ಮೊನ್ನೆ ತಾನೇ ದೇವಚಲ್ಲ ಗ್ರಾಂ ಪಂಚಾಯ್ತಿ ಅಧ್ಯಕ್ಷ ಸ್ಥಳೀಯ ಸಂಘದ ಸದಸ್ಯೆಯೊಬ್ಬಳ ಯಾವುದೋ ಫ್ಯಾಮಿಲಿ ಮ್ಯಾಟರನ್ನು ಮುಗಿಸುವುದಾಗಿ ಮನೆಗೆ ಬರಲು ಹೇಳಿ ಅಲ್ಲಿ ಅವಳ ಮೈನ್ ಸ್ವಿಚ್ ಗೆ ಕೈ ಹಾಕಲು ಹೋಗಿ ಸಿಕ್ಕಿ ಬಿದ್ದು, ಕೇಸಾಗಿ ಅಟ್ಟದಲ್ಲಿ ಅಡಗಿದ್ದ. ಇದೀಗ ಶೈಲೂಗೆ ಜಾಮೀನಾಗಿದ್ದು ಜೊತೆ ಜೊತೆಗೆ ಆ ದಿನ ನಡೆದ ಸಮಾರಂಭದ ಆಡಿಯೋ ವೀಡಿಯೋ ಕೂಡ ರಿಲೀಸ್ ಆಗಿ ವೈರಲ್ ಆಗಿದೆ ಎಂದು ತಿಳಿದುಬಂದಿದೆ.
ವೈರಲ್ ಆದ ವಿಡೀಯೋದಲ್ಲಿ ಆರೋಪಿ ಶೈಲೂ ಸದಸ್ಯೆಯನ್ನು ಉಪಾಯವಾಗಿ ಮನೆಗೆ ಕರೆತಂದು, ತಾನು ಪ್ಯಾಂಟ್ ಶರ್ಟ್ ಕಳಚಿ, ಕೇವಲ ಕಂಬಯಿ ಮಾತ್ರ ಸುತ್ತಿಕೊಂಡಿದ್ದು ಪವರ್ ಪ್ಲೇಗೆ ರೆಡಿಯಾಗಿದ್ದ. ಎಲ್ಲಿಯಾದರೂ ಸದಸ್ಯೆ ವಿರೋಧಿಸದೆ ಇರುತ್ತಿದ್ದರೆ ಪವರ್ ಪ್ಲೇಯಲ್ಲೇ ಶೈಲೂ ನೂರು ನೂರು ಮಾಡುತ್ತಿದ್ದ. ನಂತರ ಗಲಾಟೆ ನಡೆದು, ಕೇಸಾಗಿ,ಆವತ್ತು ಅಟ್ಟ ಹತ್ತಿದವನು ಇಳಿದಿದ್ದು ಜಾಮೀನು ಸಿಕ್ಕಮೇಲೆಯೇ. ಇನ್ನು ಸ್ಟೇಷನ್, ಕೋರ್ಟ್ ಅದು ಇದು. ನಡುವೆ ಯುದ್ದ ವಿರಾಮದ ಬಗ್ಗೆ ಮಾತುಕತೆ ಕೂಡ ನಡೆಯ ಬಹುದು.
ಹಾಗೆಂದು ಈ ವಿಡಿಯೋ ಮಾತ್ರ ಅಲ್ಲದೆ, ಶೈಲೂ ಧಮ್ಮಯ್ಯ ದಕ್ಕಯ್ಯ ಹಾಕುವ ವಿಡಿಯೋ, ಸಾಷ್ಟಾಂಗ ಮಾಡುವ ವೀಡಿಯೋ, ಕೈಮುಗಿಯುವ ವೀಡಿಯೋ ಕೂಡ ಇದ್ದು ಅದಕ್ಕೆ ಹಿನ್ನೆಲೆ ಸಂಗೀತ ಹಾಕಲು ಖ್ಯಾತ ಸಂಗೀತ ನಿರ್ದೇಶಕನ ಬಳಿ ಕಳಿಸಲಾಗಿದೆ ಎಂದು ಸುದ್ದಿ ಬಂದಿದೆ. ಆ ವಿಡಿಯೋ ಕೂಡ ರಿಲೀಸ್ ಆದರೆ ದರ್ಶನನ ಡೆವಿಲ್ ರಿಲೀಸ್ ಸ್ವಲ್ಪ ಲೇಟ್ ಆಗಬಹುದು.






