ಕುಕ್ಕೆ ಕ್ಷೇತ್ರದ ಆದಾಯದ ಹರಿವು ದಿನೇ ದಿನೇ ಹೆಚ್ಚಾಗುತ್ತಿದ್ದು ಇದು ಬಹಳ ಖುಷಿಯ ವಿಚಾವಾದರೆ,ಇಲ್ಲಿ ಕೆಲವು ಮುಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತಿದೆ. ಮುಖ್ಯವಾಗಿ ಇಲ್ಲಿಯ ಅನೇಕ ಕಡೆಗಳಲ್ಲಿನ ಅದರಲ್ಲೂ ಪ್ರಮುಖವಾಗಿ ಕುಮಾರಧಾರದಿಂದ ಕಾಶಿಕಟ್ಟೆವರೆಗಿನ ಫುಟ್ಪಾತ್ ಮಳೆಗಾಲದ ಸಮಯದಲ್ಲಿ ಪೊದೆಗಳಿಂದ ಮತ್ತು ಪಾಮಜಿಯಿಂದ ಸಂಪೂರ್ಣ ಆವರಿಸಿಕೊಂಡಿದೆ. ಇದರಿಂದ ಶಾಲಾ ಕಾಲೇಜು ಮಕ್ಕಳು ಬಿದ್ದು ಗಾಯಗೊಂಡಿದ್ದು ಮತ್ತು ರಸ್ತೆಯಲ್ಲೇ ನಡೆದು ಹೋಗುವ ಪರಿಸ್ಥಿತಿ ಎದುರಾಗಿದೆ. ಹಾಗೂ ದಿನನಿತ್ಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದೇ ದಾರಿಯಲ್ಲಿ ಓಡಾಡುತಿದ್ದು ಕಣ್ಣಿದ್ದು ಕುರುಡರಂತಾಗಿರುವುದು ಬೇಸರದ ಸಂಗತಿ. ಇಲ್ಲಿ ಪ್ರತಿ ದಿನ ಕಸ ವಿಲೇವರಿ ಬಗ್ಗೆ ಮೈಕದಲ್ಲಿ ನಮ್ಮ ನಮ್ಮ ಮನೆ,ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛವಾಗಿಡೋಣ ಎಂಬ ವೇದವಾಕ್ಯಗಳನ್ನು ಪಸರಿಸುತ್ತಾ ಮತ್ತು ತಿಂಗಳಿಗೆ 400/-ರೂಪಾಯಿ ಶುಲ್ಕವನ್ನು ಕೂಡ ವಿಧಿಸುತಿದ್ದು, ಈ ಪಾಮಜಿ ಪುಟ್ಪಾತ್ ಬಗ್ಗೆ ಯಾರೊಬ್ಬರೂ ಗಮನ ಹರಿಸದಿರುವುದು ವಿಷಾದನೀಯ. ಇನ್ನಾದರೂ ಇದರ ಬಗ್ಗೆ ಎಚ್ಚೆತ್ತು ಸಂಬಂಧಪಟ್ಟ ಇಲಾಖೆಯವರು ಈ ಕೂಡಲೇ ಇದರಬಗ್ಗೆ ಗಮನ ಹರಿಸಬೇಕು ಮತ್ತು ಮುಂದೆ ನಡೆಯುವ ಕೈ ಪೊಲ್ಯುವ, ಕಾಲು ಮುರಿಯುವ, ಸೊಂಟದ ಕೀಲ್ ತಪ್ಪುವ ಅನಾಹುತಗಳನ್ನು ತಪ್ಪಿಸಬಹುದು.
ಕಲ್ಲುಗುಂಡಿಯಲ್ಲಿ ಬೇಬಿಗೆ ಬಿತ್ತು?
ಓ ಮೊನ್ನೆ ಕಲ್ಲುಗುಂಡಿಯಲ್ಲಿ ಒಂದು ಪೆಟ್ಟಿನ ಕಾರ್ಯಕ್ರಮ ನಡೆದಿದ್ದು, ಬೇಬಿಗೆ ಸಮ್ಮನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅದೆಲ್ಲಿಂದಲೋ ಒಂದು ಕುಟುಂಬವನ್ನು ರಬ್ಬರ್ ಹಾಲು ತೆಗೆಯಲು ಬೇಬಿ ಹೊತ್ಕೊಂಡು ಬಂದಿದ್ದು ಕಲ್ಲುಗುಂಡಿಯಲ್ಲಿ ಆ ಕುಟುಂಬಕ್ಕೆ ಬೇಬಿ ವಸತಿ ವ್ಯವಸ್ಥೆ ಮಾಡಿತ್ತು. ನಂತರ ಒಂದು ದಿನ ಕುಟುಂಬದ ಯಜಮಾನ ಅಂಚಿ ಸಾಮಾನು ತರಲು ಅಂಗಡಿಗೆ ಹೋದ ಸುಸಂದರ್ಭದಲ್ಲಿ ರೂಮಲ್ಲಿ ಪ್ರತ್ಯಕ್ಷನಾದ ಬೇಬಿ ರಬ್ಬರ್ ಆಂಟಿಗೆ ರೂಮಲ್ಲಿಯೇ ಟ್ಯಾಪಿಂಗ್ ಮಾಡಲು ಹೋದಾಗ ಆಂಟಿ ಬೊಬ್ಬೆ ಹೊಡೆದು ಗಂಡನನ್ನು ತರಿಸಿಕೊಂಡಿದೆ. ಗಂಡ ಬಂದವನೇ ಬೇಬಿಗೆ ತಾರಮಾರ ಹೊಡೆದಿದ್ದಾನೆ ಎಂದು ಸುದ್ದಿ.
ಇನ್ನು ಸುಳ್ಯ ಸಂಪಾಜೆ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನದಲ್ಲಿ ಗಂಡು ಡ್ರೈವರ್ ಕೆಲಸ ಮಾಡುತ್ತಿದ್ದು ಈ ಬಗ್ಗೆ ಜನ ಪೊಣ್ಣು ಡ್ರೈವರನ್ನು ಹುಡುಕಿ ಕೊಡುವಂತೆ ಕಂಡ ಕಂಡ ಭೂತ,ಪ್ರೇತ, ಪಿಶಾಚಿಯಾದಿ ಕುಲೆ ಕುಟುಂಬಗಳಿಗೆ ಚಿಕನ್ ಕಬಾಬ್ ಹರಿಕೆ ಹೊತ್ತಿದ್ದಾರೆ ಎಂದು ತಿಳಿದುಬಂದಿದೆ. ಮಿಸ್ ಕ್ಲೀನ್ ಪಿಡಿಒ ಈ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಎಂದು ಜನರಿಗೇ ಮಂಡೆ ಬೆಚ್ಚ ಮಾರಾಯ್ರೆ.





