾಮ್ರಾಜ್ಯ ಇದ್ದಲ್ಲೇ ಇದೆ. ದೊಡ್ಡ ಗೌಡರ ನಂತರ ಎರಡೂ ಟೀಮುಗಳೂ ದ್ವೇಷ ಸಾಧನೆಗಾಗಿ ಟೈಮ್ ವೇಸ್ಟ್ ಮಾಡಿದ್ದು ಬಿಟ್ಟರೆ ಸಾಮ್ರಾಜ್ಯವನ್ನು ಬೆಳೆಸುವಲ್ಲಿ ಚಿಕ್ಕ ಪ್ರಯತ್ನ ಕೂಡ ಮಾಡಿಲ್ಲ. ಇನ್ನು ಜಗಳ ಸಾಕು. ಇನ್ನು ಉಳಿದಿರುವುದು ಕೆಲವೇ ಕೆಲವು ದಿನಗಳು ಮಾತ್ರ. ವಿದ್ಯಾ ಸಾಮ್ರಾಜ್ಯ ಕಟ್ಟುವಾಗ ಮತ್ತು ಅದನ್ನು ಬಿಟ್ಟು ಹೋಗುವಾಗ ದೊಡ್ಡ ಗೌಡರ ಮನಸ್ಸಿನಲ್ಲಿ ಏನು ಆಶೆ ಇತ್ತೋ ಅದನ್ನು ಇಬ್ಬರೂ ಪುತ್ರ ರತ್ನಗಳು ಈಡೇರಿಸಬೇಕಾಗಿದೆ ಮತ್ತು ಆ ಸಮಯ ಈಗ ಬಂದಿದೆ. ದೊಡ್ಡ ಗೌಡರು ಸಾಮ್ರಾಜ್ಯ ಕಟ್ಟಿದ್ದು ಕೇವಲ ಸಣ್ಣ ಗೌಡರಿಗೆ ಮಾತ್ರ, ಕಿನ್ನಿ ಗೌಡರಿಗೆ ಮಾತ್ರ ಅಂತ ಅಲ್ಲ. ಅದು ತನ್ನ ಕುರುಂಜಿ ಫ್ಯಾಮಿಲಿಗೂ ಮತ್ತು ಇಡೀ ಸಮಾಜಕ್ಕೂ ಉಪಕಾರಿಯಾಗಿರಲಿ ಎಂಬ ಸಾಮಾಜಿಕ ಕಳಕಳಿಯಿಂದಲೂ ಕಟ್ಟಿದ ಸಾಮ್ರಾಜ್ಯವಾಗಿದೆ. ಇದೀಗ ಈ ಸಾಮ್ರಾಜ್ಯದ ದೊರೆಗಳೇ ಬಡಿದಾಡಿಕೊಂಡರೆ ಸಾಮ್ರಾಜ್ಯದ ಗತಿ ಏನು. ಪೈಲೆಟ್ ಗಳೇ ಜಗಳ ಮಾಡಿಕೊಂಡರೇ ವಿಮಾನ ಲ್ಯಾಂಡಿಂಗ್ ಮಾಡೋದು ಯಾರು? ಇವರಿಬ್ಬರ ಜಗಳದಿಂದಲೇ ಚಿಲ್ಲರೆ ಜನಗಳೆಲ್ಲ ಸಾಮ್ರಾಜ್ಯವನ್ನು ದೋಚಿ ದೋಚಿ, ಸಾಮ್ರಾಜ್ಯದಿಂದ ಬಾಚಿ ಬಾಚಿ ಕೋಟಿಗಳಾಗುತ್ತಿದ್ದಾರೆ. ಕೆವಿಜಿ ಎಂಬ ಟೈಟಾನಿಕ್ ಗೆ ಶಕುನಿಗಳೆಲ್ಲ ಅಕ್ರಮ ಕೂಟ ಸೇರಿ ತೂತು ಕೊರೆದಿದ್ದಾರೆ. ನೀರು ಇಡೀ ಹಡಗಿಗೆ ಆವರಿಸುವ ಮುನ್ನ ಅಣ್ತಮ್ಮ ಎಲ್ಲಾ ದ್ವೇಷ ಮರೆತು ಒಂದಾಗಲೇ ಬೇಕಾಗಿದೆ. ಅವರಿಬ್ಬರೂ ತಮ್ಮ ಈ ಜರ್ನಿಯಲ್ಲೇ ದೊಡ್ಡ ಗೌಡರ ಆಶೆ ಈಡೇರಿಸಲೇ ಬೇಕಾಗಿದೆ. ಯಾಕೆಂದರೆ ಅವರಿಬ್ಬರ ಬೋಯಿಂಗ್ ಏರ್ ಪೋರ್ಟ್ ಮೇಲೆಯೇ ಸುತ್ತಾಡುತ್ತಾ ಇದೆ. ಸಿಗ್ನಲ್ ಬಂದ ಕೂಡಲೇ ಲ್ಯಾಂಡಿಂಗ್ ಆಗಲೇ ಬೇಕು. ಜಾಸ್ತಿ ಟೈಮಿಲ್ಲ.
ಕೊನೆಯದಾಗಿ, ಜೀವನ ಎಂಬ ಟ್ವೆಂಟಿ ಟ್ವೆಂಟಿಯಲ್ಲಿ ದೊಡ್ಡ ಗೌಡರು ಪೇರಿಸಿದ ಟೋಟಲ್ ನಲ್ಲೇ ಅಣ್ತಮ್ಮ ಹದಿನೈದು ಓವರ್ ತನಕ ಬಂದಿದ್ದಾರೆ. ಇನ್ನು ಉಳಿದಿರುವುದು ಐದೇ ಓವರ್. ಈಗ ಹೊಡೆಯುವ ಸಮಯ.ಇಬ್ಬರೂ ಮೂಲೆ ಮೂಲೆಗೂ ಹೊಡೆಯಲೇ ಬೇಕು.ಅದು ಬಿಟ್ಟು ಒಬ್ಬರನ್ನು ಒಬ್ಬರು ರನೌಟ್ ಮಾಡಲು ನೋಡಿದರೆ ಕೆವಿಜಿ ಟೀಮ್ ಸುಲಭದಲ್ಲೇ ಸೋಲುವ ಅಪಾಯಗಳಿವೆ. ಚಿಲ್ಲರೆಗಳ ಎದುರು ಕೆವಿಜಿ ಟೀಮ್ ಸೋಲಬಾರದು ಎಂಬುದು ಸಮಸ್ತ ಗೌಡ ಸಮುದಾಯದ ಮತ್ತು ಸುಳ್ಯ ಜನತೆಯ ಆಶಯವಾಗಿದೆ. ಅಣ್ತಮ್ಮ ಕುಂತು ಯೋಚಿಸಲಿ.







1 thought on “ಸುಳ್ಯ ಕುರುಂಜಿ ಸಾಮ್ರಾಜ್ಯದಲ್ಲಿ ಶಕುನಿಗಳು”
Very true, perfectly explained,
Why don’t some seniors sit and try to discuss this with both the brothers