ಹಾಗೆಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಕರ್ನಾಟಕದ ಫೇಮಸ್ ದೇವಸ್ಥಾನಗಳಲ್ಲಿ ಒಂದು. ಜನ ಸಾಗರೋಪಾದಿಯಲ್ಲಿ ಅನ್ನಪೂರ್ಣೆಯ ದರ್ಶನಕ್ಕೆ ಹರಿದು ಬರುತ್ತಾರೆ. ಹೊರನಾಡಿನ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಷಿ ದಂಪತಿಗಳು ದೇವಿ ಅನ್ನಪೂರ್ಣೇಶ್ವರಿಯ ಕೃಪಾ ಕಟಾಕ್ಷವನ್ನು ಭಕ್ತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದು ಆ ಮೂಲಕ ಧರ್ಮದ ಸೇವೆ ಮಾಡುತ್ತಿದ್ದಾರೆ. ಅನ್ನದಾನ, ವಿದ್ಯಾದಾನದ ಮೂಲಕ ಜೋಷಿ ದಂಪತಿಗಳು ಅನ್ನಪೂರ್ಣೇಶ್ವರಿ ಕ್ಷೇತ್ರದ ಮಹಿಮೆಯನ್ನು ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ. ಭೀಮೇಶ್ವರ ಜೋಷಿಯವರನ್ನು ಆಧುನಿಕ ಯುಗದ ಧರ್ಮರ್ಷಿ, ಧಾರ್ಮಿಕ ಯುಗಪುರುಷ ಅಂದರೂ ತಪ್ಪಿಲ್ಲ. ಕಳಸ ತಾಲೂಕಿನಿಂದ ಕೇವಲ ಕೆಲವೇ ಕಿಲೋಮೀಟರ್ ದೂರದಲ್ಲಿ ಇರುವ ಕ್ಷೇತ್ರದ ಮಹಿಮೆ ಅಗಾಧವಾದುದು. ಭೀಮೇಶ್ವರ ಜೋಷಿಯವರ ಧಾರ್ಮಿಕ ಸೇವೆ ಈಗ ಸೇವಾ ಜಾತ್ರೆಯೇ ಆದದ್ದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಇಂಥ ಹಿನ್ನೆಲೆಯ ಶ್ರೀ ಕ್ಷೇತ್ರಕ್ಕೆ ಕಳಸದಿಂದ ಒಂದು ರಸ್ತೆ ಸರಿಕಟ್ ಮಾಡಿ ಕೊಟ್ಟಿಲ್ಲ ನಮ್ಮ ರಾಜಕಾರಣಿಗಳು. ಇದ್ದ ರಸ್ತೆ ಕುಷ್ಠರೋಗದಿಂದ ಬಳಲುತ್ತಿದೆ
ಹಾಗೆಂದು ಕಳಸ ತಾಲೂಕು ಆಗಲು ಹತ್ತು ಹಲವು ಮಹನೀಯರು ಪ್ರಯತ್ನ ಪಟ್ಟಿದ್ದಾರೆ. ಕೆ.ಸಿ ಧರಣೇಂದ್ರ, ಶಾಸ್ತ್ರೀಜೀ, ಎಂ.ಎನ್ ಹರ್ಷ, ಮಹಾಬಲೇಶ್ವರ ಶಾಸ್ತ್ರಿ, ಶ್ರೀನಿವಾಸ್ ಮುಂತಾದ ಹೋರಾಟಗಾರರ ಬೆವರಿನ ಫಲ ಈ ತಾಲೂಕು. ಆದರೆ ಈಗ ನೋಡಿದರೆ ಕಳಸದ ರಾಜಕಾರಣ ಗಬ್ಬೆದ್ದು ಹೋಗಿದೆ. ಸರ್ವ ಪಕ್ಷಗಳಿಗೂ ಒಂದೇ ಬಾವುಟ ನಿಯಮದಡಿ ಇಲ್ಲಿ ರಾಜಕೀಯ ನಡೆಯುತ್ತಿದೆ. ಇಲ್ಲಿನ ಕೆಲವು ಆಯ್ದ ಮನಸ್ಥಿತಿಯ ರಾಜಕಾರಣಿಗಳು ಊರಿನ ಅಭಿವೃದ್ಧಿಯಲ್ಲಿ ಒಂದಾಗಲ್ಲ. ಆದರೆ ಯಾರನ್ನಾದರೂ ಲಗಾಡಿ ತೆಗೆಯಲು ಇವರೆಲ್ಲ ಒಗ್ಗಟ್ಟಾಗಿ ಬಿಡುತ್ತಾರೆ. ಹಾಗೆಂದು ಹೊರನಾಡು ರಾಜಕೀಯ ಸರಿಯಾಗಿಯೇ ಇತ್ತು. ಆದರೆ ಕಳಸದ ಹೊಲಸು ರಾಜಕೀಯದ ಗಾಳಿ ಹೊರನಾಡಿಗೂ ಹಬ್ಬಿದ್ದು ಅಲ್ಲಿ ಕೂಡ ರಾಜಕೀಯ ವಾಸನೆ ಬರಲು ಶುರುವಾಗಿದೆ.
ಇನ್ನು ಕಳಸ-ಹೊರನಾಡು ರಸ್ತೆಯ ಬಗ್ಗೆ ಅನೇಕ ಕತೆಗಳಿವೆ,ದಂತಕತೆಗಳಿವೆ. ಕಳಸದ ಖಲಾಸ್ ರಾಜಕೀಯ ಹೊರನಾಡು ತನಕವೂ ಮುಟ್ಟಿದ್ದು ಅಲ್ಲೂ ಎಷ್ಟು ಡ್ಯಾಮೇಜ್ ಆಯ್ತು ಅಂದರೆ ಅಲ್ಲಿ ಮುಂಡುಗದ ಮನೆಯ ಒಂದು ಬ್ರಿಡ್ಜ್ ಗೆ ಒಂದೇ ವರ್ಷದಲ್ಲಿ ಎರಡು ಬಿಲ್ ಮಾಡಿ ಸರ್ವ ಪಕ್ಷಗಳೂ ಒಂದೇ ಬಾವುಟದಡಿ ತಿಂದುಂಡು ರಾಜಿ ಮಾಡಿಕೊಂಡವು. ಇಂಥಹ ಕತೆ ಇಡೀ ಸ್ಟೇಟಲ್ಲಿ ಬಹುಶಃ ಹೊರನಾಡಿನಲ್ಲಿ ಮಾತ್ರ ನಡೆದಿರುತ್ತದೆ. ಸಾರ್ವಕಾಲಿಕ ದಾಖಲೆ ಇದು. ಒಂದು ಪಕ್ಷ ಚಿಕ್ಕದಾಗಿ ಚೊಕ್ಕವಾಗಿ ಬ್ರಿಡ್ಜ್ ಕಟ್ಟಿದರೆ ಅದು ಸರಿಯಾಗಿಲ್ಲ ಎಂದು ಪೊಕ್ಕಡೆ ರಾಜಕೀಯ ನಡೆದು ಇನ್ನೊಂದು ಪಕ್ಷ ದೊಡ್ಡ ಸೇತುವೆ ನಿರ್ಮಾಣ ಮಾಡಿ ದೊಡ್ಡದಾಗಿಯೇ ತಿಂದು ಮುಗಿಸಿತ್ತು.
ಇನ್ನು ಕಳಸ-ಹೊರನಾಡು ಮಧ್ಯೆ ಕೇವಲ ಎಂಟು ಕಿಲೋ ಇದ್ದರೂ ಆ ರಸ್ತೆಗೊಂದು ಪರ್ಮನೆಂಟ್ ಪ್ಯಾಕೇಜ್ ಇನ್ನೂ ಸಿಕ್ಕಿಲ್ಲ. ಭೀಮೇಶ್ವರ ಜೋಯಿಸರು ಏನಾದರೂ ಅದು ಇದು ಎಂದು ಕೊಟ್ಟರೆ ಮಾತ್ರ ಕಳಸ – ಹೊರನಾಡು ರಸ್ತೆಗೆ ಕಪ್ಪು ಪೈಂಟ್. ಇಲ್ಲದಿದ್ದರೆ ರಸ್ತೆ ಅಂಡಿಗುಂಡಿ ಆದರೂ ಕೇಳುವವರೇ ಇಲ್ಲ. ಅಲ್ಲಿ ಹೆಬ್ಬಾಳ ಸೇತುವೆ ಕೆಲಸ ಮುಗಿದರೂ ಇನ್ನೂ ಡಾಮಾರೀಕರಣ ಆಗಿಲ್ಲ. ರಾಜ್ಯದ ಹೆಸರಾಂತ ಕ್ಷೇತ್ರಕ್ಕೆ ಹೋಗುವ ರಸ್ತೆಯೇ ಕುಷ್ಠರೋಗ ಹಿಡಿದು ಮಲಗಿದರೆ ಭಕ್ತರ ಪರಿಸ್ಥಿತಿ ಏನು. ಅನ್ನಪೂರ್ಣೆಯಲ್ಲಿ ವಿದ್ಯೆ ಬುದ್ಧಿ, ಐಶ್ವರ್ಯದ ಜೊತೆಗೆ ರಸ್ತೆಯ ಬಗ್ಗೆಯೂ ಕೇಳುವ ಪರಿಸ್ಥಿತಿ ಬಂದಿದೆ. ಇನ್ನು ಕಳಸ ಪೇಟೆಯಲ್ಲಿ ಜಾತ್ಯಾತೀತ ರಸ್ತೆಗಳಿವೆ. ಹೇಗೆಂದರೆ ಇಲ್ಲಿ ರಸ್ತೆ ಮತ್ತು ಚರಂಡಿ ಎಂಬ ಬೇಧಭಾವವಿಲ್ಲ. ಇಲ್ಲಿ ರಸ್ತೆಯ ನೀರು ಚರಂಡಿಯಲ್ಲಿ, ಚರಂಡಿ ನೀರು ರಸ್ತೆಯಲ್ಲಿ ಹರಿದು ಜಂಟಿ ಕಾರ್ಯಾಚರಣೆ ಮಾಡುತ್ತಾ ಇರುತ್ತದೆ. ಮಾತಾಡಿದ್ರೆ ಆಯ್ದ ಮನಸ್ಥಿತಿಗಳು ಧುತ್ತೆಂದು ಭೂತ ಹಿಡಿದು ಬರುತ್ತದೆ.
ವಿರಾಜಪೇಟೆ:ಅತ್ಯುತ್ತಮ ಶೈಕ್ಷಣಿಕ ವರದಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ವಿರಾಜಪೇಟೆಯ ಸಾಹಿತಿಗಳು, ಪತ್ರಕರ್ತರೂ ಆಗಿರುವ ರಜಿತ ಕಾರ್ಯಪ್ಪ ಭಾಜನರಾಗಿದ್ದಾರೆ.
ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಶೈಕ್ಷಣಿಕ ವರದಿ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಸರಕಾರಿ ಶಾಲೆ ಆದರ್ಶ ಸಂಸ್ಥೆ ವರದಿ ಆಯ್ಕೆಯಾಗಿದ್ದು, ಇತ್ತಿಚೆಗೆ ವಿರಾಜಪೇಟೆಯ ಎ-ಟು-ಜೆಡ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಜಿತ ಕಾರ್ಯಪ್ಪ ಆರ್ಜಿ ಗ್ರಾಮದ ಕಿರಣ್ ಕಾರ್ಯಪ್ಪ ಅವರ ಪತ್ನಿ;
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.






