ಸುಳ್ಯ ಸಂಪಾಜೆಯ ರಾಜಧಾನಿ ಕಲ್ಲುಗುಂಡಿಯಲ್ಲಿ ಮತ್ತೇ ಕಳ್ಳರ ಕಾಟ ಶುರುವಾಗಿದ್ದು ಇದು ಪ್ರತಿ ವರ್ಷ ಮುಂಗಾರು ಮಳೆ ಸಮಯದಲ್ಲಿ ಜರುಗುವ ಮಾಮೂಲು ಪ್ರಕ್ರಿಯೆ ಎಂದು ತಿಳಿದುಬಂದಿದೆ.
ಹಾಗೆಂದು ಸುಳ್ಯ ತಾಲೂಕು ಕಲ್ಲುಗುಂಡಿ ಯಲ್ಲಿ ಪ್ರತೀ ಮಳೆಗಾಲ ಸಮಯದಲ್ಲಿ ಕಳ್ಳರು ಚಾರ್ಜ್ ಆಗೋದು ಮಾಮೂಲು ಆಗಿದೆ. ಪ್ರತೀ ವರ್ಷ ಕಳ್ಳರದ್ದು ಅದೇ ರಾಗ ಅದೇ ಹಾಡು. ಇಲ್ಲಿ ತನಕ ಪೋಲಿಸರಿಗೆ ಈ ಕಲ್ಲುಗುಂಡಿ ಕಳ್ಳರನ್ನು ಹಿಡಿಯುವುದು ಬಿಡಿ ಅವರದ್ದೊಂದು ಪಾಸ್ಪೋರ್ಟ್ ಫೋಟೋ ಕೂಡ ಸಿಕ್ಕಿಲ್ಲ. ಈ ಕಳ್ಳರು ಎಲ್ಲಿಂದ ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ, ಯಾರು ಕಳ್ಳರು, ಘಟ್ಟದ ಕಳ್ಳರಾ ಅಥವಾ ಊರಿನ ಸೊಬಗರಾ, ಕನ್ನಡ ಕಳ್ಳರಾ ಅಥವಾ ತುಳು ಕಳ್ಳರಾ, ಚಿಲ್ಲರೆ ಕಳ್ಳರಾ ಇತ್ಯಾದಿ ಯಾವುದೂ ಗೊತ್ತಾಗಿಲ್ಲ, ಯಾವುದೇ ಅಷ್ಟಮಂಗಲದಲ್ಲೂ ಸಿಕ್ಕಿಲ್ಲ. ಪ್ರತೀ ವರ್ಷವೂ ಕಲ್ಲುಗುಂಡಿ ಕಳ್ಳರದ್ದು ಏನಾದರೂ ಒಂದು ಇದ್ದೇ ಇರುತ್ತದೆ. ಮಳೆ ಬಿದ್ದರೆ ಸಾಕು ಕಲ್ಲುಗುಂಡಿ ಕಳ್ಳರು ಕಪ್ಪೆಗಳ ಹಾಗೆ ಎದ್ದು ಬಿಡುತ್ತಾರೆ. ಈ ಸಲವೂ ಆಪರೇಷನ್ ಶುರುವಾಗಿದೆ. ಸ್ವಲ್ಪ ಲೇಟ್. ಆಟಿಯಲ್ಲಿ ಕಾಟಿಗಳು ಬಂದಿವೆ.
ಕಲ್ಲುಗುಂಡಿಯಲ್ಲಿ ಈ ಸಲ ಬೇಷ ಹೋಗಿ ಕಾರ್ತೆಲ್ ಬಂದರೂ ಕಳ್ಳರು ಬಂದಿರಲಿಲ್ಲ. ಇನ್ನು ಕಳ್ಳಣ್ಣ ಬರಲ್ಲ ಎಂದು ಜನ ಸ್ವಲ್ಪ ಬೇಗ ಹಾಸಿಗೆ ಸೇರಿಕ್ಕೊಂಡು ಬಿಟ್ಟರು. ಆದರೆ ಆಟಿ ಶುರುವಾಗುತ್ತಿದ್ದಂತೆ ಕಳ್ಳರು ಬಂದು ಕಲ್ಲುಗುಂಡಿಯಲ್ಲಿ ಲ್ಯಾಂಡ್ ಆಗಿದ್ದಾರೆ. ಬಂದವರೇ ಕಳ್ಳರು ಮೊದಲಿಗೆ ಕೈ ಹಾಕಿದ್ದೇ ವೆಲ್ಡಿಂಗ್ ರಮೇಸಣ್ಣನ ಜನ್ರೇಟರ್ ಗೆ. ಅಷ್ಟು ದೊಡ್ಡ ಜನ್ರೇಟರನ್ನು ಕಳ್ಳರು ಬಂದು ಲಿಫ್ಟ್ ಮಾಡಬೇಕಿದ್ರೆ ಕಳ್ಳರ ಸಂಖ್ಯೆ ಲೆಕ್ಕ ಮಾಡಲು ಒಂದು ಕೈ ಸಾಕಾಕದು ಎಂಬ ಅಭಿಪ್ರಾಯ ಜನರಲ್ಲಿ ಇದೆ. ಹಾಗೆ ವೆಲ್ಡಿಂಗ್ ರಮೇಸಣ್ಣನ ಜನ್ರೇಟರ್ ಹೋದ ಮರುದಿನವೇ ಕಳ್ಳರು ಕೈಪಡ್ಕದಲ್ಲಿ ಮಧುನ ರಿಕ್ಷಾ ನ್ಯೂಟ್ರಲ್ ಮಾಡಿ ನೂಕಿಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಅದೇನೋ ಭೂತ ಶಬ್ದ ಮಾಡಿದ ಕಾರಣ ಲೈಟ್ಸ್ ಆನ್ ಆಗಿ ಕಳ್ಳರು ಕಾಲಿಗೆ ಬುದ್ಧಿ ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ ಕೇವಲ ಚಿಲ್ಲರೆಗಾಗಿ ಭೂತದ ಡಬ್ಬಿಗಳಿಗೆ, ಗೂಡಂಗಡಿಗಳ ಡಬ್ಬಿಗೆ ಮಾತ್ರ ಕೈ ಹಾಕುತ್ತಿದ್ದ ಕಲ್ಲುಗುಂಡಿ ಕಳ್ಳರು ಈ ವರ್ಷ ಬೆಳೆದು ದೊಡ್ಡವರಾದ ಹಾಗೆ ಕಾಣಿಸುತ್ತಿದೆ. ಕಲ್ಲುಗುಂಡಿ ಕಳ್ಳರಿಗೆ ಕುತ್ತಿ ಗಡ್ಡ, ಕುತ್ತಿ ಮೀಸೆ ಬಂದಿರುವ ಲಕ್ಷಣಗಳಿದ್ದು ಅವರು ಮೊದಲ ಓವರಿನಲ್ಲೇ ವೆಲ್ಡಿಂಗ್ ರಮೇಸಣ್ಣನ ಜನ್ರೇಟರ್ ಎತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಇನ್ನು ಕಲ್ಲುಗುಂಡಿಯಲ್ಲಿ ದನಗಳ್ಳರ ದೊಡ್ಡ ಟೀಮೇ ಇದೆ. “ಧನಕ್ಕಾಗಿ ದನ” ಎಂಬ ಸ್ಲೋಗನೇ ಇವರಿಗೆ ಮ್ಯಾಚ್ ಆಗುತ್ತದೆ. ನೈಟ್ ಯಾರು ಮಲಗಿದರೂ ಈ ದನಗಳ್ಳರಿಗೆ ಮಾತ್ರ ಕಣ್ಣಡ್ಡ ಕೂಡ ಹೋಗಲ್ಲ. ಅಲ್ಲಿ ದಂಡಕಜೆ, ಕಡೇಪಾಲ, ಚಟ್ಟೆಕಲ್ಲು, ನೆಲ್ಲಿಕುಮೇರಿ ಕಡೆಗಳಲ್ಲಿ ದನಗಳ್ಳರ ಹೆಜ್ಜೆ ಗುರುತಿದೆ. ಓ ಮೊನ್ನೆ ತಾನೇ ಕಾರೊಂದರಲ್ಲಿ ದನವನ್ನು ಕಡಿದು ಸಾಗಿಸುತ್ತಿದ್ದಾಗ ಕಾರಿನಿಂದ ಆಯಿಲ್ ಲೀಕ್ ಆದಂತೆ ರಸ್ತೆ ಉದ್ದಕ್ಕೂ ರಕ್ತ ಚೆಲ್ಲಿದ ಘಟನೆ ನಡೆದಿದೆ. ಇನ್ನು ಓ ಮುರಾನಿ ದನದ ಬಾಲವೊಂದು ರಸ್ತೆಯಲ್ಲಿ ಪತ್ತೆಯಾಗಿದ್ದು ದನಗಳ್ಳರ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಜಾತ್ಯತೀತ ದನಗಳ್ಳರು ಇರುವ ಕಾರಣ ಕಳ್ಳರನ್ನು ಹಿಡಿಯಲು ಪೋಲಿಸರೇ ಅನಿವಾರ್ಯವಾಗಿ ಹೋಗಿದ್ದಾರೆ. ಹಾಗೆಂದು ಇಡೀ ಸಂಪಾಜೆಯಲ್ಲಿ ಕೊಡಗು ಪೋಲಿಸ್ ಮತ್ತು ದಕ್ಷಿಣ ಕನ್ನಡ ಪೋಲಿಸರ ಡಬ್ಬಲ್ ಪೋಲಿಸ್ OPಗಳಿದ್ದರೂ ಕಳ್ಳರು ಮಾತ್ರ ಹಬ್ಬ ಮಾಡುತ್ತಲೇ ಇದ್ದಾರೆ. ಕಳ್ಳರ ಪಾಲಿಗೆ ಸಂಪಾಜೆ ಸಂಪಾದನೆ ಒಳ್ಳೆದಿದೆ

ಮಾಂಡೋವಿ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ಅರ್ಪಿಸುತ್ತಿರುವ ಆಷಾಢ ಮಾನ್ಸೂನ್ ಮೇಳ. ಹೊಸಾ ಮಾರುತಿ ಸುಜುಕಿ ಕಾರುಗಳ ಮೇಲೆ ಅತ್ಯಧಿಕ ಕೊಡುಗೆ.
ಆಲ್ಟೋ K10 ಕಾರಿನ ಮೇಲೆ 49,919 ರೂಪಾಯಿಯ ಆಕ್ಸೆಸರೀಸ್ ಉಚಿತ ಮತ್ತು ಕ್ಯಾಶ್ ಬ್ಯಾಕ್ ಕೊಡುಗೆಗಳು.
ಹೊಸಾ ಕಾರು ಖರೀದಿಯಲ್ಲಿ ಇಂದೆಂದು ಕಾಣದ ಕೊಡುಗೆಗಳಿಗೆ ಸಂಪರ್ಕಿಸಿ.
ಅಶ್ವಿತ್ ರೈ ಎಂ.
ಮೊಬೈಲ್ ಸಂಖ್ಯೆ: 7204044925
ಸ್ವಿಫ್ಟ್ ಕಾರು ಖರೀದಿ ಮೇಲೆ ರೂಪಾಯಿ 50,355 ವರೆಗಿನ ಆಕ್ಸೆಸರೀಸ್ ಉಚಿತ ಹಾಗೂ ದರ ಕಡಿತ ರಿಯಾಯಿತಿ
ವ್ಯಾಗ್ನರ್ ಕಾರುಗಳು ಮೇಲೆ 55,000 ವರೆಗಿನ ದರ ಕಡಿತ ಹಾಗೂ 60,790 ರೂಪಾಯಿಗಳ ಆಕ್ಸೆಸರೀಸ್ ಉಚಿತ.
*ಬ್ರೆಜ್ಜಾ ಕಾರುಗಳ ಮೇಲೆ ಆಕ್ಸೆಸರೀಸ್ ಉಚಿತ ಹಾಗೂ ಕ್ಯಾಶ್ ಕೊಡುಗೆಗಳು.





