ಕೊಡಗರ ರಾಜಧಾನಿ ಮಡಿಕೇರಿಯಲ್ಲಿ ಇರುವ ಪೋಲಿಸ್ ವಸತಿ ಗೃಹವೊಂದಕ್ಕೆ ನುಗ್ಗಿದ ಕಳ್ಳರ ತಂಡವೊಂದು ನಗದು ಮತ್ತು ಆಭರಣಗಳನ್ನು ದೋಚಿದ ಘಟನೆ ಕಳೆದ ಜೂನ್ ತಿಂಗಳಲ್ಲಿ ನಡೆದಿದೆ. ಮಡಿಕೇರಿ ಪೋಲಿಸರು ದೊಡ್ಡ ಆಪರೇಷನ್ ಮಾಡಿ ಇಂಟರ್ ಸ್ಟೇಟ್ ಕಳ್ಳರನ್ನು ಹಿಡಿದು, ಬೆಂಡ್ ತೆಗೆದು ಅಂದರ್ ಗೆ ಕಳಿಸಿದ್ದಾರೆ.
ಕೊಡಗು ರಾಜಧಾನಿ ಮಡಿಕೇರಿಯಲ್ಲಿ ಇರುವ ರೈಫಲ್ ರೇಂಜ್ ಕ್ವಾರ್ಟರ್ಸ್ ಗೆ ಕಳೆದ ಜೂನ್ ತಿಂಗಳ ಒಂದು ಜಿರಿಕೂಟ ಬರ್ಸದ ನಸುಕಿನ ಜಾವದಲ್ಲಿ ನುಗ್ಗಿದ ಕಳ್ಳಕಾಕರು ಪಾಪ ಪೋಲಿಸರು ತೆಗೆದಿಟ್ಟಿದ್ದ ಚಿಲ್ಲರೆ ದುಡ್ಡು ಮತ್ತು ಪೋಲಿಸರ ಬುಡೆದಿಯವರ ಕಾಜಿ, ಕೆಬಿನವು, ಉಲುಂಗಿಲ, ಮಾಟಿ, ಮೂಗುತಿ, ಕಾರಿನ ಗೆಜ್ಜೆ ಮುಂತಾದ ಆಭರಣಗಳನ್ನು ಬ್ಯಾಗಿಗೆ ತುಂಬಿಸಿ ಕೋಳಿ ಕೂಗುವ ಮೊದಲು ಪದ್ರಾಡ್ ಆಗಿದ್ದರು. ಕೊಡಗು ಎಸ್ಪಿಗೆ ಕಳ್ಳಕಾಕರ ಮಂಡೆ ಬಿಚ್ಚಿಸುವಷ್ಟು ಮಂಡೆ ಬೆಚ್ಚ ಆಗಿತ್ತು. ಪೋಲಿಸ್ ಕ್ವಾರ್ಟರ್ಸ್ನಿಂದ ಕದಿಯೋದು ಅಂದರೆ. ಕಳ್ಳ ನನ್ಮಕ್ಕಳ ಸಂತಾನ ಮಾಜಿಸ ಬೇಕೆಂದು ಎಸ್ಪಿ ಡಿಸೈಡ್ ಮಾಡಿ ಬಿಟ್ಟರು. ಮಡಿಕೇರಿ ಸಿಟಿ ಮತ್ತು ಕೊಡಗು ಜಿಲ್ಲೆಯ ಪೋಲಿಸ್ ವರಿಷ್ಠನ ಸರಹದ್ದಿನ ಅಷ್ಟೂ ಸಿಂಗಂಗಳನ್ನು ಕರೆದು ಒಂದು ಟಾಸ್ಕ್ ಕೊಟ್ಟು ಬಿಟ್ಟರು. ಆಪರೇಷನ್ MP ಶುರುವಾಗಿಯೇ ಬಿಟ್ಟಿತು.
ಹಾಗೆ ರೈಫಲ್ ರೇಂಜ್ ಕ್ವಾರ್ಟರ್ಸ್ ನಲ್ಲಿ ಕಳ್ಳರು ಬಂದು ಪೋಲಿಸರ ಕ್ಯಾಶ್ ದುಡ್ಡು ಮತ್ತು ಪದ್ದೊಯಿ ಎಂದು ಕದ್ದ ಮೌಲ್ಯ ಅಂದಾಜು ಒಂದೂವರೆ ಲಕ್ಷ ರೂಪಾಯಿಗಳು. ಅಂದಾಜು ಇಪ್ಪತ್ತು ದಿನಗಳ ಕಾಲ ನಡೆದ ಈ ಆಪರೇಷನ್ ಗೆ ಖರ್ಚಾದ ದುಡ್ಡು ಬರೋಬ್ಬರಿ ಫಿಫ್ಟೀನ್ ಲಕ್ಷಗಳು. ಹಾಗೆ ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯ ಆದೇಶದ ಮೇರೆಗೆ ಆಪರೇಷನ್ ಗೆ ಇಳಿದ ಕೊಡಗು ಪೋಲಿಸರ ಬಳಿ ಇದ್ದದ್ದು ಒಂದು ಪೊಟ್ಟು ಸಿಸಿ ಕ್ಯಾಮೆರಾದ ಬ್ಲರ್ ಫೋಟೋಗಳು. ಆ ಬ್ಲರ್ ಫೋಟೋಗಳನ್ನೇ ಹಿಡ್ಕೊಂಡು ಹೊರಟ ಪೋಲಿಸರಿಗೆ ಇದು ಕೇವಲ ಮೂರು ಜನ ಕಳ್ಳರ ಕೈಚಳಕ ಎಂದು ಗೊತ್ತಾಗಿದೆ. ಅಷ್ಟರಲ್ಲಿ ಸೋಮವಾರ ಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ಮಾದರಿಯಲ್ಲಿ ಒಂದು ಕಳ್ಳತನ ನಡೆಯುತ್ತದೆ. ಕೂಡಲೇ ಅಲರ್ಟ್ ಆದ ಪೋಲಿಸರಿಗೆ ತಂಡನ ಕೊಲ್ಲಿ ಎಂಬಲ್ಲಿನ ಕೆರೆಯೊಂದರಲ್ಲಿ ಒಂದು ಬೈಕ್ ಮುಳುಗಿರುವ ಬಗ್ಗೆ ಮಾಹಿತಿ ಬರುತ್ತದೆ. ಕೂಡಲೇ ಸರ್ತ ಆದ ಪೋಲಿಸರು ಕೆರೆಯಿಂದ ಬೈಕ್ ತೆಗೆಸಿ ನೋಡಿದರೆ MH ರಿಜಿಸ್ಟ್ರೇಷನ್ ಬೈಕ್. ಆ ನಂಬರಿನ ಅಡ್ರೆಸ್ ಹುಡುಕಿ ಬೈಕ್ ಕತೆ ಕೇಳಿದರೆ ಬೈಕ್ ಓನರ್ ಅದನ್ನು ಗೋವಾದ ಯಾರಿಗೋ ಕೊಟ್ಟಿರುವ ಬಗ್ಗೆ ಮಾಹಿತಿ ಕೊಡುತ್ತಾನೆ. ಗೋವಾದಿಂದ ಬೈಕ್ MPಗೆ ಹೋಗಿರುತ್ತದೆ. ಹಾಗೆ ಆ ಮಾಹಿತಿ ಹೆಕ್ಕಿ ಹೊರಟ ಕೊಡಗು ಪೋಲಿಸರು MP ಸ್ಟೇಟ್ ನ ಧಾರ್ ಡಿಸ್ಟ್ರಿಕ್ಟ್ ನ ಹೆಡ್ ಕ್ವಾರ್ಟರ್ಸ್ ನಲ್ಲಿ ಹೋಗಿ ಕಾದು ಕೂರುತ್ತಾರೆ ಮತ್ತು ಅವರಿಗೆ ಬೇಕಾದ ಆಸಾಮಿಗಳು ಸಿಕ್ಕಿ ಬಿಡುತ್ತಾರೆ. ಮೂರೂ ಜನ ಅರೆಸ್ಟ್ ಮತ್ತು ಬ್ಯಾಂಡ್ ವಾಲಗದಲ್ಲಿ ಮಡಿಕೇರಿಗೆ ಲಿಫ್ಟ್.
ಹಾಗೆ ಮಡಿಕೇರಿ ಪೋಲಿಸರು ಈ ಒಂದು ಆಪರೇಷನ್ ನಲ್ಲಿ ಕಳ್ಳರನ್ನು ಹಿಡಿಯಲು ಕ್ರಮಿಸಿದ್ದು ಅಂದಾಜು ಏಳುನೂರು ಕಿಲೋ ಮೀಟರ್. ವಿವಿಧ ಭಾಗಗಳಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪರಾಂಬರಿಸಿ ನೋಡಲಾಗಿದೆ. ಈ ಸಂಬಂಧ ಐವತ್ತಕ್ಕೂ ಹೆಚ್ಚು ವಿವಿಧ ಸೈಜಿನ ಕಳ್ಳರ ಬೆಂಡ್ ತೆಗೆಯಲಾಗಿದೆ. ಟೋಟಲಾಗಿ ಈ ಒಂದು ಆಪರೇಷನ್ ಗೆ ಹದಿನೈದು ಲಕ್ಷ ಮುಗಿಸಲಾಗಿದೆ. ಕೊನೆಗೂ ಮಧ್ಯಪ್ರದೇಶದ ಧಾರ್ ಡಿಸ್ಟ್ರಿಕ್ಟ್ ನಲ್ಲಿ ಕಳ್ಳರನ್ನು ಲಾಕ್ ಮಾಡಲಾಯಿತು. ಮಿಸ್ಟರ್ ಸುರೇಶ್, ಶ್ರೀಮಾನ್ ಕಾಳು ಮತ್ತು ಶ್ರೀಶ್ರೀಶ್ರೀ ಪೂನಂ ಸಿಕ್ಕಿ ಬಿದ್ದ ಕಳ್ಳರು. ಇದರಲ್ಲಿ ಮಿಸ್ಟರ್ ಸುರೇಶ್ ಕಳ್ಳ ಇವರ ಮೇಲೆ ಒಂದು ಮರ್ಡರ್ ಕೇಸ್ ಹಾಗೂ ಇತರ ಇಬ್ಬರ ಮೇಲೆ ಇತರೇ ಕಳ್ಳತನ ಕೇಸುಗಳು ಹೀಗೆ ಒಟ್ಟಿಗೆ ಈ ಮೂವರ ಮೇಲೆ ಇಪ್ಪತ್ತ ನಾಲ್ಕು ಕೇಸುಗಳು ವಿವಿಧ ಸ್ಟೇಟ್ ಗಳಲ್ಲಿ ಇದೆ. ಕಳ್ಳತನ ನಡೆಸಲು ಇವರಿಗೆ ಆಲ್ ಇಂಡಿಯಾ ಪರ್ಮಿಟ್ ಇದ್ದು MP, GJ, MH, GA,KA ಸ್ಟೇಟ್ ಗಳ ವಿವಿಧ ಪೋಲಿಸ್ ಸರಹದ್ದುಗಳಲ್ಲಿ ಇವರ ಮೇಲೆ ಮರ್ಡರ್, ಹಾಫ್ ಮರ್ಡರ್, ದರೋಡೆ, ಕಳ್ಳತನ ಕೇಸುಗಳಿವೆ. ಜಡ್ಜ್ ಮನೆಯಲ್ಲಿ ದರೋಡೆಗೆ ಪ್ರಯತ್ನ ಮತ್ತು ಜಡ್ಜ್ ಗೆ ಹಲ್ಲೆ ಕೇಸ್, ಕಳ್ಳತನಕ್ಕೆ ವಿರೋಧ ವ್ಯಕ್ತಪಡಿಸಿದ ಮನೆ ಯಜಮಾನನ ಕಣ್ಣು ಕಿತ್ತ ಪ್ರಕರಣ ಇವರ ಜಾತಕದ ನಟೋರಿಯಸ್ ನಡೆಗಳು.
ಹಾಗೆಂದು ಮಡಿಕೇರಿ ಪೋಲಿಸರು ಮಧ್ಯಪ್ರದೇಶದ ಧಾರ್ ಡಿಸ್ಟ್ರಿಕ್ಟ್ ನಿಂದ ಹೊತ್ತುಕೊಂಡು ಬಂದ ಕಳ್ಳರ ಒಂದು ವಿಶೇಷ ಏನೆಂದರೆ ಒಮ್ಮೆ ಪೋಲಿಸರು ಅವರನ್ನು ಬೆಂಡ್ ತೆಗೆದು ಕೋರ್ಟ್ ಗೆ ಹಾಜರುಪಡಿಸಿ ನಂತರ ಅವರಿಗೆ ಜಾಮೀನಾದರೆ ಅವರು ಮತ್ತೇ ಕೋರ್ಟಿಗೆ ತಲೆ ಹಾಕಿ ಕೂಡ ಮಲಗಲ್ಲ. ನಂತರ ಅವರನ್ನು ವಾಪಾಸ್ ಹಿಡಿಯಲು ಪುನಃ ಹದಿನೈದು ಲಕ್ಷ ಮುಗಿಸ ಬೇಕು. ಹದಿನೈದು ಮುಗಿಸುವುದು ಬೇಡ, ತುಂಬಾ ಕಾಸ್ಲೀ ಎಂದು ಸುಮ್ಮನೆ ಗುಡಿ ಹಾಕಿ ಮಲಗಿದರೆ ಕಳ್ಳರಿಗೆ ಸ್ವರ್ಗಕ್ಕೆ ಮೂರೇ ಗೇಣು. ಎನ್ಕೌಂಟರ್ ಒಂದೇ ದಾರಿ ಕಳ್ಳ ನನ್ಮಕ್ಕಳಿಗೆ. ಸುಟ್ಟು ಫ್ರೈ ಮಾಡಿ ನರಿ ನಾಯಿಗಳಿಗೆ ಡಿನ್ನರ್ ಮಾಡಿ ಬಿಡಬೇಕು.






