ಇದು ಪುತ್ತೂರಿನ ವಾಸ್ತು ತಜ್ಞನೊಬ್ಬನ ಮಗನ ಗರ್ಭ ಗಲಾಟೆಯ ಕತೆ. ಇದು ಅಪ್ರಾಪ್ತ ಹುಡುಗ ಮತ್ತು ಮೇಜರ್ ಹುಡುಗಿಯ ಅಕ್ರಮ ಸಂಬಂಧದ ಕತೆ. ಕತೆ ತುಂಬಾ ಹಿಂದಿನಿಂದಲೂ ಇದ್ದರೂ ಮೇಲೆ ಬಂದಿದ್ದು ಓ ಮೊನ್ನೆ. ಈಗ ಪೋಲಿಸರು, ಕೋರ್ಟ್, ಸಂಘಟನೆಗಳು, ಮಹಿಳಾ ಆಯೋಗ ಎಲ್ಲಾ ಎಂಟ್ರಿ ಆಗಿದ್ದು ಹುಡುಗ ಅಟ್ಟದಲ್ಲಿ ಅಡಗಿದ್ದರೆ, ಹುಡುಗಿ ಮಗು ಜೊತೆ ಆಸ್ಪತ್ರೆಯಲ್ಲಿ ಇದ್ದಾಳೆ. ಬಾಕಿ ಎರಡೂ ಕಡೆಯವರಿಂದ ನ್ಯಾಯ ನೀತಿ ಧರ್ಮಕ್ಕಾಗಿ ಹೋರಾಟ. ಸದ್ಯಕ್ಕೆ ಪುತ್ತೂರಿನ ಟಾಪ್ ನ್ಯೂಸ್ ಇದು.
ಅವರು ಪುತ್ತೂರಿನ ಫೇಮಸ್ ವಾಸ್ತು ತಜ್ಞ. ಅವರ ಕತೆಗಳು, ಉಪ ಕತೆಗಳು, ದಂತ ಕತೆಗಳು ಬದಿಗಿರಲಿ. ಈಗ ಅವರ ಜೂನಿಯರ್ ವಾಸ್ತು ಕೂಡ ದೊಡ್ಡ ಎಡವಟ್ಟು ಮಾಡಿಕ್ಕೊಂಡು ಅಟ್ಟದಲ್ಲಿ ಅಡಗಿದ್ದಾನೆ. ಹಾಗೆಂದು ಈ ಜೂನಿಯರ್ ವಾಸ್ತು ಓ ಮೊನ್ನೆ ತನಕ ಅಂದರೆ ಎಲ್ಲಾ ಕೆಲಸ ಕಾರ್ಯಗಳು ಮುಗಿಯುವ ತನಕ ಅಪ್ರಾಪ್ತನಾಗಿದ್ದ. ಈಗ ಮೊನ್ನೆ ಕಾರ್ತೆಲ್ ತಿಂಗಳಲ್ಲಿ ಮೇಜರ್ ಆಗಿದ್ದಾನೆ. ಇವನು ಜಾಸ್ತಿ ಏನೂ ಅಪರಾಧ ಮಾಡಿಲ್ಲ ಆದರೆ ಅಪ್ಪ ಆಗುವ ಅಪರಾಧ ಮದುವೆಗೆ ಮೊದಲೇ ಮಾಡಿಕೊಂಡಿದ್ದಾನೆ. ಈ ಜೂನಿಯರ್ ವಾಸ್ತು ತನ್ನ ಬಾಲ್ಯದ ಗೆಳತಿಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಒಂಬತ್ತನೇ ಕ್ಲಾಸಿಂದ ಶುರುವಾದ ಇವರ ಪ್ರಾಥಮಿಕ ಹಂತದ ಕಾಮಗಾರಿಗಳು ಕಳೆದ ಒಂಬತ್ತು ತಿಂಗಳ ಹಿಂದೆ ಪರಾಕಾಷ್ಠೆಗೆ ಹೋಗಿ ಹುಡುಗಿಗೆ ಒಂಬತ್ತು ತಿಂಗಳು ತುಂಬಿ ಓ ಮೊನ್ನೆ ಜೂನ್ 27 ತಾರೀಕು ಶುಕ್ರವಾರ ಗಂಡು ಮಗುವಿಗೆ ಜನ್ಮ ಕೂಡ ಕೊಟ್ಟಾಗಿದೆ. ಮಗುವಿದ್ದು ಪುನರ್ವಸು ನಕ್ಷತ್ರ, ಕಟಕ ರಾಶಿ.
ಹಾಗೆಂದು ಈ ವಾಸ್ತು ತಜ್ಞನ ಮಗನ ವಾಸ್ತುವೇ ಸರಿ ಇಲ್ಲ. ಅಪ್ರಾಪ್ತನಾಗಿದ್ದುಕ್ಕೊಂಡು ಹ್ಯಾಂಡ್ ವಾಶ್ ಮಾಡುವ ಸಮಯದಲ್ಲಿಯೇ ಈತ ವಾಷಿಂಗ್ ಮೆಷಿನ್ ಯೂಸ್ ಮಾಡಿದ ಕಾರಣ ಈಗ ಅಟ್ಟ ಪಾಲಾಗಿದ್ದಾನೆ. ವಾಸ್ತು ಪ್ರಕಾರ ಆಗ್ನೇಯ ಮೂಲೆಯಲ್ಲಿ ಉತ್ತರಕ್ಕೆ ಮಂಡೆ ಹಾಕಿ ದರುಬುರು ಮಾಡಿದರೆ ಕತೆ ಕೈಲಾಸ ಆಗಿ ಬಿಡುತ್ತದೆ. ಆಗ್ನೇಯ ಮೂಲೆಯಲ್ಲಿ ಅಗ್ನಿ ಇರುವ ಕಾರಣ ಆ ಮೂಲೆಯಲ್ಲಿ ದರುಬುರು ಮಾಡಿದರೆ ಬೆಂಕಿ ಹತ್ತಿಕ್ಕೊಂಡು ಉರಿದು ಬಿಡುತ್ತದೆ. ಇದೀಗ ಈ ಮಕ್ಕಳು ಗೊತ್ತಿಲ್ಲದೆ ಯಡವಟ್ಟು ಮಾಡಿದ್ದು ನ್ಯಾಯ ಕೊಡಿಸುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಇದು ಎರಡು ಮನೆಗಳ ಕತೆ ಆಗಿರುವ ಕಾರಣ ಮನೆಗಳಲ್ಲಿಯೇ ಕುಂತು ಪರಿಹರಿಸ ಬೇಕೇ ಹೊರತು ರೋಡಿಗಿಳಿದರೆ ಅದು ಮತ್ತಷ್ಟು ಜೋರಾಗುತ್ತದೆಯೇ ಹೊರತು ವಿವಾದ ಮುಗಿಯಲ್ಲ.
ಹಾಗೆಂದು ಇದೊಂದು ಅಂತರ್ಜಾತಿ ಪ್ರೇಮ ಪ್ರಕರಣ. ಮಾಚೊಗು ಮಾಚೊ ಮುಟ್ಟುಂಡ ಮೋಚೋ ಇಜ್ಜಿ ಎಂಬಂತೆ ಎರಡು ಪಾರ್ಟಿ ಕುಂತು ಮದುವೆ ಮಾತುಕತೆ ಮಾಡಬಹುದಿತ್ತು. ಯಾಕೆಂದರೆ ಇಲ್ಲಿ ಹುಡುಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಮತ್ತು ಇವನು ಕೈ ಕೊಟ್ಟರೆ ಅವಳಿಗೆ ಮತ್ತು ಮಗುವಿಗೆ ಸಮಾಜದಲ್ಲಿ ಅನ್ಯಾಯ ಮಾಡಿದಂತಾಗುತ್ತದೆ. ಎಷ್ಟಾದರೂ ಹೆಣ್ಣು ಮಗಳು, ನಾವು ಒಮ್ಮೆ ಕಮಿಟ್ ಆದರೆ ಕಡೆ ಕೊಡಿ ಮಾಡಿಯೇ ಬಿಡಬೇಕು. ಹಾಗೆಂದು ಒಬ್ಬ ಅಪ್ರಾಪ್ತ ಹುಡುಗ ಸಮಯ ಪ್ರಜ್ಞೆ ಇಲ್ಲದೆ ಮಾಡಿದ ಕೆಲಸವನ್ನೂ ದೊಡ್ಡ ಅಪರಾಧ ಎಂದು ಬಿಂಬಿಸುವ ಕೆಲಸ ಆಗಬಾರದು ಮತ್ತು ಅವನಿಗೂ ಅನ್ಯಾಯ ಆಗಬಾರದು. ಈಗ ಸಂಘಟನೆಗಳು, ಪೋಲಿಸ್, ಊರಿನವರೆಲ್ಲ ಸೇರಿ ಹುಡುಗನನ್ನು ಹುಡುಕಿ ತಂದು ಮದುವೆ ಮಾಡಿಸಿ ಬಿಡಬಹುದು. ಆದರೆ ಅದರ ನಂತರದ ಅವರ ಜೀವನ ದುಸ್ತರವಾದುದು. ಈಗ ಎರಡೂ ಪಾರ್ಟಿಗಳು ಕೋರ್ಟು, ಕಚೇರಿ ಅಂತ ಹೋಗಿರುವಾಗ ಅಧಿಕ ಪ್ರಸಂಗಿ ಸಂಘಟನೆಗಳು ಸ್ವಲ್ಪ ಬಾಲ ಮಡಚಿ ಕೂರೋದು ಒಳ್ಳೆಯದು. ಯಾಕೆಂದರೆ ಈಗಲೇ ಮದುವೆ ಮಾಡಿ, ಮದುವೆ ಮಾಡಿ ಎಂದು ಬೊಬ್ಬೆ ಹೊಡೆದರೆ ಅದರ ಸೈಡ್ ಎಫೆಕ್ಟ್ಸ್ ಬೇರೆಯೇ ಇರುತ್ತದೆ.
ಕೆಲವು ಸಮಯಗಳ ಹಿಂದೆ ಇಂತಹುದೇ ಒಂದು ಘಟನೆ ನಡೆದಿತ್ತು. ಅಪ್ರಾಪ್ತ ಹುಡುಗಿ ಒಂದು ಗರ್ಭಿಣಿ ಆಗಿ ಬಿಟ್ಟಿತು. ಗರ್ಭ ದಾನಿ ಯಾರು ಯಾರು ಎಂದು ವಿಚಾರಿಸಲಾಗಿ ಒಬ್ಬ ಹುಡುಗ ನಾನು ಎಂದ ಮತ್ತು ಮದುವೆಗೆ ರೆಡಿ ಅಂದ. ಆದರೆ ಹುಡುಗಿ ಅಪ್ರಾಪ್ತೆ. ಮೇಜರ್ ಆಗಲು ಕೆಲವೇ ತಿಂಗಳು ಬೇಕಿತ್ತು. ಅಲ್ಲಿ ತನಕ ಹುಡುಗನಿಗೆ ರೆಸ್ಟ್ ಕೊಡಲಾಯಿತು. ಇತ್ತ ಗರ್ಭಿಣಿ ಮನೆಗೆ ಆಶಾ ಕಾರ್ಯಕರ್ತೆ ಎಂಟ್ರಿ ಆಗಿದೆ. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ಹೋಗಿದೆ. ಪೋಲಿಸ್ ಬಂದಿದೆ. ಹುಡುಗನನ್ನು ಎತ್ತಿದ್ದಾರೆ. ಹುಡುಗನ ಸಮೇತ ಊರವರು, ಸಂಬಂಧಿಗಳು ಎಲ್ಲರೂ ಮದುವೆ ಆಗುವವರು ಅಂದರೂ ಪೋಲಿಸರು ಪ್ರಕ್ರಿಯೆ ಮುಗಿಸಿ ಬಿಡುತ್ತೇವೆ ಎಂದು ಹುಡುಗನ ಮೇಲೆ ಪೋಕ್ಸೋ ಹಾಕಿ ಜೈಲಿಗೆ ಕಳಿಸಿದ್ದರು. ನಂತರ ಹುಡುಗಿ ಗಂಡು ಮಗುವಿಗೆ ಜನ್ಮ ಕೊಟ್ಟಿತು ಮತ್ತು DNA ಟೆಸ್ಟ್ ಕೂಡ ಮಾಡಿಸಲಾಯಿತು. ಹುಡುಗಿ ಮೇಜರ್ ಕೂಡ ಆಯಿತು. ಮದುವೆ ವಿಷಯ ಜಡ್ಜರ ಗಮನಕ್ಕೂ ತಂದು ಹುಡುಗನಿಗೆ ಜಾಮೀನು ಮಂಜೂರು ಮಾಡಿಸಲಾಯಿತು. ನಂತರ ಮದುವೆ ಕೂಡ ಮಾಡಿಸಲಾಯಿತು. ಈಗ ನೀವು ಹ್ಯಾಪಿ ಎಂಡಿಂಗ್ ಅಂತ ಯೋಚಿಸಿರ ಬಹುದು. No! ಹಾಗೆ ಹುಡುಗ ಜೈಲಲ್ಲಿ ಇರುವಾಗ DNA ಟೆಸ್ಟ್ ಮಾಡಿಸಲಾಗಿತ್ತಲ್ಲ. ಅದರ ರಿಪೋರ್ಟ್ ಲೇಟಾಗಿ ಬಂತು. ರಿಸಲ್ಟ್ NOT MATCH. ವಿಷಯ ಹುಡುಗನಿಗೆ ಹೇಳಿಲ್ಲ.
ವಿರಾಜಪೇಟೆ: ಶೈಕ್ಷಣಿಕ ಪ್ರಶಸ್ತಿ ಪ್ರದಾನ ಅತ್ಯುತ್ತಮ ಶೈಕ್ಷಣಿಕ ವರದಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ವಿರಾಜಪೇಟೆಯ ಸಾಹಿತಿಗಳು, ಪತ್ರಕರ್ತರೂ ಆಗಿರುವ ರಜಿತ ಕಾರ್ಯಪ್ಪ ಭಾಜನರಾಗಿದ್ದಾರೆ.
ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಶೈಕ್ಷಣಿಕ ವರದಿ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಸರಕಾರಿ ಶಾಲೆ ಆದರ್ಶ ಸಂಸ್ಥೆ ಎಂಬ ವರದಿ ಆಯ್ಕೆಯಾಗಿದ್ದು, ಇತ್ತಿಚೆಗೆ ವಿರಾಜಪೇಟೆಯ ಎ-ಟು-ಜೆಡ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖ್ಯಾತ ಪತ್ರಕರ್ತೆ
ರಜಿತ ಕಾರ್ಯಪ್ಪ ಆರ್ಜಿ ಗ್ರಾಮದ ಕಿರಣ್ ಕಾರ್ಯಪ್ಪ ಅವರ ಪತ್ನಿ.
ಈ ಸಂದರ್ಭದಲ್ಲಿ ಕುಮಾರಿ ಕೆ. ಈಶಾನ್ವಿ ಅವರಿಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕುಮಾರಿ ಈಶಾನ್ವಿ ವಿರಾಜಪೇಟೆ ಅರಮೇರಿ ಗ್ರಾಮದ ಎಸ್.ಎಂ.ಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಷನ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದು, ವಿರಾಜಪೇಟೆ ಆರ್ಜಿ ಗ್ರಾಮದ ಕಲ್ಲು ಬಾಣೆ ಕಿರಣ್ ಕಾರ್ಯಪ್ಪ ಹಾಗೂ ಸಾಹಿತಿ, ಪತ್ರಕರ್ತೆ ರಜಿತ ಕಾರ್ಯಪ್ಪ ಅವರ ಪುತ್ರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.



ಪೋಟೊ: ರಜಿತಾ ಕಾರ್ಯಪ್ಪ ಅವರಿಗೆ ಪ್ರಶಸ್ತಿ ಪ್ರದಾನ





