ಮಡಿಕೇರಿ ತಾಲೂಕಿನ ಆದರೆ ಘಟ್ಟದ ಕೆಳಗಿನ ಚೆಂಬು ಗ್ರಾಮದ ಆನೆಹಳ್ಳದಲ್ಲಿ ಮರಳುಗಳ್ಳರು ಮತ್ತೇ ನದಿಗಿಳಿದಿದ್ದು ಪಿಕಪ್ ಮೂಲಕ ಮರಳಿ ಮರಳಿ ಮರಳು ತೆಗೆದು ಸರಬರಾಜು ಮಾಡಲಾಗುತ್ತಿದೆ. ಭೂತಗಳ ಹೆದರಿಕೆಯೇ ಇಲ್ಲ.
ಹಾಗೆಂದು ಈ ಚೆಂಬು ಗ್ರಾಮ ಮಡಿಕೇರಿ ತಾಲೂಕು ಕೊಡಗು ಜಿಲ್ಲಾ ಮ್ಯಾಪಿನಲ್ಲಿ ಇದ್ದರೂ ಈ ಗ್ರಾಮಸ್ಥರ ವೈವಾಟೆಲ್ಲ ಸುಳ್ಯ ತಾಲೂಕಿನಲ್ಲೇ. ಯಾಕೆಂದರೆ ಮಡಿಕೇರಿಯಿಂದ ಕೊಡಗು ಜಿಲ್ಲಾಡಳಿತ ಘಟ್ಟ ಇಳಿದು ಬರುವುದಿದ್ದರೂ ಅದು ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕಲ್ಲುಗುಂಡಿ ದಾಟಿಯೇ ಚೆಂಬು ಗ್ರಾಮಕ್ಕೆ ಕಾಲಿಡಬೇಕು. ಹಾಗಾಗಿ ಚೆಂಬು ಗ್ರಾಮ ಯಾವಾಗಲೂ ಬೆಕ್ಕಿನ ಬಿಡಾರ ಬೇರೆಯೇ ಟೈಪು. ಇದೀಗ ಸೋಣ ಮುಗಿಯುವ ಮೊದಲೇ ಚೆಂಬು ಗ್ರಾಮದ ಆನೆಹಳ್ಳ ನದಿಯಿಂದ ಮರಳು ತೆಗೆಯುವ ಕೆಲಸ ಶುರುವಾಗಿದೆ ಎಂದು ತಿಳಿದುಬಂದಿದೆ. ಈ ಭಾಗದ ರೆಡ್ಡಿ ಶ್ರೀಮಾನ್ ಆಂಡೂ ಎಂಡ್ ಕಂಪೆನಿ ಆನೆಹಳ್ಳ ನದಿಯಿಂದ ಮರಳು ತೆಗೆಯುವ ಕೆಲಸಕ್ಕೆ ಮೂರ್ತ ಮಾಡಿದ್ದು ಪಿಕಪ್ ಮೂಲಕ ಸುಳ್ಯ ಸಂಪಾಜೆ, ಕೊಡಗು ಸಂಪಾಜೆ ಎರಡೂ ಗೇಟ್ ಗಳನ್ನು ತಪ್ಪಿಸಿ ತಪ್ಪಿಸಿ ಮರಳು ಸಪ್ಲೈ ಮಾಡುತ್ತಿರುವ ಪರಿಮಳ ಬಂದಿದೆ. ಆಂಡೂ ಕಂಪೆನಿಯ ಈ ಸಮಾಜ ಸೇವೆಗೆ ಜನ ಫಿದಾ ಆಗಿದ್ದು ಪರ್ಮಿಟ್ ಇಲ್ಲದೆ ಈ ಕೆಲಸ ಮಾಡುವ ಆಂಡೂ ಗುಂಡಿಗೆಗೆ ಮೆಚ್ಚಿ ಅನೇಕ ಜನ ಪತ್ರಿಕೆಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಆನೆಹಳ್ಳ ತನಕ ಬರಲು ಮಡಿಕೇರಿ ಪೋಲಿಸರಿಗೆ ಉದಾಸೀನ ಆದರೂ ಸುಳ್ಯ ಗೇಟಿನ ಪೋಲಿಸರಿಗೂ ಒಂದು ರೌಂಡ್ ಆನೆಹಳ್ಳಕ್ಕೆ ಹೋಗಿ ಆಂಡೂವನ್ನು ವಿಚಾರಿಸ ಬಹುದು. ಆಂಡೂ ಬೇಡ ಅನ್ನಲ್ಲ.
ಅಲ್ಲ ಮಾರಾಯ್ರೆ ನದಿಯಲ್ಲಿ ಇನ್ನೂ ಕೆಂಪು ಕೆಂಪು ಕೇಟಿ ನೀರು ತಗ್ಗಿಲ್ಲ, ಜಿರಿಕೂಟ ಬರ್ಸ ಇಪ್ಪತ್ನಾಲ್ಕು ಗಂಟೆಯೂ ಬಿಡುತ್ತಿಲ್ಲ, ಸೋಣದ ಬೊಗ್ಗ ದಡೆಯಿಂದ ಇನ್ನೂ ಇಳಿದಿಲ್ಲ, ಅಷ್ಟರಲ್ಲೇ ಆಂಡೂಗೆ ಅರ್ಜೆಂಟ್. ಎಲ್ಲಿಯಾದರೂ ಆಂಡೂವಿನ ಪಿಕಪ್ಪು, ಜೆಸಿಬಿ, ಕೊಟ್ಟು,ಬಟ್ಟಿ ಬೊಳ್ಳದಲ್ಲಿ ಸುಳ್ಯ ಓಡಬಾಯಿಗೆ ಬಂದರೆ ಪಾಪ ಆಂಡೂ ಲಾಸನ್ನು ಬರಿಸುವವರು ಯಾರು? ಈ ಕೂಡಲೇ ಸುಳ್ಯ ಪೋಲಿಸರು ಅಥವಾ ಮಡಿಕೇರಿ ಪೋಲಿಸರು ಆಂಡೂವನ್ನು ರಕ್ಷಿಸ ಬೇಕು. ಆಂಡೂ ಸಮಾಜ ಸೇವೆಗೆ ಶಾಲು ಹೊದಿಸಿ, ಗಂಧದ ಮಾಲೆ ಹಾಕಿ, ಒಂದು ಕೆಜಿ ಮೂಸಂಬಿ ಕೊಟ್ಟು ಸನ್ಮಾನ ಮಾಡ ಬೇಕು.






