ಬೆಳ್ಳಾರೆಯಲ್ಲಿ ಕುಡುಕನ ದಾಂಧಲೆ

Pattler News

Bureau Report

ಸುಳ್ಯ ತಾಲೂಕು ಬೆಳ್ಳಾರೆ ಪೇಟೆಯಲ್ಲಿ ಘಟ್ಟದ ಕುಡುಕನೋರ್ವ ದಾಂಧಲೆ ನಡೆಸುತ್ತಿದ್ದು ಜನರು ಜೀವ ಕೈಲಿ ಹಿಡ್ಕೊಂಡೇ ಅಂಚಿಂಚಿ ಹೋಗುವ ಪರಿಸ್ಥಿತಿ ಇದೆ. ಕುಡುಕನ ಕೈಯಲ್ಲಿ ಬೀಸತ್ತಿಯೂ ಇದೆ ಮಾರಾಯ್ರೆ. ಖಚಕ್ ಮಾಡಿದ್ರೆ ಅಂತ ಭಯ.
ಇವನು ಗದಗ್ ಮೂಲದ ಕುಡ್ಚೆಲ. ಬೆಳ್ಳಾರೆಯಲ್ಲಿ ಬಂದು ಲ್ಯಾಂಡ್ ಆಗಿ ಹನ್ನೆರಡು ವರ್ಷಗಳೇ ಸಂದಿವೆ. ಮೊದಲು ಅಬ್ದುಲ್ಲಾ ಕುಂಞಿ ಎಂಬ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ ನಂತರ ಸ್ವಾತಂತ್ರ್ಯ ಘೋಷಿಸಿಕೊಂಡ. ಇದೀಗ ಈತನೇ ಬೆಳ್ಳಾರೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಕುಡಿದು ಬಿಟ್ಟರೆ ಥೇಟ್ ನಲ್ಲ್. ಕಂಡವರಿಗೆಲ್ಲ ಬೆದರಿಸೋದು, ಹೊಡೆಯಲು ಹೋಗೋದು, ಹೊಡೆಯೋದು, ಮಾರಣಾಂತಿಕವಾಗಿ ಹೊಡೆಯೋದು, ಬೀಸತ್ತಿ ತೆಗೆಯೋದು,ಝಳಪಿಸೋದು, ಶಾಂತಿ ಭಂಗ ಮಾಡೋದು, ಲಾ ಮತ್ತು ಆರ್ಡರ್ ಗೆ ಸವಾಲು ಹಾಕೋದು, ಪೋಲಿಸರಿಗೆ ಬಯ್ಯೋದು, ಪೋಲಿಸರು ಅವನ ಮೂಗಿನಿಂದ ಬಿದ್ದವರಂತೆ ವರ್ತಿಸೋದು ಇತ್ಯಾದಿ ಇತ್ಯಾದಿ ಮಾಡುತ್ತಿದ್ದು ಜನ ಜ್ವರಕ್ಕೆ ಶರಣಾಗುತ್ತಿದ್ದಾರೆ. ಬೆಳ್ಳಾರೆ ಪೋಲಿಸರೂ ಈ ಕುಡ್ಚೆಲನನ್ನು ಹಾಗೆ ಸುಮ್ಮನೆ ಬಿಟ್ಟಿದ್ದು ಅವನಿಗೆ ಇನ್ನೂ ಬೆಟ್ರಿ ಚಾರ್ಜ್ ಆಗುವಂತಾಗಿದೆ. ಸಂಜೆ, ಮಸ್ಕ್ ಮಸ್ಕ್ ಕತ್ತಲಿನಲ್ಲಿ, ಕುಡಿದರೆ ಇಡೀ ದಿನ ಬೆಳ್ಳಾರೆಯಲ್ಲಿ ಇವನ ರಣ ರಂಪಾಟ ಇರುತ್ತದೆ. ಆದ್ದರಿಂದ ಬೆಳ್ಳಾರೆ ಪೋಲಿಸರು ಈ ಕೂಡಲೇ ಸನ್ಮಾನ್ಯರನ್ನು ಸನ್ಮಾನಿಸಿ ಆಟಿ ಕೂರಲು ಜೈಲಿಗೆ ಕಳಿಸಿದರೆ ಬೆಳ್ಳಾರೆ ಸೇಫ್. ಇಲ್ಲದಿದ್ದರೆ ಆವತ್ತು ಸಂತೆ ಕಟ್ಟೆಯಲ್ಲಿ ನಡೆದ ಕೊಲೆಯಂತೆ ಇನ್ನೊಂದು ಕೊಲೆ ಆಗುವ ಅಪಾಯಗಳಿವೆ. ಕುಡುಕರಿಗೆ ಕೊಲೆಸ್ಟ್ರಾಲ್ ಜಾಸ್ತಿ ಆದ್ರೆ ಕೊಲೆ ಗ್ಯಾರಂಟಿ.


ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top