ಚಾರ್ವಾಕದಲ್ಲಿ ಅಟ್ಟ ಹತ್ತಿದ ಗಂಟ

Pattler News

Bureau Report

ಕಡಬ ತಾಲೂಕು ಚಾರ್ವಾಕ ಗ್ರಾಮದ ಎಣ್ಮೂರು ಎಂಬಲ್ಲಿ ನೈಟ್ ಮನೆಯೊಂದರಲ್ಲಿ ಗಂಟ ಪುಚ್ಚೆ ಪ್ರಕರಣವೊಂದು ನಡೆದಿದ್ದು, ಈ ಬಗ್ಗೆ ಪಂಚಾಯ್ತಿ ನಡೆದು ಮಂಗು ಪುಚ್ಚೆಯನ್ನು ಗಂಟನಿಗೆ ರಿಜಿಸ್ಟರ್ ಮಾಡಿಕೊಡುವ ಬಗ್ಗೆ ಮಾತುಕತೆ ಆಗಿದೆ ಎಂದು ತಿಳಿದುಬಂದಿದೆ.
ಅಲ್ಲಿ ಚಾರ್ವಾಕ ಗ್ರಾಮದ ಎಣ್ಮೂರಿನ ಮನೆಯೊಂದರಲ್ಲಿ ನೈಟ್ ಎಲ್ಲರೂ ಮಲಗಿದ್ದರು. ಅಪ್ಪ ಅಮ್ಮ ಒಂದು ರೂಮಿನಲ್ಲಿ ಮಲಗಿದ್ದರೆ, ಮಗ ಮತ್ತೊಂದು ರೂಮಿನಲ್ಲಿ ಮಲಗಿದ್ದ. ಮಗಳು ಅಡುಗೆ ಕೋಣೆ ಬಳಿ ಇರುವ ಡೈನಿಂಗ್ ಹಾಲ್ ನಲ್ಲಿ ಹಾಸಿಗೆ ಬಿಡಿಸಿದ್ದಳು. ಡೈನಿಂಗ್ ಹಾಲ್ ನಿಂದ ಹೊರಗೆ ಡೈರೆಕ್ಟ್ ಡೋರ್ ಇದೆ. ಬಾಗಿಲು ಚೂರು ಒರ್ದ ಮಾಡಿ ತೆಗೆದರೂ ಸಾಕು ಗಂಟಪುಚ್ಚೆ, ದಾಸು ಗೀಸು ಒಳಗೆ ನುಗ್ಗಿ ಬಿಡುವ ಅಪಾಯಗಳಿದ್ದ ರೂಮಿನಲ್ಲೇ ಪ್ರಾಯಕ್ಕೆ ಬಂದಿದ್ದ ಮಗಳು ಮಲಗಿದ್ದಳು. ಎಲ್ಲರಿಗೂ ಗಾಢ ನಿದ್ದೆ. ಹೊರಗೆ ಜಿರಿಕೂಟ ಬರ್ಸ
ಹಾಗೆ ಆ ಎಣ್ಮೂರಿನ ಮನೆಯಲ್ಲಿ ತಡರಾತ್ರಿ ಮನೆಯ ಯಜಮಾನನಿಗೆ ಏನೋ ಕನ ಕಟ್ಟಿ ದಢಕ್ಕೆಂದು ಎಚ್ಚರ ಆಗಿದೆ. ಹೇಗೂ ಎಚ್ಚರ ಆಗಿದೆ ಅಲ್ವಾ, ಸೂಸು ಕೂಡ ಕನ್ನಂಬಾಡಿಯ ಹಾಗೆ ಸ್ಟಾಕ್ ಆಗಿದ್ದ ಕಾರಣ ಇನ್ನು ಸೂಸು ಬಿಟ್ಟೇ ಮಲಗುವ ಎಂದು ಎದುರು ಬಾಗಿಲು ತೆಗೆದು ಸುಸು ಡೆಲಿವರಿ ಮಾಡಿ ಒಳಗೆ ಬಂದು ಬಾಗಿಲು ಹಾಕಿದ್ದಾರೆ. ಛೇ..ಕಾಲೆಲ್ಲ ಚಂಡಿ ಚಂಡಿ ಆಗಿದೆ, ಸ್ವಲ್ಪ ಒರೆಸಿಕೊಳ್ಳುವ ಎಂದು ಕೈಕುಂಟು ಹುಡುಕುತ್ತಾ ಡೈನಿಂಗ್ ಹಾಲ್ ಗೆ ಬಂದು ಜಿಗ್ಗ ಅಂತ ಲೈಟ್ ಹಾಕಿದ್ದಾರೆ ಮತ್ತು ಬೆಚ್ಚಿ ಬಿದ್ದಿದ್ದಾರೆ ಹಾಗೇಯೇ ಊರಿಗೇ ಕೇಳುವಷ್ಟು ದೊಡ್ಡದಾಗಿ ಕಿರುಚಿದ್ದಾರೆ. ಡೈನಿಂಗ್ ಹಾಲ್ ನಲ್ಲಿ ಮಲಗಿದ್ದ ಮಗಳ ಹಾಸಿಗೆಯಿಂದ ಹುಡುಗನೊಬ್ಬ ಚಡ್ಡಿ ಮೇಲೆ ಎಳೆಯುತ್ತಾ ಎದ್ದು ನಿಂತಿದ್ದಾನೆ. ಇಡೀ ಮನೆಯಲ್ಲಿ ಲೈಟ್ಸ್ ಆನ್ ಆಗಿದೆ ಮತ್ತು ನೆರೆಕರೆಯವರು ಏನೋ ಆಗಿದೆ ಎಂದು ಓಡಿ ಬಂದಿದ್ದಾರೆ.
ಹಾಗೆಂದು ಅವನಿಗೆ ಚಾರ್ವಾಕ ಗ್ರಾಮದ ಜಂಕ್ಷನ್ ಬಳಿ ಒಂದು ಪೊಟ್ಟು ಕೋಳಿ ಅಂಗಡಿ ಇದೆ. ಕೋಳಿ ಅಂಗಡಿ ಇದ್ದ ಕಾರಣ ಇವನಿಗೂ ಕೋಳಿ ಸಹವಾಸದಿಂದ ಕೋಳಿ ಕಾಮ ಶುರುವಾಗಿತ್ತು. ಟೈಟ್ ಮೆನ್ ಸಹ. ಇವನಿಗೆ ಅದೇ ಗ್ರಾಮದ ಎಣ್ಮೂರು ಎಂಬಲ್ಲಿನ ಹುಡುಗಿಯೊಬ್ಬಳ ಜೊತೆ ಅದು ಇದು ಅಂತ. ಅವಳೋ ಡಿಗ್ರಿ ಹೋಲ್ಡರ್ ಮತ್ತು ಎಣ್ಮೂರು ಸುಂದರಿ. ಇವನು ಮಾರುತಿ ವೀರ ಮತ್ತು ರಣ ಕುಡಿಯ. ಇಬ್ಬರ ನಡುವೆಯೂ ಮೆಸೇಜ್ ಬರ್ಸ ಮುಗಿದು ಸೋಣದ ಹಂತಕ್ಕೆ ಬಂದಿದ್ದಾರೆ. ಆದರೆ ಎಲ್ಲಿ? ಸ್ಪಾಟ್ ಬೇಕಲ್ಲ. ಸ್ಪಾಟ್ ಬೇಕು, ಅಡ್ಡ ಬೇಕು, ಬಂದ್ ಇರಬೇಕು,ಕತ್ತಲೆ ಇರಬೇಕು. ಎಲ್ಲಿ..? ಎಲ್ಲಿ…? ಎಂದು ಇಬ್ಬರೂ ಆಲೋಚಿಸಲಾಗಿ ಎಣ್ಮೂರಿನ ಹುಡುಗಿ ಮನೆಯೇ ಸೇಫ್ ಎಂದು ಇಬ್ಬರೂ ಡಿಸೈಡ್ ಮಾಡಿದ್ದಾರೆ. ಆದರೆ ಯಾವಾಗ? ಹಗಲು ಅಪ್ಪ ಅಂಚಿಂಚಿ ಹೋದರೂ ಅಮ್ಮನ ಭಂಡಾರ ಮನೆಯಲ್ಲೇ ಇದೆ. ಸಹೋದರ ಯಾವಾಗ ಎಲ್ಲಿ ಬರುತ್ತಾನೆ ಎಂದು ಗೊತ್ತಾಗಲ್ಲ. ಇನ್ನು ಆಚೆ ಮನೆ ಲೀಲಕ್ಕ, ಈಚೆ ಮನೆ ಯಮುನಕ್ಕರ ಹದ್ದಿನ ಕಣ್ಣು ತಪ್ಪಿಸಿ ಬರಲು ಸಾಧ್ಯವಿಲ್ಲ. ಸೋ ಪ್ರೋಗ್ರಾಂ ನೈಟ್ ಗೆ ಇಡೋಣ ಎಂದು ನಿಘಂಟಾಗಿದೆ. ಎಲ್ಲರೂ ಮಲಗಿದ ಮೇಲೆ, ಮಿಸ್ ಕಾಲ್ ಕೊಡುತ್ತೇನೆ, ಮನೆಯ ಹಿಂದೆ ಬಂದು ಬಿಟ್ಟು ಒಂದು ಮಿಸ್ ಕಾಲ್ ಕೊಡು, ಬಾಗಿಲು ಒರ್ದ ಮಾಡುತ್ತೇನೆ ಎಂದು ಹುಡುಗಿ ಹೇಳಿದೆ ಮತ್ತು ಹಾಗೆ ಮಾಡಿದೆ. ಹಾಗೆ ಕೋಳಿ ಹುಡುಗ ಮನೆಯ ಹಿಂದೆ ಬಂದು ಮಿಯಾಂವ್ ಅಂದಿದ್ದಾನೆ ಮತ್ತು ಒಳಗಿನಿಂದಲೂ ಮಿಯಾಂವ್ ಸಿಗ್ನಲ್ ಸಿಕ್ಕಿದೆ. ಅಷ್ಟೇ! ಹಾಸಿಗೆಯಲ್ಲಿ ಹೇಸಿಗೆ ನಡೆದಿದೆ.
ಹಾಗೆ ತನ್ನದೇ ಮನೆಯಲ್ಲಿ, ತನ್ನದೇ ಡೈನಿಂಗ್ ಹಾಲಿನಲ್ಲಿ ಮಲಗಿದ್ದ ತನ್ನ ಪ್ರೀತಿಯ ಮಗಳೊಂದಿಗೆ ಸಿಕ್ಕಿ ಬಿದ್ದಿದ್ದ ಹುಡುಗನನ್ನು ಹುಡುಗಿ ತಂದೆ ಹಿಡಕ್ಕೊಂಡಿದ್ದಾರೆ. ಅಷ್ಟರಲ್ಲಿ ನೆರೆಕರೆಯ ಜನರೂ ಬಂದು ಎಲ್ಲರೂ ಸೇರಿ ಕೋಳಿ ಹುಡುಗನನ್ನು ಒಂದು ರೂಮಿನಲ್ಲಿ ಬಂದ್ ಮಾಡಿ ಹಾಕಿದ್ದಾರೆ. ನಂತರ ಯಾರೋ ಪಂಚಾಯಿತಿ ಮಾಡುವವರಿಗೆ ತಿಳಿಸಲಾಗಿ ಎಲ್ಲರೂ ಅವರು ಬರುವ ದಾರಿ ಕಾಯುತ್ತಿದ್ದರು. ಅಷ್ಟರಲ್ಲಿ ಮನೆಯ ಮೇಲೆ ಏನೋ ದಡಬಡ ಶಬ್ದ ಕೇಳಿದೆ. ಎಲ್ಲರೂ ಏನೆಂದು ಲೈಟ್ ಹಾಕಿ ನೋಡಿದರೆ ಕೋಳಿ ಹುಡುಗ ತನ್ನನ್ನು ಒಳಗೆ ಹಾಕಿದ್ದ ರೂಮಿನ ಅಟ್ಟಕ್ಕೆ ಹತ್ತಿ ಅಲ್ಲಿಂದ ಮನೆಯ ಮಾಡಿನ ಓಡು ತೆಗೆದು ಓಡಲು ಒಂದು ಓಡು ತೆಗೆದು ಮಂಡೆ ಹೊರಗೆ ಹಾಕಿದ್ದ. ಅಷ್ಟರಲ್ಲಿ ಪುನಃ ಜನ ಕೋಳಿ ಹುಡುಗನನ್ನು ಹಿಡ್ಕೊಂಡು ಸನ್ಮಾನ ಮಾಡಿದ್ದಾರೆ. ನಂತರ ಈ ಬಗ್ಗೆ ಪಂಚಾಯ್ತಿ ನಡೆದು ಕೋಳಿ ಹುಡುಗನ ಕೆಕ್ಕಿಲಿಗೆ ಎಣ್ಮೂರು ಸುಂದರಿಯನ್ನು ಕಟ್ಟುವುದು ಎಂದು ಡಿಸೈಡ್ ಆಯಿತು ಎಂದು ತಿಳಿದುಬಂದಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಆ ಬೀರೋಳಿಕೆಯ ಹುಡುಗನೊಬ್ಬನ ಭಂಡಾರ ಅಪಗಪಗ ಎಣ್ಮೂರು ಪರಿಸರದಲ್ಲಿ ಗೋಚರಿಸುತ್ತಿತ್ತು ಎಂದು ನೋಡಿದವರು ನೋಡಿದವರಿಗೆ ಹೇಳಲು ಶುರು ಮಾಡಿದ್ದಾರೆ ಎಂದೂ ಸುದ್ದಿ ಇದೆ. ಕೊನೆಯದಾಗಿ ಮತ್ತೊಂದು ದೊಡ್ಡ ಜೋಕ್ ಚಾರ್ವಾಕದಲ್ಲಿ ಬೊಂಬಾಯಿಗಳಲ್ಲಿ ಹರಿದಾಡುತ್ತಿದ್ದು, ಪಂಚಾಯ್ತಿ ನಡೆಸಲು ಬಂದ ಮಹನೀಯರಿಗೆ ಎಲ್ಲಿಯಾದರೂ ಹುಡುಗಿಯ ಫೋನ್ ನಂಬರ್ ಸಿಕ್ಕಿದರೆ ಅವರೂ ಮಿಯಾಂವ್ ಮಿಯಾಂವ್ ಸಿಗ್ನಲ್ ಕೊಡುವ ಅಪಾಯಗಳಿದೆಯಂತೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top