ಕರ್ನಾಟಕದ ನಂಬರ್ ವನ್ ದೇವಸ್ಥಾನ. ವರ್ಷಕ್ಕೆ ಸುಬ್ರಹ್ಮಣ್ಯನ ಆದಾಯ ಕೋಟಿ ಕೋಟಿ. ಮಾಸ್ಟರ್ ಪ್ಲಾನ್, ಆ ಯೋಜನೆ, ಈ ಯೋಜನೆ ಎಂದು ಅಂಡಿಗುಂಡಿ ಯೋಜನೆಗಳ ಬರ್ಸ. ಆದರೆ ಯಾವುದೇ ಯೋಜನೆ ಯೋಚನೆಯಾಗಿಯೇ ಉಳಿಯುವುದು ಬಿಟ್ಟರೆ ಸರಿಯಾಗಿ ಕಾರ್ಯಗತ ಆಗುತ್ತಿಲ್ಲ. ಇದೀಗ ಸುಬ್ರಹ್ಮಣ್ಯದ ರಥಬೀದಿಯ ಅಂಡಿಗುಂಡಿ ಪಾರ್ಕಿಂಗ್ ವ್ಯವಸ್ಥೆಯಿಂದ ಭಕ್ತರ ಅನೇಕ ಕಾರುಗಳು ಕ್ರೇಂಕೆಸ್ ಒಟ್ಟೆ ಆಗುವ ತನಕ ಗಾಯಗೊಂಡಿದ್ದು ದೂರದೂರಿನ ಭಕ್ತಾದಿಗಳು ಇದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ ಪಾರ್ಕಿಂಗ್ ಮಾಡಿ ಕಾರಿನಿಂದ ಇಳಿಯಲೂ ತೊಂದರೆಗಳಾಗುತ್ತಿದ್ದು ಕಾರಿನಿಂದ ಇಳಿದರೆ ಕಾಲುಗಳು ಮಣ್ಣಿನಲ್ಲಿ ಹೂತು ಹೋಗುವ ಅಪಾಯಗಳಿವೆ. ಸುಬ್ರಹ್ಮಣ್ಯನ ದರ್ಶನಕ್ಕೆ ಪಾಪ ದೂರ ದೂರದ ಊರುಗಳಿಂದ ಭಕ್ತರು ಬಂದು ಇಲ್ಲಿ ಕಾರು ಕೆಟ್ಟು ಹೋದರೆ ದೇವರೇ ಗತಿ. ತಲ್ವಾರ್ ಹಿಡಿದು ಕಡಿದು ಬಿಡುತ್ತಾರೆ.

ಹಾಗೆಂದು ಈ ಕಾರ್ ಪಾರ್ಕಿಂಗ್ ಯಾಕೆ ಹೀಗೆ ಬಿಟ್ಟಿದ್ದಾರೋ ಗೊತ್ತಿಲ್ಲ. ಅದನ್ನೊಂದು ಸಮತಟ್ಟು ಮಾಡಿ ಅದಕ್ಕೆ ಒಂದು ಲೋಡ್ ಕೆಂಪು ಕಲ್ಲಿನ ಪೊಡಿ, ಪೊಯ್ಯೆ, ಬೇಬಿ ಜಲ್ಲಿ ಅಥವಾ ಕಡ್ಪ ಕಲ್ಲಿನ ಪೊಡಿ ಹಾಕಲು ಇವರಿಗೇನು ಉದಾಸೀನ. ದೊಡ್ಡ ದೊಡ್ಡ ಆನೆ, ಕುದುರೆ ಅಂತ ಮಾತಾಡುತ್ತಾರೆ, ಸ್ಟೇಟ್ ಲೆವೆಲ್ ಪೋಸ್ ಕೊಡುತ್ತಾರೆ, ಪಾರ್ಕಿಂಗ್ ವ್ಯವಸ್ಥೆ ಒಂದು ಸರಿ ಮಾಡಲು ಆಗಲ್ವಾ?







