ಸುಳ್ಯ – ಸುಬ್ರಹ್ಮಣ್ಯ ಸ್ಟೇಟ್ ಹೈವೇಯ ಗುತ್ತಿಗಾರು ಜಂಕ್ಷನ್ ಬಳಿ ಕೆನರಾ ಬ್ಯಾಂಕ್ ಎದುರುಗಡೆ ಆಸರೆ ಹೆಸರಿನ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಉದ್ಘಾಟನೆಗೊಂಡಿದ್ದು ಗುತ್ತಿಗಾರಿನ ವ್ಯಾಪಾರಿ ಪೇಟೆಯ ಚಿನ್ನದ ಕಿರೀಟಕ್ಕೆ ಈ ಸಂಸ್ಥೆ ಮುಕುಟ ಮಣಿಯಾಗಿದೆ. ಗುತ್ತಿಗಾರಿನಲ್ಲಿ ಫಸ್ಟ್ ಮತ್ತು ಆ ಸ್ಟೇಟ್ ಹೈವೇಯಲ್ಲೇ ಫಸ್ಟ್ & ಲಾಸ್ಟ್.
ಹಾಗೆಂದು ಗುತ್ತಿಗಾರು, ಕೊಲ್ಲಮೊಗ್ರ, ಕಲ್ಮಕಾರು, ಹರಿಹರ ಪಲ್ಲತಡ್ಕ, ಮಡಪ್ಪಾಡಿ ಸೈಡಿನ ಜನ ಒಂದು ಟೆಲಿವಿಷನ್ ಬೇಕಿದ್ರೆ ಸುಳ್ಯಕ್ಕೆ ಓಡ ಬೇಕಿತ್ತು, ಸೆಖೆಗೆ ಒಂದು ಫ್ಯಾನು, ಕೂಲ್ ಆಗಲು ಒಂದು ಫ್ರಿಡ್ಜ್, ಕೂರಲು ಒಂದು ಪ್ಲಾಸ್ಟಿಕ್ ಚೇರು, ಇಸ್ತ್ರಿಗೆ ಒಂದು ಪೆಟ್ಟಿಗೆ, ಕುಕ್ಕರು, ಮಿಕ್ಸ್ ಮಾಡಲು ಮಿಕ್ಸಿ,ಅರಿ ಕಡೆಯಲು ಒಂದು ಗ್ರೈಂಡರ್, ಕಡೆಗೆ ಸ್ವಲ್ಪ ದುಡ್ಡು ಸ್ಟಾಕ್ ಮಾಡುವ ಅಂತ ಒಂದು ಗೋದ್ರೇಜ್ ಬೇಕಾದ್ರೂ ಸುಳ್ಯಕ್ಕೆ ಹೋಗಬೇಕಿತ್ತು. ಅದನ್ನು ಸುಳ್ಯದಿಂದ ಹೊತ್ತುಕ್ಕೊಂಡು ಬರಬೇಕಿತ್ತು ಮತ್ತು ಅದಕ್ಕೆಲ್ಲ ಯಮನ ಬಾಡಿಗೆ ಆಗುತ್ತಿತ್ತು. ಇನ್ನು ಈ ಎಲೆಕ್ಟ್ರಾನಿಕ್ ವಸ್ತುಗಳಿಗೆ ಎಲ್ಲಿಯಾದರೂ ಮಂಡೆ ಸೀಕ್ ಮೀರಿದರೆ ದೇವರೇ ಗತಿ. ಹಾಗೆ ಈ ಭಾಗದ ಜನರ ಈ ಎಲ್ಲಾ ಸಮಸ್ಯೆಗಳ ಪಟ್ಟಿ ಮಾಡಿದ ದೇವಚಳ್ಳ ಮತ್ತು ಗುತ್ತಿಗಾರು ಪರಿಸರದ ಮೂವರು ಯುವಕರು ಕುಂತು ಮಾತಾಡಿ ಈ ಭಾಗದ ಜನರ ಬಹುದಿನಗಳ ಕನಸನ್ನು ಇದೀಗ ನನಸು ಮಾಡಿದ್ದಾರೆ. ಹರ್ಷ ಸ್ಟೈಲಿನ, ಗಿರಿಯಾಸ್ ಗೆಟಪ್ಪಿನ, ರಿಲಾಯನ್ಸ್ ಮರ್ಜಿಯ ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲೈಯನ್ಸಸ್ ಶಾಪ್ ಈದೀಗ ಗುತ್ತಿಗಾರಿನ ಕೆನರಾ ಬ್ಯಾಂಕ್ ಎದುರುಗಡೆ ಇರುವ ದೇವಮಾತಾ ಕಾಂಪ್ಲೆಕ್ಸ್ ನಲ್ಲಿ ಓಪನ್ ಆಗಿದೆ. ಅಲ್ಲಿ ಏನಿದೆ, ಏನಿಲ್ಲ ಎಂದು ಪಟ್ಟಿ ಮಾಡಲು ಕಷ್ಟ. ಎಲ್ಲವೂ ಇದೆ, ಎಲ್ಲರಿಗೂ ಇದೆ. ಇದು ಗೃಹಿಣಿಯರ ಕನಸಿನ ಮಳಿಗೆ.
ಹಾಗೆ ಗುತ್ತಿಗಾರಿನಲ್ಲಿ ಓಪನ್ ಆಗಿರುವ ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲೈಯನ್ಸಸ್ ಮಳಿಗೆಯಲ್ಲಿ ಎಲ್ಲವೂ ಇದೆ. ಇದು ಗ್ರಾಮೀಣ ಜನತೆಯ ಕನಸಿನ ಮಳಿಗೆ. ಗ್ರಾಮೀಣ ಭಾಗದ ಜನರ ಆಶೆಗಳ ಆಕಾಶವನ್ನು ಗುತ್ತಿಗಾರಿನಲ್ಲಿ ಧರೆಗಿಳಿಸಿದ ಕೀರ್ತಿ ಈ ಮೂವರು ಯುವಕರಿಗೆ ಸಲ್ಲಬೇಕಿದೆ. ಈ ಕನಸಿನ ಮಳಿಗೆಯಲ್ಲಿ ಬ್ರಾಂಡೆಡ್ ಎಲೆಕ್ಟ್ರಾನಿಕ್ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಫರ್ನಿಚರ್ಸ್, ಪೂಜಾ ಸಾಮಗ್ರಿಗಳು, ಸ್ಟೀಲ್ ಮತ್ತು ಪ್ಲಾಸ್ಟಿಕ್ ಐಟಂಗಳು, ಡೈನಿಂಗ್ ಟೇಬಲ್ ಸೆಟ್ಸ್, ಗಿಫ್ಟ್ ಐಟಂಗಳು ಅತೀ ಕಡಿಮೆ ಬೆಲೆಯಲ್ಲಿ ಲಭ್ಯ. ಇನ್ನೂ ಬಿಡಿಸಿ ಹೇಳುವುದಿದ್ದರೆ ಒಂದು ಇಸ್ತ್ರಿ ಪೆಟ್ಟಿಗೆಯಿಂದ ಹಿಡಿದು ದೊಡ್ಡ ಟಿವಿ, ಹದಾ ಟಿ.ವಿ, ಚಿಕ್ಕ ಟಿ.ವಿ, ಒಂಜಿ ಬಾಕಿಲ್ದ, ರಡ್ಡ್ ಬಾಕಿಲ್ದ ಫ್ರಿಡ್ಜ್, ಮಿಕ್ಸಿ, ಗ್ರೈಂಡರ್, ಗೋದ್ರೇಜ್ ಕಪಾಟು, ಸೋಪಾ ಸೆಟ್, ಅಟ್ಟದಲ್ಲಿ ನೇತಾಡುವ ಫ್ಯಾನು, ಟೇಬಲ್ ಮೇಲೆ ಕುಳಿತಿರುವ ಫ್ಯಾನು, ಗೋಡೆ ಫ್ಯಾನು, ಕೂಲರು, ವಿವಿಧ ಬಗೆಯ ಪ್ಲಾಸ್ಟಿಕ್ ಚೇರು, ಟೇಬಲ್, ಸ್ಟೂಲ್, ಡೈನಿಂಗ್ ಸೆಟ್, ವಿವಿಧ ಬಗೆಯ ಲೈಟ್ ಗಳು, ಸ್ಟೀಲ್ ಪಾತ್ರೆಗಳು, ಸೌಟು ಸೆಟ್ ಗಳು, ಸ್ಟೀಲ್ ಗ್ಲಾಸ್ ಗಳು ಹೀಗೆ ಆಸರೆಯ ಪಟ್ಟಿ ಮಾಡಲು ಕುಂತ್ರೆ ಸಾಕೋ ಸಾಕಾದೀತು. ಕಣ್ಣು ಎತ್ಲಿಕ್ಕಿಲ್ಲೆ ಗಡ. ಇನ್ನು ಆಸರೆಯಲ್ಲಿ ಹೋಂ ಡೆಲಿವರಿ ಕೂಡ ಇದ್ದು ನೀವೇ ಹೊತ್ತುಕೊಂಡು ಹೋಗುವ ಮತ್ತು ಯಮನ ಬಾಡಿಗೆ ಕೊಡುವ ಅನಿವಾರ್ಯತೆ ಇರಲ್ಲ. ಆಸರೆ ಎಲೆಕ್ಟ್ರಾನಿಕ್ಸ್ ಗುತ್ತಿಗಾರು ಜನತೆಯ ಕನಸಿನ ಓಟದ ಒಂದು ಮೈಲುಗಲ್ಲು. ಆಸರೆಗೆ ಬನ್ನಿ ಆಸೆ ಮುಗಿಸ್ಕೊಂಡು ಹೋಗಿ.
