ಮಡಿಕೇರಿ ತಾಲೂಕಿನ ಮದೆ ಗ್ರಾಮದ ವೆರಿ ಫೇಮಸ್ ದೇವಸ್ಥಾನ ದೇವರ ಕೊಲ್ಲಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ತಮಿಳ್ ವರ್ಸಸ್ ಲೋಕಲ್ಸ್ ಶುರುವಾಗಿದ್ದು ಇದೀಗ ತಮಿಳರನ್ನು ಹೊರಗಿಟ್ಟು ಲೋಕಲ್ಸೇ ಅಧಿಕಾರ ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದೆ. ದೇವರ ಕೊಲ್ಲಿ ಚಾಮುಂಡೇಶ್ವರಿ ಸನ್ನಿಧಿ ತಮಿಳರದ್ದು. ಸನ್ನಿಧಿಯಲ್ಲಿ ಜಾತಿ, ಭಾಷೆ ತಂದು ಲೋಕಲ್ ದೇಶ ಭಕ್ತರು ಇದೀಗ ಇಡೀ ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಈ ಬೆಳವಣಿಗೆ ಸರಿ ಅಲ್ಲ.
ಹಾಗೆಂದು ಮಡಿಕೇರಿ ತಾಲೂಕಿನ ಮದೆ ಗ್ರಾಮದ ದೇವರ ಕೊಲ್ಲಿ ಚಾಮುಂಡೇಶ್ವರಿ ಸನ್ನಿಧಿಯನ್ನು ಮೊದಲು ಪತ್ತೆ ಮಾಡಿದ್ದೇ ತಮಿಳ್ ಕಾರ್. 1960ರ ದಶಕದಲ್ಲಿ ತಮಿಳ್ ದಿನಗೂಲಿಗಳು ಲೋಕಲ್ ಎಸ್ಟೇಟಿನ ಮರ ಕಡಿಯುವಾಗ ಒಂದು ಮರದಿಂದ ರಕ್ತದ ಬಣ್ಣದ ದ್ರವ ರೂಪ ಹೊರಗೆ ಬಂದಿತ್ತು. ಈ ಬಗ್ಗೆ ಪ್ರಶ್ನಿಸಲಾಗಿ ಅಲ್ಲಿ ಚಾಮುಂಡೇಶ್ವರಿ ಸಾನಿಧ್ಯ ಇರುವ ಬಗ್ಗೆ ಕಂಡು ಬಂದಿತ್ತು. ನಂತರ ತಮಿಳರು ದೇವಿಗೆ ಒಂದು ಗುಡಿ ಕಟ್ಟಿದ್ದು ಆ ಗುಡಿ ಮಾಣಿ -ಮೈಸೂರು ಸ್ಟೇಟ್ ಹೈವೇ ಬದಿಯಲ್ಲಿದೆ. ನಂತರದ ದಿನಗಳಲ್ಲಿ ದೇವಿ ತನ್ನ ಕಾರಣಿಕ ತೋರಿಸುತ್ತಿದ್ದು ದೇವಿ ಕತೆ ಮದೆ ಗ್ರಾಮದ ಸರಹದ್ದು ದಾಟಿ ಇತರ ಊರುಗಳಿಗೂ ಪಸರಿಸಿತ್ತು. ದೇವಸ್ಥಾನ ಸ್ಟೇಟ್ ಹೈವೇ ಬದಿಯಲ್ಲಿರುವ ಕಾರಣ ಪ್ರಯಾಣಿಕರು ಕೂಡ ಇಲ್ಲಿ ದರ್ಶನ ಮಾಡಿ ಮುಂದೆ ಹೋಗುವ ಪರಿಪಾಠ ಇದೆ. ಹಾಗೆ ಮುಂದೆ ದೇವಿ ಸನ್ನಿಧಿಯಲ್ಲಿ ದುಡ್ಡಿನ ಒರತೆ ನಿಧಾನವಾಗಿ ಏರತೊಡಗಿತು. ಈ ಒರತೆಯ ಕತೆ ಇಡೀ ಊರಿಗೇ ಗೊತ್ತಾಗಿ ಲೋಕಲ್ ಜನ ದೇವಸ್ಥಾನದ ಆಡಳಿತದ ಒಳಗೆ ನುಸುಳಲು ಸ್ಕೆಚ್ ಹಾಕಿ ಬಿಟ್ಟರು. ಈ ಬಗ್ಗೆ ಮಡಿಕೇರಿಯ ದೊಡ್ಡ ದೊಡ್ಡ ರಾಜಕಾರಣಿಗಳ ಸಹಾಯ ಪಡೆದ ಲೋಕಲ್ಸ್ ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ಆಡಳಿತದ ಒಳಗೆ ಬಂದೇ ಬಿಟ್ಟರು.
ಜಗಳ ಶುರು. ಹಾಗೆ ದೇವಸ್ಥಾನದ ಒಳಗೆ ಬಂದ ಲೋಕಲ್ಸ್ ಮೊದ ಮೊದಲು ದೇವಸ್ಥಾನದ ಒಳಗೆ ಜಾತಿಯ ವಿಷ ಬೀಜ ಬಿತ್ತಿ ಅರ್ಧ ತಮಿಳರಿಗೆ ದೇವಸ್ಥಾನದಿಂದ ಗೇಟ್ ಪಾಸ್ ಕೊಟ್ಟರು. ನಂತರ ಭಾಷೆಯ ಕಾರಣ ಹೇಳಲಾಯಿತು. ತಮಿಳರದ್ದು ಇಲ್ಲಿ ಏನು ಎಂದು ಗದರಿಸಿ ಉಳಿದವರನ್ನೂ ಹೊರಗೆ ಹಾಕಿ ಹುಂಡಿ ಉಳಿಕೆ ಹಣ ಒಂಭತ್ತು ಲಕ್ಷ ಮತ್ತು ದೇವಸ್ಥಾನದ ಕೀ ವಶಪಡಿಸಿಕೊಳ್ಳಲಾಯಿತು. ಇದೀಗ ತಮಿಳರು ಕಟ್ಟಿದ ದೇವಸ್ಥಾನ ಲೋಕಲ್ಸ್ ಕೈಯಲ್ಲಿ.
ಹಾಗೆಂದು ದೇವಸ್ಥಾನದಲ್ಲಿ ತಮಿಳರ ಆಡಳಿತ ಇರುವಾಗ ಅವರ ಪೊಂಗಲ್ ಹಬ್ಬ ಆಚರಿಸಲಾಗುತ್ತಿತ್ತು. ಲೋಕಲ್ಸ್ ಸಂಖ್ಯೆ ಜಾಸ್ತಿ ಆದಂತೆ ಪೊಂಗಲ್ ಗೆ ಕತ್ತರಿ ಬಿತ್ತು. ನಂತರ ತಮಿಳರು ಆಚರಿಸುತ್ತಿದ್ದ ಮಕರ ಸಂಕ್ರಾಂತಿಗೂ ನೋ ಅಂದರು ಲೋಕಲ್ಸ್. ಆಮೇಲೆ ಶಬರಿಮಲೆ ದೀಪ ಕೂಡ ಆರಿಸಲಾಯಿತು. ಈಗ ಲೋಕಲ್ಸ್ ಗಳದ್ದೇ ಕಾರುಬಾರು.

ದೇವರ ಕೊಲ್ಲಿ ದೇವರು
ಇನ್ನು ದೇವರಕೊಲ್ಲಿ ಚಾಮುಂಡೇಶ್ವರಿ ಸನ್ನಿಧಿಯ ಹರಿಕೆ ಬಾಬ್ತು ದೊಡ್ಡದಿದೆ. ಜೀರ್ಣೋದ್ದಾರ ಸಮಯದಲ್ಲಿ ಕಲೆಕ್ಷನ್ ಕೂಡ ಕೋಟಿ ಹತ್ತಿರ ಹತ್ತಿರ ಬಂದಿತ್ತು ಎಂದು ತಿಳಿದುಬಂದಿದೆ. ಕೆಲವು ಬೇನಾಮಿ ಅಕೌಂಟುಗಳೂ ಓಪನ್ ಆಗಿ ಅವುಗಳಿಗೂ ದುಡ್ಡಿನ ಒಳ ಹರಿವು ಇತ್ತು ಎಂಬ ಸೀಕ್ರೆಟ್ ಟಾಕ್ ಇದೆ. ದೇವಿಗೆ ಚಿನ್ನಾಭರಣ ಕೂಡ ಭಕ್ತರು ಮಾಡಿಸುತ್ತಿದ್ದಾರೆ. ಯಾವುದರಲ್ಲೂ ಪಾರದರ್ಶಕತೆ ಇಲ್ಲ ಎಂಬುದು ಜನರ ಅಭಿಪ್ರಾಯ. ದೇವಿಗೆ ಹರಿಕೆ ರೂಪದಲ್ಲಿ ಬಂದ ಸೀರೆಯಲ್ಲಿ ಕೂಡ ಸ್ವಿಚ್ ಆಫ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ದೇವಿಗೆ ಎರಡು ಸಾವಿರ ಬೆಲೆ ಬಾಳುವ ಸಾರಿ ಬಂದರೆ ಆಡಳಿತ ಮಂಡಳಿಯವರು ಅದನ್ನು ಇನ್ನೂರಕ್ಕೆ ರಿಡಕ್ಷನ್ ಸೇಲ್ ಮಾಡುವ ಕತೆಯೂ ಇದೆ. ದೇವಿಯ ತಿಂಗಳ ಆದಾಯ ಕೂಡ ದೊಡ್ಡದಿದ್ದು ದುಡ್ಡು ಯಾರ ಅಕೌಂಟಿಗೆ ಹೋಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಆದುದರಿಂದ ಈ ಕೂಡಲೇ ಮುಜರಾಯಿ ಇಲಾಖೆ ಈ ಒಂದು ದೇವಸ್ಥಾನದ ಬಗ್ಗೆ ಗಮನ ಹರಿಸೋದು ಒಳ್ಳೆಯದು. ದೇವಸ್ಥಾನ ಖಾಸಗೀ ಭೂಮಿಯಲ್ಲಿ ಇದ್ದರೂ ಏನಾದರೊಂದು ಪರ್ಯಾಯ ವ್ಯವಸ್ಥೆ ಮಾಡಲೇ ಬೇಕಾಗಿದೆ. ಇಲ್ಲದಿದ್ದರೆ ಅಮಾಯಕ ಭಕ್ತರ ದುಡ್ಡು ಯಾರ್ಯಾರದ್ದೋ ಅಕೌಂಟಿಗೆ ಜಮೆ ಆಗುವ ಅಪಾಯಗಳಿವೆ.





