ಮಾರ್ಕೆಟಿನಲ್ಲಿ ತೆಂಗಿನ ಕಾಯಿ ರೇಟ್ ಚಂದ್ರನಿಂದ ಸ್ವಲ್ಪ ಕೆಳಗೆ ಮಾರಾಯ್ರೆ. ತೆಂಗಿನ ಎಣ್ಣೆ ಲೀಟರಿಗೆ ನಾಲ್ಕು ಹಾಕಿ ಎದುರು ಎರಡು ಸೊನ್ನೆ ಹಾಕಲೇ ಬೇಕು. ಇದಕ್ಕೆಲ್ಲ ಕಾರಣ ಮಂಗ ನನ್ಮಗ. ಮಂಗಣ್ಣ ಬೊಂಡ ಕುಡುದು ಕುಡುದು ಶೀತ ಏರಿ ಸೊರಳ್ಳೆ ಇಳಿಸಿದ ಕಾರಣ ಇವತ್ತು ತೆಂಗಿನ ಕಾಯಿಗೆ ಬೊಳ್ಳಿ ರೇಟ್. ಈಗ ಚಿಲ್ಲರೆ ಕಳ್ಳರ ಸರದಿ. ಪುತ್ತೂರು ತಾಲೂಕಿನಾದ್ಯಂತ ತಾರಯಿ ಕಂಡುಲು ಅಲ್ಲಲ್ಲಿ ಅಲ್ಲಲ್ಲಿ ಅಲಂಬಿನಂತೆ ಹುಟ್ಟಿಕೊಂಡಿದ್ದಾರೆ. ಒಂದು ನೈಟ್ ಹತ್ತು ಮರಕ್ಕೆ ಹತ್ತಿದರೂ ಸಾಕು ಒಬ್ಬ ಇಂಜಿನೀಯರನ ಸಂಬಳ ಮಾಡ ಬಹುದು. ಇದೀಗ ಮೊನ್ನೆ ಪುತ್ತೂರಿನಲ್ಲಿ ಇಬ್ಬರು ತಾರಯಿ ಕಳ್ಳರು ಸಿಕ್ಕಿ ಬಿದ್ದಿದ್ದು, ಇನ್ನು ತಾರೆಗೆ ಬೀಗ ಹಾಕುವ ಪರಿಸ್ಥಿತಿ ಬಂದರೂ ಬರ ಬಹುದು.
ಕಳೆದ ಕೆಲವು ದಿನಗಳಿಂದ ಪುತ್ತೂರು ತಾಲೂಕಿನ ಬನ್ನೂರು ಅಲುಂಬುಡ ಪರಿಸರದಲ್ಲಿ ತಾರೆಯಿಂದ ತಾರಯಿ, ಕಂಗಿನಿಂದ ಬಜ್ಜೆಯಿ ಖಾಲಿಯಾಗುತ್ತಿದ್ದದ್ದು ಕೃಷಿಕರ ಗಮನಕ್ಕೆ ಬಂದಿತ್ತು. ಇವತ್ತು ನೋಡಿದ ಬಜ್ಜೆಯಿ ಕಿಲೆ ನಾಳೆ ಇಲ್ಲ, ನಿನ್ನೆ ನೋಡಿದ ಗೆಂದಾಳಿ ಇವತ್ತಿಲ್ಲ. ಕೃಷಿಕರ ಪಿತ್ತ ತೆಂಗಿನ ಮರಕ್ಕೆ ಏರಿತ್ತು. ಹಗಲಾದರೂ ಮಂಗ ನನ್ಮಕ್ಕಳ ಕಾಟ ಇದ್ದದ್ದೆ, ನೈಟ್ ಹೇಗಪ್ಪಾ ತಾರಯಿ,ಬಜ್ಜೆಯಿ ಖಾಲಿಯಾಗುತ್ತಿದೆ ಎಂದು ಕೃಷಿಕರು ಬಲಿಮ್ಮೆ ಇಟ್ಟಿದ್ದರು. ಬಲಿಮ್ಮೆಯ ಬಚ್ಚಿರೆಯಲ್ಲಿ ಮಾನವ ರೂಪದ ಆಕೃತಿಯೊಂದು ತಾರೆಗೆ ಬರ್ತುವ ಮಸ್ಕ್ ಮಸ್ಕ್ ಚಿತ್ರ ಲಭಿಸಿತ್ತು. ಮಾಡ್ತೇವೆ ಮಗನೇ ನಿನಗೆ ಸಮ್ಮನ ಎಂದು ಕೃಷಿಕರು ಅಲರ್ಟ್ ಆಗಿ ಬಿಟ್ಟರು.
ಮೊನ್ನೆ ಜುಲಾಯಿ ಏಳರಂದು ಬನ್ನೂರಿನ ಅಲುಂಬುಡದ ರಾಜೇಶ್ ಅವರ ತೋಟದಲ್ಲಿ ನೈಟ್ ಬುಡ್ಕ್ ಬುಡ್ಕ್ ಎಂದು ತಾರಯಿ ಬೀಳುವ ಶಬ್ದ ಕೇಳಿಸಿದೆ. ಕೂಡಲೇ ರಾಜೇಶ್ ಮತ್ತು ಅವರ ಬ್ರದರ್ ಮೆಲ್ಲಗೆ ಕಳ್ಳರ ಹಾಗೆ ಹೆಜ್ಜೆ ಮೇಲೆ ಹೆಜ್ಜೆಯ ನಿಕ್ಕುತ ತೋಟಕ್ಕೆ ಬಂದಿದ್ದಾರೆ. ಶಬ್ದವೇದಿಯ ಹಾಗೆ ಶಬ್ದ ಬಂದ ತೆಂಗಿನ ಮರದ ಅಡಿಗೆ ಬಂದು ಒಮ್ಮೆಲೇ ಟಾರ್ಚ್ ಹಾಕಿದರೆ ಸತೀಶ ಕಳ್ಳ ಮರದ ಕೆಳಗೆ ತಾರಯಿ ರಾಶಿ ಹಾಕಿದ್ದಾನೆ. ರಾಜೇಶ್ ಬ್ರದರ್ಸ್ ಒಮ್ಮೆಲೇ ಟಾರ್ಚ್ ಹಾಕಿದಾಗ ಸತೀಶ ಕಳ್ಳ ಹೈಜಂಪ್, ಲಾಂಗ್ ಜಂಪ್ ಮಾಡಿ ಓಡಿ ಹೋಗಿದ್ದಾನೆ. “ಅಬ್ಬಾ ಕಳ್ಳ ಬೇವರ್ಸಿ, ಇವನ ಅಪ್ಪನ ತೋಟನ” ಎಂದು ಬ್ರದರ್ಸ್ ತೆಂಗಿನ ಕಾಯಿ ಹೆಕ್ಕಲು ನೋಡಿದರೆ ಮೇಲಿಂದ ಸುರ್ರೆಂದು ರಾಕೆಟ್ ಇಳಿದ ಶಬ್ದ. ಮೇಲೆ ಎಂತ ಶಬ್ದ ಎಂದು ಟಾರ್ಚ್ ಮೇಲೆ ಹಾಕಿದರೆ ಮರದ ಅರ್ಧದಲ್ಲಿ ರಾಕೆಟ್ ಬಂದು ನಿಂತಿದೆ. ಮರದಲ್ಲಿ ಮಿಸ್ಟರ್ ಯಶನ್. “ನಿಲ್ಲು ಮಾರಾಯ, ಕೈಬಿಡ ಬೇಡ, ಕೈ ಬಿಟ್ಟರೆ ಬಟ್ಟಿಯಲ್ಲಿ ಪೂಜ ಬೇಕಾದೀತು”ಎಂದು ಬ್ರದರ್ಸ್ ಕೆಳಗಿನಿಂದಲೇ ಹೇಳಿದ್ದಾರೆ. ನಂತರ ಯಶನ್ ನನ್ನು ಬ್ಯಾಂಡ್ ವಾಲಗದಲ್ಲಿ ಕೆಳಗೆ ಇಳಿಸಿ, ತೆಂಗಿನ ಕಾಯಿ ಕಿಲೆ ಕೊರಳಿಗೆ ಹಾಕಿ ಸನ್ಮಾನ ಮಾಡಲಾಯಿತು. ಆಮೇಲೆ ಪುತ್ತೂರು ಪೋಲಿಸರಿಗೆ ಯಶನ್ ನನ್ನು ಒಪ್ಪಿಸಲಾಗಿದ್ದು ಪುತ್ತೂರು ಪೋಲಿಸರು ಕಳ್ಳನ ಎಡ್ಡೆ ಪಡಿಕ್ಕೆ ವಿಚಾರಿಸಿ ಬಿಟ್ಟಿದ್ದಾರೆಂದು ಸುದ್ದಿ. ಪುತ್ತೂರು ಪೋಲಿಸರು ಚಿಲ್ಲರೆ ಕಳ್ಳರಿಗೆಲ್ಲ ಕೇಸ್ ಹಾಕಿ ಸೆಕ್ಷನ್ ಗಳನ್ನ ವೇಸ್ಟ್ ಮಾಡಲ್ಲ.








