ಪಂಜ: ಕಾಚು ಕುಜುಂಬನಿಗೆ ಹೊಸ ದೈವಸ್ಥಾನ

Pattler News

Bureau Report

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈ ಬಂಟ ಕಾಚುಕುಜುಂಬ ದೈವದ ಮೂಲಸ್ಥಾನ ಗರಡಿ ಬೈಲು ಎಂಬಲ್ಲಿ ನಿರ್ಮಾಣವಾಗುವ ಶ್ರೀ ಕಾಚು ಕುಚುಂಬ ದೈವದ ನೂತನ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದದ್ದು ಜೂ.29 ರಂದು ಅಡಿಪಾಯಕ್ಕೆ ಕಾಂಕ್ರಿಟೀಕರಣ ಶ್ರಮದಾನ ಮೂಲಕ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪರಮೇಶ್ವರ ಬಿಳಿಮಲೆ, ಉಪಾಧ್ಯಕ್ಷ ಉಮೇಶ್ ಬುಡೆಂಗಿ,ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ,ಪಂಬೆತ್ತಾಡಿ ಚಿಗುರು ಗೆಳೆಯರ ಬಳಗದ ಅಧ್ಯಕ್ಷ ಅಶ್ವಥ್ ಬಾಬ್ಲಬೆಟ್ಟು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ್ ರೈ ಪಲ್ಲತ್ತಡ್ಕ,, ಧರ್ಮಣ್ಣ ನಾಯ್ಕ ಗರಡಿ, ಶ್ರೀಮತಿ ಪವಿತ್ರ ಮಲ್ಲೆಟ್ಟಿ, ಶ್ರೀಮತಿ ಮಾಲಿನಿ ಕುದ್ವ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ರಾಜೇಶ್ ಕುದ್ವ, ಚಿಗುರು ಗೆಳೆಯರ ಬಳಗದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.


ಸುಳ್ಯ: ಮದುವೆ ಆಗುತ್ತೇನೆ ಎಂದು ಬೋಳಿಸಿ ಹುಚ್ಚು ಹುಡುಗರಿಗೆ ವಂಚನೆ!

“ನಿನ್ನನ್ನೇ ಮದುವೆ ಆಗುತ್ತೇನೆ, ಏಳೇಳು ಜನ್ಮದಲ್ಲೂ ನಾನು ನಿನ್ನ ನೆರಳಾಗಿರುತ್ತೇನೆ” ಎಂದು ಹತ್ತು ಹಲವು ಹುಚ್ಚು ಹುಡುಗರನ್ನು ನಂಬಿಸಿ, ಅವರನ್ನು ಚೆನ್ನಾಗಿ ಬೋಳಿಸಿ, ತೊಳೆದು, ತಿಕ್ಕಿ ತೀಡಿ ಅವರ ಕಿಸೆ ಖಾಲಿಯಾದಾಗ “ಜಾತಕ ಸರಿ ಬರಲ್ಲ” ಎಂದು ಪಿಳ್ಳೆ ನೆವ ಹೇಳಿ ಇನ್ನೊಬ್ಬನ ಬೈಕು, ಕಾರು ಹತ್ತುವ ಇಬ್ಬರು ಐಶೂಗಳ ವಂಚನೆಯ ಕತೆ ಸುಳ್ಯ ಕೈತಲ್ ನಡೆದಿದೆ. ಜೊತೆಗೆ ಪೋಲಿಸ್ತಕುಲು, ಬಲಿಮ್ಮೆಯವರು, ಪ್ರಶ್ನೆ ಚಿಂತನೆಯವರು, ಮಂತ್ರವಾದಿಗಳು ಇತ್ಯಾದಿ.
ಇದು ಸುಳ್ಯ ತಾಲೂಕಿನ ಜಾಲ್ಸೂರು-ಸೋಣಂಗೇರಿ ನಡುವಿನ ಕುಕ್ಕಂದೂರಿನ ಕತೆ. ಇಲ್ಲಿ ಮೋಸದ ಪ್ರೇಮಕತೆಗಳ ಕಂತೆ ಕಂತೆಯೇ ಇದೆ. ಇಲ್ಲಿನ ಒಬ್ಬಳು ಆಂಟಿ ಮತ್ತು ಅವಳ ಇಬ್ಬರು ಹೆಣ್ಣು ಮಕ್ಕಳು ಕೆಲವು ಹುಚ್ಚು ಹುಡುಗರನ್ನು ಮಂಗ ಮಾಡಿ ದುಡ್ಡು ಮಾಡುವ ಪುಣ್ಯ ಕಾರ್ಯಕ್ಕೆ ಇಳಿದು ತುಂಬಾ ದಿನಗಳೇ ಸಂದಿದೆ .ಸುಳ್ಳದ ಅಷ್ಟೂ ಪಡ್ಡೆಗಳ ಹಿಟ್ ಲಿಸ್ಟ್ ನಲ್ಲಿ ಇವರ ಹೆಸರು ರೆಡ್ ಲೈಟ್ ತೋರಿಸಿದ ಕಾರಣ ಇಬ್ಬರೂ ಐಶೂಗಳು ವೈವಾಟ್ ವಿಸ್ತರಣೆಗೆ ಜಿಲ್ಲಾ ಕೇಂದ್ರಕ್ಕೆ ರವಾನೆಯಾಗಿದ್ದಾರೆ. ಸುಳ್ಯದ ಮಟ್ಟಿಗೆ ಇವರಿಬ್ಬರ ಸಿಬಿಲ್ ಸ್ಕೋರ್ ಪಾತಾಳಕ್ಕೆ ಇಳಿದಿದೆ.
ಹಾಗೆಂದು ಕುಕ್ಕುಂದೂರಿನ ಈ ವೈವಾಟ್ ವಸಂತಿಗಳಲ್ಲಿ ದೊಡ್ಡವಳು ಮೊದಲೇ ಮಂಗಳೂರಿನಲ್ಲಿ ಕೆಲಸದಲ್ಲಿದ್ದಳು. ಆಡಿಯೋ, ವೀಡಿಯೋ ಕಾಲ್ ಮಾಡಿಯೇ ಹುಡುಗರನ್ನು ಮಂಗ ಮಾಡುತ್ತಿದ್ದ ಈಕೆ ಪಿಯುಸಿಯಲ್ಲಿ ಇರುವಾಗಲೇ ಸಂಬಂಧಿ ಒಬ್ಬನನ್ನು ಬೊರಿಯಲು ಶುರು ಮಾಡಿದ್ದಳು.ಈ ವಿಷಯ ತಾಯಿಗೆ ಗೊಂತಾಗಿ ಅವಳು ಪೊಕ್ಕಡೆ ಜ್ಯೋತಿಷಿಗೆ ಗಾಳಿ ಹಾಕಿ ಸಂಬಂಧ ರಿಜೆಕ್ಟ್ ಮಾಡಿಸಿದ್ದಳು. ನಂತರ ಬಸ್ ಡ್ರೈವರ್ ಒಬ್ಬನ ಜೊತೆ Instragramನಲ್ಲಿ ಕಾಣಿಸಿಕೊಂಡ ಈಕೆಯ ಡ್ರೈವರ್ ಭೂತವನ್ನು ಪಂಜದ ಅಂಡಿಗುಂಡಿ ಜ್ಯೋತಿಷಿಯೊಬ್ಬ ಮಂತ್ರ ಮಾಡಿ ಬಿಡಿಸಿದ್ದ. ನಂತರ ಮಡಿಕೇರಿ ಸಿಪಾಯಿಯೊಬ್ಬನನ್ನು ಹಿಡಿದುಕೊಂಡ ಹುಡುಗಿ ನಾಲ್ಕು ವರ್ಷಗಳ ಕಾಲ ಅವನೊಂದಿಗೆ ಐನೂರು ಫೀಟ್ ಡೀಪ್ ಲವ್ವಿಗೆ ಹೋಗಿ, ಅವನನ್ನು ಬೊರಿದು, ಬೋಳಿಸಿ ಗುಂಡಾಂತರ ತೆಗೆದು ಫೈನಲ್ಸ್ ಗೆ ಆಗುವಾಗ “ನನ್ನ ಮನೆಯಲ್ಲಿ ಒಪ್ಪುವುದಿಲ್ಲ, ನಮ್ಮ ರಾಶಿ, ನಕ್ಷತ್ರ ಟ್ಯಾಲಿ ಆಗಲ್ಲ” ಎಂದು ಸಿಪಾಯಿಗೆ ಕೈಕೊಡಲು ನೋಡಿದ್ದಳು. ಆದರೆ ಬೋಳಿಸಿಕೊಂಡಿದ್ದ ಹುಡುಗ ಬಿಡದೆ ಇದ್ದಾಗ ಪುನಃ ಅದೇ ಪಂಜದ ಪೊಕ್ಕಡೆ ಜ್ಯೋತಿಷ್ಯ ಹುಡುಗಿ ಮನೆಯಲ್ಲಿ ವಾಮಾಚಾರದ ಪೂಜೆ ಮಾಡಿ ಪೂಜೆಗೆ ಇಟ್ಟಿದ್ದ ಸೀರೆಯನ್ನು ನದಿಯಲ್ಲಿ ಬಿಟ್ಟು ಹುಡುಗನನ್ನು ಲಗಾಡಿ ತೆಗೆಯಲು ಟ್ರೈ ಮಾಡಲಾಗಿತ್ತು. ಹುಚ್ಚು ಹುಡುಗ ಬದುಕಿ ಬಿಟ್ಟ.
ಹಾಗೆ ಪಂಜದ ಪೊಕ್ಕಡೆ ಜ್ಯೋತಿಷ್ಯ ನದಿಯಲ್ಲಿ ಸೀರೆ ಬಿಟ್ಟರೂ ಮಡಿಕೇರಿ ಹುಡುಗ ಕುಕ್ಕಂದೂರು ಹುಡುಗಿಯನ್ನು ಬಿಡಲಿಲ್ಲ. ನಂತರ ಹುಡುಗನನ್ನು ಮತ್ತೇ ದೂರ ಮಾಡಲು ಕಲ್ಲಡ್ಕ ಸಮೀಪದ ಪರ್ವತವೊಂದರಲ್ಲಿ ಸ್ಥಾಪನೆಯಾಗಿದ್ದ ಲೇಡಿ ಸೂಪರ್ ಸ್ಟಾರ್ ಜ್ಯೋತಿಷಿಯೊಬ್ಬಳನ್ನು ಕರೆದು ಮನೆಯಲ್ಲಿ ವಾಮಾಚಾರ ನಡೆಸಲಾಯಿತು. ಆದರೆ ರಿಸಲ್ಟ್ ಬರಲಿಲ್ಲ. ಇತ್ತ ಹುಡುಗಿಗಾಗಿ ಖರ್ಚು ಮಾಡಿದ್ದ ಹುಡುಗನಿಗೆ ವಿಷಯವೆಲ್ಲ ತಿಳಿದು ಅವನು ದೊಡ್ಡ ರಾದ್ದಾಂತ ಮಾಡಿ ಬಿಟ್ಟ, ಗಲಾಟೆ ಮಾಡಿ ಬಿಟ್ಟ. ಆಗ ಗಲಾಟೆಯಲ್ಲಿ ಎಂಟ್ರಿ ಕೊಟ್ಟ ಕುಕ್ಕಂದೂರಿನ ಪೋಲಿಸನೊಬ್ಬ ಆಂಟಿ ತಲೆ ತಿಂದು ಸುಳ್ಯ ಪೋಲಿಸರನ್ನು ನಾನು ಸೆಟ್ ಮಾಡಿಕೊಡುತ್ತೇನೆ ಎಂದು ಹತ್ತು ಸಾವಿರ ತಗೊಂಡು ಹುಡುಗಿ ಕಡೆಯಿಂದ ಹುಡುಗನ ಮೇಲೆ ಸುಳ್ಯ ಠಾಣೆಯಲ್ಲಿ ಒಂದು ಸುಳ್ಳು ಕಂಪ್ಲೈಂಟ್ ಕೊಡಿಸಿದ್ದ. ನಂತರ ಪೋಲಿಸರು ಹುಡುಗನ ಕೈಯಲ್ಲಿ ಒಂದು ಮುಚ್ಚಳಿಕೆ ಬರೆಸಿ ಕಳಿಸಿ ಕೊಟ್ಟಿದ್ದರು. ಇದು ಸಾಲದು ಎಂಬಂತೆ ಮಂಗಳೂರು ಮಹಿಳಾ ಠಾಣೆಯೊಂದರಲ್ಲೂ ಹುಡುಗನ ಮೇಲೆ ಮತ್ತೊಂದು ಸುಳ್ಳು ಕಂಪ್ಲೈಂಟ್ ಕೊಡಿಸಿ ಒಳಗೆ ಹಾಕಿಸಲು ನೋಡಲಾಯಿತು. ಇದೀಗ ಆಂಟಿ ದೊಡ್ಡ ಮಗಳು ಕೊರಗ್ಗಜ್ಜನ ಹೆಸರಲ್ಲಿ ಹುಡುಗರನ್ನು ಹೆದರಿಸುತ್ತಿದ್ದು, ನನ್ನ ವಿಷಯಕ್ಕೆ ಬಂದರೆ ಕೊರಗ್ಗಜ್ಜನಿಗೆ ಹರಿಕೆ ಹೊರುತ್ತೇನೆ ಎಂದು ಹೇಳುತ್ತಿದ್ದಾಳೆ. ಹುಡುಗರನ್ನು ಬೋಳಿಸುವಾಗ, ಬೊರಿಯುವಾಗ ಇಲ್ಲದ ಭೂತಗಳು, ಮಂತ್ರವಾದಿಗಳು, ಜ್ಯೋತಿಷ್ಯಗಳು ಹುಡುಗನ ಕಿಸೆ ಖಾಲಿಯಾದ ಕೂಡಲೇ ಧುತ್ತೆಂದು ಹಾಜರಾಗಿ ಬಿಡುತ್ತದೆ.
ಇಲ್ಲಿವರೆಗೆ ದೊಡ್ಡ ಮಗಳ ಕತೆಯಾದರೆ ಚಿಕ್ಕ ಮಗಳ ಕತೆ ಕೂಡ ಸೇಮ್. ಫೋಟೋಗ್ರಾಫರ್ ಗಳನ್ನ ಕರೆಸಿ ಫೋಟೋ ಶೂಟ್ ನಡೆಸಿ ಅದನ್ನು Instagramನಲ್ಲಿ ಹಾಕಿ ದೊಡ್ಡ ದೊಡ್ಡ ಐಶಾರಾಮಿ ಹುಡುಗರನ್ನು ಮಂಗ ಮಾಡುವ ಕೆಲಸ ಮಾಡುತ್ತಾಳೆ ಎಂಬ ದೂರಿದೆ. ಸುಳ್ಯದ ಬಟ್ಟೆ ಅಂಗಡಿ ಒಂದರಲ್ಲಿ ಇವಳು ಮಾಡಿದ ದೊಡ್ಡ ಕೆಲಸ ಶ್ಲಾಘನೀಯವಾದುದು. ಸುಳ್ಯದ ಚಿನ್ನದ ಅಂಗಡಿಯ ಹುಡುಗನೊಬ್ಬನನ್ನು ಬೆಳ್ಳಿಯ ಅಂಗಡಿ ಇಡುವ ತನಕ ಬೊರಿದು, ನಂತರ ಖರ್ಚು ವೆಚ್ಚ ವಾಪಾಸ್ ಕೇಳುವಾಗ ಪೋಲಿಸ್ ಕಂಪ್ಲೈಂಟ್ ಹೆಸರಲ್ಲಿ ಅವನ ಬಾಯಿ ಮುಚ್ಚಿಸಲಾಗಿತ್ತು. ನಂತರ ಕುಕ್ಕುಜಡ್ಕದ ಹುಡುಗನೊಬ್ಬ ಇವಳಿಗೆ ಒಂದು ಹೊಸ ಸ್ಕೂಟರ್ ಕೊಟ್ಟು, ಮನೆಗೆ ಬೇಕಾದ ಫರ್ನಿಚರ್ ಮಾಡಿಸಿ, ಡ್ರೆಸ್, ಚೂಡಿ, ಮೆಟ್ಟು, ಫ್ಯಾನ್ಸಿ ಐಟಂ ಕೊಟ್ಟು ಮದುವೆ ಎಂದು ಕೇಳಿದರೆ ಜಾತಕ ಸರಿ ಬರಲ್ಲ, ಗಂಡ ಸಾಯುವ ಯೋಗ, ಗಂಟ ಉಳಿಯುವ ಯೋಗ ಇದೆ ಎಂದು ಆ ಹುಡುಗನಿಗೂ ನಾಮ ಹಾಕಿದ್ದರು. ಖರ್ಚು ವೆಚ್ಚ ಕೇಳಿದರೆ ಪುನಃ ಅದೇ ಸುಳ್ಯ ಪೋಲಿಸರ ಆಯುಧ. ನಂತರ ಸ್ವಲ್ಪ ಸಮಯ ಸುಳ್ಯದ ನಾಟಕದವನೊಬ್ಬನ ಜೊತೆ ಓಡಾಡಿದ ಈಕೆ ಇದೀಗ ಜಿಲ್ಲಾ ಕೇಂದ್ರಕ್ಕೆ ರವಾನೆಯಾಗಿದ್ದು ಅಲ್ಲಿ ಒಂದು ದೊಡ್ಡ ಬಂಗಾರದ ಅಂಗಡಿ ಸೇರಿಕೊಂಡಿದ್ದಾಳೆ ಎಂದು ಸುದ್ದಿ.
ಹಾಗೆಂದು ಕುಕ್ಕಂದೂರಿನ ಈ ಹುಡುಗಿಯರ ವಂಚನೆ ಹಿಂದೆ ಕಲ್ಲಡ್ಕದ ಪರ್ವತದ ಲೇಡಿ ಸೂಪರ್ ಸ್ಟಾರ್ ಜ್ಯೋತಿಷಿ ಮತ್ತು ಪಂಜದ ಅಂಡಿಗುಂಡಿ ಬಲಿಮ್ಮೆಯವನ ದೊಡ್ಡ ಪಾತ್ರ ಇದೆ. ಅಮಾಯಕ ಹುಡುಗರನ್ನು ಪ್ರೀತಿ ಹೆಸರಲ್ಲಿ, ಮದುವೆ ಹೆಸರಲ್ಲಿ ಬುಟ್ಟಿಗೆ ಹಾಕಿಕೊಂಡು, ಒಲ್ಲದ ಹುಡುಗರನ್ನು ಇದೇ ಜ್ಯೋತಿಷಿಗಳ ಮುಖಾಂತರ ವಾಮಾಚಾರ ನಡೆಸಿ, ವಶೀಕರಣ ಮಾಡಿ, ಬಲೆಗೆ ಬಿದ್ದ ಮೇಲೆ ಅವರನ್ನು ಬೋಳಿಸಿ, ಬೊರಿದು ಲಗಾಡಿ ತೆಗೆಯೋದು ಈ ಗ್ಯಾಂಗಿನ ಕೆಲಸ. ನಂತರ ಹುಡುಗಿಗಾಗಿ ಹಠ ಮಾಡುವ ಹುಡುಗರ ಮೇಲೆ ವಾಪಾಸ್ ವಾಮಾಚಾರ ನಡೆಸಿ ಅವರಿಗೆ ಹುಚ್ಚು ಹಿಡಿಯುವಂತೆ, ಊರು ಬಿಡುವಂತೆ, ಮಾನಸಿಕ ಅಸ್ವಸ್ಥರನ್ನಾಗಿ ಆಗುವಂತೆ ಮಾಡುವ ಈ ಇಬ್ಬರು ಮಂತ್ರವಾದಿಗಳಿಗೆ ಮತ್ತು ಇಬ್ಬರು ಹುಡುಗಿಯರನ್ನು ಎದುರು ಬಿಟ್ಟು ಆ ಪುಣ್ಯ ಕಾರ್ಯಗಳನ್ನು ಮಾಡಿಸುವ ಕುಕ್ಕಂದೂರಿನ ಆಂಟಿಗೆ ಸಮಾಜ, ಸಭ್ಯ ಜನತೆ ಬುದ್ಧಿ ಕಲಿಸಲೇ ಬೇಕಾಗಿದೆ. ಇಲ್ಲದಿದ್ದರೆ ಇನ್ನೂ ಅನೇಕ ಹುಡುಗರು ಸರ್ವಸ್ವವನ್ನೂ ಕಳೆದು ಕೊಳ್ಳುವ ದಿನ ದೂರದಲ್ಲಿಲ್ಲ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top