ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ಜಾತ್ರೆ ಗದ್ದೆಯಲ್ಲಿ ಕೋಟಿ ಮುಗಿಸಿ ಕಟ್ಟಿದ್ದ ಹಾಲನ್ನು ಈಗಿನ ಆಡಳಿತ ಮಂಡಳಿ ಒಡೆದು ಹಾಕಲು ಮಾಸ್ಟರ್ ಪ್ಲಾನ್ ಸಿದ್ದಪಡಿಸಿದೆ. ಒಂದು ಸಭೆ ಸರಿಕಟ್ಟಾಗಿ ಮಾಡಿಲ್ಲ ಹಾಲ್ ನಲ್ಲಿ. ಈಗ ಉತ್ತರ ದಿನ್ನ ಆಗಿದೆ.
ಹಾಗೆಂದು ಮಹತೋಭಾರನ ಜಾತ್ರೆ ನಡೆಯುವ ಜಾಗದಲ್ಲಿ ಯಾಕೆ ಆ ಹಾಲನ್ನು ಕಟ್ಟಿದರು ಎಂದೇ ಸಾಮಾನ್ಯ ಜನಗಳಿಗೆ ಇವತ್ತಿಗೂ ಅರ್ಥ ಆಗಿಲ್ಲ. ಸನ್ನಿಧಿಯಲ್ಲಿ ದುಡ್ಡಿನ ಮಳೆಗಾಲ ಇರುವಾಗ ಆಗಿನ ಆಡಳಿತ ಮಂಡಳಿ ಒಳ್ಳೇ ಫಸಲು ತೆಗೆಯುವ ಸಲುವಾಗಿ ಹಾಲ್ ನ ಬಿತ್ತನೆ ನಡೆಸಿತ್ತು ಮತ್ತು ಫಸಲು ತೆಗೆದು ಕಿಸೆಗೆ ಇಳಿಸಿ ಕುರ್ಚಿ ಖಾಲಿ ಮಾಡಿತ್ತು. ಆದರೆ ಹಾಲ್ ಭೂತ ಬಂಗಲೆ ಆಗಿ ಹೋಯ್ತು. ಕೊರೋನಾ ಟೈಮಲ್ಲಿ ಕೋರೋನಾ ಆರೋಪಿಗಳನ್ನು ಅಡ್ಡಡ್ಡ ಮಲಗಿಸಲು ಇದನ್ನು ಉಪಯೋಗಿಸಿದ್ದು ಬಿಟ್ಟರೆ ನಂತರ ಉಪಯೋಗ ಆದದ್ದು ಪುತ್ತೂರಿನ ಬಂಗಾರದ ಅಂಗಡಿಗಳ ಜಾಹೀರಾತು ಫಲಕಗಳನ್ನು ಹಾಕಲು ಅಷ್ಟೇ. ಬೇರೆ ಯಾರೇ ಶನಿ ಹಿಡಿದವರು ಯಾವುದೇ ಸಭೆ ಸಮಾರಂಭ ಈ ಹಾಲ್ ನಲ್ಲಿ ನಡೆಸಲು ಗಡಗಡ ನಡುಗಿದ್ದರು. ಯಾಕೆಂದರೆ ಉತ್ತರ ದಿನ್ನ. ವಾಸ್ತವವಾಗಿ ಇದರ ವಾಸ್ತು ಸರಿ ಇಲ್ಲ.
ಹಾಗೆಂದು ಕೋಟಿ ಕೋಟಿ ಮುಗಿಸಿ ಈ ಹಾಲ್ ಕಟ್ಟುವ ಮಂಡೆ ಯಾರದ್ದು ಎಂದು ಇಲ್ಲಿ ತನಕ ಆ ಮಂಡೆ ಪತ್ತೆ ಆಗಿಲ್ಲ. ಜ್ಞಾನಿಗಳು, ಕೇವಲ ಜ್ಞಾನಿಗಳು, ವಿದ್ವಾಂಸರು, ಪಂಡಿತರು, ಅಮರ ಶಿಲ್ಪಿ ಜಗಣ್ಣಚಾರಿಗಳು, ವಾಸ್ತು ತಜ್ಞರು, ತಂತ್ರಿಗಳು, ವಾಸ್ತು ಶಿಲ್ಪಿಗಳು ಹೀಗೆ ಎಲ್ಲರೂ ಇದ್ದೇ ಈ ಹಾಲ್ ನಿರ್ಮಾಣ ಮಾಡಿದ್ದು. ಈಗ ನೋಡಿದರೆ ಉತ್ತರ ದಿನ್ನ ಆಗಿದೆ, ವಾಸ್ತು ಸರಿ ಇಲ್ಲ, ಸ್ಮಶಾನದ ಹತ್ತಿರ, ಸಕಲ ಪುಕುಲಿ ತೀರ್ಥದ ದಡದಲ್ಲಿದೆ ಎಂದೆಲ್ಲಾ ಪಿಳ್ಳೆ ನೆವ. ಕಟ್ಟುವಾಗ ಈ ಮಂಡೆಗಳಿಗೆ ಏನು ಮಂಡೆ ಮಾರಿ ಆಗಿತ್ತಾ? ಅದರಲ್ಲೂ ಈ ಹಾಲ್ ನಿರ್ಮಾಣ ಮಾಡಿದ ಕಾಂಟ್ರಾಕ್ಟರ್ ಗಳಿಗೂ ದುಡ್ಡು ಪಥಾಯಿಸ್ ಮಾಡಿದ್ದು ನಂತರ ಬಂದ ಆಡಳಿತ ಮಂಡಳಿಗಳು ಒಂತೊಂತೆನೇ ಕೊಟ್ಟು ಸಂದಾಯ ಮಾಡಿ ಕೈಕಾಲು ತೊಳೆದು ಕೊಂಡಿತ್ತು.ಇದೀಗ ಈ ಹಾಲ್ ತೆಗೆಯುವ ನಿರ್ಧಾರ ಮಾಡಲಾಗಿದೆ. ಇದೊಂಥರಾ ವಿದ್ವಾಂಸರ ವಿಧ್ವಂಸಕ ಕೃತ್ಯ ಅಂತಲೇ ಹೇಳಬಹುದು.ಈಗ ಮಹತೋಭಾರನಿಗೆ ಬಂದಿರುವ ಮಾಸ್ಟರ್ ಪ್ಲಾನ್ ನಲ್ಲಿ ಹೊಸ ಹಾಲ್ ನ ಸ್ಕೆಚ್ಚೂ ಇದೆ. ಮತ್ತೇ ಮಳೆಗಾಲ ಶುರುವಾಗಿದೆ. ಬಿತ್ತನೆ ಕೆಲಸ ಚಾಲ್ತಿಯಲ್ಲಿದೆ.







