ಕಣಿಯೂರು ಗ್ರಾಮ ಪಂಚಾಯ್ತಿಯ ದೈನಂದಿನ ಆಡಳಿತ ಕಾರ್ಯಗಳಿಗೆ ಅನುಕೂಲವಾಗುವ ಕಂಪ್ಯೂಟರ್ ಕೊಠಡಿಯು ಮಳೆಗಾಲದಲ್ಲಿ ನೀರು ಸುರಿದು ತೊಂದರೆಯಾಗುತ್ತಿದ್ದು ರೈನ್ ಕೋಟ್ ಹಾಕಿ ಕೆಲಸ ಮಾಡುವ ಪರಿಸ್ಥಿತಿ ಇತ್ತು. ಇನ್ನು ಫೈಲ್ ಗಳು ಮಳೆಗೆ ನೀರಿಗೆ ಒದ್ದೆಯಾಗಿ ಚಳಿ ಹಿಡಿದು ಗಡಗಡ ಆಗುತ್ತಿತ್ತು. ಇನ್ನು ಹೊಟ್ಟೆ ತುಂಬಾ ಫೈಲ್ ತಿನ್ನಲು ಉದಲ್ ಬರುವ ಸಾಧ್ಯತೆಯನ್ನು ಅರಿತ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಬಹುಮತದ ನಿರ್ಣಯದ ಮೇರೆಗೆ ಗ್ರಾಮ ಪಂಚಾಯತ್ ಕಟ್ಟಡದ ನವೀಕರಣ ಕಾರ್ಯ ಆರಂಭವಾಗಿತ್ತು.
ಆದರೆ ರಿಪೇರಿ ಕೆಲ್ಸ ಆರಂಭವಾಗಿ ಕೆಲವು ದಿನಗಳು ಕಳೆದಿವೆ ಅಷ್ಟೇ. ಅಷ್ಟರಲ್ಲಿ ಕಣಿಯೂರು ಗ್ರಾಮದ ಕಾಂಗ್ರೇಸ್ ಕಾರ್ಯಕರ್ತ, ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಆಪ್ತ ಸತೀಶ್ ರಾವ್ ಎಂಬವರು ತಾಲೂಕು ಪಂಚಾಯ್ತಿ ಆಡಳಿತ ಅಧಿಕಾರಿ ಮುಂದೆ ಅರ್ಜಿ ಸಲ್ಲಿಸಿ ಕಣಿಯೂರು ಗ್ರಾಮ ಪಂಚಾಯತ್ ನವೀಕರಣಕ್ಕೆ ಕೈಗೊಂಡ ನಿರ್ಣಯ ಕಾನೂನು ಬಾಹಿರವಾಗಿದ್ದು, ಆ ನಿರ್ಣಯ ವಜಾಗೊಳಿಸಿ, ಕಾಮಗಾರಿಯನ್ನು ತಡೆಹಿಡಿಯಬೇಕೆಂದು ಕೋರಿದ್ದರು. ಯಾಕೆಂತ ಗೊತ್ತಿಲ್ಲ. ಹಾಗೆ ವಾದ, ಪ್ರತಿವಾದ ನಡೆದು,ಎರಡೂ ಕಡೆಯವರ ಹಿಯರಿಂಗ್ ಆಲಿಸಿದ ಆಡಳಿತಾಧಿಕಾರಿಯವರು ಕಣಿಯೂರು ಗ್ರಾಮ ಪಂಚಾಯತ್ ಕೈಗೊಂಡ ನಿರ್ಣಯ ಕಾನೂನು ಪ್ರಕಾರ ಆಗಿದೆ ಎಂದು ಅಭಿಪ್ರಾಯ ಪಟ್ಟು ಸತೀಶ್ ರಾವ್ ಅವರು ಸಲ್ಲಿಸಿರುವ ಅರ್ಜಿಯನ್ನು ತೆಗೆದ್ದು ಬಿಸಾಡಿದ್ದಾರೆ.
ಇದರಿಂದಾಗಿ ಆಡಳಿತಾಧಿಕಾರಿಯವರ ಮೌಖಿಕ ಆದೇಶದನ್ವಯ ತಡೆಹಿಡಿಯಲಾಗಿದ್ದ ನವೀಕರಣ ಕಾಮಗಾರಿ ಸಂಪೂರ್ಣಗೊಂಡಿರುತ್ತದೆ.
ಹಾಗಾಗಿ ಪಂಚಾಯತ್ ನ ಅಭಿವೃದ್ಧಿ ಗೆ ಅಡ್ಡಲಾಗಿ ತನ್ನ ರಾಜಕೀಯ ದ ಜಿದ್ದಿಗೆ ಬಿದ್ದು ಪ್ರಕರಣ ದಾಖಲು ಮಾಡಿದ್ದ ಕಣಿಯೂರುಕಾಂಗ್ರೇಸ್ ಗೆ ಗ್ರಾಮದಲ್ಲಿ ತೀವ್ರ ಮುಖಭಂಗ ಅನುವಭವಿಸುವಂತಾಗಿದೆ. ಸುಮ್ಮನೆ ಮೊಸರಲ್ಲಿ ಕಲ್ಲು,ಬಂಡೆ ಹುಡುಕಿದರೆ ಹೀಗೆ ಆಗೋದು.






