ಕೊಡಗು ಸಂಪಾಜೆಯ ದೇಶಭಕ್ತರ ಯುವ ನಾಯಕ ಬಾಲಚಂದ್ರ ಕಳಗಿ ಹತ್ಯೆಯ ಸೇಡಿನ ಕತೆ ಸಣ್ಣ ಬ್ರೇಕ್ ನ ನಂತರ ಮತ್ತೇ ಮುಂದುವರೆದಿದ್ದು ಇದೀಗ ರಿವೆಂಜ್ ಗೆ ರಿವೆಂಜ್ ಕೇಸಲ್ಲಿ ಭೂಗತ ಲೋಕ ಎಂಟ್ರಿ ಆಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮೂವರನ್ನು CCB ಲಾಕ್ ಮಾಡಿದ್ದು ಆರ್ಮ್ಸ್ ACT ಅಡಿಯಲ್ಲಿ ಕೊಡಿಯಾಲ್ ಬೈಲ್ ಡಿಸ್ಟ್ರಿಕ್ಟ್ ಜೈಲಿನಲ್ಲಿ ಫ್ರಿಡ್ಜ್ ನಲ್ಲಿ ಇಟ್ಟಿದೆ ಎಂದು ತಿಳಿದುಬಂದಿದೆ.
ಹಾಗೆಂದು ಆವತ್ತು ಕೊಡಗು ಸಂಪಾಜೆಯ ದೇಶಭಕ್ತರ ಯುವ ನಾಯಕ ಬಾಲಚಂದ್ರ ಕಳಗಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಬಿಡಲ್ಲ ಎಂಬ ಕಾರಣಕ್ಕೆ Accident ಮಾಡಿಸಿ ಮರ್ಡರ್ ಮಾಡಲಾಗಿತ್ತು. ಸಮಾಜಘಾತುಕ ಶಕ್ತಿಗಳು ಕಳಗಿ ಅಂತಿಮ ಯಾತ್ರೆಯನ್ನು ವಿಜಯೋತ್ಸವ ಎಂದು ನೈಂಟಿಗೆ ಮಿಲ್ಕ್ ಮಿಕ್ಸ್ ಮಾಡಿ ಕುಡಿದು ಕುಣಿದು ಕುಪ್ಪಳಿಸಿ ಬಿಟ್ಟಿದ್ದವು. ಆದರೆ ಈ ವಿಜಯೋತ್ಸವ ತುಂಬಾ ದಿನ ನಡೆಯಲಿಲ್ಲ. ಸಂಪಾಜೆಯ ಮನು ಗ್ಯಾಂಗ್ ಒಂದು ಬೆಳ್ಳಂಬೆಳಗ್ಗೆ ಸಂಪತ್ ಎಂಬ ಕಳಗಿ ಹತ್ಯೆಯ ಸೂತ್ರಧಾರನನ್ನು ಮನೆಗೆ ನುಗ್ಗಿ ಢಂ ಮಾಡಿ ಬಿಟ್ಟಿತು. ಆ ಕೇಸಲ್ಲಿ ಮನು ಗ್ಯಾಂಗ್ ಜೈಲಿಗೆ ಹೋಗಿ ಇದೀಗ ಜಾಮೀನು ತಗೊಂಡು ಆಚೆ ಬಂದಿದೆ. ಇದೀಗ ಸಂಪತ್ ಗ್ಯಾಂಗ್ ಗೆ ರಿವೆಂಜ್ ತಗೋ ಬೇಕಾದ ಹಠ. ಅದಕ್ಕೆ ಮಸಲತ್ತು, ಸ್ಕೆಚ್ಚು, ಎಸ್ಟಿಮೇಟ್.
ಹಾಗೆ ಕಳಗಿ ಹತ್ಯೆಯ ಮಾಸ್ಟರ್ ಮೈಂಡ್ ಸಂಪತ್ ಮರ್ಡರ್ ಕೇಸಿನ ಸಂಪಾಜೆ ಮನುವನ್ನು ಢಂ ಮಾಡಲು ಇದೀಗ ಹೈ ಲೆವೆಲ್ ಮೀಟಿಂಗ್ ನಡೆದಿದ್ದು ಫೈನಾನ್ಸಿಯರ್ಸ್ ದುಡ್ಡಿನ ಗೋಣಿ ಹಿಡ್ಕೊಂಡು ರೆಡಿಯಾಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸಂಪತ್ ಗ್ಯಾಂಗ್ ಅರಬ್ಬಿ ಸಮುದ್ರದ ಆಯೆರೆಯ ಭೂಗತ ಲೋಕವನ್ನು ಸಂಪರ್ಕಿಸಿದ್ದು ಆಚೆಯಿಂದ “ಮಲ್ಪುಗ” ಮೆಸೇಜ್ ಬಂದಿದೆ. ಈ ಬಗ್ಗೆ ಸುಳ್ಯದ ಒಬ್ಬ ಫೈನಾನ್ಸಿಯರ್ ಮತ್ತು ಮಂಗಳೂರಿನ ಇನ್ನೊಬ್ಬ ಧಣಿ ಮನುವನ್ನು ಢಂ ಮಾಡಲು ದುಡ್ಡಿನ ಮಳೆ ಸುರಿಸಲು ರೆಡಿಯಾಗಿ ನಿಂತಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲಾ ಸರಿ ಹೋಗುತ್ತಿದ್ದರೆ ಇಷ್ಟರಲ್ಲಾಗಲೇ ಢಂ ಆಗಿ ಹೋಗುತ್ತಿತ್ತು. ಆದರೆ ದೇವರು ದೊಡ್ಡವನು.CCB ಪೋಲಿಸರು ಶಿವ ಪೂಜೆಯಲ್ಲಿ ಕರ್ಡಿ ಬಂದಂತೆ ಬಂದು ಮೂವರನ್ನು ಲಾಕ್ ಮಾಡಿದ್ದಾರೆ.
ಹಾಗೆ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ CCB ಪೋಲಿಸರು ಕಾರ್ಯಾಚರಣೆ ನಡೆಸಿದಾಗ ಒಂದು ಗ್ಯಾಂಗ್ ಸಿಕ್ಕಿ ಬಿದ್ದಿದ್ದು ಗ್ಯಾಂಗ್ ಬಳಿ ಮಾರಕಾಸ್ತ್ರಗಳು ಇದ್ದ ಕಾರಣ ಆರ್ಮ್ಸ್ Act ಅಡಿಯಲ್ಲಿ ಅವರ ಮೇಲೆ FIR ಹಾಕಲಾಗಿತ್ತು. ಸಿಸಿಬಿ ಪೊಲೀಸರು ಮತ್ತೇ ಮತ್ತೇ ಈ ಗ್ಯಾಂಗಿನ ಬೆಂಡ್ ಗಿಂಡ್ ತೆಗೆದು ವಿಚಾರಿಸಿದಾಗ ಮನು ಹತ್ಯೆಗೆ ಸ್ಕೆಚ್ ವಿಷಯ ಕೂಡ ಬಂದಿದೆ ಎಂಬ ಗುಸುಗುಸು ಇದೆ. ಮನು ಹತ್ಯೆಗೆ ಕೆಲವು ಭೂಗತರ ಎಂಟ್ರಿ ಕೂಡ ಆಗಿದೆ ಎಂದು ಕೂಡ ಬಾಯಿ ಬಿಟ್ಟಿದ್ದಾರೆ ಎಂದು ಸುದ್ದಿಯಾಗಿದೆ. ಹಾಗೆಂದು ಈ ರಿವೆಂಜ್ ಕತೆ ಇಲ್ಲಿಗೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಯಾವುದಕ್ಕೂ ದಕ್ಷಿಣ ಕನ್ನಡ ಪೋಲಿಸರು ಈ ಕೇಸ್ ಬಗ್ಗೆ ಫುಲ್ ಎಲರ್ಟ್ ಆಗಿರೋದು ಒಳ್ಳೇದು, ಇಲ್ಲದಿದ್ದರೆ ಯಾರನ್ನು ಯಾರು ಢಂ ಮಾಡುತ್ತಾರೆಂದೇ ಗೊತ್ತಾಗಲ್ಲ. ಯಾಕೆಂದರೆ ರಿವೆಂಜ್ ಈಗಲೂ ಕಾದ ಕಾವಲಿಯಂತಿದೆ.






