ಯುವತಿಯೊಬ್ಬಳು ಪ್ರೀತಿಸುವ ನಾಟಕವಾಡಿ, ಯುವಕನನ್ನು ಬೊರಿದು ನಂತರ ಬೊಡಿದು ಯುವಕನ ಮೇಲೆಯೇ ಕಂಪ್ಲೈಂಟ್ ಕೊಟ್ಟು ಸುಮಾರು ವರುಷಗಳ ಕಾಲ ಯುವಕನನ್ನು ಕೋರ್ಟ್ ಕಚೇರಿಗಳಿಗೆ ಅಲೆದಾಡಿಸಿ ಇದೀಗ ಯುವಕ ನಿರ್ದೋಷಿ ಎಂದು ಕೋರ್ಟ್ ತೀರ್ಪು ಕೊಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ಯುವತಿಯೇನೋ ಕಂಪ್ಲೈಂಟ್ ಕೊಟ್ಟು ಸೇಫರ್ ಝೋನ್ ಗೆ ಹೋಗಿ ಬಿಟ್ಟಳು. ಆದರೆ ಅಷ್ಟು ವರ್ಷ ಹುಡುಗ ಪಟ್ಟ ಪಾಡು? ಲವ್ವು ಮಾಡುವ ಮೊದಲು ಯೋಚಿಸು.
ಅವನು ನಿತೇಶ್ ರೈ. ಪುತ್ತೂರಿನಲ್ಲಿ ಬೋರ್ ವೆಲ್ ಏಜೆನ್ಸೀಸ್ ಮಾಡಿಕ್ಕೊಂಡು ಉದ್ಯಮ ಲೋಕದಲ್ಲಿ ಆಗ ತಾನೇ ಮುಂದೆ ಬರುತ್ತಿದ್ದ ಮಡ್ಯಂಗಳದ ಹುಡುಗ. ಇವನಿಗೂ ನೆಟ್ಟಣಿಗೆ ಮುಡ್ನೂರು ಗ್ರಾಮದ ಹುಡುಗಿಯೊಬ್ಬಳಿಗೂ ಡೀಪ್ ಲವ್ವಿತ್ತು. ಹುಡುಗಿಯ ಪ್ರೀತಿಯ ಮುಂದೆ ನಿತೇಶ್ ಸಂಪೂರ್ಣ ಸರೆಂಡರ್ ಆಗಿದ್ದ. ಆದರೆ ಈ ಪ್ರೀತಿ ನಾಟಕ ಎಂದು ನಿತೇಶ್ ಗೆ ಗೊತ್ತಾಗಲು ತುಂಬಾ ದಿನ ಹಿಡಿಯಲಿಲ್ಲ. ಯಾಕೆಂದರೆ ಹುಡುಗಿಯ ಬೇಡಿಕೆಗಳ ಪಟ್ಟಿಗೆ ನಿತೇಶ್ ಪರ್ಸ್ ನ ಗಾತ್ರ ಸಾಕಾಗುತ್ತಿರಲಿಲ್ಲ. ಅದು ಬೇಕು, ಇದು ಬೇಕು ಮುಗಿಯುತ್ತಲೇ ಇರುತ್ತಿರಲಿಲ್ಲ. ಹುಡುಗನಿಗೆ ಲವ್ maintain ಮಾಡಲು ಸಾಕೋ ಸಾಕಾಗುತ್ತಿತ್ತು. ಈ ವಿಷಯ ಹುಡುಗಿ ಗಮನಕ್ಕೂ ಬಂದಿತ್ತು. ತನ್ನನ್ನು ಸಾಕಲು ಇವನ ಕೈಯಿಂದ ಆಗಲ್ಲ ಎಂದು ಅವಳಿಗೂ ಮನವರಿಕೆಯಾಗಿ ಹೋಗಿತ್ತು. ಹುಡುಗನ ಬ್ಯಾಲೆನ್ಸ್ ಶೀಟ್ ನಲ್ಲಿ ಯಾವಾಗ ಏರಿಕೆ ಕಂಡು ಬರಲಿಲ್ಲವೋ ಹುಡುಗಿ ಇಂಗ್ಲೀಷ್ ಸ್ಪೀಕಿಂಗ್ ಶುರುವಿಟ್ಟುಕೊಂಡಳು.
ಹಾಗೆ ಅವರಿಬ್ಬರ ಲವ್ವು ಅಂದಾಜು ಆರು ವರುಷಗಳ ಕಾಲ ಅಲ್ಲಲ್ಲಿ ಪ್ಯಾಚ್ ವರ್ಕ್ ಮಾಡುತ್ತಾ, ರಿಪೇರಿ ಆಗುತ್ತಾ, ಗ್ಯಾಸ್ ವೆಲ್ಡ್ ನಲ್ಲಿ ಮುಂದುವರೆಯಿತು. ಯಾವಾಗ ಹುಡುಗನ ಪರ್ಸಿನಲ್ಲಿ ದುಡ್ಡಿನ ಒರತ್ತೆ ಕಡಿಮೆಯಾಗುತ್ತಾ ಬಂತೋ, ತಮ್ಮಿಬ್ಬರ ಪ್ರೀತಿಯಲ್ಲಿ ಯಾವಾಗ ಸೇಡಿ ಮಣ್ಣು ಸಿಕ್ಕಿ ಪ್ರೀತಿ ಜರಿಯ ತೊಡಗಿತೋ, ಕೇಸಿಂಗ್ ಪೈಪ್ ಜಾಸ್ತಿ ಬೇಕಾಗ ಬಹುದು ಎಂದು ಹುಡುಗಿ ಸಮೀಕ್ಷೆ ನಡೆಸಿ ಪುನಃ ವೆಲ್ಡ್ ಆಗದಂತೆ ಪ್ರೀತಿಗೆ ಒಂದು ಗುಡ್ ಬೈ ಹೇಳಲು ಸ್ಕೆಚ್ ರೂಪಿಸಿ ಬಿಟ್ಟಳು ಮತ್ತು ಒಂದು ಶುಭ್ರ ಮುಂಜಾನೆ ತಲೆಗೆ ಮೈಗೆ ಸ್ನಾನ ಮಾಡಿ ಸಂಪ್ಯ ಪೋಲಿಸರ ಎದುರು ಕುಂತು ಬಿಟ್ಟಳು. ಪೋಲಿಸರು ತದೇಕಚಿತ್ತದಿಂದ ಕತೆ ಕೇಳಿದರು.

“ಸುಮಾರು ಆರು ವರ್ಷಗಳಿಂದ ನನಗೆ ಪರಿಚಯ ಇರುವ ನಿತೇಶ್ ಎಂಬ ಹುಡುಗ ತನ್ನನ್ನು ಪ್ರೀತಿಸುವಂತೆ ಪದೇ ಪದೇ ನಕ್ಷತ್ರಿಕನಂತೆ ಪೀಡಿಸುತ್ತಿದ್ದು, ಮೊಬೈಲ್ ನಲ್ಲಿ ಪ್ರೀತಿಸುವಂತೆ ಕರೆಗಳ ಮಳೆ ಸುರಿಸುತ್ತಿದ್ದ. ಪ್ರೀತಿಸುವಂತೆ ಲೋಡ್ ಲೋಡ್ ಮೆಸೇಜ್ ಗಳನ್ನು ನನ್ನ ಮೊಬೈಲಿಗೆ ಅನ್ ಲೋಡ್ ಮಾಡುತ್ತಿದ್ದ, 2022ರ ದ 29 ರಂದು ನಿತೇಶ್ ನನ್ನ ಮನೆ ಬಳಿ ಕಾರಲ್ಲಿ ಫಸ್ಟ್ ಗೇರಲ್ಲಿ ಬಂದು ಮಿಯಾಂವ್ ಅಂದಿದ್ದ, ಆದರೆ ಆ ಸಮಯದಲ್ಲಿ ನನ್ನ ತಂದೆ ಇದ್ದ ಕಾರಣ ಅವರನ್ನು ನೋಡಿ ಹೆದರಿ, ಬೆದರಿ ರಿವರ್ಸ್ ಗೇರಲ್ಲೇ ಓಡಿ ಹೋಗಿದ್ದ. ನಿತೇಶ್ ನಿಂದಾಗಿ ನನಗೆ ಮತ್ತು ನನ್ನ ಫ್ಯಾಮಿಲಿಗೆ ಅಪಾಯ ಇದೆ, ಜೀವ ಭಯ ಇದೆ ಎಂದು ಹುಡುಗಿ ಸಂಪ್ಯ ಪೋಲಿಸರ ಎದುರು ರೈಲು ಬಿಟ್ಟಳು. ಹುಡುಗಿ ಹೇಳಿದ್ದನ್ನು ಸಂಪ್ಯ ಪೋಲಿಸರು ಗಟ್ಟಿ ನಂಬಿದರು. ನಿತೇಶ್ ಮೇಲೆ ಕಲಂ 354(D) ಮತ್ತು ಐಪಿಸಿ 506 ಅಡಿಯಲ್ಲಿ FIR ದಾಖಲಿಸಿ ನಿತೇಶ್ ನನ್ನು ಹುಡುಕಲು ಕಣ್ಣಿಗೆ ಎಣ್ಣೆ ಹಚ್ಚಿ ಬಿಟ್ಟರು. ನಿತೇಶ್ ಬೋರ್ ವೆಲ್ ಲಾರಿ ಬಿಟ್ಟು ಅಟ್ಟ ಹತ್ತಿದ್ದ. ನಂತರದ ದಿನಗಳಲ್ಲಿ ನಿತೇಶ್ ನಿರೀಕ್ಷಣಾ ಜಾಮೀನು ತೆಗೆದು ಪೋಲಿಸರಿಂದ ಬಚಾವ್ ಆಗಿದ್ದ. ಸಂಪ್ಯ ಪೊಲೀಸರು ಈ ಬಗ್ಗೆ ಪುತ್ತೂರು 1ನೇ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಾದ ವಿವಾದಗಳನ್ನು ಆಲಿಸಿ ವಿಚಾರಣೆ ನಡೆಸಿದ ಘನ ನ್ಯಾಯಾಲಯ ನಿತೇಶ್ ನಿರ್ದೋಷಿ ಎಂದು ಓ ಮೊನ್ನೆ ತೀರ್ಪು ಕೊಟ್ಟಿತ್ತು. ಇದೀಗ ನಿತೇಶ್ ಹುಡುಗಿ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡಲು ರೆಡಿಯಾಗಿದ್ದು ಹುಡುಗಿ ಬೇಗದಲ್ಲೇ ಅಟ್ಟ ಹತ್ತುವ ಪರಿಸ್ಥಿತಿ ಬರಲಿದೆ ಎಂದು ತಿಳಿದುಬಂದಿದೆ.
ಈಗೀಗ ಹುಡುಗಿಯರು ಪರ್ಸ್ ನೋಡಿ ಪ್ರೀತಿಸುವ ನಾಟಕ ಜಾಸ್ತಿ ಮಾಡುತ್ತಿದ್ದಾರೆ. ಅದನ್ನೇ ಧಾರಾವಾಹಿ ಮಾದರಿಯಲ್ಲಿ ಮುಂದುವರೆಸುತ್ತಾರೆ. ಈ ದಿನ TRP ಹೇಗೆ ಹೆಚ್ಚಿಸ ಬಹುದು ಎಂದು ಲೆಕ್ಕಾಚಾರ ಹಾಕಿಯೇ ಮನೆ ಬಿಡುವ ಹುಡುಗಿ ಆವತ್ತಿನ ಕಲೆಕ್ಷನ್ ಗಾಗಿ TRP ಬೀಳದಂತೆ ಎಚ್ಚರಿಕೆ ವಹಿಸುತ್ತಾಳೆ. ಯಾವಾಗ ಬೊರಿದು,ಬೊರಿದು ಇನ್ನು ಖಾಲಿ ಚೆಂಬು ಗೊತ್ತಾಗುತ್ತದೋ, ಯಾವಾಗ ಹುಡುಗನ ಪರ್ಸಿನಲ್ಲಿ ದುಡ್ಡಿನ ಒರತ್ತೆ ಕಡಿಮೆಯಾಗುತ್ತಾ ಹೋಗುತ್ತದೆಯೋ ಮತ್ತು ಶಿಫ್ಟ್ ಕಾರಿನ ಮುಂದೆ ಕ್ರೇಟಾ, ಕೀಯಾಗಳು ಮಾರ್ಚ್ ಫಾಸ್ಟ್ ಮಾಡಲು ಶುರು ಮಾಡಿದ ದಿನ ಹುಡುಗಿ ಮನೆಯವರ ಮುಂದೆ ನಂಬುವಂತಹ ಒಂದು ಕತೆ ಕಟ್ಟಿ ಅವರನ್ನು ಕರಕ್ಕೊಂಡು ಬಂದು ಪೋಲಿಸರ ಮುಂದೆ ಅದೇ ಕತೆಯನ್ನು ಒಪ್ಪಿಸಿ ಬಿಡುತ್ತಾಳೆ. ಅಲ್ಲಿಗೆ ಹುಡುಗ ಅಟ್ಟ ಹತ್ತಲೇ ಬೇಕು.





