ಕಡಬದಲ್ಲಿ ಕಲರ್ ಕಲರ್ ಕೌ ಕಳ್ಳರು

Pattler News

Bureau Report

ಹಾಗೆಂದು ಕಡಬದ ಕೌ ಕಳ್ಳರ ಬಗ್ಗೆ ಬರೆಯಲು ಶುರು ಮಾಡಿಯೇ ಒಂದು ನೂರೈವತ್ತು ವರ್ಷಗಳು ಸಂದಿವೆ. ಆದರೆ ಕೌ ಕಳ್ಳರ ಚಲನವಲನದಲ್ಲಿ ಒಂಚೂರು ಬದಲಾವಣೆ ಆಗಿಲ್ಲ. ಅದೇ ಪಿಕಪ್ಪು, ಅದೇ ಕೌಗಳು, ಅದೇ ವಹಿವಾಟು. ಕೇಳುವವರೇ ಇಲ್ಲ. ಈ ವಿಷಯದಲ್ಲಿ ಕಡಬ ಪೋಲಿಸರು ಕೂಡ ಸಾಫ್ಟ್ ಸಾಫ್ಟ್. ಯಾಕೆಂದರೆ ಅವರಿಗೂ ಹಿಡಿದು ಹಿಡಿದು, ಹೊಡಿದು ಹೊಡಿದು ಸಾಕಾಗಿ ಹೋಗಿದೆ. ಸೊ ಅವರ ಮೌನಂ ಸಮ್ಮತಿ ಲಕ್ಷಣಂ ಎಂಬಂತಾಗಿದೆ. ಇಲ್ಲಿ ನಿತ್ಯ ಕೌ ಕಳ್ಳರ ಜಾತ್ರೆಯೇ ನಡೆದು ಬಿಡುತ್ತದೆ.
ಕಡಬದಲ್ಲಿ ಕೌ ಬಿಸಿನೆಸ್ ಮಾರ್ಕೆಟ್ ಬಹಳ ದೊಡ್ಡದಿದೆ. ರಖಂ ಮತ್ತು ಚಿಲ್ಲರೆ ‌ವ್ಯಾಪಾರಸ್ಥರ ದೊಡ್ಡ ಟೀಮೇ ಇದೆ. ಕೌಗಳನ್ನು ಘಟ್ಟಕ್ಕೆ ಎಕ್ಸ್ ಪೋರ್ಟ್ ಮಾಡುವ ದೊಡ್ಡ ದೊಡ್ಡ ಟೀಂ ಒಂದು ಕಡೆ ಇದ್ದರೆ, ಇಲ್ಲಿಯೇ ಕಸಾಯಿ ಮಾಡಿ ಮನೆ ಮನೆಗೆ ಕೌಮಾಸ ಸಪ್ಲೈ ಮಾಡುವ ಕಸಾಯಿಗಳ ಟೀಮ್ ಕಡಬ ಪೇಟೆಯಲ್ಲಿ ಮತ್ತು ಕೌ ಕಳ್ಳರ ರಾಜಧಾನಿ ಕಳಾರದಲ್ಲಿ ಹಗಲು ರಾತ್ರಿ ಸಕ್ರೀಯವಾಗಿದೆ. ಈ ಬಗ್ಗೆ ಆವತ್ತು ವಿಸ್ತೃತ ವರದಿ ಪ್ರಕಟಿಸಿದ್ದಕ್ಕೆ “ಈಗ ಕಡಬಕ್ಕೆ ಬಾ, ನಿನ್ನ ಕಾಲು ತೆಗೆದು ಕೈಯಲ್ಲಿ ಕೊಡುತ್ತೇವೆ”ಎಂದು ಕೌ ಕಳ್ಳರು ನನಗೆ ಕಡಬಕ್ಕೆ ಪಂಥಾಹ್ವಾನ ಕೊಟ್ಟಿದ್ದರು. ಕಡಬದಲ್ಲಿ ಅಷ್ಟು ಬೆಳೆದಿದ್ದಾರೆ ಕಸಾಯಿಗಳು. ಈ ಕಸಾಯಿಗಳನ್ನು ಕಷಾಯ ಮಾಡದಿದ್ದರೆ ಮುಂದೆ ಒಂದು ದಿನ ಪೋಲಿಸರಿಗೂ ತಾಕತ್ತಿದ್ದರೆ ಠಾಣೆಯಿಂದ ಕೆಳಗೆ ಇಳಿಯಿರಿ ಎಂಬ ಡೈಲಾಗು ಬರಬಹುದು.
ಹಾಗೆಂದು ಕಡಬದಲ್ಲಿ ಕೇವಲ ಅಶ್ರಪ್ಪುಗಳು ಮಾತ್ರ ಕೌ ಬಿಸಿನೆಸ್ ಮಾಡುವುದಲ್ಲ. ಅಲ್ಲಿ ಲಿಂಗಪ್ಪಣ್ಣ ಕೂಡ ಬಿಸಿನೆಸ್ ಮಾಡುತ್ತಾರೆ. ರಾಬರ್ಟ್ ಕ್ಲೈವ್ ಗಳೂ ಕೂಡ ದೊಡ್ಡ ಮಟ್ಟದಲ್ಲಿ ಕಸಾಯಿ ಮಾಡುತ್ತಿದ್ದಾರೆ. ಹಾಗಾಗಿ ಕಡಬದಲ್ಲಿ ಕೌ ಬಿಸಿನೆಸ್ ಒಂಥರಾ ಸರ್ವ ಧರ್ಮಗಳ ವೈವಾಟ್ ಆಗಿ ಬೆಳೆದಿದೆ. ಈ ಕೌ ವೈವಾಟಿನಲ್ಲಿ ಕೆಲವರು ಬ್ರೋಕರ್ ಕೆಲಸ ಮಾಡಿಯೇ ತಿಂಗಳಿಗೆ ಲಕ್ಷದ ತನಕ ಕಿಸೆಗೆ ಇಳಿಸುವವರ ಬಗ್ಗೆಯೂ ಮಾಹಿತಿ ಇದೆ. ಕೋಡಿಂಬಾಳ, ಪೊರಂತು, ಮಾಲೇಶ್ವರ, ನಾಕೂರು, ಕೋರಿಯಾರ್, ಉಳಿಪು, ಇಚ್ಲಂಪಾಡಿ, ಕಲ್ಲುಗುಡ್ಡೆ, ಕಳಾರ ಮುಂತಾದ ಕಡೆಗಳಿಂದ ಕೌ ಲೋಡ್ ತಾಲೂಕಿನ ಉದ್ದಗಲಕ್ಕೂ, ಘಟ್ಟಕ್ಕೂ ಸಪ್ಲೈ ಆಗುತ್ತಿದೆ. ಇನ್ನು ಕಳಾರದಲ್ಲಿ “ಕಳ ಬೇಡ, ಕೊಲ ಬೇಡ, ಹುಸಿಯ ನುಡಿಯ ಬೇಡ, ಮುನಿಯ ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಮಾಮೂಲು.
ಇನ್ನು ಕಡಬದ ಕೌ ವೈವಾಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಕಸಾಯಿ ಮಾಡುವ ಆಧುನಿಕ ಮೆಷಿನರಿಗಳು ಕಳಾರದ ಕೆಲವು ಮನೆಗಳಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಹೆಲ್ದಿ ಹೆಲ್ದಿ, ಟೇಸ್ಟಿ ಟೇಸ್ಟಿ ಬೀಫನ್ನು ಶೇಖರಿಸಿಡಲು ಕೋಲ್ಡ್ ಸ್ಟೋರೇಜ್ ಗಳು ಕಳಾರದ ಮನೆ ಮನೆಗಳಲ್ಲಿ ಇದೆ. ಇನ್ನು ಕೌ ಸಾಗಾಟದ ವಾಹನಗಳಿಗೆ ಎದುರು ನಂಬರ್ ಪ್ಲೇಟ್ ಇರುತ್ತದೆ, ಸೈಡಲ್ಲಿ ನಂಬ್ರ ಬರೆದಿರುತ್ತದೆ, ಆದರೆ ಪಿರವು ನಂಬರ್ಲ ಇಜ್ಜಿ, ಪ್ಲೇಟ್ಲ ಇಜ್ಜಿ. ಇನ್ನು ಕಡಬ ಪೇಂಟೆಯಲ್ಲಿ ಬೀಫ್ ಸರಬರಾಜುದಾರರು ಕಾರಲ್ಲಿ ಬೀಫ್ ಸಪ್ಲೈಮಾಡುವುದಿದ್ದರೆ “ಬಾಣೆ ಓ ಔಡಕ್ಕ್ ಪೋಯಿಟ್ ಬರಮ” ಎಂದು ತಿರಿಯೋಳೆ ಕೂರಿಸ್ಕೊಂಡು ಸಪ್ಲೈ ಮಾಡುವ ವಿಧಾನ ಇದೆ. ಸ್ಕೂಟಿಯಲ್ಲಿ, ಬೈಕಲ್ಲಿ ಸರಬರಾಜು ಮಾಡುವವರು ಮಕ್ಕಳನ್ನು ಕೂರಿಸ್ಕೊಂಡು ಹೋಗಿ ಸಪ್ಲೈ ಮಾಡುವ ವಿಧಿವಿಧಾನಗಳಿವೆ. ಇನ್ನು ಕೆಲವು ಪಿರವು ನಂಬರ್ ಪ್ಲೇಟ್ ಇಲ್ಲದ ಪಿಕಪ್ ಗಳಲ್ಲಿ ಮಕ್ಕಳು ಕಂಡು ಬಂದರೆ ಅದರಲ್ಲಿ ಹಿಂದೆ ಕೌಗಳನ್ನು ಮಡಚಿ ಮಡಚಿ,ಮುರುಂಟು ಕಟ್ಟಿಸಿ ಸಾಗಿಸಲಾಗುತ್ತಿದೆ ಎಂದೇ ಅರ್ಥ. ಕಡಬ ಪೇಂಟೆಯ ಕೆಲವೊಂದು ಆಯ್ದ ಜೀನ್ಸ್ ಅಂಗಡಿಗಳಲ್ಲಿ, ಹೋಟೆಲ್ ಗಳಲ್ಲಿ, ಚಿಕನ್ ಮಟನ್ ಅಂಗಡಿಗಳಲ್ಲಿ ರಖಂ ಮತ್ತು ಚಿಲ್ಲರೆ ಬೀಫ್ ಸಿಗುತ್ತಿದ್ದು ವೈವಾಟ್ ಓಪನ್ ಆಗಿ ನಡೆಯುತ್ತಿದೆ. ಕ್ಯಾರೇ ಇಲ್ಲ.
ಹಾಗೆಂದು ಕಡಬದಲ್ಲಿ ಈ ಒಂದು ಕಸಾಯಿ ವೈವಾಟಿಗೆ ಒಂದು ವರ್ಗದ ಮುಸ್ಲಿಮರ ತೀವ್ರ ವಿರೋಧವೂ ಇದೆ. ಆದರೆ ಲಿಂಗಪ್ಪಣ್ಣ ಕೂಡ ಕಸಾಯಿ ವೈವಾಟ್ ಮಾಡುವ ಕಾರಣ ಅವರ ವಿರೋಧ ಅರಣ್ಯ ರೋಧನವಾಗಿದೆ. ಇವತ್ತು ಒಂದು ಪಿಕಪ್ ನವನಿಗೆ ಡಬ್ಬಲ್ ಬಾಡಿಗೆ ಸಿಕ್ಕಿದರೆ ಅದನ್ನು ನೋಡಿ ನಾಳೆ ಇನ್ನೊಬ್ಬ ಅದೇ ವೈವಾಟಿಗೆ ಇಳಿಯುತ್ತಾನೆ. ಇವತ್ತು ಒಬ್ಬ ಕಸಾಯಿ ಲೆಕ್ಕಕ್ಕಿಂತ ಜಾಸ್ತಿ ಆದಾಯ ಕಿಸೆಗೆ ಇಳಿಸಿದರೆ ಅದನ್ನು ನೋಡಿ ನಾಳೆ ಮತ್ತೊಬ್ಬ ಶುರು ಮಾಡುತ್ತಾನೆ. ಹಾಗಾಗಿ ಕಡಬದಲ್ಲಿ ಕೌ ವೈವಾಟ್ ಒಂದು ಸಮೂಹ ಸನ್ನಿ, ಸಾಂಕ್ರಾಮಿಕ ರೋಗ. ಪಾಪ ಪುಣ್ಯದ ಲೆಕ್ಕ ಎಲ್ಲಾ ಆಮೇಲೆ ಮೇಲೆ ಹೋದ ಮೇಲೆ ಎಂಬ ಮೆಂಟಾಲಿಟಿ ಇದೆ. ಎಲ್ಲಿಯಾದರೂ ನೀವು ಅಂಥ ಕಸಾಯಿಖಾನೆಗಳಿಗೆ ಭೇಟಿ ಕೊಟ್ಟರೆ ಇದು ಭಾರತ ದೇಸವ ಅಥವಾ ಪಾಕಿಸ್ತಾನವ ಎಂದು ಡೌಟು ಬಂದು ಬಿಡುತ್ತದೆ. ಕಡಬದಲ್ಲಿ ಕಸಾಯಿಗಳ ಅಬ್ಬರ ಅಷ್ಟು ಜೋರಿದೆ, ಅಷ್ಟು ರಂಪಿದೆ.
ಕಡಬದಲ್ಲಿ ಭಜರಂಗಿಗಳಿಗೆ ಮೆಜಾರಿಟಿ ಇಲ್ಲ, ರಾಮ ಸೈನಿಕರಿಗೆ ಸಪೋರ್ಟ್ ಇಲ್ಲ. ದೇಶಭಕ್ತರಿಗೆ ಬೆಟ್ರಿ ಇಲ್ಲ, ಸಭ್ಯ ನಾಗರೀಕರಿಗೆ ಧಮ್ಮಿಲ್ಲ. ಬೊಡಿದು ಹೋಗಿರುವ ಪೋಲಿಸರು ಮತ್ತು ಬೋರ್ಡ್ ಇಲ್ಲದ ಸಮಾನ ಮನಸ್ಕ ಸಂಘಟನೆಗಳ ಊರಿನಲ್ಲಿ ಕಸಾಯಿಗಳ ಜಾತ್ರೆ ನಡೆಯುತ್ತಿದೆ. ಜನ ಮರುಳೋ, ಜಾತ್ರೆ ಮರುಳೋ, ಕಸಾಯಿ ಮರುಳೋ ಅರ್ಥವಾಗುತ್ತಿಲ್ಲ

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top