ಪುತ್ತೂರು: ತಾರಯಿ ಕಳ್ಳ ವರದಿಗೆ ‌ಸ್ಪಷ್ಟೀಕರಣ

Pattler News

Bureau Report

ನಿನ್ನೆ ತಾನೇ ಪುತ್ತೂರು ತಾಲೂಕಿನ ಬನ್ನೂರು ಅಲುಂಬುಡ ಪರಿಸರದಲ್ಲಿ ತೆಂಗಿನ ಕಾಯಿ ಕಳ್ಳರನ್ನು ಊರವರು ಮತ್ತು ತೋಟದ ಮಾಲೀಕರು ರೆಡ್ ಹ್ಯಾಂಡಾಗಿ ಹಿಡಿದು ಪೋಲಿಸರಿಗೆ ಕೊಟ್ಟ ನ್ಯೂಸ್ ವೈರಲ್ ಮಾಡಿದ್ದೆವು. ತೆಂಗಿನ ಕಾಯಿ ಕಳ್ಳರ ಹಾವಳಿ ಜಾಸ್ತಿಯಾಗಿ ಊರವರು ಮಂಡೆ ಬೆಚ್ಚ ಮಾಡಿಕ್ಕೊಂಡು ನೈಟ್ ನಿದ್ರೆ ಕಜ್ಜೆರಿ ಕಳ್ಳರನ್ನು ‌ಹಿಡಿದಿದ್ದರು. ಈ ಬಗ್ಗೆ ನಮಗೆ ಕಳ್ಳನ ಫೋಟೋ, ಪೋಲಿಸ್ತರೆನ ಪೋಟೋ ಮತ್ತು ತೋಟದ ಮಾಲೀಕರು ಒಟ್ಟಿಗೆ ನಿಂತಿದ್ದ ಫೋಟೋ ‌ಯಾರೋ ಓದುಗರು ಕಳಿಸಿ ಕೊಟ್ಟಿದ್ದರು ಮತ್ತು ಆ ಫೋಟೋದಲ್ಲಿ ಮಾಲೀಕರ ಫೋಟೋವನ್ನು ಬ್ಲರ್ ಮಾಡಿಯೇ ಕಳಿಸಿದ್ದರು ಮತ್ತು ನಾವು ಅದನ್ನು ಹಾಗೇಯೇ ನ್ಯೂಸ್ ಗೆ ಹಾಕಿ ವೈರಲ್ ಮಾಡಿದ್ದೆವು.
ಆದರೆ ಕೆಲವು ಕಿಡಿಗೇಡಿಗಳು, ಕಳ್ಳ ನನ್ಮಕ್ಕಳು, ಲೋಫರ್ ನನ್ಮಕ್ಕಳು, ಕಂಡ್ರೆಕುಟ್ಟಿಗಳು ನಾವು ಬ್ಲರ್ ಮಾಡಿದ್ದ ಮಾಲೀಕರ ಫೋಟೋವನ್ನು ಹಾಗೆ ವೈರಲ್ ಮಾಡಿ ಇಬ್ಬರು ತೆಂಗಿನಕಾಯಿ ಕಳ್ಳರ ಬಂಧನ ಎಂಬ ಕ್ಯಾಪ್ಸನ್ ಕೊಟ್ಟು ವೈರಲ್ ಮಾಡಿದ್ದರು. ಈ ಕಂಡ್ರೆಕುಟ್ಟಿ ಕೆಲಸಕ್ಕೆ ನಾವು ಜವಾಬ್ದಾರರಲ್ಲ. ನಾವು ಕಳ್ಳನ ಮತ್ತು ಪೋಲಿಸರ ಫೋಟೋವನ್ನು ಹಾಗೆ ಹಾಕಿ ತೋಟದ ಮಾಲೀಕರ ಫೋಟೋವನ್ನು ಬ್ಲರ್ ಮಾಡಿಯೇ ಹಾಕಿದ್ದೇವೆ. ಈ ಬಗ್ಗೆ ಇವತ್ತು ಬೆಳಿಗ್ಗೆ ತೋಟದ ಮಾಲೀಕರು ಮತ್ತು ಅವರ ಹೆಂಡ್ತಿ ನಮಗೆ ಕಾಲ್ ಮಾಡಿ ಸ್ಪಷ್ಟೀಕರಣ ಕೊಡುವಂತೆ ಹೇಳಿದ್ದರು. ನಮ್ಮದಲ್ಲದ ತಪ್ಪಿಗೆ ನಾವು ಸ್ಪಷ್ಟೀಕರಣ ಕೊಡುತ್ತೇವೆ ಎಂದು ಅವರಿಗೆ ವಾಗ್ದಾನ ಕೂಡ ಮಾಡಿದ್ದೆವು ಮತ್ತು ಸ್ಪಷ್ಟೀಕರಣ ಟೈಪ್ ಕೂಡ ಆಗಿತ್ತು.ಆದರೆ ನಂತರದ ಬೆಳವಣಿಗೆಯಲ್ಲಿ ಆ ತೋಟದ ಮಾಲೀಕರ ಭಾವ ಎಂದು ಹೇಳಿಕೊಂಡು ವಿಟ್ಲದ ಇಂಜಿನಿಯರ್ ಒಬ್ಬರು ನಮಗೆ ಕಾಲ್ ಮಾಡಿದ್ದು ಕೈಕಾಲು ತೆಗೆಯುವ ಬಗ್ಗೆ, ಹಾಫ್ ಮರ್ಡರ್, ಪ್ರೆಸ್ ಕಾನ್ಫರೆನ್ಸ್, ಪೋಲಿಸ್ ಕಂಪ್ಲೈಂಟ್ ಎಂದೆಲ್ಲ ಹೇಳಿ ತಾಕತ್ತಿದ್ದರೆ ಪುತ್ತೂರಿಗೆ ಬಾ ಎಂದು ಬೆದರಿಕೆ ಹಾಕಿದ್ದರು. ಸರ್ ಬಹುಶಃ ಪುತ್ತೂರಿಗೆ ಹೊಸ ಜನ ಆಗಿರಬೇಕು. ಆಯಿತು ಹಾಗಾದ್ರೆ ಎಲ್ಲಾ ಮುಗಿಸ್ಕೊಂಡು ಬರಲಿ ಎಂದು ನಾನೂ ಚಾಚಿ ಮಾಡಿ ಬಿಟ್ಟಿದ್ದೆ.
ಸಂಜೆ ಪುತ್ತೂರು ಟೌನ್ ಠಾಣೆಯಿಂದ ಸಬ್ ಇನ್ಸ್ ಪೆಕ್ಟರ್ ರೆಡ್ಡಿಗಾರು ಫೋನ್ ಮಾಡಿ “ನೋಡಪ್ಪ ಒಂದು ಸ್ಪಷ್ಟೀಕರಣ ಹಾಕಿ ಬಿಡು”ಎಂದು ಹೇಳಿದ್ದರು. ಕೈಕಾಲು ತೆಗೆಯುವ, ಇಂಗ್ಲೀಷ್ ಮಾತಾಡಿ,ಪುತ್ತೂರಿಗೆ ತಾಕತ್ತಿದ್ದರೆ ಬಾ ಎಂದು ಕರೆದ ಪೊಟ್ಟು ಇಂಜಿನಿಯರ್ ಬಗ್ಗೆ ರೆಡ್ಡಿಗಾರು ಬಳಿ ದೂರಿಕೊಂಡಿದ್ದೆ. “ಸುಮ್ನಿರಪ್ಪ, ಸ್ಪಷ್ಟೀಕರಣ ಹಾಕಿ ಬಿಡು” ಅಂದಿದ್ದರು
ಈ ಸ್ಪಷ್ಟೀಕರಣ ನಮಗೆ ಕಾಲ್ ಮಾಡಿದ ಪುತ್ತೂರು ನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಆಂಜನೇಯ ರೆಡ್ಡಿಗಾರುಗೆ ಕೊಟ್ಟ ಗೌರವವೇ ಹೊರತು ನಮ್ಮೊಂದಿಗೆ ರೌಡಿ ಗೆಟಪ್ ನಲ್ಲಿ ಮಾತಾಡಿದ ವಿಟ್ಲದ ಆ ಪೊಟ್ಟು ಇಂಜಿನಿಯರನಿಗಾಗಲಿ ಅಥವಾ ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಚಡ್ಡಿಯಲ್ಲಿ ಕೂರಿಸಲು ಪೋಲಿಸ್ ಠಾಣೆ ತನಕ ಈ ವಿಷಯವನ್ನು ತೆಗೆದುಕೊಂಡು ಹೋದ ಆ ಮುಗ್ಧ ದಂಪತಿಗಳಿಗಾಗಿ ಅಲ್ಲ. ಸ್ಪಷ್ಟೀಕರಣ ಏನೆಂದರೆ ಮೇಲೆ ಪ್ರಕಟಿಸಿದ ಫೋಟೋದಲ್ಲಿ ಒಬ್ಬರು ಪುತ್ತೂರು ಪೋಲಿಸ್ ಆಗಿದ್ದು, ನಡುವಿನಲ್ಲಿ ಪುತ್ತೂರು ಎಂಬ ಬರಹ ಇರುವ ಟೀಶರ್ಟ್ ಹಾಕಿ ಚಡ್ಡಿಯಲ್ಲಿ ನಿಂತವರು ತೋಟದ ಮಾಲೀಕರು. ಕೊನೆಯಲ್ಲಿ 18 ಎಂಬ ಬರಹ ಇರುವ ಪ್ಯಾಂಟ್ ಹಾಕಿದವನು ತಾರಯಿ ಕಳ್ಳ. ಈ ಫೋಟೋ ನಮ್ಮ ಮಾಹಿತಿದಾರರು ನಮಗೆ ಕಳಿಸಿದ್ದು ಮಾಹಿತಿದಾರ ಯಾರು ಎಂದು ನಾವು ಯಾರಿಗೂ ಹೇಳಬೇಕಿಲ್ಲ ಮತ್ತು ಅದನ್ನು ಕೇಳುವ ಅಧಿಕ ಪ್ರಸಂಗವೂ ಯಾರಿಗೂ ಬೇಡ. ಯಾವುದೇ ನ್ಯೂಸ್ ಹಾಕಲು ನಮಗೆ ಎಫ್ಐಆರ್ ಆಗಲೇ ಬೇಕೆಂದಿಲ್ಲ ಮತ್ತು ಈ ತಾರಯಿ ಕಳ್ಳನ ನ್ಯೂಸ್ ಹಾಕಲು ದುಡ್ಡು ತಗೊಳ್ಬೇಕಾದ ಅಗತ್ಯವೂ ಇಲ್ಲ ಮತ್ತು ದುಡ್ಡು ಕೊಡುವ ಮುಖಗಳೂ ಅಲ್ಲಿಲ್ಲ. ತಾಕತ್ತಿದ್ದರೆ ಪುತ್ತೂರಿಗೆ ಬಾ ಎಂದು ತುಂಬಾ ಜನ ಕರೆಯುತ್ತಾ ಇರುತ್ತಾರೆ. 2005 ರಿಂದ ಇದೇ ಪುತ್ತೂರಿನಲ್ಲಿ ಪತ್ರಿಕೆ ನಡೆಸುತ್ತಾ ಇದ್ದೇನೆ ಮತ್ತು ಇವತ್ತಿಗೂ ಫಿಟ್ ಆಗಿದ್ದೇನೆ. ಹೊಸ ಮುಖಗಳನ್ನು ನಾನು ಕೇರ್ ಮಾಡಲ್ಲ ಮತ್ತು ರಕ್ಕಸ ರೌಡಿಗಳ ಬೆದರಿಕೆಗಳಿಗೂ ನಾನು ಗಮನ ಕೊಡಲ್ಲ. ಸಿವಿಲ್ ಮತ್ತು ಕ್ರಿಮಿನಲ್ ಎರಡೂ ರೋಗಕ್ಕೂ ನಮ್ಮಲ್ಲಿ ಮದ್ದಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top