ಪುತ್ತೂರಿನಲ್ಲಿ ಅಪ್ರಾಪ್ತೆ ಬಾಲಕಿ ಜೊತೆ ಅನೈತಿಕ ಸಂಬಂಧ ಬೆಳೆಸಿ ಅವಳಿಗೆ ಗರ್ಭದಾನ ಮಾಡಿದ ಅನ್ಯಕೋಮಿನ ಸೈಕಲ್ ಮಾಸ್ತರೊಬ್ಬನನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಒದ್ದು ಒಳಗೆ ಹಾಕಿದ್ದಾರೆ. ಸೈಕಲ್ ಮಾಸ್ತರನಿಗೆ ಈ ವಿಷ್ಯದಲ್ಲಿ ಗುಳಿಗೆ ಸಹಾಯ ಮಾಡಿದ್ದ ನೆಹರೂ ನಗರದ ಪೊಕ್ಕಡೆ ಡಾಕ್ಟರ್ ಒಬ್ಬ ನಾಪತ್ತೆ ಆಗಿದ್ದಾನೆಂದು ತಿಳಿದುಬಂದಿದೆ.
ಅವನು ಸಫ್ವಾನ್ ಯಾನೆ ಆಫ್ನಾನ್. ಪುತ್ತೂರು ಪೇಟೆ ಬದಿಯ ಮುರ ನಿವಾಸಿ. ಇವನು ಕೆಲ ದಿನಗಳ ಹಿಂದೆ ಅಪ್ರಾಪ್ತ ಬಾಕ್ಸ್ ಪೀಸ್ ಹುಡುಗಿಯೊಬ್ಬಳನ್ನು ಪುಸಲಾಯಿಸಿ ಅವಳೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ದ್ವಿಪಕ್ಷೀಯ ಸಂಬಂಧದ ಪ್ರತಿಫಲವಾಗಿ ಹುಡುಗಿ ಗರ್ಭಿಣಿ ಆಗಿ ಬಿಟ್ಟಿತು. ವಿಷಯ ಹೊರಗೆ ಬಂದು ನೆಹರೂ ನಗರ ದಾಟಿ, ಮಂಜಲ್ಪಡ್ಪು ಇಳಿದು, ಬೊಳುವಾರು ಹಾದು, SPT ಸಂಕ ದಾಟಿ ಪುತ್ತೂರು ಮಹಿಳಾ ಠಾಣಾ ಮೆಟ್ಟಿಲು ಹತ್ತಿತು. ಪೋಲಿಸರು ಬೆರಳೆಣಿಕೆಯಲ್ಲಿ ಹೋಗಿ ಮೆರವಣಿಗೆಯಲ್ಲಿ ಸಫ್ವಾನ್ ತಂದು ಪೋಕ್ಸೋ ಪ್ಲಸ್ ಅಟ್ರಾಸಿಟಿ ಕೇಸ್ ಜಡಿದು ಕೊಡಿಯಾಲ್ ಬೈಲ್ ಜೈಲಿಗೆ ಕಳಿಸಿ ಕೊಟ್ಟಿದ್ದರು.
ಸದ್ರಿ ಕೇಸಿನಲ್ಲಿ ನೆಹರೂ ನಗರದ ಒಬ್ಬ ಪೊಕ್ಕಡೆ ಡಾಕ್ಟರ್ ಹೆಸರು ಕೂಡ ಲಿಂಕ್ ಆಗಿದ್ದು ಡಾಕ್ಟರ್ ನಾಪತ್ತೆ ಎಂದು ತಿಳಿದುಬಂದಿದೆ. ಈ ಡಾಕ್ಟರ್ ಸಫ್ವಾನ್ ಹುಡುಗಿಗೆ ಗರ್ಭಪಾತ ಮಾಡಲು ಗುಳಿಗೆ ಕೊಟ್ಟ ಬಗ್ಗೆ ಮಾಹಿತಿ ಇದ್ದು ಮಹಿಳಾ ಪೋಲಿಸರು ಪೊಕ್ಕಡೆ ಡಾಕ್ಟರಿಗೆ ಇಂಜೆಕ್ಷನ್ ಕೊಡಲು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲ ಮಾರಾಯ್ರೆ ಈ ಪೊಕ್ಕಡೆ ಡಾಕ್ಟರ್ ಏನಾದರೂ ಜ್ವರಕ್ಕೆ, ಜುಲಾಬಿಗೆ, ಗ್ಯಾಸ್ಟ್ರಿಕ್ ಗೆ ಮದ್ದು ಕೊಡುವುದು ಬಿಟ್ಟು ಗರ್ಭಪಾತಕ್ಕೆ ಗುಳಿಗೆ ಕೊಟ್ಟು ಎಲ್ಲಿಯಾದರೂ ಹುಡುಗಿಯ ಪ್ರಾಣಕ್ಕೆ ಸಂಚಕಾರ ಬಂದಿದ್ದರೆ ಯಾರು ಹೊಣೆ. ಇಂಥ ಅಂಡಿಗುಂಡಿ, ಪೊಕ್ಕಡೆ ಡಾಕ್ಟರ್ ಗಳನ್ನೆಲ್ಲ ಒದ್ದೆ ಮಾಡಿ ಒದ್ದು ಒಳಗೆ ಹಾಕಬೇಕು.






