ಸುಳ್ಯದಲ್ಲಿ ಪ್ರಾಪರ್ಟಿ ವಿಷಯವೊಂದರಲ್ಲಿ ಮಹಿಳಾ ಲಾಯರ್ ಒಬ್ಬರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಸುಳ್ಯದಲ್ಲಿ ಶಾಸಕಾಂಗ ಇದೆ, ಕಾರ್ಯಾಂಗ ಇದೆ ಮತ್ತು ನ್ಯಾಯಾಂಗ ಇದೆ. ಆದರೆ ಅಮಾಯಕ ಮಹಿಳಾ ಲಾಯರ್ ಒಬ್ಬರಿಗೆ ತನ್ನ ಪ್ರಾಪರ್ಟಿಯ ರಕ್ಷಣೆಯನ್ನೇ ಮಾಡಲಾಗುತ್ತಿಲ್ಲ. ಹೇಳುವವರೇ ಇಲ್ಲ, ಕೇಳುವವರೂ ಇಲ್ಲ. ಅಳಿಯುತ್ತಿರುವ ಊರಿನಲ್ಲಿ ಉಳಿದವರೇ ಗೌಡ್ರುಗಳು.
ಇವರು ಶ್ರೀಮತಿ ವಸಂತಿ. ಸುಳ್ಯದಲ್ಲಿ ಲಾಯರ್. ಇವರಿಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಮೂಲೆ ಬಡ್ಡಡ್ಕದ ಸರ್ವೇ ನಂಬರ್ 521/1a ಯಲ್ಲಿ0.90 ಸೆಂಟ್ಸ್ ಜಾಗ ಮತ್ತು ಸ.ನಂ 458/1 ರಲ್ಲಿ 3.52 ಎಕರೆ ಜಾಗ ದಿನಾಂಕ 25/9/23 ರಂದು ಘನ ನ್ಯಾಯಾಲಯದ ಆದೇಶದ ಮೇರೆಗೆ ಪಾಲು ವಿಂಗಡನೆ ಆಗಿ ಈ ಮಹಿಳಾ ಲಾಯರ್ ಗೆ ಬಂದಿದ್ದು ಇವರು ಈ ಪ್ರಾಪರ್ಟಿಯ ಸಂಪೂರ್ಣ ಹಕ್ಕುದಾರಳಾಗಿರುತ್ತಾರೆ. ಆದರೆ ಸದ್ರಿ ವಕೀಲರ ಅಮಾಯಕತೆಯನ್ನು, ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ಅವರ ಆಸ್ತಿ ಲಪಟಾವಣೆ ಮಾಡಲು ಕೆಲವರು ಹೊಂಚು ಹಾಕುತ್ತಿರುವ ಬಗ್ಗೆ ಹತ್ತು ಹಲವು ಪೋಲಿಸ್ ಕಂಪ್ಲೈಂಟ್ ಗಳು ಆಗಿವೆ. ಆದರೆ ಆರೋಪಿಗಳ ಬಗ್ಗೆ ಈ ವರೆಗೆ ಒಂದೇ ಒಂದು ಸಿಂಗಲ್ ಕ್ರಮ ಕೂಡ ಆಗಿಲ್ಲ. ವಕೀಲರಿಗೇ ಹೀಗೆ ಮಾಡಿದವರು ಸಾಮಾನ್ಯ ಜನರನ್ನು ಕುಂಭಕರ್ಣ ಮುದ್ದೆ ಸಾರು ನುಂಗಿದ ಹಾಗೆ ನುಂಗಿ ಬಿಟ್ಟಾರು.
ಹಾಗೆಂದು ಸದ್ರಿ ಲಾಯರ್ ಪ್ರಾಪರ್ಟಿ ಸುತ್ತಾ ಇರಾನ್, ಇರಾಕ್, ಸಿರಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನದಂತವರ ಪ್ರಾಪರ್ಟಿಗಳಿವೆ. ಇವರುಗಳು ಅಕ್ರಮ ಕೂಟ ಸೇರಿಕ್ಕೊಂಡು ಅಪಗಪಗ ಲಾಯರ್ ಜಾಗದ ಮೇಲೆ ಧಾಳಿ ಮಾಡುತ್ತಾ ಇರುತ್ತಾರೆ. ಟೋಟಲೀ ಅವರೆಲ್ಲ ಒಂದು ಠಪೋರಿ ಗ್ಯಾಂಗ್ ಟೈಪ್. ಇವರೆಲ್ಲ ಸೇರಿಕ್ಕೊಂಡು ಲಾಯರನ್ನು ಮೂಲೆ ಬಡ್ಡಡ್ಕದಿಂದ ಓಡಿಸಿ ಅವರ ಜಾಗವನ್ನು ಒಳಗೆ ಹಾಕಲು ಪ್ರಯತ್ನಿಸುವುದು ಇಂದು ನಿನ್ನೆಯ ಕತೆಯಲ್ಲ. ಇನ್ನು ಇವರಿಗೆಲ್ಲ ಪೊಟ್ಟು ಲೀಡರ್ ಒಬ್ಬನಿದ್ದಾನೆ. ಸುಳ್ಳು ಕುಮಾರ ಅಂತ ಹೆಸರು, ಲಾಯರ್ ವಿರುದ್ಧ ಆ ಠಪೋರಿ ಗ್ಯಾಂಗನ್ನು ಈ ಸುಳ್ಳು ಕುಮಾರ ಪೋಲಿಸ್ ಠಾಣೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮುಂತಾದ ಪುಣ್ಯ ಸ್ಥಳಗಳಿಗೆ ಪ್ರವಾಸ ಒಯ್ಯುತ್ತಾ ಇರುತ್ತಾನೆ. ಲಾಯರ್ ಒಬ್ಬರು, ಇವರು ಒಂದು ಗ್ಯಾಂಗ್. ಲಡಾಯಿ ಇನ್ನೂ ನಿಂತಿಲ್ಲ.

ಹಾಗೆಂದು ಮೂಲೆ ಬಡ್ಡಡ್ಕದ ಈ ಪ್ರಾಪರ್ಟಿ ಲಾಯರ್ ಅವರಿಗೆ ಹಿರಿಯರಿಂದ ಬಂದಿದ್ದು ಮತ್ತು ಸ್ವಲ್ಪ ಸರ್ಕಾರ ಕೊಟ್ಟಿದ್ದು. ಲಾಯರ್ ಪಾಪ ಅಂತ ಅವರ ಸುತ್ತ ಮುತ್ತಲಿನ ಕೆಲವು ಠಪೋರಿ ಜನಗಳಾದ ಬುಶ್ ನಾಗಪ್ಪ, ರೋಮ ಕಿಟ್ಟ ಮತ್ತು ಅವರ ಪಟಾಲಂ ದಿನಾ ಕಾಲು ಕೆರೆದು ಜಗಳಕ್ಕೆ ಬರುತ್ತಾ ಇರುತ್ತಾರೆ. ವಿನಾ ಕಾರಣ ಲಾಯರ್ ಪ್ರಾಪರ್ಟಿಗೆ ಅಕ್ರಮ ಪ್ರವೇಶ ಮಾಡೋದು, ಲಾಯರ್ ಇಲ್ಲದಾಗ ಅವರ ಪ್ರಾಪರ್ಟಿ ಮರಗಳನ್ನು ಕದ್ದು ಮಾರಿ ಅವರೇ ಲಾಯರ್ ಮೇಲೆ ಅರಣ್ಯ ಇಲಾಖೆಗೆ ಕಂಪ್ಲೈಂಟ್ ಕೊಡೋದು, ಪ್ರಾಪರ್ಟಿಯ ಬೇಲಿ ಲಗಾಡಿ ತೆಗೆಯೋದು, ಸೀಜನ್ ಬಂದಾಗ ಜಾಗದಲ್ಲಿರುವ ಗೇರು ಬೀಜ ಕದಿಯೋದು, ಕುಕ್ಕು, ಪೆಲಕ್ಕಾಯಿ ಕದಿಯೋದು, ಕೃಷಿ ಉತ್ಪನ್ನಗಳನ್ನು ಕದಿಯೋದು, ಕೃಷಿ ಲಗಾಡಿ ತೆಗೆಯೋದು, ಏನಾದರೂ ಹೊಸ ಸಸಿಗಳನ್ನು ನೆಟ್ಟರೆ ಅದನ್ನು ಕಿತ್ತು ಬಿಸಾಡೋದು, ಗೇರು ಬೀಜ ಸಸಿಗಳಿಗೆ ಆ್ಯಸಿಡ್ ಸಿಂಪಡಣೆ ಕಾರ್ಯಕ್ರಮ ಮುಂತಾದ ಘನಂದಾರಿ ಕೆಲಸಗಳನ್ನು ಈ ಠಪೋರಿ ಗ್ಯಾಂಗ್ ಮಾಡುತ್ತಿದೆ. ಈ ಬಗ್ಗೆ ಪೋಲಿಸ್ ಕಂಪ್ಲೈಂಟ್ ಕೊಟ್ಟರೆ ಸುಳ್ಳು ಕುಮಾರ ಸುಳ್ಯ ಠಾಣೆಯಲ್ಲಿ ರೆಡಿ.
ಇನ್ನು ಲಾಯರ್ ಈ ಜಾಗದಲ್ಲಿ ಕಂಡು ಬಂದರೆ ಸಾಕು ಠಪೋರಿಗಳು ಸಾಲಾಗಿ ನಿಂತು ಸುಪ್ರಭಾತ ಶುರುವಿಟ್ಟುಕೊಳ್ಳುತ್ತಾರೆ. ಲಾಯರ್ ಮೇಲೆ ಕೆಟ್ಟ ಪದಗಳ ಪ್ರಯೋಗ, ಕೃಷಿ ಚಟುವಟಿಕೆ ಮಾಡದಂತೆ ಬೆದರಿಕೆ, ಕೃಷಿ ಕಾರ್ಮಿಕರಿಗೆ ಬೆದರಿಕೆ, ಗೂಂಡಾಗಿರಿ, ಕೊಲೆ ಬೆದರಿಕೆ, ನಿಂದನೆ, ಮಾನಸಿಕ ಕಿರುಕುಳ, ಅವಹೇಳನಕಾರಿ ಅವಮಾನ ಮುಂತಾದ ತಡೆರಹಿತ ಸೌಜನ್ಯವೇ ಇಲ್ಲದ ದೌರ್ಜನ್ಯ ನಡೆಸುತ್ತಾರೆ. ಈ ಠಪೋರಿ ಗ್ಯಾಂಗ್ ಮಾಡುವ ಕ್ರಿಮಿನಲ್ ಆ್ಯಕ್ಟಿವಿಟಿಸ್ ಬಗ್ಗೆ ಲಾಯರ್ ತುಂಬಾ ಸಲ ಸುಳ್ಯ ಪೋಲಿಸರಿಗೆ ಕಂಪ್ಲೈಂಟ್ ಕೊಟ್ಟಿದ್ದು ಕಂಪ್ಲೈಂಟ್ ಆದಾಗಲೆಲ್ಲ ಸುಳ್ಳು ಕುಮಾರ ಈ ಗ್ಯಾಂಗ್ ಬಗ್ಗೆ ಸುಳ್ಳು ಸುಳ್ಳೇ ಹೇಳಿ ಪೋಲಿಸರನ್ನೂ ಯಾಮಾರಿಸಿದ್ದಾನೆ. ಅವರೇ ಗಲಾಟೆ ಮಾಡೋದು ಓಡಿ ಹೋಗಿ ಅವರೇ ಕಂಪ್ಲೈಂಟ್ ಕೊಡೋದು, ಅವರೇ ಕದಿಯೋದು ಅವರೇ ಕೊರಗ್ಗಜ್ಜನಿಗೆ ಹರಿಕೆ ಹೇಳೋದು, ಅವರೇ ಭೂಕಬಳಿಕೆ ಮಾಡೋದು ಲಾಯರ್ ಮೇಲೆ ಅವರೇ ಕಂದಾಯ ಇಲಾಖೆಗೆ ತಳ್ಳಿ ಅರ್ಜಿ ತಳ್ಳೋದು, ಲಾಯರ್ ಬಗ್ಗೆ ಮಾನ ಹಾನಿ ಅಪಪ್ರಚಾರ ಮಾಡೋದು ಇತ್ಯಾದಿ ಉಪದ್ರವ ಮಾರಾಯ್ರೆ ಅವರದ್ದು. ಇನ್ನು ಅವಳು ಲಾರಿಜಾ ಅಂತ ಒಬ್ಬಳು ಇದ್ದಾಳೆ, ಗಲಾಟೆಯಲ್ಲಿ ಲಾಯರ್ ಮಾತೆತ್ತಿದರೆ ಸಾಕು ಜೌಗು ಪ್ರದೇಶ ಕಾಣುವಷ್ಟು ಬಟ್ಟೆ ಎತ್ತಿ ತೋರಿಸಿ ದಿವ್ಯ ದರ್ಶನ ಮಾಡಿಸಿ ಬಿಡುತ್ತಾಳೆ. ಎಂಥಾ ಜನಗಳನ್ನೆಲ್ಲ ತಂದು ಮೂಲೆ ಬಡ್ಡಡ್ಕದಲ್ಲಿ ಹಾಕಿದ್ದಿ ದೇವರೇ.
ಯುವರ್ ಆನರ್,
ಸುಳ್ಯ ಎಂಬ ಊರಿನಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಗಳು ಇದ್ದರೂ ಒಬ್ಬ ಲಾಯರ್ ಗೆ ನ್ಯಾಯ ಕೊಡಿಸದಷ್ಟು ನಮ್ಮ ಅಂಗಗಳಿಗೆ ಪಾರ್ಶ್ವವಾಯು ಹೊಡೆದಿದ್ದು ವಿಪರ್ಯಾಸವೇ ಸರಿ. ದಷ್ಟ ಪುಷ್ಟ ದುಷ್ಟರ ರಣಕೇಕೆಯ ಕುಣಿತಕ್ಕೆ ಪೋಲಿಸ್ ವ್ಯವಸ್ಥೆ ಹಿನ್ನೆಲೆ ಸಂಗೀತ ಒದಗಿಸುತ್ತಿರುವುದು ವಿಷಾದನೀಯ. ನ್ಯಾಯ ದೇವತೆಯ ಕಣ್ಣಿನ ಬಟ್ಟೆ ಬಿಚ್ಚಿದರೂ ದುಷ್ಟಶಕ್ತಿಗಳು ಅವಳ ಕುಣಿಕೆಗೆ ಸಿಗದೇ ಇರುವುದು ಅಚ್ಚರಿಯೇ ಸರಿ. ವ್ಯವಸ್ಥೆ ಕುಲಗೆಟ್ಟು ಹೋಗಿದೆ. ಅವ್ಯವಸ್ಥೆಯ ವ್ಯವಸ್ಥೆಯಲ್ಲಿ ಸಭ್ಯ ಜನರಿಗೆ ಬದುಕಲೇ ಆಗುತ್ತಿಲ್ಲ. ಮನುಷ್ಯನನ್ನು ಮನುಷ್ಯನಾಗಿಸದ ಹೊರತು ಈ ಕೆಟ್ಟ ಸಮಾಜದ ಉದ್ಧಾರ ಅಸಾಧ್ಯ.






