ಮಂಗಳೂರು ಗಣಿಯಲ್ಲಿ ಟೆಂಟ್?

Pattler News

Bureau Report

ಇತ್ತೀಚೆಗೆ ಮಂಗಳೂರು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಲಂಚದ ಹಗರಣದಿಂದ ಅಮಾನತುಗೊಂಡಿರುವ ವಿಷಯ ಇಡೀ ರಾಜ್ಯದಲ್ಲಿ ಟಾಂ ಟಾಂ ಆಗಿದೆ. ಇವರ ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತಿದ್ದವರು ಭೂವಿಜ್ಞಾನಿ ಡಾ. ಮಹದೇಶ್ವರ ಎಚ್ಎಸ್ ಎಂದು ಕೂಡ ಪ್ರಚಾರ ಆಗಿತ್ತು. ಭೂ ವಿಜ್ಞಾನಿಯಾದ ಮಹಾದೇಶ್ವರ ಎಚ್ ಎಸ್ ದಕ್ಷಿಣ ಕನ್ನಡ ಜಿಲ್ಲೆಯ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸನ್ಮಾನ್ಯರು ಸರಿ ಸುಮಾರು ಐದು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಕರ್ನಾಟಕ ಸರಕಾರದ ಸುತ್ತೋಲೆಯ ಪ್ರಕಾರ ಒಂದು ತಾಲೂಕು ಅಧಿಕಾರಿಯಾಗಿ ಇರುವವರು ಎರಡು ವರ್ಷಕ್ಕಿಂತ ಜಾಸ್ತಿ ಒಂದೇ ಕಡೆ ಟೆಂಟ್ ಹಾಕುವಂತೆ ಇಲ್ಲ. ಆದರೂ ಅವರಿವರಿಗೆ ನಮಸ್ಕಾರ ಮಾಡಿ, ಸಾಷ್ಟಾಂಗ ಬಿದ್ದು ವರ್ಗಾವಣೆ ಆಗದೆ ಕನಿಷ್ಠ ಮೂರು ವರ್ಷ ಇರಬಹುದು. ಆದರೆ ಜಿಲ್ಲೆಯಲ್ಲಿ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿ ಮಹದೇಶ್ವರ ಎಚ್ ಎಸ್ ಸರಿ ಸುಮಾರು ಐದು ವರ್ಷಗಳಿಂದ ಎಲ್ಲಿಗೂ ಗಂಟು ಮೂಟೆ ಕಟ್ಟಿಲ್ಲ. ಈ ಅಧಿಕಾರಿಗೆ ದಿನಾಂಕ 28/10/2024 ರಂದು ವರ್ಗಾವಣೆ ಆದೇಶವಾಗಿತ್ತು. ಆದರೆ ಹಿರಿಯ ಭೂವಿಜ್ಞಾನಿಯಾದ ಕೃಷ್ಣವೇಣಿಯವರು ಸರಕಾರದ ಆದೇಶವನ್ನು ಧಿಕ್ಕರಿಸಿ ಮಾದೇಶ್ವರ ಸಾಮಿಯನ್ನು ರಿಲೀವ್ ಮಾಡಿರಲಿಲ್ಲ. ಯಾಕೆಂದರೆ ತನ್ನ ಬ್ರಷ್ಟಾಚಾರದ ಕೆಲಸಗಳಿಗೆ ಸಹಕಾರ ನೀಡುತ್ತಿದ್ದ ಎಂಬ ಒಂದೇ ಕಾರಣಕ್ಕೆ. ದೊಡ್ಡ ದೊಡ್ಡ ಅಕ್ರಮ ಮಾಫಿಯಾದ ಜನರನ್ನು ಇದೇ ಭೂ ವಿಜ್ಞಾನಿಯಾದ ಮಹದೇಶ್ವರ ಎಚ್ಎಸ್ ಅವರು ಹಿರಿಯ ಭೂವಿಜ್ಞಾನಿಯಾದ ಕೃಷ್ಣವೇಣಿ ಅವರಿಗೆ ಪರಿಚಯ ಮಾಡಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದು ಸಹ ಭೂ ವಿಜ್ಞಾನಿಯಾದ ಮಹದೇಶ್ವರ ಎಚ್ಎಸ್ ಇವರಿಗೆ ವರ್ಗಾವಣೆ ಆಗದ ರೀತಿಯಲ್ಲಿ ಸಹಕಾರವಾಗಿತ್ತು. ಸರಕಾರ ವರ್ಗಾವಣೆಯನ್ನು ಮಾಡಿದ್ದರೂ ಈ ವರ್ಗಾವಣೆ ಆದೇಶವನ್ನೇ ತನ್ನ ಹಿಡಿತದಲ್ಲಿ ಹಿಡ್ಕೊಂಡು ಸರಕಾರಕ್ಕೇ ಸವಾಲು ಎಸೆದಂತಹ ಲಂಚದ ಅಧಿಕಾರಿ ಕೃಷ್ಣವೇಣಿಯವರ ಒಂದು ಆಟ ನಿಂತಿತು. ಆದರೆ ಕಳೆದ ವರ್ಷ ವರ್ಗಾವಣೆಯಾದಂತಹ ಭೂವಿಜ್ಞಾನಿ ಮಹದೇಶ್ವರ ಎಚ್ಎಸ್ ಯಾವಾಗ ವರ್ಗಾವಣೆ ಆಗುತ್ತಾರೆ ಎಂಬುದು ಇನ್ನೂ ನಿಘಂಟಾಗಿಲ್ಲ. ಸರಕಾರ ತಕ್ಷಣ ಈ ವರ್ಗಾವಣೆ ಆದೇಶವನ್ನು ಮತ್ತೇ ಜ್ಯಾರಿ ಮಾಡಿ ಕೃಷ್ಣವೇಣಿ ಮತ್ತು ಭೂ ವಿಜ್ಞಾನಿಯಾದ ಮಾದೇಶ್ವರ ಎಚ್ಎಸ್ ಇವರನ್ನು ಕರಾವಳಿಯಿಂದಲೇ ಶಿಫ್ಟ್ ಮಾಡಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ವಿನಂತಿಸಿಕೊಳ್ಳುತ್ತಿದ್ದಾರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವರಿಂದ ಸಂತ್ರಸ್ಥರಾದವರಿಗೆ ಒಂದು ನ್ಯಾಯ ಒದಗಿಸಿ ಕೊಡಬೇಕಾಗಿ ಸಾರ್ವಜನಿಕ ವಿನಂತಿ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top