ಸುಬ್ರಹ್ಮಣ್ಯ : ದೇವಸ್ಥಾನದಿಂದ ಪೂಜೆ ಸಾಮಗ್ರಿಗಳು ಹೊರಗೆ ಮಾರಾಟ?

Pattler News

Bureau Report

ಹಾಗೆಂದು ಸುಬ್ರಹ್ಮಣ್ಯ ಎಂಬ ಊರಿನಲ್ಲಿ ದೇವಸ್ಥಾನದಿಂದ ಪೂಜೆ ಸಾಮಗ್ರಿಗಳು ಹೊರಗೆ ಹೋಗೋದು ಇಂದು ನಿನ್ನೆಯ ಕತೆಯಲ್ಲ. ದೇವರ ಪೂಜೆಗೆ ಇಪ್ಪತ್ತೈದು ಪರ್ಸೆಂಟ್ ಹೋದರೆ ಎಪ್ಪತ್ತೈದು ಹೊರಗೆ ಜುಲಾಬು ಹೋದ ಹಾಗೆ ಹೋಗುತ್ತದೆ. ದೇವಸ್ಥಾನವನ್ನು ಬಿಸಿನೆಸ್ ಸೆಂಟರ್ ಮಾಡಿಕೊಂಡಿರುವ ಜನಗಳಿಂದ ಬೇರೆನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಹಾಗೆಂದು ಯಾವುದೇ ಸಾಮಾಗ್ರಿಗಳು ಸರಿಯಾಗಿ ದೇವರಿಗೆ ಮುಟ್ಟುತ್ತಿಲ್ಲ. ಮಹಾಭೀಷೇಕ ಅಂತ ತೆಂಗಿನ ಕಾಯಿ ಡ್ರಾ ಆಗುತ್ತದೆ, ದೇವರವರೆಗೆ ಸ್ವಲ್ಪವೇ ಹೋಗುತ್ತದೆ ಮತ್ತು ಉಳಿದಿದ್ದು ಹೊರಗೆ ಬರುತ್ತದೆ. ಚಾಲ್ತಿ ಉಗ್ರಾಣದಿಂದ ಐದು ಕೆಜಿ ತುಪ್ಪ ಡ್ರಾ ಆದರೆ ದೇವರಿಗೆ ಒಂದೂವರೆ ಕೆಜಿ ಮಾತ್ರ. ಉಳಿದಿದ್ದು ಹೊರಗೆ. ನಿನ್ನೆಯಲ್ಲ ಮೊನ್ನೆ ಕೂಡ ಕಾರ್ಕಳ ಅಸ್ರಣ್ಣರಿಗೆ ಸೇರಿದ ಮೂರು ಗೋಣಿ ತೆಂಗಿನ ಕಾಯಿ ಹೊರಗೆ ಹೋಗಿದೆ. ಇದು ಹೀಗೆ ಹೋಗುತ್ತಾ ಇದ್ದರೆ ಕತೆ ಏನಾಗ ಬಹುದು ಎಂಬುದು ಭಕ್ತಾದಿಗಳ ಪ್ರಶ್ನೆ. ಆಡಳಿತ ಮಂಡಳಿ ಮೀಟಿಂಗುಗಳಲ್ಲಿ ಕುಂತು ಪತ್ರಿಕೆ ಸಂಪಾದಕರುಗಳಿಗೆ ತಾರಮಾರ ಬೈಯ್ಯುವುದು ಬಿಟ್ಟು ಇನ್ನಾದರೂ ಈ ಲೀಕೆಜ್ ಗಳನ್ನ ಬಂದ್ ಮಾಡಿದರೆ ದೇವರಿಗೆ ಒಳ್ಳೆದು. ಅದು ಸರಿ, ದೇವಸ್ಥಾನದ ಪ್ರಧಾನ ಅರ್ಚಕ ಸೀಟು ಖಾಲಿ ಇದೆಯಾ? ಯಾವಾಗ ಭರ್ತಿ?


ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top