ದಕ್ಷಿಣ ಕನ್ನಡ ಜಿಲ್ಲಾ ಗಡಿ ತಾಲೂಕು ಸುಳ್ಯ ತಾಲೂಕಿನ ತುಂಬಾ ಸಮಾಜ ಬಾಹಿರ ಚಟುವಟಿಕೆಗಳು ನಡೆಯುತ್ತಲೇ ಇದೆ. ಇಲ್ಲಿ ಕಾರ್ಯಾಂಗ ಸಮಾಜ ಘಾತುಕ ಶಕ್ತಿಗಳ ಜೊತೆ ಡಾನ್ಸ್ ಮಾಡುತ್ತಾ ಅವರ ಅಕ್ರಮ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಂತಿದ್ದು ವಿಪರ್ಯಾಸವೇ ಸರಿ. ಶಿಕ್ಷಣ ಶಿಲ್ಪಿಯ ಊರಿನಲ್ಲಿ ಅದೆಂಥ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಅಂದರೆ ಸುಳ್ಯ ದಕ್ಷಿಣ ಕನ್ನಡದ ಅಷ್ಟೂ ತಾಲೂಕುಗಳನ್ನು ಸೈಡ್ ಹೊಡೆಯುವ ಅಂದಾಜಿನಲ್ಲಿದೆ. ಜುಗಾರಿ, ಗಾಂಜಾ, ಕುಟುಕುಟು, ಸಿಂಗಲ್ ನಂಬರ್, ವೇಶ್ಯಾವಾಟಿಕೆ ಇತ್ಯಾದಿ ಇತ್ಯಾದಿ ಸುಳ್ಯದಲ್ಲಿ ಮಾಮೂಲು.
ಹಾಗೆಂದು ಸುಳ್ಯ ಜುಗಾರಿ ಕೋರರ ರಾಜಧಾನಿ ಅಂತ ಕೂಡ ಹೇಳಬಹುದು. ಹೈಟೆಕ್ ಜುಗಾರಿ, ಮಿಡ್ಲ್ ಕ್ಲಾಸ್, ಗುಡ್ಡೆ ಜುಗಾರಿ ಹೀಗೆ ಸುಳ್ಯದಲ್ಲಿ ತಾಲೂಕು ಮಟ್ಟದ, ಜಿಲ್ಲಾ, ರಾಜ್ಯ ಮಟ್ಟದ ಜುಗಾರಿ ಆಟಗಾರರು ಇದ್ದಾರೆ. ಮಳೆಗಾಲದಲ್ಲಿ ಜುಗಾರಿಗೆ ರೆಕ್ಕೆ ಪುಕ್ಕ ಎಲ್ಲಾ ಹುಟ್ಟಿಕೊಳ್ಳುತ್ತದೆ. ಯಾಕೆಂದರೆ ಪೋಲಿಸರಿಗೆ ಬರ್ಸಕ್ಕೆ ಬಂದರೆ ಶೀತ ಆಗುವ ಕಾರಣ ಜುಗಾರಿ ಗುಡ್ಡೆ ಗುಡ್ಡೆಗಳಲ್ಲಿ ನಡೆಯುತ್ತದೆ. ಇದೀಗ ನಿನ್ನೆ ಸುಳ್ಯ ತಾಲೂಕು ದುಗಲಡ್ಕದಲ್ಲಿ ಬಹಳ ವಿಜೃಂಭಣೆಯಿಂದ ಗುಡ್ಡೆ ಜುಗಾರಿ ನಡೆದಿದ್ದು ಸುಳ್ಯ ಪೋಲಿಸರಿಗೆ ವಿಷಯನೇ ಗೊತ್ತಿಜ್ಜಿ ಗಡ. ಆಟಿ ಬರ್ಸಕ್ಕೆ ನಿನ್ನೆ ಸುಳ್ಯ ಪೋಲಿಸರು ಗುಡಿ ಎಳೆದಿದ್ದು ಈ ವಿಷಯ ಗೊತ್ತಿದ್ದ ಜುಗಾರಿಕೋರರು ಭೂತ, ಕುಲೆ, ಪೀಡೆ, ಪಿಶಾಚಿಗಳಿಗೂ ಹೆದರದೆ ಗುಡ್ಡೆ ಜುಗಾರಿ ನಡೆಸಿದ್ದಾರೆಂದು ನಿನ್ನೆ ಜುಗಾರಿಯಲ್ಲಿ ಪೊಕ್ಕಡೆ ಧರ್ಮಕ್ಕೆ ಎರಡು ಸಾವಿರ ಕಳೆದುಕೊಂಡ ನಮ್ಮ ಮಾಹಿತಿದಾರ ಪುಲ್ಯನ ಬಂದು ಮಾಹಿತಿ ಕೊಟ್ಟಿದ್ದಾನೆ.
ಹಾಗೆಂದು ನಿನ್ನೆ ದುಗಲಡ್ಕದ ಗುಡ್ಡೆ ಜುಗಾರಿ ಗ್ರ್ಯಾಂಡ್ ಸಕ್ಸಸ್ ಆದ ಖುಷಿಯಲ್ಲಿ ಇರುವ ಜುಗಾರಿಕೋರರು ಇವತ್ತು ನೈಟ್ ಶಾರ್ಪ್ ಹತ್ತು ಗಂಡೆ ನಂತರ ಸುಳ್ಯ ತಾಲೂಕು ಕುಂಚಡ್ಕದಲ್ಲಿ ಜಾತ್ರೆ ಮಾಡಲಿದ್ದಾರೆಂದು ನಮ್ಮ ಜುಗಾರಿ ಮಾಹಿತಿದಾರ ಮಾಹಿತಿ ಕೊಟ್ಟಿದ್ದಾನೆ. ಕುಂಚಡ್ಕದಲ್ಲಿ ಈ ಬಗ್ಗೆ ಈಗಾಗಲೇ ತಯಾರಿಗಳು ನಡೆದಿದ್ದು ಜುಗಾರಿ ಪಟಾಲಂ ನೈಟ್ ಜಮಾವಣೆ ಆಗಲಿದೆ. ಸುಳ್ಯ ಪೋಲಿಸರು ಈ ಕೊಡಲೇ ಕುಂಚಡ್ಕದ ಜುಗಾರಿ ಸಂಘಟಕರನ್ನು ಕರೆದು ಸನ್ಮಾನ ಮಾಡಲೇ ಬೇಕು. ಯಾಕೆಂದರೆ ನಮ್ಮ ವೆಬ್ ಸೈಟ್ ನ್ಯೂಸ್ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠನ ಮೊಬೈಲಿನಲ್ಲಿಯೂ ಕಾಣುತ್ತದೆ.
LATEST
ಮುತ್ಲಾಜೆ ಶೂಲಿನಿ ದುರ್ಗಿ ಮತ್ತು ಶಾಸ್ತಾವು ಕ್ಷೇತ್ರ.ಜಿಲ್ಲೆಯ 3 ತಾಲೂಕುಗಳು ಬರ ಪೀಡಿತ! ಘೋಷಣೆ.ವಿಟ್ಲ: ದೇವಸ್ಥಾನದ ಜಾಗ ನುಂಗಣ್ಣಗಳಿಂದ ಪೊಕ್ಕಡೆ ಕಂಪ್ಲೈಂಟ್!ಪಂಜ ದೇವಸ್ಥಾನದ ಬಗ್ಗೆ ಒಂದಿಷ್ಟು!ಪಂಜ: ಶತ ರುದ್ರಾಭಿಷೇಕದ ಲೆಕ್ಕ ಯಾವಾಗ?ಪೋಲಿಸ್ ಠಾಣೆಯ ಮುಂದೆಯೇ ಮರ್ಡರ್! ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ಜೀವಾವಧಿ!ಸುಳ್ಯ ಅಜ್ಜಾವರದಲ್ಲಿ ಕ್ಯಾಂಡಲ್ ಜುಗಾರಿ!ವಿಟ್ಲ: ಅರೇಖಾನ ಗುತ್ಯಮ್ಮ ದೇವರ ಜಾಗೆಯಲ್ಲಿ ಅನ್ಯಮತೀಯರ ಕಾಂಪ್ಲೆಕ್ಸ್!ಪುತ್ತೂರು: ಸೆಲೂನಲ್ಲಿ ಸೆಟ್ಟಿಂಗ್!ಬುಳೇರಿಕಟ್ಟೆ ಗಣೇಶ ವಿಸರ್ಜನೆ ಬಗ್ಗೆ ಅವಹೇಳನ! ಡಿಶುಂ… ಡಿಶುಂ!
ಸುಳ್ಯ: ಇವತ್ತು ಕುಂಚಡ್ಕದಲ್ಲಿ ಜುಗಾರಿ ಜಾತ್ರೆ
Pattler News
Bureau Report
