ಹಾಗೆಂದು ಈ ಸಂಘಟನೆಗಳ, ರಾಜಕೀಯ ಪಕ್ಷಗಳ, ಸಮಾಜ ಸೇವಕರ ಬುದ್ಧಿ ಬರಬರುತ್ತಾ ರಾಯರ ಕುದುರೆ ಕತ್ತೆ ಆಗುತ್ತಿದೆ. ಭ್ರಷ್ಟಾಚಾರದ ವಿಷಯ ಬದಿಗಿರಲಿ, ಅದು ಈಗ ಸಮೂಹ ಸನ್ನಿಯಾಗಿ ಹೋಗಿದೆ. ಈಗೀಗ ಇಂಥ ನಾಯಕರ ಸೈಕಲ್ ಕೇಸ್ ಕೂಡ ಸಮೂಹ ಸನ್ನಿಯಾಗಿರುವುದು ಮಾತ್ರ ವಿಪರ್ಯಾಸವೇ ಸರಿ. ನಾಯಕರು ಮೂಲೆ ಗುಂಪು ನಾಯಕರಾಗಲು ಒಂದು ಹುಡುಗಿ ಕೇಸ್ ಸಾಕು. ರಾಜಕೀಯ ಜೀವನವೇ ಫಿನಿಷ್ ಆಗಿ ಹೋಗುತ್ತದೆ. ಆದರೆ ಈಗೀಗ ಈ ಅಭ್ಯಾಸ ಕೂಡ ಮಾಮೂಲಿಯಾಗಿ ಹೋಗಿದೆ. ಇದೀಗ ಮೂಡುಬಿದಿರೆಯ ಹಿಂದೂ ಸಂಘಟನೆ ಲೀಡರ್ ಒಬ್ಬನ ಜಾತಕ ವೈರಲ್ ಆಗಿದೆ. ಕತೆ ದೊಡ್ಡದು ಅಣ್ಣಂದು.
ಈತ ಸಮೀತ್ರಾಜ್. ಮೂಡಬಿದಿರೆಯ ಹಿಂದೂ ಸಂಘಟನೆಗಳ ಯುವ ನಾಯಕ.ಕೆಲವು ತಿಂಗಳ ಹಿಂದೆ ಮೂಡಬಿದಿರೆ ಸಮೀಪ ತೋಡಾರಿನಲ್ಲಿ ಮೈಟ್ ಕಾಲೇಜ್ ಹತ್ರ ಒಂದು ಬಸ್ ಮತ್ತು ಸ್ಕೂಟಿ ಅಪಘಾತವಾಗಿತ್ತು. ಸ್ಕೂಟಿ ಹುಡುಗಿಗೆ ಚಿಲ್ಲರೆ ಗಾಯಗಳಾಗಿದ್ದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಆವತ್ತು ಆ ಸ್ಪಾಟಿನಲ್ಲಿ ಭರ್ಜರಿ ಗಲಾಟೆ ಆಗಿತ್ತು. ಮೈಟ್ ವಿದ್ಯಾರ್ಥಿಗಳು ಬಸ್ ಸಿಬ್ಬಂದಿ ಮೇಲೆರಿ ಬಂದಿದ್ದರು. ಪೋಲಿಸ್ ತುಕುಡಿ ಕೂಡ ಬಂದಿತ್ತು. ಆಗ ಆ ಸ್ಪಾಟಿಗೆ ಎಂಟ್ರಿ ಹಾಕಿದ್ದ ಸಮಿತ್ರಾಜ್ ಮತ್ತು ಟೀಂ ದಾಂಧಲೆ ಎಬ್ಬಿಸಿತ್ತು .ಬಸ್ ಗಾಜುಗಳಿಗೆ ಕಲ್ಲು ಬಿಸಾಡುವ ಮುಹೂರ್ತ ಇದೇ ಸಮಿತ್ರಾಜ್ ಮಾಡಿದ್ದ.ಗ್ಲಾಸ್ ಪುಡಿ ಮಾಡಿಸಿ ನಂತರ ಇದೇ ಸಮಿತ್ರಾಜ್ ಮತ್ತು ಮೂಡುಬಿದಿರೆ ಪೋಲಿಸರು ಬಸ್ ಮಾಲೀಕರನ್ನು ಠಾಣೆಗೆ ಕರೆಸಿ, ಹೆದರಿಸಿ ಐದು ಲಕ್ಷ ಪಾರ್ಟಿಗೆ ಕೊಡುವಂತೆ ಒತ್ತಡ ಹಾಕಿದ್ದರು. ಆದರೆ ಆ ಬಸ್ ಗೆ ಮಾಲೀಕರು ಬೇರೆ ಯಾರೋ ಇದ್ದು ಅದನ್ನು ಮೂಡಬಿದಿರೆಯ ಸಾಯಿಬೆರ್ ಒಬ್ಬರು ಲೀಸ್ ಗೆ ಪಡೆದು ಓಡಿಸುತ್ತಿದ್ದರು. ಠಾಣೆಯಲ್ಲಿ ಐದು ಲಕ್ಷ ಕೊಡಬೇಕು ಎಂದು ಪಂಚಾಯ್ತಿ ಮುಗಿದಾಗ ಸಾಯಿಬರಿಗೆ ಲೋಕ ಇಲ್ಲ. ಆದರೂ ತಿರಿಯೊಂಡೆ ಪೊನ್ನಿ, ಮರಿಮ್ಮೊಳಿಂಡೆ ಪೊನ್ನಿ, ಮೋಳುಂಡೆ ಮೊಯಿರೋ, ಉಮ್ಮಂಡೆ ಅಲಿಕತ್ ಎಲ್ಲಾ ಫೈನಾನ್ಸ್ ಲಿ ಬೆಚ್ಚಿಟ್ಟ್ ಪಾರ್ಟಿಗೆ ಐದು ಲಕ್ಷ ಕೊಟ್ಟಿದ್ದರು. ಆರು ತಿಂಗಳು ಸುದ್ದಿ ಇಲ್ಲ.
ಈಗ ಕಮೀಷನರ್ ರೆಡ್ಡಿಗಾರು ಬಂದಿದ್ದಾರಲ್ಲ. ಅವರು ಠಕ್ಕರ ಫೈಲ್ ರಿವಿಜನ್ ಮಾಡುತ್ತಾ ಹೋಗುತ್ತಿದ್ದಾಗ ಮೂಡುಬಿದಿರೆ ಠಾಣಾ ಸರಹದ್ದಿನಲ್ಲಿ ಇಪ್ಪತ್ತೆರಡು ಕೇಸ್ ಹೊತ್ತಿರುವ ಮಹನೀಯರೊಬ್ಬರ ಜಾತಕ ಸಿಕ್ಕಿದೆ. ಅದು ಯಾರೆಂದು ವಿಚಾರಿಸಲಾಗಿ ಅದು ಸಮಿತ್ರಾಜ್ ಎಂದು ತಿಳಿದುಬಂದಿದೆ. ಸಮಿತ್ರಾಜ್ ಜಾತಕ ಪರಾಂಬರಿಸಿ ಪರಿಶೀಲಿಸಿದಾಗ ರೆಡ್ಡಿಗಾರುಗೆ ತೋಡಾರು ಬಸ್ ಗಲಾಟೆ ಗಮನಕ್ಕೆ ಬಂದಿದೆ. ಕೆಂಡಾಮಂಡಲವಾದ ರೆಡ್ಡಿಗಾರು ಸಾಯಿಬರನ್ನು ಕರೆದು ವಿಚಾರಿಸಿದ್ದಾರೆ. ನಂತರ ಇದೇ ಬಸ್ ಕೇಸ್ ದೊಡ್ಡದಾಗಿ ಮೊನ್ನೆ ಶುಭ ಮುಂಜಾನೆ ಮೂಡಬಿದಿರೆ ಪೋಲಿಸರು ಬಂದು ಸಮಿತ್ರಾಜನನ್ನು ಪಿಕ್ ಮಾಡಿದ್ದಾರೆ. ನಂತರ ಸಮಿತ್ರಾಜನಿಗೆ ಠಾಣೆಯಲ್ಲಿ ಸನ್ಮಾನ ನಡೆದು ಪೋಲಿಸರು ಅವನ ಮೊಬೈಲ್ ಚೆಕ್ ಮಾಡಿದರೆ ಅವನ ಇನ್ನೊಂದು ಮುಖದ ಅನಾವರಣ ಆಗಿದೆ. ಸಮಿತ್ರಾಜ್ ಮೊಬೈಲಿನಲ್ಲಿ ಐವತ್ತಕ್ಕೂ ಹೆಚ್ಚು ಬ್ಲೂ ಫಿಲಂಗಳು ಇದ್ದವು. ಎಲ್ಲವೂ ದೇಸಿ, ಪಕ್ಕಾ ಲೋಕಲ್. ಬೀಫ್ ತಿನ್ನದವನಿಗೆ ಬಿಎಫ್ ಯಾಕೆ ಅಂತ ಪೋಲಿಸರೇ ಒಂದು ಘಳಿಗೆ ಅಕಲ್ಚಕ್ರ ಆಗಿದ್ದಾರೆ.
ಹಾಗೆಂದು ಸಮಿತ್ರಾಜನಿಗೆ ಬ್ಲೂಫಿಲಂ ಸ್ಟಾಕ್ ಮಾಡುವ ಹುಚ್ಚಿತ್ತು. ತನ್ನ ಟವರಿನ ವ್ಯಾಪ್ತಿಯಲ್ಲಿ ಬರುವ ಯಾವುದೇ ಹೆಣ್ಣು ಮಕ್ಕಳನ್ನು ಮಂಗ ಮಾಡಿ ಅವರ ಫೋಟೋ ಸ್ಟಾಕ್ ಮಾಡುವುದು, ಅವರ ಚಲನವಲನಗಳ ಶೂಟಿಂಗ್ ಮಾಡಿ ನಂತರ ಕಾಲ್ ಮಾಡಿ ಹೆದರಿಸುವುದು ಸಮಿತ್ರಾಜನ ಮಾತಾ ಕಾರ್ಯಕ್ರಮ ಆಗಿತ್ತು ಎಂದು ತಿಳಿದುಬಂದಿದೆ. ಅದೂ ಅಲ್ಲದೆ ಖುದ್ದು ಸಮಿತ್ರಾಜನೇ ಹೀರೋ ಆಗಿ ನಟಿಸಿದ್ದ ಒಂದು ಶಾರ್ಟ್ ಫಿಲ್ಮ್ ಕೂಡ ಈ ಮೊಬೈಲಲ್ಲಿ ಇತ್ತು ಮತ್ತು ಇನ್ಯಾರೋ ಸೀರೆ ಬಿಚ್ಚುವುದು, ಚಡ್ಡಿ ಹಾಕುವುದು, ಸ್ನಾನದ ಚಿತ್ರಗಳು, ವಿಚಿತ್ರಗಳು, ಗರ್ಗಸ್ ಕೇಸ್ ಹೀಗೆ ಎಲ್ಲವೂ ಅವನ ಮೊಬೈಲಿನಲ್ಲಿ ಇದ್ದು ಪೋಲಿಸರು ತನಿಖೆ ನಡೆಸಿದ್ದಾರೆ. ಇನ್ನು ರುಂಡ ತೋರಿಸದೆ ಮುಂಡದಲ್ಲೇ ವೈವಾಟ್ ಮಾಡುವ ಕೆಲವು ಫಿಲಂಗಳೂ ಸಿಕ್ಕಿದ್ದು ಅದೆಲ್ಲ ನೋಡಿ ನೋಡಿ ಮೂಡಬಿದಿರೆ ಪೋಲಿಸರಿಗೆ ಕಣ್ಣು ಬಚ್ಚಿ ಹೋಗಿದೆ. ಇನ್ನು ಇದೆ ಸಮಿತ್ರಾಜ್ ಅಲ್ಲಿ ದರೆಗುಡ್ಡೆಯಲ್ಲಿ ಶನಿ ಪೂಜೆ ಮಾಡುತ್ತಿದ್ದು ಆ ಪೂಜೆ ಹೆಸರಲ್ಲಿ ಯಾರನ್ನೆಲ್ಲ ಪೂಜೆ ಮಾಡಿದ್ದಾನೋ ಆ ದೇವರಿಗೇ ಗೊತ್ತು. ಇನ್ನು ಸಮಿತ್ರಾಜ್ ಮೂಡಬಿದಿರೆ ಠಾಣೆಯಲ್ಲಿ ಠಕ್ಕರ ಬೆಂಚಿನಲ್ಲಿ ಕೂತಿರುವಾಗಲೇ ಅಂಚಿದ ಬಜ್ಪೆ ಪೋಲಿಸರು ಮೂಡಬಿದಿರೆ ಠಾಣೆಗೆ ಬಿನ್ನೆರ್ ಕಟ್ಟಿಕ್ಕೊಂಡು ಬಂದಿದ್ದು ಬಜ್ಪೆ ಮರ್ಡರ್ ಕೇಸಿಗೆ ಸಂಬಂಧ ಪಟ್ಟಂತೆ ಇವನು ಜಾಲತಾಣಗಳಲ್ಲಿ ಅದೇನೋ ಬೌಬೌ ಮಾಡಿದ್ದ ಎಂದು ಅವರು ಇವನನ್ನು ಒಂಜಿ ಘಳಿಗೆ ಬರೋಡು ಎಂದು ಬಜ್ಪೆಗೆ ಎತ್ತಿಕೊಂಡು ಹೋಗಿ ದರ್ಶನ ಮಾಡಿಸಿದ್ದರು ಎಂದು ತಿಳಿದುಬಂದಿದೆ.
ಟೋಟಲಿಯಾಗಿ ಹೇಳುವುದಾದರೆ ಸಮಿತ್ರಾಜನ ರಾಜಕೀಯ ಜೀವನ, ಸಂಘಟನಾ ಜೀವನ ಇಲ್ಲಿಗೆ ಮುಗಿದಂತೆ.ಫಿನಿಷ್ ಅದು. ರಾಜಕೀಯವನ್ನು, ಸಂಘಟನೆಯನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿ ಕೊಂಡರೆ ಹೀಗೆ ಆಗುತ್ತದೆ. ರಾಜಕೀಯ, ಸಂಘಟನೆಗಳು,ಸಂಘ ಸಂಸ್ಥೆಗಳು ಇರೋದು ಜನರಿಗಾಗಿ, ನತದೃಷ್ಟ ಸಮಾಜದ ಸೇವೆಗಾಗಿ. ಅವುಗಳ ಹೆಸರಿನಲ್ಲಿ ಆಟ ಆಡಿದರೆ ಓಟ ಮಾಡಬೇಕಾಗುತ್ತದೆ.







