ಮೊನ್ನೆ ತಹಶೀಲ್ದಾರ್ ಪುರಂದರ ಹೆಗ್ಡೆರ್ ಮನೆಗೆ ಹೋದ ಮೇಲೆ ಪುತ್ತೂರು ತಹಶೀಲ್ದಾರನ ಕುರ್ಚಿಗೆ ಫಂಗಸ್ ಹಿಡಿದಿದೆ. ಪುತ್ತೂರು ತಾಲೂಕು ಆಫೀಸಿನಲ್ಲಿ ಸದ್ಯಕ್ಕೆ ಯಾವ ಕೆಲಸವೂ ನಡೆಯುತ್ತಿಲ್ಲ. ಯಾಕೆಂದರೆ ತಹಶೀಲ್ದಾರ್ ಕೊಂಬ ಬೆರೆಲ್ ಇಲ್ಲ
ಹಾಗೆಂದು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಉಡುಪಿ ನಂತರದ ದೊಡ್ಡ ಸಿಟಿ ಪುತ್ತೂರು. ಇಲ್ಲಿ ಅಸಿಸ್ಟೆಂಟ್ ಕಮಿಷನರ್ ಇದ್ದಾನೆ, ಅಸಿಸ್ಟೆಂಟ್ ಪೋಲಿಸ್ ಸುಪರಿಂಟೆಂಡೆಂಟ್ ಇದ್ದಾನೆ. ಇನ್ನೂ ಯಾರ್ಯಾರೋ ದೊಡ್ಡ ದೊಡ್ಡವರು ಇದ್ದಾರೆ. ಜನ ಸಂಖ್ಯೆಯಲ್ಲೂ, ಗ್ರಾಮೀಣ ಪ್ರದೇಶದಲ್ಲೂ ಪುತ್ತೂರು ಬಡಾ ಇದೆ. ಇಲ್ಲಿ ಕೆಎಸ್ಸಾರ್ಟಿಸಿ ಡಿ.ಸಿ ಕೂಡ ಬಂದು ಕೂತ್ಕೊಂಡಿದ್ದಾನೆ. ಕಂದಾಯ ಇಲಾಖೆ ಇಲ್ಲಿ ದೊಡ್ಡ ಮಿನಿ ಮಿನಿ ವಿಧಾನಸೌಧ ಕೂಡ ಕಟ್ಟಿದೆ. ಸೌಧದಲ್ಲಿ ವಹಿವಾಟು ಕೂಡಾ ದೊಡ್ಡದಿದೆ. ಆದರೆ ಇಲ್ಲಿ ಸದ್ಯಕ್ಕೆ ತಹಶೀಲ್ದಾರನ ತಂಬು ಸಿಗುತ್ತಿಲ್ಲ. ತಂಬು ಸಿಗುತ್ತಿಲ್ಲ ಅಂದರೆ ಇಲ್ಲಿ ತಹಶೀಲ್ದಾರ ಇಲ್ಲ. ಬೇರೆಯವರ ಕೊಂಬ ಬೆರೆಲನ್ನು ತಂಬು ಮಿಸನ್ ಓ.ಕೆ ಅನ್ನುತ್ತಿಲ್ಲ.
ಹಾಗೆಂದು ಪುತ್ತೂರು ತಹಶೀಲ್ದಾರನ ಕುರ್ಚಿಗೆ ಬೇಕಾದಷ್ಟು ಆದಾಯ ಇದೆ. ಪೂಜಿ ಕೊಳ್ಳಲು ಎರಡು ಕೈ ಸಾಲದು. ಆವತ್ತು ಪುರಂದರ ಹೆಗ್ಡೆರ್ ನಿವೃತ್ತಿಯಾಗಿ ಮನೆಗೆ ಹೋದ ಮೇಲೆ ಪುತ್ತೂರಿಗೆ ಪೊಸ ತಹಶೀಲ್ದಾರನ ನೇಮಕಾತಿ ಆಗಿತ್ತು. ಆದರೆ ಜನ ಪೇಪರಲ್ಲಿ ಮಾತ್ರ ತಹಶೀಲ್ದಾರನ ಫೋಟೋ ನೋಡಿದ್ದು. ಛೇಂಬರಲ್ಲಿ ಬಾಡಿ ಇಲ್ಲ. ತಹಶೀಲ್ದಾರ್ ಅಂತ ಒಂದು ಜನ ಉಂಟು ಎಂದು ಎಲ್ಲರೂ ಹೇಳುವುದನ್ನು ಕಿವಿಗಳು ಕೇಳಿಸಿಕೊಂಡಿವೆ ಆದರೆ ಕಣ್ಣುಗಳು ನೋ ಎನ್ನುತ್ತಿವೆ. ಇಲ್ಲಿಗೆ ಟ್ರಾನ್ಸ್ಫರ್ ಅದ ತಹಶೀಲ್ದಾರನಿಗೆ ಇಲ್ಲಿಗೆ ಬರಲು ಸುತಾರಾಂ ಮನಸ್ಸಿಲ್ಲ ಅಂತೆ, ಅದಕ್ಕಾಗಿ ಗಂಟುಮೂಟೆ ಇಲ್ಲಿಗೆ ತರದೆ ಮೇಲಿಂದಲೇ ಬೇರೆ ಕಡೆ ಗಂಟುಮೂಟೆ ಕಟ್ಟಲು ಪ್ರಯತ್ನಿಸುತ್ತಿರುವ ಕಾರಣ ಪುತ್ತೂರು ತಹಶೀಲ್ದಾರನ ಛೇಂಬರ್ ಖಾಲಿ ಬಿದ್ದಿವೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಒಳ್ಳೇ ಆದಾಯ ಇದೆ ಅಲ್ವಾ, ಯಾವುದಕ್ಕೂ ಕಮ್ಮಿಯಿಲ್ಲ ಅಲ್ವಾ ಎಂದು ಕೇಳಿದರೆ, ಅವರು ಯಾವುದೋ ದೊಡ್ಡ ತಾಲೂಕನ್ನು ಟ್ರೈ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆ ನೋಡಿದರೆ ದಕ್ಷಿಣೆ ಕನ್ನಡದ ಎರಡು ಸೀಟುಗಳಲ್ಲಿ ಮಾತ್ರ ಆಡಳಿತ ಪಕ್ಷದ ಎಮ್ಮೆಲ್ಲೆಗಳು ಇದ್ದಾರೆ. ಈಗ ದೇಶಭಕ್ತರ ಕ್ಷೇತ್ರದ ತಾಲೂಕಿನ ತಹಶೀಲ್ದಾರ್ ಮ್ಯಾಟರ್ ಆದ್ರೆ ಸರಿ ಏನೋ ರಾಜಕೀಯ ಇರಬಹುದು ಎಂದು ನಂಬಬಹುದು. ಆದರೆ ಇದು ಪುತ್ತೂರು ಕತೆ. ಆಡಳಿತ ಪಕ್ಷದ ಎಮ್ಮೆಲ್ಲೆ ಇದ್ದಾರೆ ಮತ್ತು ಕಾರ್ಯಾಂಗದ ಚಳಿ ಅಪಗಪಗ ಬಿಡಿಸುತ್ತಾ ಇರುತ್ತಾರೆ. ಆದರೆ ತಹಶೀಲ್ದಾರ ಮಾತ್ರ ಇಲ್ಲ. ಈ ವಿಷಯ ಶಾಸಕರ ಗಮನಕ್ಕೆ ಇದೆಯಾ ಎಂದು ಗೊತ್ತಿಲ್ಲ. ಒಂದು ಖಾತಾ ಬದಲಾವಣೆಗೆ ಅರ್ಜಿ ಕೊಡಲು ಹೋದರೂ “ತಹಶೀಲ್ದಾರ್ ಇಜ್ಜೆರ್” ಎಂದು ಕೂಲಿಗೆ ಕಡ್ಡಿ ಹಾಕುತ್ತಾ ಸಂಬಂಧ ಪಟ್ಟವರಿಂದ ಉತ್ತರ ಬರುತ್ತದೆ. ತಹಶೀಲ್ದಾರ್ ಯಾಕೆ ಅಂದ್ರೆ ಅವರ ತಂಬು ಬೇಕು. ತಂಬಿಲ್ಲದೆ ಯಾವ ಕೆಲಸವೂ ನಡೆಯಲ್ಲ. ಎಲ್ಲವೂ ಸ್ಟ್ರಕ್ ಆಗಿದೆ, ವ್ಯವಸ್ಥೆಗೆ ಸ್ಟ್ರೋಕ್ ಆಗಿದೆ. ಮುಲೈ ಮುಹಿಲನ್ ಇದ್ದಿದ್ದರೆ ಮಳೆಗೆ ಮಿನಿ ವಿಧಾನಸೌಧಕ್ಕೂ ರಜೆ ಕೊಡಿಸ ಬಹುದಿತ್ತು. ಇದೀಗ”ಎಲ್ಲೆ ಬರ್ಪೆರ್” ಎಂದು ಸುದ್ದಿ ಇದೆ. ಹೀಗೆ ತುಂಬಾ ಸಲ ಗಣಪತಿಗೆ ಮದುವೆ ಆಗಿದೆ ಎಂದೂ ಹೇಳುತ್ತಾರೆ.






