ಕಡಬ: ಎಡಮಂಗಲ ಗ್ರಾಮ ಯಾಕೆ ಬೆಳ್ಳಾರೆ ಪೋಲಿಸ್ ವ್ಯಾಪ್ತಿಯಲ್ಲಿ?

Pattler News

Bureau Report

ಕಡಬ ತಾಲೂಕಿನ ನಿಯರೆಸ್ಟ್ ಮತ್ತು ಡಿಯರೆಸ್ಟ್ ಗ್ರಾಮ ಎಡಮಂಗಲವನ್ನು ಕಡಬದಲ್ಲಿ ಪೋಲಿಸ್ ಠಾಣೆ ಇದ್ದರೂ, ಎಡಮಂಗಲ ಈ ಹಿಂದೆ ಕಡಬ ಠಾಣಾ ವ್ಯಾಪ್ತಿಯಲ್ಲಿ ಇದ್ದರೂ ಯಾಕೆ ಬೆಳ್ಳಾರೆ ಠಾಣಾ ವ್ಯಾಪ್ತಿಗೆ ಸೇರಿಸಿದ್ದಾರೆ ಎಂದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ಎಡಮಂಗಲ ಗ್ರಾಮಸ್ಥರ ಮುಣು ಮುಣು ಕೇಳುವವರೇ ಇಲ್ಲದಂತಾಗಿದೆ.
ಹಾಗೆಂದು ಎಡಮಂಗಲ ಎಂಬ ಗ್ರಾಮ ಆಚೆ ಉಪ್ಪಿನಂಗಡಿ -ಸುಬ್ರಹ್ಮಣ್ಯ ಸ್ಟೇಟ್ ಹೈವೇ ಮತ್ತು ಇಂಚಿ ಮಂಜೇಶ್ವರ – ಸುಬ್ರಹ್ಮಣ್ಯ ಸ್ಟೇಟ್ ಹೈವೇಗಳ ನಡುವಲ್ಲಿದೆ. ಎಡಮಂಗಲ ಗ್ರಾಮ ಕಡಬಕ್ಕೆ ತುಂಬಾ ಮುಟ್ಟ. ಮುಟ್ಟ ಅಂದರೆ ಕೇವಲ ಐದು ಕಿಲೋ ಮೀಟರ್. ಅರ್ವತ್ತರಲ್ಲಿ ಹೋದರೆ ಕರೆಕ್ಟ್ ಏಳು ನಿಮಿಷದ ಸಾದಿ. ಇಂಥ ಎಡಮಂಗಲ ಗ್ರಾಮ ಈ ಹಿಂದೆ ಸುಳ್ಯ ತಾಲೂಕಿನಲ್ಲಿ ಇರುವಾಗ ಕಡಬ ಠಾಣಾ ವ್ಯಾಪ್ತಿಯಲ್ಲಿ ಇತ್ತು. ಆದರೆ ಯಾವಾಗ ಕಡಬ ತಾಲೂಕು ಆಯಿತೋ ಮತ್ತು ಬೆಳ್ಳಾರೆಯಲ್ಲಿ ಪೂರ್ಣ ಪ್ರಮಾಣದ ಸ್ಟೇಷನ್ ಶುರುವಾಯಿತೋ ಎಡಮಂಗಲವನ್ನು ತೆಗೆದ್ದು ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಗೆ ಕೊಟ್ಟು ಬಿಟ್ಟರು. ಇದೊಂದು ಮಂಡೆ ಯಾರದ್ದು ಎಂದೇ ಗೊತ್ತಾಗುತ್ತಿಲ್ಲ. ಎಡಮಂಗಲದಿಂದ ಬೆಳ್ಳಾರೆಗೆ ಹದಿನೈದು ಕಿಲೋಮೀಟರ್ ಇದೆ, ಅದೇ ಎಡಮಂಗಲದಿಂದ ಕಡಬಕ್ಕೆ ಕೇವಲ ಐದು ಕಿಲೋ ಮೀಟರ್. ಎಡಮಂಗಲದಲ್ಲಿ ಯಾರಾದರೂ ಬಾತ್ನಾಯೇ ಗಟ್ಟಿ ಪೂತುಂಡ ಕಡಬಕ್ಕೆ ಕೇಳುತ್ತದೆ. ಅಷ್ಟು ಹತ್ತಿರ ಕಡಬ.
ಯಾಕೆ ಹಾಗೆ ಮಾಡಿದರೋ ಗೊತ್ತಿಲ್ಲ. ಕಡಬ ಪೋಲಿಸರು ಮತ್ತು ಎಡಮಂಗಲದ ಜನ ಭಾರೀ ಕುಚು ಕುಚುನಲ್ಲಿದ್ದರು. ಪಾಲೋಳಿ ಸಂಕ ದಾಟಿದರೆ ಕಡಬ ಬಂದಾಯ್ತು. ಓ…. ಪೋಲಿಸ್ತಾರೆ…. ಎಂದು ಎಡಮಂಗಲದಿಂದ ಮೈಕದಲ್ಲಿ ಗಟ್ಟಿ ಕರೆದರೂ ಕಡಬ ಸ್ಟೇಷನ್ಗೆ ಕೇಳುತ್ತದೆ. ಆದರೆ ಬೆಳ್ಳಾರೆ ಪೋಲಿಸ್ ಠಾಣೆಗೆ ಬರಲು ಎಡಮಂಗಲ ಗ್ರಾಮಸ್ಥರಿಗೆ ಭಾರೀ ಕಷ್ಟ ಆಗುತ್ತದೆ. ಎಡಮಂಗಲದಿಂದ ಸಿಕ್ಕಿದ್ದಕ್ಕೆ ಹತ್ತ್ಕೊಂಡು ನಿಂತಿಕಲ್ಲಿಗೆ ಬಂದು ಬೀಳಬೇಕು. ನಿಂತಿಕಲ್ಲಿನಲ್ಲಿ ಪುಣ ಕಾದ ಹಾಗೆ ಕಾದು ಕಾದು ಬೆಳ್ಳಾರೆ ಬಸ್ ಹತ್ತ ಬೇಕು. ಅಷ್ಟೂ ಕಷ್ಟ ಪಟ್ಟು ಬೆಳ್ಳಾರೆ ಠಾಣೆಗೆ ಹೋದರೆ ಅಲ್ಲಿ ಎಲ್ಲಿಯಾದರೂ ಈರಯ್ಯರು ಮಂಗಳೂರು ಮೀಟಿಂಗ್, ಪುತ್ತೂರು ಮೀಟಿಂಗ್ ಎಂದು ಹೋಗಿದ್ದರೆ ಗೋವಿಂದ. ತಲೆಗೆ ಕೈ ಇಟ್ಟ್ಕೊಂಡು ವಾಪಾಸ್ ಎಡಮಂಗಲಕ್ಕೆ.
ಹಾಗೆಂದು ಬೆಳ್ಳಾರೆ ಪೋಲಿಸರಿಗೂ ಎಡಮಂಗಲವನ್ನು ಕಂಟ್ರೋಲ್ ಮಾಡಲು ಕಷ್ಟ ಇದೆ. ಬೆಳ್ಳಾರೆಯಿಂದ ಪೋಲಿಸರು ಎಡಮಂಗಲಕ್ಕೆ ಹೊರಟರೆ ನಿಂತಿಕಲ್ ನಲ್ಲಿ ಹತ್ತು ನಿಮಿಷ ಚಾಗೆ ನಿಲ್ಲಿಸಲೇ ಬೇಕು. ಚಾ ಕುಡುದು ಪೋಲಿಸರು ಹೊರಟ ತಕ್ಷಣ ಬತ್ತೆರ್…ಬತ್ತೆರ್.. ಮೆಸೇಜ್ ಪೋಲಿಸರಿಗಿಂತ ಮುಂಚೆ ಎಡಮಂಗಲ ರೀಚಾಗಿರುತ್ತದೆ. ಹಾಗಾಗಿ ಈ ಕೂಡಲೇ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಎಡಮಂಗಲವನ್ನು ವಾಪಾಸ್ ಕಡಬದ ಕೈ ಹಿಡಿಸಬೇಕು. ಸುಮ್ಮನೆ ಯಾಕೆ ಪೆಟ್ರೋಲ್ ವೇಸ್ಟ್, ಟೈಂ ವೇಸ್ಟ್, ಮನಿ ವೇಸ್ಟ್, ಎನರ್ಜಿ ವೇಸ್ಟ್. ಜನರನ್ನು ಯಾರು, ಯಾಕೆ ಸುಮ್ಮನೆ ಕುಣಿಸುತ್ತಿದ್ದಾರೆಂದೇ ಅರ್ಥ ಆಗುತ್ತಿಲ್ಲ


ಸ್ವಚ್ಛ ದೇಗುಲ ಕಾರ್ಯಕ್ರಮದಲ್ಲಿ ಇಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕೂತುಕುಂಜ ಒಕ್ಕೂಟ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಂಜ ವಲಯ ಇವರಿಂದ ಸ್ವಚ್ಛತಾ ಕಾರ್ಯಕ್ರಮ ಜರುಗಿತು ಸೇವಾ ಪ್ರತಿನಿಧಿ ಶ್ರೀಮತಿ ರೋಹಿಣಿ ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಮತ್ತು ಸದಸ್ಯರಾದ ಧರ್ಮಣ್ಣ ನಾಯ್ಕ ಗರಡಿ ಯವರು ಉಪಸ್ಥಿತರಿದ್ದರು ದೇಗುಲದ ಅರ್ಚಕ ರಾಮಚಂದ್ರ ಭಟ್ ರವರು ಪ್ರಾರ್ಥನೆ ಮಾಡಿ ಶ್ರೀ ದೇವರ ಪ್ರಸಾದ ಕೊಟ್ಟರು

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top