ಬೆಳ್ತಂಗಡಿ: ಬೆಳಾಲು ಸೊಸೈಟಿಯಲ್ಲಿ ಆಲಿ ಬಾಬ ಮತ್ತು 40 ಸನ್ಯಾಸಿಗಳು

Pattler News

Bureau Report

ಬೆಳ್ತಂಗಡಿ ತಾಲೂಕು ಬೆಳಾಲು ಸೊಸೈಟಿಯಲ್ಲಿ ನಡೆದ ಕೋಟಿ ಕೋಟಿ ಪಥಾಯಿಸ್ ಬಗ್ಗೆ ಕಂಪ್ಲೈಂಟ್ ಆಗಿದ್ದು ಕೇವಲ ಲಾಸ್ಟ್ ವಿಕೆಟ್ ಗಳ ಮೇಲೆ ಮಾತ್ರ ಎಫ್ಐಆರ್ ಆಗಿದೆ. ಇದೊಂದು ಗುಬ್ಬಚ್ಚಿ ಮೇಲೆ ಏಕೆ 47 ಪ್ರಯೋಗಿಸಿದಂತೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಕೇಸಿನಲ್ಲಿ ದೊಡ್ಡ ದೊಡ್ಡ ವೇಷಗಳನ್ನು ಪರದೆ ಹಿಂದೆಯೇ ಇಡಲಾಗಿದೆ ಎಂದು ತಿಳಿದುಬಂದಿದೆ.
ಹಾಗೆಂದು ಬೆಳಾಲು ಸೊಸೈಟಿಯಲ್ಲಿ ಆಲಿ ಬಾಬು ಮತ್ತು ಪರಮ ಸನ್ಯಾಸಿಗಳು ಒಟ್ಟಿಗೆ ಮುಳುಗಿಸಿದ್ದು ಎರಡು ಕೋಟಿ. ನೂರು ರುಪಾಯಿ, ಸಾವಿರ ಎಲ್ಲಾ ತಿಂದರೆ ಯಾರಿಗೂ ಗೊತ್ತಾಗಲ್ಲ. ಲಕ್ಷ ತಿಂದರೆ ಸ್ವಲ್ಪ ಗಡಗಡ ಆಗುವ ಅಪಾಯಗಳಿವೆ. ಇದು ಕೋಟಿ ಮಾರಾಯ್ರೆ. ಟಾರ್ಗೆಟ್ ಕೋಟಿ ಮುಟ್ಟುವ ತನಕ ಯಾರಿಗೂ ಗೊತ್ತೇ ಆಗಿರಲಿಲ್ಲ. ಈಗ ಎಲ್ಲರೂ ದಢಕ್ಕೆಂದು ಎದ್ದು ಕೂತು ನೀನು ನೀನು ಎಂದು ಪರಸ್ಪರ ತೋರಿಸುತ್ತಿದ್ದಾರೆ.
ಈಗ ಬೆಳಾಲು ಸೊಸೈಟಿಗೆ ನಿಜವಾಗಿಯೂ ಒಟ್ಟೆ ತೆಗೆದದ್ದು ಯಾರು ಎಂದು ಗೊತ್ತಾಗಬೇಕಾಗಿದೆ. ಸೊಸೈಟಿಯವರು ತಮ್ಮ ದೂರಿನಲ್ಲಿ ಆರು ವರ್ಷಗಳಿಂದ ಖಾಯಂ ನೌಕರ ಆಗಿರುವ ಸದಣ್ಣನನ್ನು ಒಂದನೇ ಆರೋಪಿ ಮಾಡಿದೆ. ಇನ್ನು ಆರು ವರ್ಷಗಳಿಂದ ರಬ್ಬರ್ ಖರೀದಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಪ್ರಶಾಂತರನ್ನು ಸೆಕೆಂಡ್ ಡೌನ್ ಅಂದಿದೆ. ಮೂರನೇ ಆರೋಪಿ ಕೋಟ್ಯಾನ್ರ್. ಇವರು ಸೊಸೈಟಿಯಲ್ಲಿ ಹತ್ತು ಲಕ್ಷ ಡೆಪೋಸಿಟ್ ಇಟ್ಟ ಕರ್ಮಕ್ಕೆ ಆರೋಪಿ ಮಾಡಲಾಗಿದೆ. ಈ ಮೂವರು ಅಕ್ರಮ ಕೂಟ ಸೇರಿಕ್ಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗ್ರಾಹಕರ ಮತ್ತು ಸಂಸ್ಥೆಯ ಎರ್ಡು ಕೋಟಿ ಹನ್ನೆರಡು ಲಕ್ಷ ದುಡ್ಡು ಪಥಾಯಿಸ್ ಮಾಡಿದ್ದಾರೆ ಎಂದು ಸೊಸೈಟಿ ಪೋಲಿಸರಲ್ಲಿ ದೂರಿಕೊಂಡಿದೆ. ಹಾಗಾದರೆ ಎರಡು ಕೋಟಿ ಮುಳುಗಿಸುವ ತನಕ ಸೊಸೈಟಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಜೆಯಲ್ಲಿ ಇದ್ದರಾ?
ಹಾಗೆಂದು ಸೊಸೈಟಿಯ ಉಪ ಸಮಿತಿ ಪ್ರಕಾರ ಉಜಿರೆಯ ಬರೋಡಾ ಶಾಖೆಯಲ್ಲಿ 36,58,392 ರೂಪಾಯಿ ಅಂಚಿಂಚಿ ಆಗಿದೆ. 31,32,086 ರೂಪಾಯಿಗಳ ರಬ್ಬರ್ ಹಾಲು ಕುಡಿಯಲಾಗಿದೆ ಎಂದು ಉಪ ಸಮಿತಿ ಹೇಳಿದೆ. ಉಳಿದಂತೆ ಉಳಿತಾಯ ಖಾತೆಯಿಂದ 1,34,17,899 ರೂಪಾಯಿಗಳನ್ನು ಆರೋಪಿಗಳ ಬಿನ್ನೆರ್ ಖಾತೆಗಳಿಗೆ, ದೋಸ್ತಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಉಪ ಸಮಿತಿ ಹೇಳಿದೆ. ಈ ಬಗ್ಗೆ ತನಿಖೆ ನಡೆದು ಒಂದನೇ ಆರೋಪಿ ಸದಣ್ಣ 41,95,000 ರೂಪಾಯಿಗಳನ್ನು ಸೊಸೈಟಿಗೆ ಕಟ್ಟಿದ್ದು, ಎರಡನೇ ಆರೋಪಿ ಪ್ರಶಾಂತ್ 46,51,000 ರೂಪಾಯಿ ಸೊಸೈಟಿಯಲ್ಲಿ ಪೇ ಮಾಡಿದ್ದಾರೆ. ಬಾಕಿ ದುಡ್ಡು ಪೆತ್ತ ತಿಂದಿದ್ಯಾ ಎಂಬುದು ಪ್ರಶ್ನೆ.
ಇನ್ನು ಬೆಳಾಲು ಸೊಸೈಟಿಯಲ್ಲಿ ಸಿಇಒಗೆ ಅಂತ ಒಂದು ಕುರ್ಚಿ ಇದ್ದು ಈ ಕುರ್ಚಿಯಿಂದ ಮೂವತ್ತಾರು ಲಕ್ಷ ರೂಪಾಯಿ ನೆಫ್ಟ್ ಆಗಿದ್ದು ಅದರ OTP ಎಲ್ಲಿ ಹೋಗಿ ಬಿದ್ದಿದೆ ಅಂತಲೇ ಗೊತ್ತಿಲ್ಲ. ಇನ್ನು ಅಲ್ಲಿ ಎಳ್ಳು ಗದ್ದೆಯಲ್ಲಿ ಸಾಲ ಇಲ್ಲದೆ ಎರಡು ಫ್ಲೋರ್ ಮನೆ ಕಟ್ಟಿದ್ದು, ದೊಡ್ಡ ಕೋರಿ ಫಾರಂ ಮಾಡಿದ್ದು ಆರೋಪಿಗಳಾದ ಸದಣ್ಣ, ಪ್ರಶಾಂತ್, ಪ್ರಕಾಶ್ ಕೋಟ್ಯಾನ್ರ್ ಅಲ್ಲ ಎಂದು ಇಡೀ ಊರಿಗೇ ಗೊತ್ತಿದೆ. ಮತ್ತೆ ಆ ಸುರುಳಿಯವರಿಗೆ ಸುರುಳಿ ಸುರುಳಿಯಾಗಿ ಐವತ್ತು ಹೋಗಿದೆ ಅಂತ ಅಂತಲೂ ಎಲ್ಲರಿಗೂ ಗೊತ್ತಿದೆ. ಇನ್ನು ಹತ್ತು ಲಕ್ಷ ಡೆಪೋಸಿಟ್ ಇಟ್ಟು, ಲೆಕ್ಕಾಚಾರ ಸರಿ ಮಾಡದ್ದಕ್ಕೆ ಸೊಸೈಟಿಯವರಿಗೆ ತಾರಮಾರ ಬೈದಿದ್ದಕ್ಕೆ ಪ್ರಕಾಶ್ ಕೋಟ್ಯಾನ್ರನ್ನು ಆರೋಪಿ ಮಾಡಿದ್ದು ಮಾತ್ರ ಅಕ್ಷಮ್ಯ. ಕಾಗದ ಪತ್ರಗಳನ್ನು ಅಂಚಿಂಚಿ ಮಾಡಿ ಪ್ರಕಾಶ್ ವಂಚಿಸಿದ್ದರೆ ಸೊಸೈಟಿಯಲ್ಲಿ ಸ್ಟಾಫ್ ಯಾಕೆ ಮಾರಾಯ್ರೆ ಪೆನ್ನಿಗೆ ಕಡ್ಡಿ ಹಾಕಲಿಕ್ಕಾ?
ಹಾಗೆಂದು ಬೆಳಾಲು ಸೊಸೈಟಿಗೆ ಅದರದ್ದೇ ಸ್ಟಾಫ್ ಒಂದೇ ವರ್ಷದಲ್ಲಿ ಎರಡು ಕೋಟಿ ಮುಳುಗಿಸಿದರೆ ಅದರ ಆಡಳಿತ ಮಂಡಳಿ, ಸಿಇಒ ಸುಮ್ಮನೆ ಕುಂತು ಪಿಚ್ಚರ್ ನೋಡಿದ್ರಾ? ಸಿಇಒ ದಿನದ ಲೆಕ್ಕಾಚಾರ ನೋಡದಷ್ಟು ಸೋಮಾರಿಯಾ ಅಥವಾ ಬೇಜವಾಬ್ದಾರಿಯಾ? ತಿಂಗಳ ಮೀಟಿಂಗ್ ನಲ್ಲಿ ಆಡಳಿತ ಮಂಡಳಿ ಏನು ತೋಟಕ್ಕೆ ಮದ್ದು ಬಿಡುವ ವಿಷಯ ಮಾತ್ರ ಮಾತಾಡುತ್ತಿತ್ತಾ? ಸೊಸೈಟಿ ಆಡಿಟ್ ಆಗುತ್ತಿತ್ತಾ? ಆಗುತ್ತಿದ್ದರೆ ಎರಡು ಕೋಟಿ ವಿಷಯ ಈ ಮೊದಲು ಯಾಕೆ ಬಂದಿಲ್ಲ? ಇಷ್ಟೆಲ್ಲಾ ನಡೆಯುತ್ತಿದ್ದರೂ HP ಯಾಕೆ ಸುಮ್ಮನೆ ಕುಂತಿತು? HP ಯಾರನ್ನು ಸೇಫ್ ಮಾಡಲು ನೋಡುತ್ತಿದೆ. ಕೇವಲ ಉಳಿತಾಯ ಖಾತೆಯಲ್ಲಿಯೇ ಕೋಟಿ ತನಕ ಬೇರೆಯವರ ಅಕೌಂಟಿಗೆ ಹಣ ವರ್ಗಾವಣೆ ಆಗುವಾಗ ಸಿಇಒ ಎಲ್ಲಿ ಕೋಳಿ ಫಾರಂ ಕಡೆ ಇದ್ರಾ? ಬೆಳಾಲು ಸೊಸೈಟಿ ಹಗರಣದಲ್ಲಿ ಕೇವಲ ಸದಣ್ಣ, ಪ್ರಶಾಂತ್ ಮಾತ್ರ ಆರೋಪಿಗಳು ಅಲ್ಲ.ಅವರು ಎದುರಿಗೆ ಮಾತ್ರ, ಕೇಸಿಗೆ ಮಾತ್ರ.ಅಲ್ಲಿ ತೆರೆಯ ಹಿಂದೆ ಬೇರೆಯೇ ಭೂತಗಳಿವೆ, ತಿಮಿಂಗಿಲಗಳಿವೆ, ಹೆಗ್ಗಣಗಳಿವೆ. ಅವುಗಳನ್ನು ರಕ್ಷಿಸುವ ಕೆಲಸ ಆಗುತ್ತಿದೆ. ಅವುಗಳನ್ನೂ ಕೋರ್ಟಿನ ಕಟಕಟೆಗೆ ತರುವ ಕೆಲಸ ಆಗಬೇಕಿದೆ. ಆದರೆ ಬೆಳಾಲು ಸೊಸೈಟಿಯಲ್ಲಿ ಅಲಿಬಾಬಾ ಮತ್ತು ನಲವತ್ತು ಪರಮ ಸನ್ಯಾಸಿಗಳು ಇರುವ ತನಕ ನಿಜವಾದ ಕಳ್ಳರು ಸಿಕ್ಕಿ ಬೀಳುವ ಛಾನ್ಸಸ್ ತುಂಬಾ ಕಡಿಮೆ ಇದೆ. ಅವರೆಲ್ಲ ಒಟ್ಟಿಗೆ ಸೇರಿ ಸೊಸೈಟಿಗೆ ಒಟ್ಟೆ ತೆಗೆಯುವ ಕೆಲಸ ಮಾಡುತ್ತಾ ಇರುತ್ತಾರೆ. ಬೆಳಾಲು ಸೊಸೈಟಿ ಈಗಾಗಲೇ ಟೈಟಾನಿಕ್ ಆಗಿ ಆಗಿದೆ. ದೇವರೇ ಬರಬೇಕಷ್ಟೆ ಬದುಕಿಸಲು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top