ಕೆಲವು ದಿನಗಳ ಹಿಂದೆ ಪುತ್ತೂರಿನ ಬನ್ನೂರು ಚರ್ಚ್ ಗೆ ಸಂಬಂಧ ಪಟ್ಟ ಸ್ಮಶಾನದಲ್ಲಿ ಸಮಾಧಿಯೊಂದರ ಅಗೆತ ಪ್ರಕರಣ ಕಡೆಕೊಡಿ ಆಗದಿದ್ದು ಸಾರ್ವಜನಿಕರು ಇದೀಗ ಈ ಬಗ್ಗೆ ಒಂಥರಾ ಮಾತಾಡಲು ಶುರು ಮಾಡಿದ್ದಾರೆ. ಈವರೆಗೆ ಅಗೆದವರು ಯಾರು, ಯಾಕೆ ಅಗೆಯಲಾಯಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಧರ್ಮಸ್ಥಳ ಬುರುಡೆ ಪ್ರಕರಣ ಶುರುವಾಗುವ ಸ್ವಲ್ಪ ದಿನಗಳ ಮುಂಚೆ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಬನ್ನೂರು ಚರ್ಚ್ ಗೆ ಸಂಬಂಧ ಪಟ್ಟ ಸ್ಮಶಾನದಲ್ಲಿ ತಡ ರಾತ್ರಿ ಒಂದು ಸಮಾಧಿಯನ್ನು ಅಗೆಯಲಾಗಿತ್ತು. ನೈಟ್ ಸಮಾಧಿಯಿಂದ ಏನನ್ನು ತೆಗೆಯಲಾಯಿತು, ಯಾರು ಸಮಾಧಿ ಅಗೆದರು, ಯಾಕೆ ಅಗೆದರು ಎಂದು ಯಾರಿಗೂ ಇಲ್ಲಿ ತನಕ ಮಾಹಿತಿ ಇಲ್ಲ. ನೈಟ್ ಸಮಾಧಿ ಅಗೆದ ವಿಷಯ ಬೆಳಿಗ್ಗೆ ಚರ್ಚ್ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು ಅವರು ಓಡಿ ಹೋಗಿ ಪೋಲಿಸ್ ಕಂಪ್ಲೈಂಟ್ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ನಡೆಸುವ ಸಲುವಾಗಿ ಪುತ್ತೂರು ಪೋಲಿಸರು ಸ್ಮಶಾನಕ್ಕೆ ಭೇಟಿ ಕೊಟ್ಟಿದ್ದರು. ಪೋಲಿಸರ ಪ್ರಕಾರ ಯಾರೋ ಕಿಡಿಗೇಡಿಗಳು ವಾಮಾಚಾರ ನಡೆಸುವ ಸಲುವಾಗಿ ಕೈ ಪೀಸ್, ಲೆಗ್ ಪೀಸ್ ಹಾಗೂ ಇತರ ಮೂಳೆಗಳ ಅರ್ಜೆಂಟಿಗೆ ಸಮಾಧಿ ಒಕ್ಕಿರ ಬಹುದು ಎಂದು ಹೇಳಿದ್ದಾರೆ. ಆದರೆ ಸಮಾಧಿ ಒಕ್ಕಿದವರು ಯಾರು ಎಂದು ಇಲ್ಲಿ ತನಕ ಪತ್ತೆ ಇಲ್ಲ.
ಹಾಗೆಂದು ಪುತ್ತೂರಿನ ಚರ್ಚ್ ಗೆ ಬಂದು ಅದಕ್ಕೆ ಸಂಬಂಧಿಸಿದ ಸ್ಮಶಾನದಲ್ಲಿ ಸಮಾಧಿ ಅಗೆಯೋದು ಅಂದರೆ ಅದು ಚಿಕ್ಕ ಕೆಲಸವಲ್ಲ ಮತ್ತು ಅಷ್ಟು ಬೆಟ್ರಿ ಕೂಡ ಚಿಲ್ಲರೆಗಳಿಗಿಲ್ಲ. ಮಾಟಮಂತ್ರಕ್ಕೆ, ಕುಲೆ ಬಿಡಿಸಲು, ಪೀಡೆ ಓಡಿಸಲು, ಬ್ರಹ್ಮ ರಕ್ಕಸ, ರಣ ಮುಂತಾದ ವಾಮಾಚಾರ ಇಲಾಖೆಗಳಿಗೆ ಸಂಬಂಧ ಪಟ್ಟ ಚಿಲ್ಲರೆಗಳೆಲ್ಲ ಅಷ್ಟು ಕಷ್ಟ ಪಟ್ಟು, ಸಮಾಧಿ ಅಗೆದು ಮೂಳೆ ಕದಿಯುವ ಕೆಲಸಗಳಿಗೆ ಕೈಹಾಕಲ್ಲ. ಹಾಗೆನಾದರೂ ಅವರು ಮಾಡಿದರೂ ಸೂತಕ ಗೀತಕ ಬಂದು ಬಿಡುತ್ತದೆ ಅವರಿಗೆ. ಹಾಗಾದರೆ ಚರ್ಚ್ ಸ್ಮಶಾನದಿಂದ ಮೂಳೆ ಕದ್ದವರು ಯಾರು?
ಇದೀಗ ಪುತ್ತೂರು ತುಂಬಾ ಗುಸುಗುಸು ಶುರುವಾಗಿದ್ದು ಸ್ಮಶಾನದಿಂದ ಬುರುಡೆ ತೆಗೆದಿರುವ ಬಗ್ಗೆ ಅಲ್ಲಲ್ಲಿ ಜನ ಮಾತಾಡುತ್ತೀದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳ ಬುರುಡೆ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದ್ದು ಪುತ್ತೂರು ಬುರುಡೆ ಪ್ರಕರಣ ಕೂಡ ಆ ಧರ್ಮಸ್ಥಳ ಬುರುಡೆ ಪ್ರಕರಣದ ಜೊತೆ ಲಿಂಕ್ ಮಾಡಿ ಜನ ಗುಸುಗುಸು ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯಕ್ಕೆ ಪುಷ್ಠಿ ನೀಡುವಂತೆ ಇದುವರೆಗೂ ಪುತ್ತೂರು ಸಮಾಧಿ ಅಗೆತದ ಮೂಳೆ ಕಳ್ಳರು ಯಾರೆಂಬುದೇ ಪತ್ತೆ ಆಗದಿದ್ದು ಸಾರ್ವಜನಿಕರಲ್ಲಿ ಒಂದು ಚಿಕ್ಕ ಡೌಟ್ ಮೂಡುವಂತೆ ಮಾಡಿದೆ. ನಿಜವಾಗಿಯೂ ಚರ್ಚ್ ಸಮಾಧಿಯಿಂದ ಬುರುಡೆ ಕಳ್ಳತನ ಆಗಿದೆಯಾ? ಮೂಳೆ ತೆಗೆಯಲಾಗಿದೆಯಾ? ಯಾರು ಈ ಕೆಲಸ ಮಾಡಿದ್ದು? ಎಲ್ಲಿದ್ದಾರೆ ಅವರು? ಪೋಲಿಸರು ಯಾಕೆ ಇನ್ನೂ ಪತ್ತೆ ಮಾಡಿಲ್ಲ? ಸಮಾಧಿ ಅಗೆದದ್ದು ಲೋಕಲ್ ಕಳ್ಳರಾ ಅಥವಾ ಇಂಟರ್ ಸ್ಟೇಟ್ ಕಳ್ಳರಾ? ಒಂದೂ ಹೊರಗೆ ಬಂದಿಲ್ಲ. ಇನ್ನು ಸ್ಮಶಾನಕ್ಕೂ ಸಿಸಿ ಕ್ಯಾಮೆರಾ ಫಿಕ್ಸ್ ಮಾಡಬೇಕಷ್ಟೆ ಮಾರಾಯ್ರೆ. ಆ ಒಂದು ಕೆಲಸ ಮಾಡಿದ್ರೆ ಇನ್ನು ವಿವಿಧ ರೇಂಜಿನ, ವಿವಿಧ ಸೈಜಿನ ಕುಲೆಗಳನ್ನೂ ನೋಡಿ ಆನಂದಿಸಬಹುದು.






