ಸುಳ್ಯ ಸಂಪಾಜೆಯ ರಾಜಧಾನಿ ಕಲ್ಲುಗುಂಡಿಯಲ್ಲಿ ಮತ್ತೇ ಹೋಂ ಗಾರ್ಡ್ ಕಾಟ ಶುರುವಾಗಿದೆ ಎಂದು ತಿಳಿದುಬಂದಿದೆ. ಕಲ್ಲುಗುಂಡಿ OPಯಲ್ಲಿ ಸಾಗಿ ಹೋಗುವ ವಾಹನ ಸವಾರರಿಗೆ, ದ್ವಿಚಕ್ರ ವಾಹನಗಳಿಗೆ, ಪೊಯ್ಯೆ ಲಾರಿಗಳಿಗೆ, ಟಿಂಬರ್ ಲಾರಿಗಳಿಗೆ ಈ ಹೋಂ ಗಾರ್ಡ್ ರಗಳೆ ಇದೆ.
ಹಾಗೆಂದು ಒಬ್ಬ ರೀಜನಲ್ ಟ್ರಾನ್ಸ್ ಪೋರ್ಟ್ ಆಫೀಸರ್ ಮಾಡಬೇಕಾಗಿರುವ ವಾಹನಗಳ ರೆಕಾರ್ಡ್ಸ್ ಚೆಕಿಂಗ್ ಕೆಲಸ ಈ ಹೋಂ ಗಾರ್ಡ್ಸ್ ಯಾಕೆ ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಖುದ್ದು ಪೋಲಿಸರೇ ಆ ಕೆಲಸ ಮಾಡುವಂತಿಲ್ಲ. ಗಾಡಿ ನಿಲ್ಲಿಸಿ ಗಾಡಿಯಲ್ಲಿ ಏನಾದರೂ ಕಾನೂನು ಬಾಹಿರವಾಗಿ ಸಾಗಾಟ ಮಾಡಲಾಗುತ್ತಿದೆಯಾ, ಪೋಲಿಸರಿಗೆ ಬೇಕಾದವರು ಯಾರಾದರೂ ಒಳಗೆ ಇದ್ದಾರಾ, ಕತ್ತಿ ತಲ್ವಾರ್ ಏನಾದರೂ ಇದೆಯಾ ಎಂದು ತನಿಖೆ ಮಾಡಬೇಕೇ ಹೊರತು ರೆಕಾರ್ಡ್ಸ್ ಕೇಳುವ ಕೆಲಸ ಪೋಲಿಸ್ ರದ್ದು ಅಲ್ಲ. ಅದರಲ್ಲೂ ಅಂಥ ಕೆಲವು ಸಂದರ್ಭಗಳಲ್ಲಿ ಟೂ ಸ್ಟಾರ್ ಹೊಂದಿರುವ ಎಸ್ಸೈಗೆ ರೆಕಾರ್ಡ್ಸ್ ಕೇಳುವ ಅಧಿಕಾರ ಇದೆಯೇ ಹೊರತು ಈ ಹೋಂ ಗಾರ್ಡ್ಸ್ ಗಾಡಿ ನಿಲ್ಲಿಸಿ ರೆಕಾರ್ಡ್ಸ್ ಕೇಳೋದು ಮಹಾ ಪಾಪ. ಇವರು ಗಾಡಿ ನಿಲ್ಲಿಸೋದೇ ರಾಂಗ್.
ಹಾಗೆಂದು ಸುಳ್ಯದಲ್ಲಿ ಜಿರಿಕೂಟ ಬರ್ಸ ಇದ್ದ ಕಾರಣ ತಾಲೂಕು ಆಡಳಿತ ಇಬ್ಬರು ಹೋಂ ಗಾರ್ಡ್ಸ್ ಗಳನ್ನು ಕಲ್ಲುಗುಂಡಿ OPಗೆ ನಿಯೋಜಿಸಿತ್ತು. ಏನಾದರೂ ಹೆಚ್ಚು ಕಡಿಮೆಯಾದರೆ ಗ್ರಾಮ ಆಡಳಿತಕ್ಕೆ, ಪೋಲಿಸರಿಗೆ ಇವರ ಅಳಿಲ ಸೇವೆ ಲಭಿಸಲಿ ಎಂಬ ಸದುದ್ದೇಶದಿಂದ ಈ ನಿಯೋಜನೆ ಆಗಿತ್ತು. ಆದರೆ ಈ ಹೋಂ ಗಾರ್ಡ್ಸ್ ಮಾಡುತ್ತಿರುವುದೇನು. ಅಲ್ಲಿ ಕಲ್ಲುಗುಂಡಿ OPಯ ಬೆಂಚಿನಲ್ಲಿ ಕುಂತುಕೊಂಡು ರಸ್ತೆಯಲ್ಲಿ ಸಾಗಿ ಹೋಗುವ ಅಷ್ಟೂ ವಾಹನಗಳಿಗೆ ಕಿರಿಕ್ ಮಾಡುತ್ತಿದ್ದಾರೆ ಎಂದು ಮಾಹಿತಿ ಇದೆ. ಪ್ರತೀಯೊಬ್ಬ ವಾಹನ ಚಾಲಕನನ್ನೂ ಕಳ್ಳರಂತೆ ಕಾಣುವ ಇವರ ಜಬರ್ದಸ್ತ್ ದಿನೇ ದಿನೇ ಹೆಚ್ಚಾಗುತ್ತಿದೆ. ಲಾರಿಗಳನ್ನು ಅಡ್ಡ ಹಾಕಲಾಗುತ್ತಿದೆ, ಟಿಪ್ಪರ್ ಗಳ ಬೆವರಿಲಿಳಿಸಲಾಗುತ್ತಿದೆ, ಆಪೆಗಳಿಗೆ ತೂಪೆ ತೂಪೆ ಎಂಬ ವಾರ್ನಿಂಗ್, ಕಡೇಗೆ ಲೋಕಲ್ ಆಟೋಗಳನ್ನೂ ಬಿಡುತ್ತಿಲ್ಲ ಎಂದು ದೂರಿದೆ. ಎಲ್ಲಿಯಾದರೂ ಇವರ ಕೈಗೆ ಬೆಡಿಗಿಡಿ ಕೊಟ್ಟರೆ ಶೂಟ್ ಮಾಡಿ ಬಿಡುವಷ್ಟು ಸ್ಟ್ರಿಕ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಈ ಇಬ್ಬರು ಹೋಂ ಗಾರ್ಡ್ಸ್ ಗಳ ಅಳಿಲ ಸೇವೆಯನ್ನು ಮಹಾ ಸೇವೆ ಎಂದು ಪರಿಗಣಿಸಿ ತಾಲೂಕು ಆಡಳಿತ ಈ ಕೂಡಲೇ ಇವರಿಬ್ಬರಿಗೂ ಕಲ್ಲುಗುಂಡಿ OPಯಿಂದ ರಿಲೀವ್ ಮಾಡಬೇಕೆನ್ನುವುದು ಸಾರ್ವಜನಿಕರ ಆಶಯವಾಗಿದೆ. OP ಯಲ್ಲಿ ಹಾದು ಹೋಗುವಾಗ ರಗಳೆ ರಗಳೆ ರಗಳೆ ಮಾರಾಯ್ರೆ ಇವರು. ಸಾರ್ವಜನಿಕ ಸ್ಥಳಗಳಲ್ಲಿ ಅಧಿಕ ಪ್ರಸಂಗ ಯಾಕೆ ಮಾರಾಯ್ರೆ.






