ಸುಳ್ಯ ಪೇಂಟೆಯ ಕೆಲವು ಐಸ್ ಕ್ರೀಮ್ ಪಾರ್ಲರ್ ಗಳಲ್ಲಿ ಹೀಟಿಗೆ ಬಂದಿರುವ ಕೆಲವು ಲವರ್ಸ್ ಗಳಿಗೆ ಪ್ರಾಥಮಿಕ ಶಿಕ್ಷಣ ಪೂರೈಸಿ ಕೊಳ್ಳಲು “ವ್ಯವಸ್ಥೆ” ಮಾಡಿ ಕೊಡಲಾಗುತ್ತಿದೆ ಎಂಬ EXPLOSIVE ಮಾಹಿತಿ ಬಂದಿದ್ದು ದೇವರ ಹತ್ತಿರವೇ ಈ ಒಂದು ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಹಾಗೆಂದು ಸುಳ್ಯದಲ್ಲಿ ಇದೇ ಮೊದಲಲ್ಲ ಈ ಟೈಪಿನ ಒಂದು ವಿಶಿಷ್ಟ ಬಿಸಿನೆಸ್. ಒಂದು ಐಸ್ ಕ್ರೀಮ್ ಪಾರ್ಲರ್ ಓಪನ್ ಮಾಡೋದು, ಅದರಲ್ಲಿ ಕೆಲವು ಡಾರ್ಕ್ ಕ್ಯಾಬಿನ್ ಗಳು, ಪ್ರೇಮಿಗಳ ಆಕರ್ಷಣೆ, ಅವರಿಗೆ ಒಳಗೆ ಕತ್ತಲೆಯಲ್ಲಿ ಪರಡ್ಡಲು ಅವಕಾಶ, ಜೋಡಿಗೆ ಗಂಟೆಗೆ ಇಂತಿಷ್ಟು ಅಂತ ಎಂದೆಲ್ಲಾ ವ್ಯವಸ್ಥೆ ಮಾಡಿ ಕೊಡಲಾಗುತ್ತದೆ. ಬಹಳ ಹಿಂದೆಯೇ ಸುಳ್ಯ ಪೋಲಿಸ್ ಠಾಣೆಯ ಕೂಗಳತೆ ದೂರದಲ್ಲೇ ಇಂತಹ ಒಂದು ವ್ಯವಸ್ಥೆ ಇತ್ತು. ಇದೀಗ ಅದೇ ಟೈಪಿನ ಕೋಲ್ಡ್ ಹೌಸ್ ಗಳು ಸುಳ್ಯ ರಥಬೀದಿಯಲ್ಲಿ ಎದ್ದು ನಿಂತಿದ್ದು ಬಿಸಿನೆಸ್ ಜೋರಾಗಿದೆ. ದೇವರ ಕೂಗಳತೆ ದೂರದಲ್ಲೇ ಮಾರಾಯ್ರೆ.
ಹಾಗೆಂದು ಹೈಸ್ಕೂಲ್ ಲವರ್ಸ್, ಪ್ರೊಬೇಷನರಿ ಲವರ್ಸ್, ರೂರಲ್ ಲವರ್ಸ್, ನ್ಯೂ ಲವರ್ಸ್, ಅಂಡಿಗುಂಡಿ ಲವರ್ಸ್, ಪೊಟ್ಟು ಲವರ್ಸ್, ಟೈಂ ಪಾಸ್ ಲವರ್ಸ್ ಇಂಥ ಕ್ರೀಂ ಪಾರ್ಲರ್ ಗಳ ಪರ್ಮನೆಂಟ್ ಗಿರಾಕಿಗಳಾಗಿದ್ದು ಅವರು ದಿನವಿಡೀ ಅಲ್ಲೇ ಗಿರಕಿ ಹೊಡೆಯುತ್ತಾ ಇರುತ್ತಾರೆ. ಅಲ್ಲಿ ಸುಳ್ಯ ರಥಬೀದಿಯಲ್ಲಿ ಎರಡು ಕ್ರೀಂ ಪಾರ್ಲರ್ ಗಳಲ್ಲಿ ಇಂಥ ಬಿಸಿನೆಸ್ ನಡೆಯುತ್ತಿದ್ದು ಒಂದು ಜೋಡಿಗೆ ಗಂಟೆಗೆ ಮುನ್ನೂರು ರೂಪಾಯಿಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುತ್ತಿದೆ. ಪೊಕ್ಕಡೆ ಜ್ಯೂಸ್ ಕುಡಿದಂತೆ, ಪೊಕ್ಕಡೆ ಪೊಕ್ಕಡೆ ಗಡಬಡ ತಿಂದಂತೆ, ವೆನಿಲಾ ಸ್ಲ್ಯಾಬ್ ಸವಿದಂತೆ, ಡ್ರೈ ಫ್ರೂಟ್ಸ್ ಸಲಾಡ್ ಇಳಿಸಿದಂತೆ ಮಾಡುವ ಪ್ರೇಮಿಗಳು ಕ್ಯಾಬಿನ್ ಒಳಗೆ ಧಡಭಡ ಮಾಡುತ್ತಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಒಂದು ಕ್ರೀಂ ಪಾರ್ಲರಿನಲ್ಲಿ ಕತ್ತಲೆ ರೂಮಿನ ವ್ಯವಸ್ಥೆ ಕೂಡ ಇದ್ದು ಮಂಚದ ವ್ಯವಸ್ಥೆ ಇದೆಯೇ ಎಂದು ಗೊತ್ತಾಗಿಲ್ಲ. ಅರ್ಜೆಂಟಿಗೆ ಮಂಚದ ವ್ಯವಸ್ಥೆ ಬೇಕೇಂದೇ ಇಲ್ಲ, ಟೇಬಲ್ಲಿನ ಸದುಪಯೋಗ ಪಡೆದುಕೊಳ್ಳ ಬಹುದು ಎಂಬ ಇರಾದೆ ಪ್ರೇಮಿಗಳಲ್ಲಿದೆ. ಲತ್ತ್ ಲತ್ತ್ ಹುಡುಗಿಯರು, ಬಾಕ್ಸ್ ಪೀಸ್, ಮಾಸ್ಟರ್ ಪೀಸ್ ಗಳು, ಗ್ರಾಮಾಂತರ ಸಾರಿಗೆಗಳು, ಕುತ್ತಿ ಮೀಸೆ ಹುಡುಗರು, ಕೆಂಚಿ ಗಡ್ಡ ರೋಮಿಯೋಗಳು, ಸೈಕಲ್ ಮಾಸ್ತರ್ ಗಳು ಮುಂತಾದ ಗಿರಾಕಿಗಳೇ ಈ ಕ್ರೀಂ ಪಾರ್ಲರ್ ಗಳ ಅತಿಥಿಗಳು. ಗಂಟೆಗೆ ಮುನ್ನೂರು, ಐಸ್ ಕ್ರೀಮ್ ನೀರಾಗದಿದ್ದರೆ ಎರಡು ಗಂಟೆಗೆ ಐನೂರು ತನಕ ಬಿಲ್ ಆಗುತ್ತದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಈಗಾಗಲೇ ಸುಳ್ಯ ಪೋಲಿಸರ ಕಿವಿ ಕಚ್ಚಿದ್ದು ಒಂದು ರೌಂಡ್ ಹೋಗುತ್ತೇವೆ ಎಂದು ಹೇಳಿದ್ದಾರೆ. ಇನ್ನು ಸುಳ್ಯ ಸರ್ಕಲ್ ಇನ್ಸ್ ಪೆಕ್ಟರನ ಮೊಬೈಲಿಗೂ, ಪುತ್ತೂರು ಪೋಲಿಸ್ ಉಪ ವರಿಷ್ಠನ ಮೊಬೈಲಿಗೂ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯ ಮೊಬೈಲಿಗೂ ಈ ನ್ಯೂಸ್ ಹೋಗುತ್ತಿದ್ದು ಎಲ್ಲಿಯಾದರೂ ಪುರುಸೊತ್ತಲ್ಲಿ ಅವರು ಈ ನ್ಯೂಸ್ ನೋಡಿದರೆ, ಓದಿದರೆ ಕ್ರೀಂ ಪಾರ್ಲರ್ ಗಳ ಆರೋಗ್ಯದಲ್ಲಿ ಸ್ವಲ್ಪ ಏರಿಳಿತ ಕಂಡು ಬರುವ ಅಪಾಯಗಳಿವೆ. ಆದ್ದರಿಂದ ಈ ಕೂಡಲೇ ಇಂಥ ಬಿಸಿನೆಸ್ ಮಾಡುವ ಕ್ರೀಂ ಪಾರ್ಲರ್ ಗಳು ತಮ್ಮಲ್ಲಿರುವ ಡಾರ್ಕ್ ರೂಂಗಳ ಬ್ರೈಟ್ ನೆಸ್ ಸ್ವಲ್ಪ ಜಾಸ್ತಿ ಮಾಡೋದು ಒಳ್ಳೇದು. ಇಲ್ಲದಿದ್ದರೆ ಪೋಲಿಸರು ಬಂದು ಗಡ್ ಬಡ್ ಮಾಡೋದು ಗ್ಯಾರಂಟಿ.

